ಇತ್ತೀಚಿನ ದಿನಗಳಲ್ಲಿ ಯಾವುದೇ ವಿಚಾರವಾದರೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಡುತ್ತೆ. ಅದರಲ್ಲೂ ಹೆಚ್ಚಿನ ಜನರು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್‌ನಲ್ಲಿ (Twitter) ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಟ್ವಿಟ್ಟರ್ ಕೂಡ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಟ್ವಿಟ್ಟರ್ ಹೊಸ ಅಪ್ಡೇಟ್ ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಬಳಕೆದಾರರು ಏಕಕಾಲದಲ್ಲಿ ಅನೇಕ ಖಾತೆಗಳಿಗೆ ನೇರ ಸಂದೇಶಗಳನ್ನು ಕಳುಹಿಸಬಹುದಾಗಿದೆ.
ಹೌದು, ಟ್ವಿಟ್ಟರ್ ಹೊಸ ಆಯ್ಕೆಯೊಂದನ್ನು ಬಳಕೆದಾರರಿಗೆ ಪರಿಚಯಿಸಿದ್ದು ಈ ಮೂಲಕ ನೀವು ಒಂದೇ ಮೆಸೇಜ್ ಅನ್ನು ಒಂದು ಬಾರಿಗೆ 20 ಬೇರೆ ಬೇರೆ ಅಕೌಂಟ್ಗೆ ಕಳುಹಿಸಬಹುದಾಗಿದೆ. ಈ ಬಗ್ಗೆ ಟ್ವಿಟ್ಟರ್ ಸಪೋರ್ಟ್ ಹ್ಯಾಂಡಲ್ ಮಾಹಿತಿ ನೀಡಿದೆ. ಇದರ ಜೊತೆಗೆ ಮತ್ತೊಂದು ಹೊಸ ಆಯ್ಕೆನ್ನು ನೀಡಿದ್ದು, ಬಳಕೆದಾರರು ಮೆಸೇಜ್ ಅನ್ನು ಲಾಂಗ್ ಪ್ರೆಸ್ ಮಾಡಿದರೆ ಆ ಮೆಸೇಜ್ಗೆ ರಿಯಾಕ್ಟ್ ಮಾಡೋ ಆಯ್ಕೆಯನ್ನು ನೀಡಿದೆ. ಟ್ವಿಟ್ಟರ್ನ ಈ ಹೊಸ ಆಯ್ಕೆ ಸದ್ಯಕ್ಕೆ ಐಓಎಸ್ ಬಳಕೆದಾರರಿಗೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೂ ಪರಿಚಯಿಸಲಿದೆ.
Some DM improvements are coming your way over the next few weeks.
We’ve got easier Tweet sharing, better navigation when in a convo, and more… (1/5)
— Twitter Support (@TwitterSupport) August 19, 2021
ಇನ್ನೂ ಇತ್ತೀಚೆಗಷ್ಟೆ ಟ್ವಿಟ್ಟರ್ಗೆ ಲಾಗಿನ್ ಆಗಲು ಹೊಸ ನಿಯಮವನ್ನು ತಂದಿತ್ತು . ಇದರ ಪ್ರಕಾರ, ಸ್ಮಾರ್ಟ್‌ಫೋನ್‌ನಲ್ಲಿ ಕನೆಕ್ಟ್ ಆಗಿರುವ ಗೂಗಲ್ ಖಾತೆಯೊಂದಿಗೆ ಹೊಸ ಟ್ವಿಟ್ಟರ್ ಬೀಟಾ ಅಪ್ಡೇಟ್ಗೆ ಲಾಗ್ ಇನ್ ಮಾಡಲು ಸಾಧ್ಯವಾಗುತ್ತದೆ. ಹೊಸ ಏಕೀಕರಣವು ಬಳಕೆದಾರರಿಗೆ ಲಾಗ್ ಇನ್ ಮಾಡಲು ಅಥವಾ ಅಸ್ತಿತ್ವದಲ್ಲಿರುವ ವಿವರಗಳೊಂದಿಗೆ ಖಾತೆಯನ್ನು ತೆರೆಯಲು ಅನುಮತಿಸುತ್ತದೆ. ಹೆಸರು ಮತ್ತು ಇಮೇಲ್ ವಿಳಾಸದಂತಹ ಮುಖ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಆದರೆ, ಇಲ್ಲಿ ಪಾಸ್‌ವರ್ಡ್ ಹಾಕುವ ಅಗತ್ಯ ಇರುವುದಿಲ್ಲ.
ಬಳಕೆದಾರರು ಈಗಾಗಲೇ ಟ್ವಿಟ್ಟರ್ ಖಾತೆಯನ್ನು ಹೊಂದಿದ್ದು, ಗೂಗಲ್ ಅಕೌಂಟ್ ಇಮೇಲ್ ಅನ್ನು ಬಳಸುತ್ತಿದ್ದರೆ, ಪಾಸ್ವರ್ಡ್ ಇಲ್ಲದೆ ಲಾಗಿನ್ ಮಾಡಬಹುದಾಗಿದೆ.
Android 12: ಇನ್ಮುಂದೆ ಮುಖಭಾವದಲ್ಲೇ ನಿಮ್ಮ ಮೊಬೈಲ್ ಅನ್ನು ನಿಯಂತ್ರಿಸಬಹುದು..!
Amazon app quiz: ಅಮೆಜಾನ್ನ ಈ ಐದು ಪ್ರಶ್ನೆಗಳಿಗೆ ಉತ್ತರಿಸಿ 15 ಸಾವಿರ ರೂ. ಗೆಲ್ಲಿರಿ
(Twitter Update Now Users Can Send Twitter DMs To Multiple People At Once)