Smartphone Tips: ಸ್ಮಾರ್ಟ್​ಫೋನ್ ಚಾರ್ಜ್​ಗೆ ಹಾಕಿದಾಗ ಬಿಸಿಯಾಗುತ್ತಿದ್ದರೆ ನಿರ್ಲಕ್ಷಿಸದಿರಿ: ಹೀಗೆ ಮಾಡಿ

Tips and Tricks: ಚಾರ್ಜ್​ಗೆ ಹಾಕುವಾಗ ಸ್ಮಾರ್ಟ್​ಫೋನ್ ಬಿಸಿಯಾಗುವುದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ನಿಮ್ಮ ಚಾರ್ಜಿಂಗ್​ಗೆ ಹಾಕುವಾಗ ಇರುವಂತಹ ಸಮಸ್ಯೆ. ಇದಕ್ಕೆ ಪರಿಹಾರ ಏನು ಎಂಬುದು ಇಲ್ಲಿದೆ.

Smartphone Tips: ಸ್ಮಾರ್ಟ್​ಫೋನ್ ಚಾರ್ಜ್​ಗೆ ಹಾಕಿದಾಗ ಬಿಸಿಯಾಗುತ್ತಿದ್ದರೆ ನಿರ್ಲಕ್ಷಿಸದಿರಿ: ಹೀಗೆ ಮಾಡಿ
Smartphone
Follow us
| Updated By: Vinay Bhat

Updated on: Feb 03, 2022 | 10:00 AM

ಈಗೀನ ಟೆಕ್ ಯುಗದಲ್ಲಿ ಸ್ಮಾರ್ಟ್​ಫೋನುಗಳಿಗೆ (Smartphone) ಎಲ್ಲಿಲ್ಲದ ಬೇಡಿಕೆ. ಕಡಿಮೆ ಬೆಲೆಗೆ ಆಕರ್ಷಕ ಫೀಚರ್ಸ್ ಹೊಂದಿರುವ ಮೊಬೈಲ್​ಗಳು ಭರ್ಜರಿ ಸೇಲ್ ಆಗುತ್ತಿವೆ. ಇವುಗಳಲ್ಲಿ ಕೆಲವು ಸ್ಮಾರ್ಟ್​ಫೋನ್ ಹೆಚ್ಚಿನ ರೇಡಿಯೇಷನ್ ಕೂಡ ಹೊಂದಿರುತ್ತವೆ. ಕೆಲವೊಮ್ಮೆ ಸ್ಮಾರ್ಟ್​ಫೋನ್ ಅಧಿಕ ಬಿಸಿ ಆಗಿ ಬಿಡುತ್ತದೆ. ಇದರಿಂದ ಮೊಬೈಲ್ ಹ್ಯಾಂಗ್ ಆಗುವುದು, ಸ್ವಿಚ್ ಆಫ್ ಆಗುವುದು ಕೊನೆಗೆ ಬ್ಲಾಸ್ಟ್ ಆಗುವಂತಹ ತೊಂದರೆಗಳು ಕೂಡ ಎದುರಾಗುತ್ತದೆ. ಈಗಂತು ಮಾರ್ಕೆಟ್​ನಲ್ಲಿ 7000mAh ವರೆಗಿನ ಸಾಮರ್ಥ್ಯದ ಬ್ಯಾಟರಿ ಫೋನುಗಳು ಚಾಲ್ತಿಯಲ್ಲಿವೆ. ಹಾಗೆಯೇ ಬ್ಯಾಟರಿ ವೇಗವಾಗ ಭರ್ತಿಯಾಗಲಿ ಅಂತಾ ಫಾಸ್ಟ್‌ ಚಾರ್ಜರ್‌ (Fast Charger) ಸೌಲಭ್ಯವನ್ನು ಕೂಡ ನೀಡುತ್ತಿವೆ. ಇನ್ನೂ ಕೆಲವುದರಲ್ಲಿ ಈರೀತಿ ಸೌಲಭ್ಯ ಇರುವುದಿಲ್ಲ. ಇದರ ನಡುವೆ ಚಾರ್ಜ್​ಗೆ ಹಾಕುವಾಗ ಸ್ಮಾರ್ಟ್​ಫೋನ್ ಬಿಸಿಯಾಗುವುದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ನಿಮ್ಮ ಚಾರ್ಜಿಂಗ್​ಗೆ ಹಾಕುವಾಗ ಇರುವಂತಹ ಸಮಸ್ಯೆ. ಇದಕ್ಕೆ ಪರಿಹಾರ ಏನು ಎಂಬುದು ಇಲ್ಲಿದೆ.

