ಆಂಡ್ರಾಯ್ಡ್, iOS ಗೆ ಶುರುವಾಗಿದೆ ನಡುಕ: ಭಾರತೀಯ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಗೆ ಕೇಂದ್ರದ ಒಲವು

Indian operating system: ಗೂಗಲ್‌ನ ಆಂಡ್ರಾಯ್ಡ್ ಮತ್ತು ಆ್ಯಪಲ್‌ನ ಐಒಎಸ್​​ಗೆ ಪರ್ಯಾಯವಾಗಿ ದೇಶೀಯವಾಗಿ ಒಂದು ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುವ ನೀತಿಯೊಂದನ್ನು ಜಾರಿಗೆ ತರಲು ಕೇಂದ್ರ ಸರಕಾರ ಚಿಂತಿಸುತ್ತಿದೆ.

ಆಂಡ್ರಾಯ್ಡ್, iOS ಗೆ ಶುರುವಾಗಿದೆ ನಡುಕ: ಭಾರತೀಯ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಗೆ ಕೇಂದ್ರದ ಒಲವು
indian operating system
Follow us
| Updated By: Vinay Bhat

Updated on: Jan 28, 2022 | 9:36 AM

ಪ್ರಸಿದ್ಧ ಆ್ಯಪಲ್‌ ಕಂಪನಿಯ ಐಒಎಸ್ (Apple iOS) ಮತ್ತು ಗೂಗಲ್‌ನ ಆಂಡ್ರಾಯ್ಡ್ (Google Android) ಇಂದು ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಕೈಗೆಟಕದಷ್ಟು ಮಟ್ಟಿಗೆ ಬೆಳೆದುನಿಂತಿದೆ. ಜಾಗತೀತ ಮಾರುಕಟ್ಟೆಯಲ್ಲಿ ಬಿಡುಗಡೆ ಆಗುವ ಬಹುತೇಲ ಎಲ್ಲ ಸ್ಮಾರ್ಟ್​ಫೋನ್​ಗಳು ಇದರ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಆದರೆ, ಇದೀಗ ಆಂಡ್ರಾಯ್ಡ್, ಐಒಎಸ್​ಗೆ ಸಣ್ಣ ಭಯ ಶುರುವಾಗಿದೆ. ಯಾಕೆಂದರೆ ಗೂಗಲ್‌ನ ಆಂಡ್ರಾಯ್ಡ್ ಮತ್ತು ಆ್ಯಪಲ್‌ನ ಐಒಎಸ್​​ಗೆ ಪರ್ಯಾಯವಾಗಿ ದೇಶೀಯವಾಗಿ ಒಂದು ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುವ ನೀತಿಯೊಂದನ್ನು ಜಾರಿಗೆ ತರಲು ಕೇಂದ್ರ ಸರಕಾರ ಚಿಂತಿಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಪ್ರಸ್ತುತ ಎರಡು ಓಎಸ್‌ಗಳಾದ ಗೂಗಲ್‌ನ ಆ್ಯಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಒಎಸ್‌ ಇದಕ್ಕೆ ಸ್ಪರ್ಧೆಯನ್ನೊಡ್ಡುವ ಮೂರನೆಯ ಪ್ರಬಲ ಓಎಸ್ ಇಲ್ಲ. ಹಾಗಾಗಿ ಹೊಸ ಹ್ಯಾಂಡ್‌ಸೆಟ್ ಆಪರೇಟಿಂಗ್ ಸಿಸ್ಟಮ್ ಅನ್ನು ರಚಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಹಾಗೂ ಭಾರತ ಸರಕಾರ ಅಪಾರ ಆಸಕ್ತಿಯನ್ನಿಟ್ಟುಕೊಂಡಿದೆ ಎಂದು ತಿಳಿಸಿದ್ದಾರೆ.

