ವಿಶ್ವದ ನಂಬರ್ 1 ವೆಬ್​ಸೈಟ್ ಆಗಿ ಗುರುತಿಸಿಕೊಂಡ ಭಾರತದಲ್ಲಿ ಬ್ಯಾನ್ ಆದ ಆ್ಯಪ್: ಟಾಪ್ 10 ಪಟ್ಟಿ ಇಲ್ಲಿದೆ

| Updated By: ಝಾಹಿರ್ ಯೂಸುಫ್

Updated on: Dec 27, 2021 | 8:49 PM

ಭಾರತದಲ್ಲಿ ಕಳೆದ ವರ್ಷ, ಟಿಕ್ ಟಾಕ್ ಸೇರಿದಂತೆ ಅನೇಕ ಚೀನೀ ಅಪ್ಲಿಕೇಶನ್‌ಗಳನ್ನು ಭದ್ರತೆಯನ್ನು ಉಲ್ಲೇಖಿಸಿ ನಿಷೇಧಿಸಲಾಯಿತು. ಸರ್ಕಾರದ ನಿಷೇಧದ ನಂತರ, ಗೂಗಲ್ ಪ್ಲೇ ಸ್ಟೋರ್‌ನಿಂದ ಟಿಕ್ ಟಾಕ್ ಸೇರಿದಂತೆ ಎಲ್ಲಾ ನಿಷೇಧಿತ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿತ್ತು.

ವಿಶ್ವದ ನಂಬರ್ 1 ವೆಬ್​ಸೈಟ್ ಆಗಿ ಗುರುತಿಸಿಕೊಂಡ ಭಾರತದಲ್ಲಿ ಬ್ಯಾನ್ ಆದ ಆ್ಯಪ್: ಟಾಪ್ 10 ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಕಿರು ವೀಡಿಯೊ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ 2021 ರ ಅತ್ಯಂತ ಜನಪ್ರಿಯ ವೆಬ್​ಸೈಟ್ (ಡೊಮೇನ್‌) ಆಗಿ ಗುರುತಿಸಿಕೊಂಡಿದೆ. ಅದು ಕೂಡ ವಿಶ್ವ ಪ್ರಸಿದ್ಧ ಗೂಗಲ್ ಅನ್ನು ಹಿಂದಿಕ್ಕಿ ಎಂಬುದು ವಿಶೇಷ. ವೆಬ್ ಭದ್ರತಾ ಕಂಪನಿ ಕ್ಲೌಡ್‌ಫ್ಲೇರ್ ಒಂದು ವರ್ಷದ ಡೇಟಾ ವಿಶ್ಲೇಷಣೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರ ಪ್ರಕಾರ, ಗೂಗಲ್ ಸೇರಿದಂತೆ ವಿಶ್ವದ 9 ದೊಡ್ಡ ಕಂಪನಿಗಳನ್ನು ಟಿಕ್ ಟಾಕ್ ಹಿಂದಿಕ್ಕಿದೆ. 2020 ರಲ್ಲಿ ಫೇಸ್‌ಬುಕ್ ನಂಬರ್ 1 ಸ್ಥಾನದಲ್ಲಿದ್ದರೆ, ಗೂಗಲ್ ಅತ್ಯಂತ ಜನಪ್ರಿಯ ಡೊಮೇನ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿತ್ತು. ಅಲ್ಲದೆ ಕಳೆದ ವರ್ಷ ಟಿಕ್‌ಟಾಕ್ 7 ನೇ ಸ್ಥಾನದಲ್ಲಿತ್ತು.

ಭಾರತದಲ್ಲಿ ಕಳೆದ ವರ್ಷ, ಟಿಕ್ ಟಾಕ್ ಸೇರಿದಂತೆ ಅನೇಕ ಚೀನೀ ಅಪ್ಲಿಕೇಶನ್‌ಗಳನ್ನು ಭದ್ರತೆಯನ್ನು ಉಲ್ಲೇಖಿಸಿ ನಿಷೇಧಿಸಲಾಯಿತು. ಸರ್ಕಾರದ ನಿಷೇಧದ ನಂತರ, ಗೂಗಲ್ ಪ್ಲೇ ಸ್ಟೋರ್‌ನಿಂದ ಟಿಕ್ ಟಾಕ್ ಸೇರಿದಂತೆ ಎಲ್ಲಾ ನಿಷೇಧಿತ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿತ್ತು. ಇದಾಗ್ಯೂ ಈ ಬಾರಿ ಮತ್ತೆ ಜನಪ್ರಿಯತೆ ವಿಷಯದಲ್ಲಿ ಟಿಕ್​ ಟಾಕ್ ಡೊಮೇನ್ ನಂಬರ್ 1 ಸ್ಥಾನಕ್ಕೇರಿರುವುದು ವಿಶೇಷ.

