AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio, Airtel, VI: ಪ್ರತಿದಿನ 1.5GB ಡೇಟಾ​ ಪ್ಲಾನ್: ಯಾವ ಕಂಪೆನಿಯ ರಿಚಾರ್ಜ್​​ ಬೆಸ್ಟ್​?

New prepaid plans: ಪ್ರಸ್ತುತ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ 666 ರೂ. ವ್ಯಾಪ್ತಿಯಲ್ಲಿ ಮಧ್ಯಮ ಶ್ರೇಣಿಯ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿವೆ.

Jio, Airtel, VI: ಪ್ರತಿದಿನ 1.5GB ಡೇಟಾ​ ಪ್ಲಾನ್: ಯಾವ ಕಂಪೆನಿಯ ರಿಚಾರ್ಜ್​​ ಬೆಸ್ಟ್​?
ಸಾಂದರ್ಭಿಕ ಚಿತ್ರ
TV9 Web
| Updated By: ಝಾಹಿರ್ ಯೂಸುಫ್|

Updated on: Dec 28, 2021 | 6:41 PM

Share

New prepaid plans: ಟೆಲಿಕಾಂ ಆಪರೇಟರ್‌ ಕಂಪೆನಿಗಳಾದ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್-ಐಡಿಯಾ ತಮ್ಮ ಸುಂಕಗಳನ್ನು ಹೆಚ್ಚಿಸಿದಾಗಿನಿಂದ, ಬಳಕೆದಾರರು ನಿರಂತರವಾಗಿ ಹೊಸ ಮತ್ತು ಕೈಗೆಟುಕುವ ಯೋಜನೆಗಳನ್ನು ಹುಡುಕುತ್ತಿದ್ದಾರೆ. ಟೆಲಿಕಾಂ ಕಂಪನಿಗಳ ಈ ನಡೆಯಿಂದಾಗಿ, ಪ್ರಿಪೇಯ್ಡ್ ಯೋಜನೆಗಳು ದುಬಾರಿಯಾಗಿರುವುದು ಮಾತ್ರವಲ್ಲದೆ, ಈ ಯೋಜನೆಗಳ ಸ್ಟ್ರೀಮಿಂಗ್ ಪ್ರಯೋಜನಗಳು ಕೂಡ ಕಡಿತವಾಗಿದೆ.

ಪ್ರಸ್ತುತ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ 666 ರೂ. ವ್ಯಾಪ್ತಿಯಲ್ಲಿ ಮಧ್ಯಮ ಶ್ರೇಣಿಯ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿವೆ. ಏರ್‌ಟೆಲ್ ಮತ್ತು Vi ತಮ್ಮ ರೂ 666 ಪ್ರಿಪೇಯ್ಡ್ ಯೋಜನೆಯೊಂದಿಗೆ 77 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದ್ದರೆ, ಜಿಯೋ ತಮ್ಮ ಯೋಜನೆಯೊಂದಿಗೆ 84 ದಿನಗಳ ಮಾನ್ಯತೆಯನ್ನು ನೀಡುತ್ತಿದೆ. ಡೇಟಾ ಮತ್ತು ಉಚಿತ ಕರೆ ಪ್ರಯೋಜನಗಳೊಂದಿಗೆ ಎರಡು ತಿಂಗಳಿಗಿಂತ ಹೆಚ್ಚು ಅವಧಿಯ ಪ್ಲಾನ್‌ಗಳನ್ನು ಹುಡುಕುತ್ತಿರುವ ಬಳಕೆದಾರರಿಗೆ ಈ ಯೋಜನೆಗಳು ಸೂಕ್ತ ಎನ್ನಬಹುದು. ಹಾಗಿದ್ರೆ ಈ ಪ್ಲಾನ್​ನಲ್ಲಿ ಯಾವ ಕೊಡುಗೆಗಳಿದೆ ಎಂದು ನೋಡೋಣ…

