ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ಗೆ (WhatsApp) ಸದಾ ಒಂದಲ್ಲ ಒಂದು ರೀತಿಯಲ್ಲಿ ಟಕ್ಕರ್ ನೀಡುತ್ತಿರುವ ಟೆಲಿಗ್ರಾಮ್ ಇದೀಗ ಹೊಸ ಅಪ್ಡೇಟ್ನೊಂದಿಗೆ ಮತ್ತೆ ಸುದ್ದಿಯಲ್ಲಿದೆ. ಈ ಹೊಸ ಫೀಚರ್ ಕಂಡು ವಾಟ್ಸ್ಆ್ಯಪ್ ಪ್ರಿಯರಂತು ದಂಗಾಗಿ ಹೋಗಿದ್ದಾರೆ. ಹೌದು, ಈಗಾಗಲೇ ಬಳಕೆದಾರರಿಗೆ ಹಲವು ಹೊಸ ಮಾದರಿಯ ಫೀಚರ್ಗಳನ್ನು ಪರಿಚಯಿಸಿರುವ ಟೆಲಿಗ್ರಾಮ್ ಇದೀಗ ಹೊಸ ಅಪ್ಡೇಟ್ (Telegram Update) ಅನ್ನು ಘೋಷಿಸಿದೆ. ವಿಶೇಷ ಎಂದರೆ ಟೆಲಿಗ್ರಾಮ್ ಬಿಡುಗಡೆ ಮಾಡಿರುವ ಈ 8.5 ಅಪ್ಡೇಟ್ ಐಒಎಸ್ ಮತ್ತು ಆಂಡ್ರಾಯ್ಡ್ (iOS and Android) ಬಳಕೆದಾರರಿಗೆ ಲಭ್ಯವಿದೆ. ಈ ಹೊಸ ಅಪ್ಡೇಟ್‌ನಲ್ಲಿ ವಿಡಿಯೋ ಸ್ಟಿಕ್ಕರ್ ಸೇರಿದಂತೆ ಅನೇಕ ಫೀಚರ್ಗಳನ್ನು ಪರಿಚಯಿಸಲಾಗಿದೆ. ವೈಯುಕ್ತಿಕ ಮತ್ತು ಗ್ರೂಪ್ ಚಾಟ್‌ಗಳಲ್ಲಿ ಕೂಡ ಶೇರ್ ಮಾಡಬಹುದು. ಹೀಗೆ ವಾಟ್ಸ್ಆ್ಯಪ್ಗೆ ಸೆಡ್ಡು ಹೊಡೆದು ಟೆಲಿಗ್ರಾಮ್ ತನ್ನ ಬಳಕೆದಾರರಿಗೆ ಹೊಸ ಅನುಭವ ನೀಡಲು ಮುಂದಾಗಿದೆ.
ಟೆಲಿಗ್ರಾಮ್ 8.5 ಅಪ್ಡೇಟ್ನ ಪ್ರಮುಖ ವಿಶೇಷತೆ ಎಂದರೆ ವಿಡಿಯೋ ಸ್ಟಿಕ್ಕರ್‌ಗಳು. ಇದರಿಂದ ನೀವು ವಿಡಿಯೋ ಸ್ಟಿಕ್ಕರ್‌ಗಳನ್ನು ನೇರವಾಗಿ ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿಯೇ ಶೇರ್ ಮಾಡಬಹುದು. ಇದನ್ನು ವೈಯಕ್ತಿಕ ಮತ್ತು ಗ್ರೂಪ್ ಚಾಟ್‌ಗಳಲ್ಲಿ ಹಂಚಿಕೊಳ್ಳಬಹುದಾದ ಆಯ್ಕೆ ನೀಡಲಾಗಿದೆ. ಅಂತೆಯೆ ಟೆಲಿಗ್ರಾಮ್ ತನ್ನ ಹೊಸ ಅಪ್ಡೇಟ್‌ನಲ್ಲಿ ಐದು ಹೊಸ ಇಂಟರ್ ಆಕ್ಟಿವ್ ಎಮೋಜಿಗಳನ್ನು ಸೇರಿಸಿದೆ. ಇದು ದೊಡ್ಡದಾದ, ಲೈವ್ಲಿಯರ್ ಆವೃತ್ತಿಗಳಾಗಿ ಗೋಚರಿಸುತ್ತದೆ. ಇದಲ್ಲದೆ ಅನಿಮೇಶನ್ ಅನ್ನು ರಿಪ್ಲೇ ಮಾಡಲು ಸಹ ಹೊಸ ಎಮೋಜಿಯನ್ನು ಟ್ಯಾಪ್ ಮಾಡಬಹುದು.
