ಯುರೋಪಿಯನ್ ಕಮಿಷನ್ ಹೊಸ ಆದೇಶವೊಂದನ್ನು ಹೊರಡಿಸಿದ್ದು, ಇನ್ಮುಂದೆ ಎಲ್ಲಾ ಮೊಬೈಲ್ ಫೋನ್‍ಗಳು, ಐಪಾಡ್ ಹಾಗೂ ಇಯರ್ ಫೋನ್‍ಗಳಿಗೆ ಒಂದೇ ವಿಧದ ಚಾರ್ಜರ್ ಪೋರ್ಟ್ ಇರಬೇಕೆಂದು ಹೇಳಿದೆ. ಈಗೀಗ ಐಫೋನ್ (Iphone) ಮತ್ತು ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳ (Android Smartphone) ಚಾರ್ಜರ್ಗೆ ವಿಭಿನ್ನವಾಗಿ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಇದರ ನಡುವೆ ವೈರ್ಲೆಸ್ ಚಾರ್ಜರ್ಗಳು ಕೂಡ ತಲೆ ಎತ್ತಿದೆ. ಮತ್ತೊಂದೆಡೆ ಆ್ಯಂಡ್ರಾಯ್ಡ್ ಫೋನ್ಗಳಲ್ಲಿ ಟೈಪ್- ಸಿ ಚಾರ್ಜರ್ (USB -C Charger) ನೀಡಲಾಗುತ್ತಿದೆ. ಹೀಗಿರುವಾಗ ಇದನ್ನು ಗಮನಿಸಿದ ಯುರೋಪಿಯನ್ ಕಮಿಷನ್ ಎಲ್ಲಾ ಮೊಬೈಲ್ ಫೋನ್, ಐಪ್ಯಾಡ್ (Ipad) ಹಾಗೂ ಇಯರ್ ಫೋನ್‍ಗಳಿಗೆ (Earphone) ಒಂದೇ ವಿಧದ ಚಾರ್ಜರ್ ಪೋರ್ಟ್ ಇರಬೇಕೆಂದು ಆದೇಶ ಹೊರಡಿಸಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ನಾನಾ ವಿಧಧ ಚಾರ್ಜರ್ಗಳಿವೆ. ಆ್ಯಂಡ್ರಾಯ್ಡ್ ಮತ್ತು ಐಫೋನ್ಗಳ ಚಾರ್ಜರ್ ಭಿನ್ನವಾಗಿದೆ. ಐಪಾಡ್ ಮತ್ತು ಇಯರ್ ಫೋನ್ಗಳಿಗೂ ಪ್ರತ್ಯೇಕ ಚಾರ್ಜರ್ಗಳಿವೆ. ಅಷ್ಟು ಮಾತ್ರವಲ್ಲದೆ, ಆ್ಯಂಡ್ರಾಯ್ಡ್ ಬಳಕೆದಾರರು ಟೈಪ್- ಸಿ ಚಾರ್ಜರ್, ಮೈಕ್ರೊ ಯುಎಸ್‌ಬಿ ಬಳಸುತ್ತಿದ್ದಾರೆ. ಈ ಚಾರ್ಜರ್ಗಳು ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಅದರಲ್ಲೂ ಪ್ರಯಾಣದ ವೇಳೆ ಎಲ್ಲಾ ಚಾರ್ಜರ್ಗಳನ್ನು ಹಿಡಿದುಕೊಂಡು ಹೋಗಬೇಕಿದೆ. ಇದರಿಂದ ಅನೇಕರಿಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಯುರೋಪಿಯನ್ ಕಮಿಷನ್ ಎಲ್ಲಾ ಫೋನ್, ಐಪ್ಯಾಡ್, ಇಯರ್ಫೋನ್ಗೂ ಒಂದೇ ಚಾರ್ಜರ್ ನೀಡುವ ಆದೇಶ ಹೊರಡಿಸಿದೆ.
