ಭಾರತದಲ್ಲಿ ಯುಪಿಐ ವ್ಯವಸ್ಥೆ (UPI) ದಿನದಿಂದ ದಿನಕ್ಕೆ ಪ್ರಬಲವಾಗುತ್ತಲೇ ಹೋಗುತ್ತಿದೆ. ಇಂದು ಹೆಚ್ಚಿನ ಹಣದ ವಹಿವಾಟು ಯುಪಿಐ ಮೂಲಕವೇ ನಡೆಯುತ್ತಿದೆ. ಇದರ ಜೊತೆಗೆ ದೇಶದಲ್ಲಿ ಪ್ರತಿದಿನ ಹೊಸ ಹೊಸ ಸೈಬರ್ ಕ್ರೈಂ ಪ್ರಕರಣಗಳು ಕೂಡ ದಾಖಲಾಗುತ್ತಿದೆ. ಆನ್‌ಲೈನ್ ವಹಿವಾಟು ನಡೆಸುವಾಗ ಜನರು ವಂಚನೆಗೆ ಬಲಿಯಾಗುತ್ತಿದ್ದಾರೆ. ಪ್ರಸ್ತುತ ಹೆಚ್ಚಿನ ವಹಿವಾಟುಗಳನ್ನು UPI ಮೂಲಕ ಮಾಡಲಾಗುತ್ತಿರುವುದರಿಂದ ವಂಚಕರು ಯುಪಿಐ ಬಳಸಿ ಜನರನ್ನು ವಂಚಿಸುತ್ತಿದ್ದಾರೆ.
ಜನರು ತಮ್ಮ ಖಾತೆಯಲ್ಲಿ ಹಣವನ್ನು ಪಡೆಯಲು ಯುಪಿಐ ಪಿನ್ ಅನ್ನು ನಮೂದಿಸುವ ಅಗತ್ಯವಿಲ್ಲ ಎಂದು ಎನ್‌ಪಿಸಿಐ ಎಚ್ಚರಿಸಿದೆ.
ವಂಚಕರು ಸಾಮಾನ್ಯವಾಗಿ ಕ್ಯೂಆರ್ ಕೋಡ್‌ಗಳನ್ನು ಹೊಂದಿರುವ ಫಿಶಿಂಗ್ ಇಮೇಲ್‌ಗಳನ್ನು ಕಳುಹಿಸುತ್ತಾರೆ. ಇದು ಪ್ರಸಿದ್ಧ ಇ-ಕಾಮರ್ಸ್ ಸೈಟ್ ಅಥವಾ ಬ್ಯಾಂಕ್ನಿಂದ ಬಂದ ಮೆಸೇಜ್ನಂತೆ ಕಾಣುತ್ತದೆ. ಈ ಇ-ಮೇಲ್‌ಗಳು ಸಾಮಾನ್ಯವಾಗಿ ‘ನಿಮ್ಮ ಕೊನೆಯ ಪಾವತಿ ವಿಫಲವಾಗಿದೆ ಆದ್ದರಿಂದ ದಯವಿಟ್ಟು ಮತ್ತೊಮ್ಮೆ ಪಾವತಿಸಿ’ ಅಥವಾ ‘ಈ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಿ’ ಮುಂತಾದ ಸಂದೇಶಗಳನ್ನು ಒಳಗೊಂಡಿರುತ್ತದೆ. ಜನರು ಇದನ್ನು ನಿಜವೆಂದು ಅರಿತು ಮೋಸಗಾರರ ಬಲೆಗೆ ಬೀಳುತ್ತಾರೆ. ಆದ್ದರಿಂದ UPI QR ಕೋಡ್ ಮೂಲಕ ಪಾವತಿ ಮಾಡುವಾಗ ಯಾವಾಗಲೂ ಜಾಗರೂಕರಾಗಿರಿ.
ಒಪ್ಪೋದಿಂದ ಇಂದು ಬಹುನಿರೀಕ್ಷಿತ ಮಡಚುವ ಸ್ಮಾರ್ಟ್ಫೋನ್ ಬಿಡುಗಡೆ: ಯಾವುದು ನೋಡಿ
ನೀವು ಅಪರಿಚಿತರಿಗೆ ಹಣಗಳನ್ನು ಪಾವತಿಸುತ್ತಿದ್ದರೆ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ಜಾಗರೂಕರಾಗಿರಿ ಎಂಬುದನ್ನು ಮೊದಲನೆಯದಾಗಿ ನೆನಪಿನಲ್ಲಿಡಿ. ನಿಮ್ಮ UPI ವಾಲೆಟ್ ಪಿನ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳ ಪಿನ್, ಒನ್ ಟೈಮ್ ಪಾಸ್‌ವರ್ಡ್ (OTP), CVV, ಮುಕ್ತಾಯದ ದಿನಾಂಕವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