AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Xiaomi 12: ಶವೋಮಿ 12 ಮತ್ತು ಶವೋಮಿ 12 ಪ್ರೊ ಇಂದು ಬಿಡುಗಡೆ: ಬೆಲೆ, ಫೀಚರ್ಸ್, ಲೈವ್ ಸ್ಟ್ರೀಮ್​ ಬಗ್ಗೆ ಇಲ್ಲಿದೆ ಮಾಹಿತಿ

Xiaomi 12 and Xiaomi 12 Pro launch: ಶವೋಮಿ 12 ಮತ್ತು ಶವೋಮಿ 12 ಪ್ರೊ ಚೀನಾದಲ್ಲಿ ಅನಾವರಣಗೊಳ್ಳಲಿದೆ. ಸಂಜೆ 7:30ಕ್ಕೆ ಬಿಡುಗಡೆ ಕಾರ್ಯಕ್ರಮ ಶುರುವಾಗಲಿದ್ದು, ಭಾರತೀಯ ಕಾಲಮಾನದ ಪ್ರಕಾರ 5 ಗಂಟೆಗೆ ಆರಂಭವಾಗಲಿದೆ. ಶವೋಮಿ ವೆಬ್​ವೈಟ್​ನಲ್ಲಿ ಲೈವ್​ ವೀಕ್ಷಿಸಬಹುದು.

Xiaomi 12: ಶವೋಮಿ 12 ಮತ್ತು ಶವೋಮಿ 12 ಪ್ರೊ ಇಂದು ಬಿಡುಗಡೆ: ಬೆಲೆ, ಫೀಚರ್ಸ್, ಲೈವ್ ಸ್ಟ್ರೀಮ್​ ಬಗ್ಗೆ ಇಲ್ಲಿದೆ ಮಾಹಿತಿ
Xiaomi 12 and Xiaomi 12 Pro Launch
TV9 Web
| Updated By: Vinay Bhat|

Updated on: Dec 28, 2021 | 11:51 AM

Share

ಸ್ಮಾರ್ಟ್​ಫೋನ್ ಮಾರುಕಟ್ಟೆಯನ್ನು ಆಳುತ್ತಿರುವ ಶವೋಮಿ ಸಂಸ್ಥೆ ಹೊಸ ವರ್ಷಕ್ಕೆ ಹೊಸ ಮೊಬೈಲ್ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇಂದು ಸ್ಮಾರ್ಟ್​ಫೋನ್ ಪ್ರಪಂಚಕ್ಕೆ ಬಹುನಿರೀಕ್ಷಿತ ಶವೋಮಿ 12 ಸರಣಿ (Xiaomi 12 Series) ಫೋನ್ ಪರಿಚಯವಾಗಲಿದೆ. ಶವೋಮಿ 12 (Xiaomi 12) ಮತ್ತು ಶವೋಮಿ 12 ಪ್ರೊ (Xiaomi 12 Pro) ಸ್ಮಾರ್ಟ್​ಫೋನ್ ಇಂದು ಸಂಜೆ ಜಾಗತೀಕವಾಗಿ ಅನಾವರಣಗೊಳ್ಳಲಿದೆ. ಈಗಾಗಲೇ ಬಿಡುಗಡೆಗೂ ಮುನ್ನ ಈ ಫೋನ್ ಪ್ರಿ ಆರ್ಡರ್ ಹೋಗುವುದಕ್ಕೂ ಮುನ್ನ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಮಂದಿ ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಆನ್‌ಲೈನ್‌ನಲ್ಲಿ ಲೀಕ್‌ ಆಗಿದ್ದು, ಇದು ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ ಎಲ್ಇಡಿ ಫ್ಲ್ಯಾಷ್ ಅನ್ನು ಒಳಗೊಂಡಿರುವುದಾಗಿ ಹೇಳಲಾಗಿದೆ.

