Xiaomi 12 Series: ಒಂದೇ ದಿನ ಬಾಕಿ: ಹೊಸ ವರ್ಷದ ಪ್ರಯುಕ್ತ ಡಿ 28ಕ್ಕೆ ಶವೋಮಿ 12 ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ
Xiaomi 12 and Xiaomi 12 Pro: ಹೊಸ ವರ್ಷದ ಪ್ರಯುಕ್ತ ಶವೋಮಿ 12 (Xiaomi 12) ಮತ್ತು ಶವೋಮಿ 12 ಪ್ರೊ (Xiaomi 12 Pro) ಸ್ಮಾರ್ಟ್‌ಫೋನ್ ಇದೇ ಡಿಸೆಂಬರ್ 28 ರಂದು ಜಾಗತೀಕವಾಗಿ ಅನಾವರಣಗೊಳ್ಳಲಿದೆ. ಶವೋಮಿ 12 ಪ್ರೊ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಬಹುದು ಎಂದು ಹೇಳಲಾಗುತ್ತಿದೆ. ಅಂದರೆ, ಈ ಫೋನ್ ಅನ್ನು 10 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

ಕಳೆದ ಎರಡು ವರ್ಷಗಳಿಂದ ನಂಬರ್ ಒನ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ (Number one Smartphone Brand) ಆಗಿ ಮಾರುಕಟ್ಟೆಯಲ್ಲಿ ಮೆರೆಯುತ್ತಿರುವ ಶವೋಮಿ ಸಂಸ್ಥೆ ಈಗ ತನ್ನ ಬಹುನಿರೀಕ್ಷಿತ ಶವೋಮಿ 12 ಸರಣಿ (Xiaomi 12 Series) ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ವರ್ಷದ ಪ್ರಯುಕ್ತ ಶವೋಮಿ 12 (Xiaomi 12) ಮತ್ತು ಶವೋಮಿ 12 ಪ್ರೊ (Xiaomi 12 Pro) ಸ್ಮಾರ್ಟ್‌ಫೋನ್ ಇದೇ ಡಿಸೆಂಬರ್ 28 ರಂದು ಜಾಗತೀಕವಾಗಿ ಅನಾವರಣಗೊಳ್ಳಲಿದೆ. ಈಗಾಗಲೇ ಬಿಡುಗಡೆಗೂ ಮುನ್ನ ಈ ಫೋನ್ ಪ್ರಿ ಆರ್ಡರ್ ಹೋಗುವುದಕ್ಕೂ ಮುನ್ನ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಮಂದಿ ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು, ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಎಲ್ಇಡಿ ಫ್ಲ್ಯಾಷ್ ಅನ್ನು ಒಳಗೊಂಡಿರುವುದಾಗಿ ಹೇಳಲಾಗಿದೆ.
ಶವೋಮಿ 12 ಸ್ಮಾರ್ಟ್‌ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.28 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇ 120Hz ರಿಫ್ರೇಶ್ ರೇಟ್ ಹೊಂದಿರುವ ಸಾದ್ಯತೆ ಇದೆ ಎನ್ನಲಾಗಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 1 ಚಿಪ್‌ಸೆಟ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಇನ್ನು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 3x ಜೂಮ್ ಲೆನ್ಸ್ ಅನ್ನು ಹೊಂದಿರಬಹುದು. ಇದಲ್ಲದೆ 20 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ವೈರ್ಡ್ ಚಾರ್ಜಿಂಗ್ ಮತ್ತು 30W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಶಿಯೋಮಿ 12 ಸ್ಮಾರ್ಟ್‌ಫೋನ್ ಭಾರತದಲ್ಲಿ ಸುಮಾರು 44,000 ರೂಗಳಲ್ಲಿ ಲಭ್ಯವಾಗಬಹುದು ಎನ್ನಲಾಗಿದೆ.
ಇತ್ತ ಶವೋಮಿ 12 ಪ್ರೊ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಬಹುದು ಎಂದು ಹೇಳಲಾಗುತ್ತಿದೆ. ಅಂದರೆ, ಈ ಫೋನ್ ಅನ್ನು 10 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಫೋನ್ ಹಿಂಭಾಗದಲ್ಲಿ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಮುಖ್ಯ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಸೆಲ್ಫಿ ಕ್ಯಾಮೆರಾ ಮತ್ತು ಇದರ ಬೆಲೆಯ ಬಗ್ಗೆ ಮಾಹಿತಿ ಇಲ್ಲ.
Year Ender 2021: 2021ರ ನಂಬರ್ 1 ಸ್ಮಾರ್ಟ್‌ಫೋನ್ ಯಾವುದು ಗೊತ್ತೇ?: ಇಲ್ಲಿದೆ ನೋಡಿ
(Xiaomi 12 Series Xiaomi is all set to unveil its next flagship lineup Xiaomi 12 and Xiaomi 12 pro tomorrow)