ನಿಮ್ಮ ಮೊಬೈಲ್​​ನೊಂದಿಗೆ ನೀಡಿರುವ ಚಾರ್ಜರ್ ನಿಂದಲೇ ಫೋನ್ ಅನ್ನು ಚಾರ್ಜ್ ಮಾಡಿರಿ. ಸದ್ಯ ಎಲ್ಲ ಮೊಲ್​​ಗಳು ಯುಎಸ್‌ಬಿ ಕೇಬಲ್ ನಿಂದಲೇ ಚಾರ್ಜ್ ಆಗಲಿದೆ. ಹಾಗೆಂದು ಅದನ್ನು ಕಂಪ್ಯೂಟರ್​​ಗೆ ಹಾಕಿ ಇಲ್ಲವೇ ಬೇರೆ ಕಂಪನಿಗಳ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಕಂಪನಿ ನೀಡಿರುವ ಚಾರ್ಜರ್ ನಿಂದಲೇ ಚಾರ್ಜ್ ಮಾಡಿ.

ಇಂದಿನ ದಿನದಲ್ಲಿ ಬಳಕೆದಾರರು ಮೊಬೈಲ್‌ಗಳು ಹಾಳಾಗದಿರಲಿ ಎಂದು ಫ್ಲಿಪ್ ಕವರ್ ಅನ್ನು ಅಳವಡಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಇದು ಫ್ಯಾಷನ್​​ಗಾಗಿಯೂ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ನಿಮ್ಮ ಮೊಬೈಲ್ ಚಾರ್ಜ್ ಮಾಡುವಾಗ ರಕ್ಷಣಾ ಕವಚಗಳನ್ನು ತೆಗೆಯುವುದು ಉತ್ತಮ. ಇದರಿಂದ ಬ್ಯಾಟರಿ ಬಾಳಿಕೆ ಮತ್ತು ವೇಗವಾಗಿ ಚಾರ್ಜ್ ಆಗಲಿದೆ. ಚಾರ್ಜಿಂಗ್ ಸಮಯದಲ್ಲಿ ಮೊಬೈಲ್ ಬಿಸಿಯಾಗುವುದು ತಪ್ಪಲಿದೆ.

ವೇಗವಾಗಿ ಮೊಬೈಲ್ ಚಾರ್ಜ್ ಆಗಬೇಕು ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ದೊರೆಯಲಿರುವ ವೇಗ ಚಾರ್ಜರ್‌ಗಳನ್ನು ಬಳಸಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಬೇಡಿ. ಇದರಿಂದ ಬ್ಯಾಟರಿ ಬೇಗ ಬಿಸಿಯಾಗಲಿದ್ದು, ತಣ್ಣಗಾಗುವುದಿಲ್ಲ ಇದರಿಂದ ಬ್ಯಾಟರಿ ಕ್ಷಮತೆ ಕಡಿಮೆಯಾಗಲಿದೆ.

ಕೆಲವರು ಮೊಬೈಲ್ ಅನ್ನು ರಾತ್ರಿ ಇಡೀ ಚಾರ್ಜ್‌ಗೆ ಹಾಕಿ ಬಿಟ್ಟಿರುತ್ತಾರೆ. ಈ ರೀತಿ ಮಾಡುವುದು ಅಪಾಯಕಾರಿ. ಇದರಿಂದ ಬ್ಯಾಟರಿಯು ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಅತಿಯಾಗಿ ಚಾರ್ಜ್ ಮಾಡುವುದೂ ಬೇಡ. ಶೇ 90ರಷ್ಟು ಚಾರ್ಜ್ ಆದ ಕೂಡಲೇ ಚಾರ್ಜರ್ ಆಫ್ ಮಾಡಿ. ಈ ಅಭ್ಯಾಸ ರೂಡಿಸಿಕೊಳ್ಳಿ. ಮಾರುಕಟ್ಟೆಯಲ್ಲಿ ವೈಫೈ, ಬ್ಲ್ಯೂಟೂತ್ ಮೂಲಕ ಚಾರ್ಜ್ ಮಾಡಿಕೊಳ್ಳುವ ವೈರ್ ಲೈಸ್ ಚಾರ್ಜರ್ ಲಭ್ಯವಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಇವುಗಳಿಂದ ದೂರವಿದ್ದರೆ ಮೊಬೈಲ್‌ ಬ್ಯಾಟರಿ ಆರೋಗ್ಯ ಚೆನ್ನಾಗಿರುತ್ತದೆ. ಈ ನಿಯಮಗಳನ್ನು ಪಾಲಿಸಿದರೆ ನಿಮ್ಮ ಸ್ಮಾರ್ಟ್‌ಫೋನ್ ಉತ್ತಮ ಬಾಳಿಕೆ ಬರಲಿದೆ.

WhatsApp: ಯಾರಾದರು ನಿಮ್ಮನ್ನ ಹೈಡ್ ಮಾಡಿ ವಾಟ್ಸ್​ಆ್ಯಪ್ ಸ್ಟೇಟಸ್ ಹಾಕಿದ್ದರೆ ಈ ಟ್ರಿಕ್​​ನಿಂದ ತಿಳಿಯಿರಿ