ಯುರೋಪಿಯನ್ ಕಮಿಷನ್ ಪ್ರಸ್ತಾವನೆಯಲ್ಲಿ ಹೇಳಿರುವಂತೆ ಮೊಬೈಲ್ ಫೋನ್, ಟ್ಯಾಬ್ಲೆಟ್ ಮತ್ತು ಹೆಡ್‌ಫೋನ್‌ಗಳಿಗೆ ಸಾಮಾನ್ಯ ಚಾರ್ಜಿಂಗ್ ಪೋರ್ಟ್ ಇರಬೇಕೆಂದು ಸೂಚಿಸಿದೆ. ಯುಎಸ್‌ಬಿ-ಸಿ ಕನೆಕ್ಟರ್ (USB-C) ಎಲ್ಲಾ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಕ್ಯಾಮರಾಗಳು, ಹೆಡ್‌ಫೋನ್‌ಗಳು, ಪೋರ್ಟಬಲ್ ಸ್ಪೀಕರ್‌ಗಳು ಮತ್ತು ಹ್ಯಾಂಡ್‌ಹೆಲ್ಡ್ ವೀಡಿಯೋಗೇಮ್ ಕನ್ಸೋಲ್‌ಗಳಿಗೆ ಪ್ರಮಾಣಿತ ಪೋರ್ಟ್ ಆಗಬೇಕು ಎಂದಿದೆ.
ಚೀನಾ, ಜಪಾನ್,ಅಮೆರಿಕ ಸೇರಿದಂತೆ ಹಲವು ದೇಶಗಳು ವಿಭಿನ್ನವಾದ ಆ್ಯಂಡ್ರಾಯ್ಡ್ ಮತ್ತು ಐಫೊನ್ ಅನ್ನಯ ಉತ್ಪಾದಿಸುತ್ತಾ ಬಂದಿದೆ. ಇವೆಲ್ಲವು ಒಂದಕ್ಕಿಂತ ಒಂದು ರೀತಿಯ ಚಾರ್ಜರ್ ಪೋರ್ಟ್ ಹೊಂದಿದೆ. ಅದರಲ್ಲೂ ಅದೇ ಕಂಪನಿಗಳು ತಯಾರಿಸುವ ಇಯರ್ಫೋನ್ ಮತ್ತು ಚಾರ್ಜರ್ ಫೋರ್ಟ್ಗಳು ಭಿನ್ನವಾಗಿದೆ.
ಇನ್ನು ಯುಸಿಯ ಹೊಸ ಪ್ರಸ್ತಾಪವನ್ನು ಆ್ಯಪಲ್ ಸಂಸ್ಥೆ ವಿರೋಧಿಸಿದೆ. ಈ ರೀತಿಯ ಕಟ್ಟುನಿಟ್ಟಿನ ನಿಯಂತ್ರಣವು ಇಲೆಕ್ಟ್ರಾನಿಕ್ ಸಾಧನಗಳ ನಾವೀನ್ಯತೆಯನ್ನು ಮೊಟಕುಗೊಳಿಸುತ್ತದೆ. ಇದು ಯುರೋಪ್ ಮತ್ತು ಪ್ರಪಂಚದ ಗ್ರಾಹಕರಿಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಹೇಳಿದೆ.
iPhone 13: ಇಂದು ಐಫೋನ್ 13 ಮೊದಲ ಸೇಲ್: ಖರೀದಿಸುವ ಮುನ್ನ ಈ ಡಿಸ್ಕೌಂಟ್ ಆಫರ್ ಬಗ್ಗೆ ತಿಳಿದುಕೊಳ್ಳಿ
Itel A26: ದೇಶದಲ್ಲಿ ಐಟೆಲ್ ಎ26 ಸ್ಮಾರ್ಟ್ಫೋನ್ ಬಿಡುಗಡೆ: ಇದರ ಬೆಲೆ ಕೇವಲ 5,999 ರೂ.
(Type-C Charger In Major Setback to Apple EU Proposes Universal Type-C Charger For All Devices)