Realme 9 Pro: ಹೊಸ ಆವಿಷ್ಕಾರಕ್ಕೆ ಮುಂದಾದ ರಿಯಲ್ ಮಿ ಕಂಪನಿ: ರಿಯಲ್‌ ಮಿ 9 ಪ್ರೊ ಪ್ಲಸ್​ನಲ್ಲಿದೆ ಅಚ್ಚರಿಯ ಆಯ್ಕೆ

Realme 9 Pro+: ರಿಯಲ್‌ ಮಿ ಕಂಪನಿ ಇದೀಗ ಭಾರತದಲ್ಲಿ ರಿಯಲ್‌ಮಿ 9 ಸರಣಿಯ ಹೊಸ ಫೋನ್ ಅನಾವರಣ ಮಾಡಲು ಸಜ್ಜಾಗಿದೆ. ಅದುವೇ ರಿಯಲ್‌ ಮಿ 9 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌. ಇದೇ ಫೆಬ್ರುವರಿ 15 ರಂದು ಈ ಫೋನ್ ಭಾರತದಲ್ಲಿ ಬಿಡುಗಡೆಗೊಳ್ಳಲಿದೆ.

Realme 9 Pro: ಹೊಸ ಆವಿಷ್ಕಾರಕ್ಕೆ ಮುಂದಾದ ರಿಯಲ್ ಮಿ ಕಂಪನಿ: ರಿಯಲ್‌ ಮಿ 9 ಪ್ರೊ ಪ್ಲಸ್​ನಲ್ಲಿದೆ ಅಚ್ಚರಿಯ ಆಯ್ಕೆ
Realme 9 Pro+
Follow us
TV9 Web
| Updated By: Vinay Bhat

Updated on: Feb 04, 2022 | 6:58 AM

ಸ್ಮಾರ್ಟ್‌ಫೋನ್‌ (Smartphone) ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಿಂದ ಹಿಡಿದು ಹೈರೇಂಜ್ ವರೆಗೆ ಫೋನ್​ಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಪ್ರಸಿದ್ಧ ರಿಯಲ್‌ ಮಿ ಕಂಪನಿ ಇದೀಗ ಭಾರತದಲ್ಲಿ ರಿಯಲ್‌ಮಿ 9 ಸರಣಿಯ ಹೊಸ ಫೋನ್ ಅನಾವರಣ ಮಾಡಲು ಸಜ್ಜಾಗಿದೆ. ಅದುವೇ ರಿಯಲ್‌ ಮಿ 9 ಪ್ರೊ ಪ್ಲಸ್‌ (Realme 9 Pro+) ಸ್ಮಾರ್ಟ್‌ಫೋನ್‌. ಇದೇ ಫೆಬ್ರುವರಿ 15 ರಂದು ಈ ಫೋನ್ ಭಾರತದಲ್ಲಿ ಬಿಡುಗಡೆಗೊಳ್ಳಲಿದೆ. ರಿಲೀಸ್​ಗೂ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿರುವ ರಿಯಲ್‌ ಮಿ 9 ಪ್ರೊ+ ನ ಪ್ರಮುಖ ವಿಶೇಷತೆ ಎಂದರೆ ಇದು ಹಾರ್ಟ್‌ ರೇಟ್ ಮಾನಿಟರ್ ಆಯ್ಕೆ ಪಡೆದಿದೆ. ಈ ಮೂಲಕ ಹೃದಯ ಬಡಿತ ಮಾನಿಟರ್ ಹೊಂದಿರುವ ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ. ಈ ಬಗ್ಗೆ ರಿಯಲ್‌ ಮಿ ಭಾರತದ ಮುಖ್ಯಸ್ಥ ಮಾಧವ್ ಶೇತ್ ಖಚಿತ ಪಡಿಸಿದ್ದಾರೆ. ಈ ಫೋನ್ ಜೊತೆಗೆ ಭಾರತದಲ್ಲಿ ರಿಯಲ್‌ಮಿ 9 ಪ್ರೊ (Realme 9 Pro) ಸ್ಮಾರ್ಟ್‌ಫೋನ್‌ ಕೂಡ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ರಿಯಲ್‌ಮಿ 9 ಪ್ರೊ + ಸ್ಮಾರ್ಟ್​ಫೋನ್ ಬಗ್ಗೆ ಇತರೆ ಅಧಿಕೃತ ಮಾಹಿತಿಯನ್ನು ಕಂಪನಿ ಬಿಟ್ಟುಕೊಟ್ಟಿಲ್ಲ. ಆದರೆ, ಮೂಲಗಳ ಪ್ರಕಾರ ಇದು 6.43 ಇಂಚಿನ ಪೂರ್ಣ ಹೆಚ್‌ಡಿ + AMOLED ಸ್ಕ್ರೀನ್ ಹೊಂದಿರಲಿದ್ದು, ಡಿಸ್‌ಪ್ಲೇಯು 90Hz ರಿಫ್ರೆಶ್ ದರದಿಂದ ಕೂಡಿರಲಿದೆ ಎನ್ನಲಾಗಿದೆ. ಇದರೊಂದಿಗೆ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಪಂಚ್ ಹೋಲ್ ಕಟೌಟ್ ಅನ್ನು ಹೊಂದಿರುತ್ತದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಚಿಪ್‌ಸೆಟ್‌ ಪ್ರೊಸೆಸರ್ ಸಾಮರ್ಥ್ಯದಲ್ಲಿ ಬರಬಹುದು ಎನ್ನಲಾಗಿದೆ. ಹಾಗೆಯೇ 8GB RAM ಮತ್ತು 256GB ವರೆಗೆ ವೇರಿಯಂಟ್ ಆಯ್ಕೆಗಳು ಇರಲಿವೆಯಂತೆ.