ಶವೋಮಿ 12 ಮತ್ತು ಶವೋಮಿ 12 ಪ್ರೊ ಚೀನಾದಲ್ಲಿ ಅನಾವರಣಗೊಳ್ಳಲಿದೆ. ಸಂಜೆ 7:30ಕ್ಕೆ ಬಿಡುಗಡೆ ಕಾರ್ಯಕ್ರಮ ಶುರುವಾಗಲಿದ್ದು, ಭಾರತೀಯ ಕಾಲಮಾನದ ಪ್ರಕಾರ 5 ಗಂಟೆಗೆ ಆರಂಭವಾಗಲಿದೆ. ಶವೋಮಿ ವೆಬ್​ವೈಟ್​ನಲ್ಲಿ ಲೈವ್​ ವೀಕ್ಷಿಸಬಹುದು.

ಶವೋಮಿ 12 ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.28 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇ 120Hz ರಿಫ್ರೇಶ್‌ ರೇಟ್‌ ಹೊಂದಿರುವ ಸಾದ್ಯತೆ ಇದೆ ಎನ್ನಲಾಗಿದೆ. ಬಲಿಷ್ಠವಾದ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 1 ಚಿಪ್‌ಸೆಟ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಇನ್ನು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 3x ಜೂಮ್ ಲೆನ್ಸ್ ಅನ್ನು ಹೊಂದಿರಬಹುದು. ಇದಲ್ಲದೆ 20 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ವೈರ್ಡ್ ಚಾರ್ಜಿಂಗ್ ಮತ್ತು 30W ವೈರ್‌ಲೆಸ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಶಿಯೋಮಿ 12 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಸುಮಾರು 44,000 ರೂಗಳಲ್ಲಿ ಲಭ್ಯವಾಗಬಹುದು ಎನ್ನಲಾಗಿದೆ.

ಇತ್ತ ಶವೋಮಿ 12 ಪ್ರೊ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಬಹುದು ಎಂದು ಹೇಳಲಾಗುತ್ತಿದೆ. ಅಂದರೆ, ಈ ಫೋನ್ ಅನ್ನು 10 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಫೋನ್ ಹಿಂಭಾಗದಲ್ಲಿ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಮುಖ್ಯ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಸೆಲ್ಫಿ ಕ್ಯಾಮೆರಾ ಮತ್ತು ಇದರ ಬೆಲೆಯ ಬಗ್ಗೆ ಮಾಹಿತಿ ಇಲ್ಲ.

ವಿಶ್ವದ ನಂಬರ್ 1 ವೆಬ್​ಸೈಟ್ ಆಗಿ ಗುರುತಿಸಿಕೊಂಡ ಭಾರತದಲ್ಲಿ ಬ್ಯಾನ್ ಆದ ಆ್ಯಪ್: ಟಾಪ್ 10 ಪಟ್ಟಿ ಇಲ್ಲಿದೆ

(Xiaomi 12 and Xiaomi 12 Pro launch today Here is the Xiaomi 12 Series features livestream and other details)

ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?
ಉತ್ತಮ ಮಳೆಯಿಂದಾಗಿ ತುಂಬಿ ತುಳುಕುತ್ತಿರುವ ಕರ್ನಾಟಕದ ಜಲಾಶಯಗಳು
ಉತ್ತಮ ಮಳೆಯಿಂದಾಗಿ ತುಂಬಿ ತುಳುಕುತ್ತಿರುವ ಕರ್ನಾಟಕದ ಜಲಾಶಯಗಳು
ರಸ್ತೆಯಲ್ಲಿ ಬರುತ್ತಿದ್ದ ಕಾರಿಗೆ ಏಕಾಏಕಿ ಅಡ್ಡಬಂದ ಕಾಡಾನೆ: ವಿಡಿಯೋ ವೈರಲ್
ರಸ್ತೆಯಲ್ಲಿ ಬರುತ್ತಿದ್ದ ಕಾರಿಗೆ ಏಕಾಏಕಿ ಅಡ್ಡಬಂದ ಕಾಡಾನೆ: ವಿಡಿಯೋ ವೈರಲ್