Year End Sale: ಐಫೋನ್ ಅಲ್ಲ: 75,000 ರೂಪಾಯಿಯ ಈ ಅದ್ಭುತ ಸ್ಮಾರ್ಟ್ಫೋನನ್ನು ಕೇವಲ 25,000ಕ್ಕೆ ಖರೀದಿಸಿ
Amazon Year end sale: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆ ಆಗಿ ಧೂಳೆಬ್ಬಿಸಿ ಈಗಲೂ ಅದೇ ಹವಾ ಇಟ್ಟಿರುವ ಆಕರ್ಷಕ ಫೀಚರ್ಗಳಿಂದ ಕೂಡಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE 5G ಸ್ಮಾರ್ಟ್‌ಫೋನ್ ಅನ್ನು ನೀವು ಅಮೆಜಾಜ್ನ ಇಯರ್ ಎಂಡ್ ಸೇಲ್‌ನಲ್ಲಿ ಬಿಗ್ ಆಫರ್ನಲ್ಲಿ ಖರೀದಿಸಬಹುದು.
ಇನ್ನೇನು ಹೊಸ ವರ್ಷ (New Year) ಬಂದೇ ಬಿಟ್ಟಿತು. ಈಗ ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಆಫರ್ಗಳ ಸುರಿಮಳೆಯೇ ಆರಂಭವಾಗುತ್ತಿದೆ. ಅದರಂತೆ ದೇಶದ ಪ್ರಮುಖ ಇ ಕಾಮರ್ಸ್ ಮತ್ತು ಜನಪ್ರಿಯ ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್‌ನಲ್ಲಿ ಹೊಸ ವರ್ಷದ ಪ್ರಯುಕ್ತ ವಿಶೇಷ ಆಫರ್ ಸೇಲ್ ಆರಂಭವಾಗಿದೆ. ಹೌದು, ಹೊಸ ವರ್ಷದ ಮೆರಗು ಪ್ರಾರಂಭವಾಗುತ್ತಿದ್ದಂತೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ನಮ್ಮ ಪ್ರೀತಿಪಾತ್ರರೊಡನೆ ಆಚರಿಸಲು ನಾವು ಸಜ್ಜಾಗುತ್ತಿದ್ದಂತೆ, ಅಮೆಜಾನ್.ಇನ್ (Amazon.in) ಇಯರ್ ಎಂಡ್ ಸೇಲ್ (Amazon Year End Sale) ಹಮ್ಮಿಕೊಂಡಿದೆ. ಈಗಾಗಲೇ ಈ ಸೇಲ್ ಲೈವ್ ಆಗಿದ್ದು ಡಿಸೆಂಬರ್ 31 ರವರೆಗೆ ಚಾಲ್ತಿಯಲ್ಲಿರುತ್ತದೆ. ಅಮೆಜಾನ್ ಇಯರ್ ಎಂಡ್ ಸೇಲ್ ಸಮಯದಲ್ಲಿ ಶವೋಮಿ (Xiaomi), ಸ್ಯಾಮ್‌ಸಂಗ್ (Samsung) ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್ (Smartphone) ಬ್ರಾಂಡ್‌ಗಳು ಡಿಸ್ಕೌಂಡ್ ನೀಡುತ್ತಿವೆ. ಪ್ರಮುಖವಾಗಿ 75,000 ರೂ. ಇರುವ ಈ ಅತ್ಯುತ್ತಮ ಸ್ಮಾರ್ಟ್ಫೋನನ್ನು ನೀವು ಕೇವಲ 23,500 ರೂ. ಗೆ ಖರೀದಿಸಬಹುದು.
ಹೌದು, ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆ ಆಗಿ ಧೂಳೆಬ್ಬಿಸಿ ಈಗಲೂ ಅದೇ ಹವಾ ಇಟ್ಟಿರುವ ಆಕರ್ಷಕ ಫೀಚರ್ಗಳಿಂದ ಕೂಡಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE 5G ಸ್ಮಾರ್ಟ್‌ಫೋನ್ ಅನ್ನು ನೀವು ಬಿಗ್ ಆಫರ್ನಲ್ಲಿ ಖರೀದಿಸಬಹುದು. ಈ ಸ್ಮಾರ್ಟ್ಫೋನಿನ ಮೂಲಬೆಲೆ 74,990 ರೂ. ಆಗಿದೆ. ಆದರೆ, ಊಹಿಸಲಾಗದ ರೀತಿಯಲ್ಲಿ ಈ ಫೋನ್ ಮೇಲೆ ಇಯರ್ ಎಂಡ್ ಸೇಲ್‌ನಲ್ಲಿ ಆಫರ್ ಘೋಷಿಸಿರುವ ಅಮೆಜಾನ್, ಕೇವಲ 39,990 ರೂ.ಗಳಿಗೆ ಖರೀದಿಸಬಹುದಾಗಿದೆ. ಇದರ ಜೊತೆಗೆ ಅಮೆಜಾನ್ ಪೇ ICICI ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ ನೀವು ಹೆಚ್ಚುವರಿ 1,500 ರೂ. ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ 15,000 ರೂ. ವಿನ ಎಕ್ಸ್‌ಚೇಂಜ್ ಆಫರ್ ಕೂಡ ನೀಡಲಾಗಿದ್ದು ಕಡಿಮೆ ಎಂದರೂ 25,000 ರೂ. ಒಳಗೆ ಖರೀದಿಸಬಹುದಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE 5G ಸ್ಮಾರ್ಟ್‌ಫೋನ್ 6.5 ಇಂಚಿನ ಫುಲ್ ಹೆಚ್‌ಡಿ + ಸೂಪರ್ ಅಮೋಲೆಡ್ ಇನ್ಫಿನಿಟಿ-ಒ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಪಡೆದುಕೊಂಡಿದೆ.
ಅಮೆಜಾನ್ ಇಯರ್ ಎಂಡ್ ಸೇಲ್‌ನಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು 40% ರಷ್ಟು ರಿಯಾಯಿತಿಯನ್ನು ನೀಡುತ್ತಿವೆ. ಡಿಸ್ಕೌಂಟ್ ಮಾತ್ರವಲ್ಲ ಅಮೆಜಾನ್ ಪೇ, ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಖರೀದಿಸಿದರೆ 1,500 ವರೆಗಿನ ತ್ವರಿತ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಎಕ್ಸ್‌ಚೇಂಜ್ ಆಫರ್, ಹಾಗೂ 12 ತಿಂಗಳವರೆಗೆ ಸುಲಭವಾದ ನೋ ಕಾಸ್ಟ್ EMI ಗಳ ಲಾಭವನ್ನು ಸಹ ಪಡೆಯಬಹುದು. ನೀವು ಅಮೆಜಾನ್ ಪ್ರೈಮ್ ಸದಸ್ಯರಾಗಿದ್ದರೆ ಅಡ್ವಾಂಟೇಜ್ ಜಸ್ಟ್ ಫಾರ್ ಪ್ರೈಮ್‌ನೊಂದಿಗೆ 20,000 ರೂ. ವರೆಗೆ ಉಳಿಸಬಹುದು.
(Year End Sale Offer Buy rs 750000 Samsung Galaxy S20 FE 5G phone for just Rs 25000 in Amazon)