ಈ ಫೋನಿನ ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರಬಹುದು. ಅಂತೆಯೆ ಹಿಂಭಾಗದಲ್ಲಿ 50 ಮೆಗಾ ಪಿಕ್ಸಲ್ ಪ್ರಾಥಮಿಕ ಸೆನ್ಸಾರ್ ಇರಲಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾ 8 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿರಲಿದೆ ಮತ್ತು ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸಲ್ ಮ್ಯಾಕ್ರೋ ಸಂವೇದಕದೊಂದಿಗೆ ಜೋಡಿಸಬಹುದು. ಇನ್ನು ರಿಯಲ್‌ಮಿ 9 ಪ್ರೊ + ಫೋನ್ 65W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4500mAh ಬ್ಯಾಟರಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ರಿಯಲ್‌ಮಿ 9 ಪ್ರೊ + 5G ಸ್ಮಾರ್ಟ್‌ಫೋನಿನ ಭಾರತದ ನಿಖರ ಬೆಲೆ ಬಹಿರಂಗಗೊಂಡಿಲ್ಲ. ಆದರೆ, ಖಾಸಗಿ ವೆಬ್​ಸೈಟ್​​ವೊಂದು ಮಾಡಿರುವ ವರದಿ ಪ್ರಕಾರ ಇದು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆಯಂತೆ. 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ 20,999 ರೂ.ಗಳ ಪ್ರೈಸ್‌ ಟ್ಯಾಗ್ ಹೊಂದಿರುವ ಸಾಧ್ಯತೆಗಳಿವೆ. ಹಾಗೆಯೇ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಸಹ ಇರಲಿದೆ. ಇದರ ಬೆಲೆ 16,999 ರೂ. ಗಳು ಎಂಬ ಮಾತು ಟೆಕ್ ಮಾರುಕಟ್ಟೆಯಲ್ಲಿದೆ.

WhatsApp: ಕಳೆದ 6 ತಿಂಗಳಲ್ಲಿ 1 ಕೋಟಿಗೂ ಅಧಿಕ ಭಾರತೀಯರ ವಾಟ್ಸ್​ಆ್ಯಪ್ ಖಾತೆ ಬ್ಯಾನ್: ತಪ್ಪಿಯೂ ಹೀಗೆ ಮಾಡದಿರಿ

Telegram: ಟೆಲಿಗ್ರಾಮ್​​ ಪರಿಚಯಿಸಿದ ಹೊಸ ಅಪ್ಡೇಟ್ ಕಂಡು ದಂಗಾದ ವಾಟ್ಸ್​ಆ್ಯಪ್ ಪ್ರಿಯರು

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್