ವೊಡಾಫೋನ್-ಐಡಿಯಾ 666 ರೂ ಪ್ಲಾನ್​: Vodafone-Idea ಪ್ರಿಪೇಯ್ಡ್ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 1.5GB ಡೇಟಾ ಮತ್ತು ದಿನಕ್ಕೆ 100 ಸಂದೇಶಗಳನ್ನು ಪಡೆಯಬಹುದು. ಈ ಪ್ಲಾನ್​ನ ವಾಲಿಡಿಟಿ 77 ದಿನಗಳು ಮಾತ್ರ. ಇನ್ನು ಈ ಯೋಜನೆಯಲ್ಲಿ ವೊಡಾಫೋನ್-ಐಡಿಯಾ ಮೂವೀಸ್ ಮತ್ತು ಟಿವಿಯನ್ನು ಸಹ ವೀಕ್ಷಿಸಬಹುದು. ಈ ಯೋಜನೆಯಲ್ಲಿ, ನೀವು ಬಿಂಗ್ ಆಲ್ ನೈಟ್ ಬೆನಿಫಿಟ್‌ಗಳು, ವೀಕೆಂಡ್ ಡೇಟಾ ರೋಲ್‌ಓವರ್ ಪ್ರಯೋಜನಗಳು ಮತ್ತು ಡೇಟಾ ಡಿಲೈಟ್ಸ್ ಆಫರ್‌ನ ಸೌಲಭ್ಯವನ್ನು ಸಹ ಪಡೆಯುತ್ತೀರಿ.

ಏರ್‌ಟೆಲ್ ಪ್ರಿಪೇಯ್ಡ್ 666 ರೂ. ಪ್ಲಾನ್: ಏರ್‌ಟೆಲ್​ನ ಈ ಪ್ಲಾನ್ ಮೂಲಕ ಪ್ರತಿದಿನ 1.5GB ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಅನ್ನು 77 ದಿನಗಳವರೆಗೆ ಪಡೆಯಬಹುದು. ಈ ಯೋಜನೆಯಲ್ಲಿ, ನೀವು ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯನ್ನು ಹಾಗೂ ಅಪೊಲೊ 24X7 ನ ಸೌಲಭ್ಯವನ್ನು ಸಹ ಪಡೆಯುತ್ತೀರಿ. ಹಾಗೆಯೇ ಉಚಿತ ಆನ್‌ಲೈನ್ ಕೋರ್ಸ್‌ಗಳು, ಫಾಸ್ಟ್‌ಟ್ಯಾಗ್‌ನಲ್ಲಿ ರೂ.100 ಕ್ಯಾಶ್‌ಬ್ಯಾಕ್, ಉಚಿತ ಹಲೋ ಟ್ಯೂನ್‌ಗಳು ಮತ್ತು ವಿಂಕ್ ಮ್ಯೂಸಿಕ್ ಕೊಡುಗೆಗಳನ್ನು ಸಹ ಪಡೆಯಬಹುದು.

ಜಿಯೋ ಪ್ರಿಪೇಯ್ಡ್ 666 ರೂ ಯೋಜನೆ: ಈ ಯೋಜನೆಯಲ್ಲಿ, ನೀವು ಅನಿಯಮಿತ ಕರೆಗಳೊಂದಿಗೆ ಪ್ರತಿದಿನ 1.5GB ಡೇಟಾ ಮತ್ತು 100 SMS ಸೌಲಭ್ಯವನ್ನು ಪಡೆಯುತ್ತೀರಿ. ಈ ಯೋಜನೆಯಲ್ಲಿ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶ ಲಭ್ಯವಿರಲಿದೆ. ವಿಶೇಷವೆಂದರೆ ಜಿಯೋದ ಈ ಯೋಜನೆಯ ವ್ಯಾಲಿಡಿಟಿ 84 ದಿನಗಳು. ಅಂದರೆ ಏರ್​ಟೆಲ್ ಹಾಗೂ ವೊಡಾಫೋನ್​ಗಿಂತ ಒಂದು ವಾರ ಹೆಚ್ಚಿನ ವಾಲಿಡಿಟಿಯನ್ನು ಜಿಯೋ ನೀಡುತ್ತದೆ.

ಇದನ್ನೂ ಓದಿ:  ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(Jio, Airtel, VI Prepaid Recharge Plans 2021)

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