ಕ್ಲೌಡ್‌ಫ್ಲೇರ್ ವರದಿಯ ಪ್ರಕಾರ, 17 ಫೆಬ್ರವರಿ 2021 ರಂದು ಟಿಕ್‌ಟಾಕ್ ಒಂದು ದಿನದ ಮಟ್ಟಿಗೆ ಅಗ್ರಸ್ಥಾನದಲ್ಲಿತ್ತು. ಇನ್ನು ಮಾರ್ಚ್ ಮತ್ತು ಮೇನಲ್ಲಿ ಟಿಕ್ ಟಾಕ್ ಕೆಲವು ದಿನಗಳವರೆಗೆ ಅಗ್ರಸ್ಥಾನದಲ್ಲಿ ಮುಂದುವರೆಯಿತು. ಆದರೆ ಆಗಸ್ಟ್ 10, 2021 ರ ನಂತರ, ಟಿಕ್‌ಟಾಕ್ ಅಗ್ರಸ್ಥಾನದಲ್ಲೇ ಉಳಿದುಕೊಂಡಿತು. ಇದಾಗ್ಯೂ ಗೂಗಲ್ ಕೆಲ ದಿನಗಳವರೆಗೆ ನಂಬರ್ ಒನ್ ಸ್ಥಾನದಲ್ಲಿತ್ತು. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ, ಟಿಕ್‌ಟಾಕ್ ಮತ್ತೆ ಅಗ್ರಸ್ಥಾನಕ್ಕೇರಿದೆ ಎಂದು ತಿಳಿಸಿದೆ.

ಕ್ಲೌಡ್‌ಫ್ಲೇರ್ ಬಿಡುಗಡೆ ಮಾಡಿರುವ ಟಾಪ್ ವೆಬ್​ಸೈಟ್ ಡೊಮೇನ್​ಗಳ ಪಟ್ಟಿಯಲ್ಲಿ ಟಿಕ್​ಟಾಕ್ ನಂಬರ್ 1 ಸ್ಥಾನದಲ್ಲಿದ್ದರೆ, ಗೂಗಲ್ 2ನೇ ಸ್ಥಾನ ಅಲಂಕರಿಸಿದೆ. ಇನ್ನು ಫೇಸ್​ಬುಕ್.ಕಾಮ್ (3), ಮೈಕ್ರೋಸಾಫ್ಟ್​. ಕಾಮ್ (4), ಆ್ಯಪಲ್.ಕಾಮ್ (5) ಮತ್ತು ಅಮೆಜಾನ್​ 6 ನೇ ಸ್ಥಾನದಲ್ಲಿದೆ. ನೆಟ್​ಫ್ಲಿಕ್ಸ್​ (7), ಯೂಟ್ಯೂಬ್ (8), ಟ್ವಿಟರ್ (9) ಹಾಗೂ ವಾಟ್ಸ್​ಆ್ಯಪ್​ 10ನೇ ಸ್ಥಾನ ಪಡೆದುಕೊಂಡಿದೆ.

ಕುಂದದ ಟಿಕ್‌ಟಾಕ್ ಜನಪ್ರಿಯತೆ:
ಭಾರತದಲ್ಲಿ ಬ್ಯಾನ್​ ಹೊರತಾಗಿಯೂ ಅಮೆರಿಕ, ಯುರೋಪ್, ಬ್ರೆಜಿಲ್ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಟಿಕ್​ಟಾಕ್ ಶಾರ್ಟ್​ ವೀಡಿಯೊ ಅಪ್ಲಿಕೇಶನ್​ ಅತ್ಯಂತ ಜನಪ್ರಿಯ ಆ್ಯಪ್​ ಆಗಿ ಗುರುತಿಸಿಕೊಂಡಿದೆ. ಟಿಕ್ ಟಾಕ್ ಚೀನಾದ ದೈತ್ಯ ಬೈಟ್ ಡ್ಯಾನ್ಸ್ ಕಂಪನಿಯ ಒಡೆತನದಲ್ಲಿದ್ದು, ಈ ವರ್ಷದ ಆರಂಭದಲ್ಲಿ ಸಿಂಗಾಪುರ ಮೂಲದ ಬೈಟ್‌ಡ್ಯಾನ್ಸ್‌ನ ಸಿಎಫ್‌ಒ ಶೌಜಿ ಚೆವ್ ಅವರನ್ನು ಕಂಪನಿಯ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿತು. ಇದೀಗ 2021ರ ವಿಶ್ವದ ನಂಬರ್ 1 ಡೊಮೇನ್ ಆಗಿ ಟಿಕ್​ ಟಾಕ್ ಗುರುತಿಸಿಕೊಂಡಿರುವುದು ವಿಶೇಷ.

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(TikTok beats Google to emerge as most popular website in 2021)