“ಆಂಡ್ರಾಯ್ಡ್ ಮತ್ತು ಐಒಎಸ್ ಸಿಸ್ಟಂಗೆ ಪರ್ಯಾಯವಾಗಿ ಮೂರನೇ ಆಪರೇಟಿಂಗ್ ಸಿಸ್ಟಂ ಈಗ ಇಲ್ಲ. ಈ ಹಿನ್ನೆಲೆಯಲ್ಲಿ ಹೊಸ ಹ್ಯಾಂಡ್‌ಸೆಟ್ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿ ಕುರಿತು ಆಸಕ್ತಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸ್ಟಾರ್ಟ್-ಅಪ್ ಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ದೇಶೀಯ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಸರಕಾರ ಪರಿಶೀಲಿಸುತ್ತಿದೆ. ಇದು ವಾಸ್ತವವಾದರೆ ಭಾರತೀಯ ಅಪರೇಟಿಂಗ್ ಸಿಸ್ಟಂ ಬ್ರ್ಯಾಂಡ್ ಒಂದು ಅಭಿವೃದ್ಧಿಗೊಳ್ಳಬಹುದು,” ಎಂದು ರಾಜೀವ್ ಚಂದ್ರಶೇಖರ್  ಹೇಳಿದ್ದಾರೆ.

ಆಪರೇಟಿಂಗ್ ಸಿಸ್ಟಮ್ ಹೇಗೆ ಕಾರ್ಯನಿರ್ವಹಿಸುತ್ತದೆ?:

ಆಪರೇಟಿಂಗ್ ಸಿಸ್ಟಂ ಯಾವುದೇ ಕಂಪ್ಯೂಟರ್ ಮತ್ತು ಮೊಬೈಲ್ ಸಾಧನದ ಮುಖ್ಯ ಸಾಫ್ಟ್‌ವೇರ್ ಆಗಿದ್ದು ಅದು ಒಎಸ್‌ನ ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ ಸಂಪೂರ್ಣ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಿಸ್ಟಮ್‌ನಲ್ಲಿ ಅಳವಡಿಸಲಾಗಿರುತ್ತದೆ. “ಹೊಸ ಅಪರೇಟಿಂಗ ಸಿಸ್ಟಮ್‌ ರಚಿಸಲು  ಸಾಧ್ಯವಿದ್ದರೆ, ಅದನ್ನು ಅಭಿವೃದ್ಧಿಪಡಿಸಲು ನಾವು ತುಂಬಾ ಆಸಕ್ತಿ ಹೊಂದಿದ್ದೇವೆ. ಇದು ಐಒಎಸ್ ಮತ್ತು ಆಂಡ್ರಾಯ್ಡ್‌ಗೆ ಪರ್ಯಾಯವನ್ನು ರಚಿಸುತ್ತದೆ ಮತ್ತು ನಂತರ ಭಾರತೀಯ ಬ್ರ್ಯಾಂಡಾಗಿ ಇದು ಬೆಳೆಯಬಹುದು” ಎಂದು ಚಂದ್ರಶೇಖರ್ ತಿಳಿಸಿದ್ದಾರೆ. ಗುರಿಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಮರುರೂಪಿಸುವ ನಿಟ್ಟಿನಲ್ಲಿ ಹೆಚ್ಚಿನ ನೀತಿಗಳು ಮತ್ತು  ಕಾರ್ಯವಿಧಾನಗಳನ್ನು ಮರುಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. “ಸ್ಪಷ್ಟ ಗುರಿಗಳನ್ನು ಹೊಂದಿರುವುದು ಮುಖ್ಯ. ಒಮ್ಮೆ ನಾವು ಸ್ಪಷ್ಟವಾದ ಗುರಿಗಳನ್ನು ಹೊಂದಿದ್ದೇವೆ ಮತ್ತು ನಾವು ಏನನ್ನು ಸಾಧಿಸಬೇಕು ಎಂಬುದು ಸ್ಪಷ್ಟವಾದಾಗ ಎಲ್ಲಾ ನೀತಿಗಳು ಮತ್ತು ಕ್ರಮಗಳು ಅದಕ್ಕೆ ಹೊಂದಿಕೆಯಾಗುತ್ತವೆ” ಎಂದು ಚಂದ್ರಶೇಖರ್ ಹೇಳಿದ್ದಾರೆ.