ಇದಿಷ್ಟೇ ಅಲ್ಲದೆ ಹಿಂದಿನ ಚಾಟ್‌ಗೆ ತ್ವರಿತವಾಗಿ ಹೋಗಲು ಬಳಕೆದಾರರು ಈಗ ಹಿಂದೆ ಬಟನ್ ಅನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಅವಕಾಶ ನೀಡಿದೆ. ಕರೆಗಳ ಗುಣಮಟ್ಟವನ್ನು ಸುಧಾರಿಸಲಾಗಿದೆ. ಅಲ್ಲದೆ ಮೌನ ಸಂದೇಶಗಳನ್ನು ಕಳುಹಿಸುವುದನ್ನು ಈಗ ಹಂಚಿಕೆ ಮೆನುವಿನಿಂದ ನೇರವಾಗಿ ಸಕ್ರಿಯಗೊಳಿಸಲಾಗಿದೆ. ಹಾಗೆಯೇ ಚಾಟ್‌ಗಳ ಮೂಲಕ ನ್ಯಾವಿಗೇಟ್ ಮಾಡುವಾಗ, ಹಿಂದಿನ ಚಾಟ್‌ಗೆ ತ್ವರಿತವಾಗಿ ನೆಗೆಯಲು ನೀವು ಈಗ ಬ್ಯಾಕ್ ಬಟನ್ ಅನ್ನು ಹಿಡಿದಿಟ್ಟುಕೊಳ್ಳಬಹುದು.
ಇತ್ತೀಚೆಗಷ್ಟೆ ಟೆಲಿಗ್ರಾಮ್ ತನ್ನ ಬಳಕೆದಾರರಿಗೆ ಎಮೋಜಿಗಳ ಮೂಲಕ ರಿಯಾಕ್ಟ್ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಈ ಫೀಚರ್ ಈಗಾಗಲೇ ಐಮೆಸೇಜ್, ಫೇಸ್‌ಬುಕ್ ಮೆಸೆಂಜರ್, ಇನ್‌ಸ್ಟಾಗ್ರಾಮ್‌ನಲ್ಲಿ ಲಭ್ಯವಿದೆ. ಅಡ್ಮಿನ್ ಪ್ರಿವ್ಯೂ ಆಯ್ಕೆಯನ್ನು ಕೂಡ ಸೇರಿಸಿದೆ. ಇದರಿಂದ ನೀವು ಟೆಲಿಗ್ರಾಮ್ ಗ್ರೂಪ್‌ನಲ್ಲಿ ಶೇರ್ ಮಾಡಿದ ಚಾಟ್ ಅನ್ನು ಅಡ್ಮಿನ್ ಪರಿಶೀಲಿಸಬಹುದು. ಬಳಕೆದಾರರು ಇನ್ವೈಟ್ ಲಿಂಕ್ ಅನ್ನು ತೆರೆದಾಗ, ಚಾಟ್‌ನ ಮೇಲ್ಭಾಗದಲ್ಲಿರುವ ಹೊಸ ಬಾರ್‌ನಿಂದ ಅಡ್ಮಿನ್ ಮ್ಯಾನೇಜ್ ಮಾಡಬಹುದಾದ ಇನ್ವೈಟ್ ಲಿಂಕ್ ಬಟನ್ ಕಾಣಲಿದೆ ನೋಡುತ್ತಾರೆ. ಇದರೊಂದಿಗೆ, ಟೆಲಿಗ್ರಾಂ ಗ್ರೂಪ್ ಅಡ್ಮಿನ್‌ಗಳು ರಿಕ್ವೆಸ್ಟ್ ಕಳುಹಿಸುವವರ ಪಬ್ಲಿಕ್ ಪ್ರೊಫೈಲ್ ಚಿತ್ರಗಳನ್ನು ಮತ್ತು ಅವರ ರಿಕ್ವೆಸ್ಟ್ ಅನ್ನು ಅನುಮೋದಿಸುವ ಅಥವಾ ವಜಾಗೊಳಿಸುವ ಆಯ್ಕೆಯನ್ನು ಸಹ ಪಡೆಯಲಿದ್ದಾರೆ.
ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬ್ಯಾಕ್ಅಪ್ನ್ನು ಹೆಚ್ಚಿಸಲು ಇಲ್ಲಿವೆ ಆರು ಉಪಯುಕ್ತ ಮಾಹಿತಿ