Fast Charging Smartphones: ಕ್ಷಣಾರ್ಧದಲ್ಲಿ ಚಾರ್ಜ್ ಆಗುತ್ತೆ ಈ ಸ್ಮಾರ್ಟ್​ಫೋನ್​ಗಳು: ಬೆಲೆ 25,000 ಕ್ಕಿಂತ ಕಡಿಮೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 04, 2024 | 12:08 PM

ವೇಗವಾಗಿ ಚಾರ್ಜಿಂಗ್ ಆಗುವ ಫೋನ್‌ಗಳ ಬಗ್ಗೆ ಮಾತನಾಡಿದರೆ ಇದರಲ್ಲಿ, ರಿಯಲ್ ಮಿ 13+, ಒನ್​ಪ್ಲಸ್ ನಾರ್ಡ್ CE4, ರಿಯ್ಲ ಮಿ P2 ಪ್ರೊ, ಮೊಟೊರೊಲ ಎಡ್ಜ್ 50 ಪ್ಯೂಶನ್ ಮತ್ತು ಮೊಟೊರೊಲ ಎಡ್ಜ್ 50 ನಿಯೊ ಹೆಸರುಗಳು ಇವೆ. ಈ ಸ್ಮಾರ್ಟ್‌ಫೋನ್‌ಗಳು ಸುಮಾರು 40-55 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತವೆ.

Fast Charging Smartphones: ಕ್ಷಣಾರ್ಧದಲ್ಲಿ ಚಾರ್ಜ್ ಆಗುತ್ತೆ ಈ ಸ್ಮಾರ್ಟ್​ಫೋನ್​ಗಳು: ಬೆಲೆ 25,000 ಕ್ಕಿಂತ ಕಡಿಮೆ
ಸಾಂದರ್ಭಿಕ ಚಿತ್ರ
Follow us on

ಇಂದಿನ ವೇಗದ ಜಗತ್ತಿನಲ್ಲಿ ನಮಗೆ ಕೆಲಸ ಬಿಟ್ಟು ಬೇರೆ ಯಾವುದಕ್ಕೂ ಸಮಯವನ್ನು ಕೊಡುವುದು ಕಷ್ಟಕರವಾಗಿದೆ. ಇಷ್ಟರ ಮಟ್ಟಿಗೆ ಎಂದರೆ ಮೊಬೈಲಿನಲ್ಲೇ ಅರ್ಧ ಕೆಲಸ ಮಾಡುತ್ತಾ ಅದನ್ನು ಚಾರ್ಜ್ ಮಾಡಲು ಕೂಡ ಸಮಯ ಇಲ್ಲ ಎಂಬಂತಾಗಿದೆ. ಫೋನ್‌ನ ನಿರಂತರ ಬಳಕೆಯು ತುಂಬಾ ಹೆಚ್ಚಿದೆ, ಹೀಗಾಗಿ ಇದಕ್ಕೆ ವೇಗದ ಚಾರ್ಜಿಂಗ್‌ ಬೆಂಬಲವು ಅಗತ್ಯವಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ವೇಗದಲ್ಲಿ ಚಾರ್ಜ್ ಮಾಡಬಹುದಾದ ಫೋನ್ ಈಗ ಜನರ ಬೇಡಿಕೆ ಮತ್ತು ಅವಶ್ಯಕತೆಯಾಗಿದೆ. ಹೀಗಾಗಿ 25 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಫಾಸ್ಟ್ ಆಗಿ ಚಾರ್ಜ್ ಆಗುವ ಕೆಲವು ಸ್ಮಾರ್ಟ್‌ಫೋನ್‌ಗಳ ಬಗ್ಗೆ ನಾವು ಇಲ್ಲಿ ಹೇಳುತ್ತೇವೆ.

ಕಡಿಮೆ ಸಮಯದಲ್ಲಿ ಫುಲ್ ಚಾರ್ಜ್ ಆಗುವ ಫೋನ್‌ಗಳು:

ವೇಗವಾಗಿ ಚಾರ್ಜಿಂಗ್ ಆಗುವ ಫೋನ್‌ಗಳ ಬಗ್ಗೆ ಮಾತನಾಡಿದರೆ ಇದರಲ್ಲಿ, ರಿಯಲ್ ಮಿ 13+, ಒನ್​ಪ್ಲಸ್ ನಾರ್ಡ್ CE4, ರಿಯ್ಲ ಮಿ P2 ಪ್ರೊ, ಮೊಟೊರೊಲ ಎಡ್ಜ್ 50 ಪ್ಯೂಶನ್ ಮತ್ತು ಮೊಟೊರೊಲ ಎಡ್ಜ್ 50 ನಿಯೊ ಹೆಸರುಗಳು ಇವೆ. ಈ ಸ್ಮಾರ್ಟ್‌ಫೋನ್‌ಗಳು ಸುಮಾರು 40-55 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತವೆ.