ಉದ್ದೇಶವೇನು?:

ಮೇಡ್ ಇನ್ ಇಂಡಿಯಾ ಉತ್ಪನ್ನಗಳ ತಯಾರಿಗೆ ಹೆಚ್ಚು ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರವು ಈ ಏಕಸ್ವಾಮ್ಯತೆಯನ್ನು ತೊಡೆದುಹಾಕಲು ಬಯಸಿದೆ. ಪ್ರತಿಯೊಂದು ಪ್ರಮುಖ ಉತ್ಪನ್ನ ವಿಭಾಗಗಳಲ್ಲಿ ದೇಶೀಯ ವ್ಯವಸ್ಥೆಗಳನ್ನು ರಚಿಸುವುದು ಪ್ರಧಾನ ಮಂತ್ರಿಯ ಬಯಕೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ (MeitY) ಗುರಿಯಾಗಿದೆ. ಪ್ರಧಾನಿ ಮೋದಿಯವರು ಆರ್ಥಿಕ ಮಾರುಕಟ್ಟೆಯನ್ನು ಬಲಪಡಿಸಿದ್ದು ಭಾರತವು ವಿದೇಶಿ ನೇರ ಹೂಡಿಕೆ ಮತ್ತು ಈಕ್ವಿಟಿಯನ್ನು ಅತಿ ಹೆಚ್ಚು ಸ್ವೀಕರಿಸುವ ದೇಶಗಳಲ್ಲಿ ಒಂದಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಉತ್ಪನ್ನ ಸಂಬಂಧಿತ ಪ್ರೋತ್ಸಾಹಕ ಪರಿಕರಗಳು ಹಲವಾರು ಉತ್ಪಾದನಾ ವಿಭಾಗಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮುಂದುವರಿಸುತ್ತದೆ ಹಾಗೂ ಇದು ತಂತ್ರಜ್ಞಾನ ಉತ್ಪನ್ನದ ಸ್ಪಷ್ಟ ರೂಪವನ್ನು ಮತ್ತು ಯಾವ ಸಚಿವಾಲಯವು ಅದನ್ನು ನಿಯಂತ್ರಿಸಬೇಕು ಎಂಬುದನ್ನು ಅವಲಂಬಿಸಿರುತ್ತದೆ ಎಂದು ಸಚಿವರು ತಿಳಿಸಿದರು.

ಪ್ರಸ್ತುತ, ಆಂಡ್ರಾಯ್ಡ್ ಮತ್ತು ಐಒಎಸ್ ಗೆ ಪರ್ಯಾಯ ಆಪರೇಟಿಂಗ್ ಸಿಸ್ಟಮ್‌ಗಳು ಒಂದೆರಡು ಇವೆ. ಆದರೆ, ಅವು ಯಶಸ್ಸು ಸಾಧಿಸಿಲ್ಲ. ಸ್ಯಾಮ್​ಸಂಗ್ ಕೆಲವು ವರ್ಷಗಳ ಹಿಂದೆ ತನ್ನ ಟೈಜನ್ ಒಎಸ್ ನೊಂದಿಗೆ ಇದನ್ನು ಮಾಡಲು ಪ್ರಯತ್ನಿಸಿತು. ಆದಾಗ್ಯೂ, ಪ್ಲಾಟ್‌ಫಾರ್ಮ್ ಸ್ಮಾರ್ಟ್‌ಫೋನ್‌ಗಳೊಂದಿಗೆ ಆವೇಗವನ್ನು ಸಂಗ್ರಹಿಸಲಿಲ್ಲ ಮತ್ತು ಅಂತಿಮವಾಗಿ ಸ್ಯಾಮ್‌ಸಂಗ್ ಅದನ್ನು ತನ್ನ ಸ್ಮಾರ್ಟ್ ಟಿವಿಗಳಿಗೆ ನಿರ್ಬಂಧಿಸಿತು. ಅದೇ ರೀತಿ, ರಿಲಯನ್ಸ್ ಜಿಯೋ ತನ್ನ ಜಿಯೋ ಫೋನ್ ಫೀಚರ್ ಫೋನ್‌ಗಾಗಿ ಕೈಒಎಸ್ (KaiOS) ಪ್ಲಾಟ್‌ಫಾರ್ಮ್ ಅನ್ನು ಅವಲಂಬಿಸಿದೆ. ಇದೀಗ ಭಾರತೀಯ ಸಂಸ್ಥೆಯು ಹೊಸ ದೇಶೀಯವಾಗಿ ಒಂದು ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲು ಸವಾಲನ್ನು ಸ್ವೀಕರಿಸಲು ತಯಾರಾಗಿದೆ.

WhatsApp: ವಾಟ್ಸ್ಆ್ಯಪ್ ಪರಿಚಯಿಸಲಿರುವ ಹೊಸ ಅಪ್ಡೇಟ್ ಕಂಡು ದಂಗಾದ ಗ್ರೂಪ್ ಅಡ್ಮಿನ್​ಗಳು: ಏನದು ಆಯ್ಕೆ?

ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?