ರಿಯಲ್ ಮಿ 13+

ಇದು ಪ್ರಸ್ತುತ ರೂ. 25,000 ರ ಬಜೆಟ್ ವಿಭಾಗದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯ ಸ್ಮಾರ್ಟ್‌ಫೋನ್ ಆಗಿದೆ. ಇದು 5,000mAh ಬ್ಯಾಟರಿಯನ್ನು ಹೊಂದಿದ್ದು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ 31 ನಿಮಿಷಗಳಲ್ಲಿ ಶೇ. 20 ರಿಂದ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಇದರ ಬೆಲೆಯ ಬಗ್ಗೆ ಮಾತನಾಡುತ್ತಾ, 8GB/128GB ಸ್ಟೋರೇಜ್ ರೂಪಾಂತರವು ರೂ. 22,999 ಕ್ಕೆ, 8GB/256GB ಸ್ಟೋರೇಜ್ ರೂಪಾಂತರವು ರೂ. 24,999 ಕ್ಕೆ ಮತ್ತು 12GB/256GB ಸ್ಟೋರೇಜ್ ರೂಪಾಂತರವು ರೂ. 26,999 ಕ್ಕೆ ಲಭ್ಯವಿದೆ.

ಒನ್​ಪ್ಲಸ್ ನಾರ್ಡ್ CE4

ಈ ಒನ್​ಪ್ಲಸ್ ಫೋನ್‌ನ ಬ್ಯಾಟರಿ ಬ್ಯಾಕಪ್ ಸಾಕಷ್ಟು ಉತ್ತಮವಾಗಿದೆ. ಇದು 100W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ ಮತ್ತು ಶೇ. 20 ರಿಂದ ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. 5,500mAh ಬ್ಯಾಟರಿಯನ್ನು ಹೊಂದಿದೆ, ಇದು PCMark ಬ್ಯಾಟರಿ ಪರೀಕ್ಷೆಯ ಪ್ರಕಾರ, ಒಂದೇ ಪೂರ್ಣ ಚಾರ್ಜ್‌ನಲ್ಲಿ 16 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ. ಇದರ ಬೆಲಲೆ 8GB/128GB ಸ್ಟೋರೇಜ್ ರೂಪಾಂತರಕ್ಕೆ 24,999 ರೂ. ಇದೆ. ಅಂತೆಯೆ 8GB/256GB ಸ್ಟೋರೇಜ್ ರೂಪಾಂತರದ ಬೆಲೆ ರೂ. 26,999 ಆಗಿದೆ.

ಇದನ್ನೂ ಓದಿ: ಗೂಗಲ್ ಪೇನಲ್ಲಿ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?: ಶೇ. 99 ಜನರಿಗೆ ಗೊತ್ತಿಲ್ಲ ಈ ಟ್ರಿಕ್

ರಿಯಲ್ ಮಿ P2 ಪ್ರೊ

ನೀವು ರಿಯಲ್ ಮಿ P2 ಪ್ರೊನಲ್ಲಿ 5,200mAh ಬ್ಯಾಟರಿಯನ್ನು ಪಡೆಯುತ್ತೀರಿ, ಇದು 80W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಶೇ. 20 ರಿಂದ 100% ವರೆಗೆ ಚಾರ್ಜ್ ಮಾಡಲು 36 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದರ 8GB/128GB ರೂಪಾಂತರವು ರೂ. 21,999 ಕ್ಕೆ ಮಾರಾಟ ಆಗುತ್ತಿದೆ.

ಮೊಟೊರೊಲಾ ಎಡ್ಜ್ 50 ಫ್ಯೂಷನ್

ಈ ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ, ಇದು TurboPower 68W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ ಅನ್ನು 54 ನಿಮಿಷಗಳಲ್ಲಿ 20% ರಿಂದ 100% ವರೆಗೆ ಚಾರ್ಜ್ ಮಾಡಬಹುದು. ಇದರ ಬೆಲೆಯ ಬಗ್ಗೆ ಮಾತನಾಡುತ್ತಾ, 8GB/128GB ಸ್ಟೋರೇಜ್ ರೂಪಾಂತರವು ರೂ. 21,999 ಕ್ಕೆ ಲಭ್ಯವಿದೆ.

ಮೊಟೊರೊಲ ಎಡ್ಜ್ 50 ನಿಯೊ

ಈ ಫೋನ್ 68W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,310mAh ಬ್ಯಾಟರಿಯನ್ನು ಹೊಂದಿದೆ. ಪೂರ್ಣ ಚಾರ್ಜಿಂಗ್‌ಗೆ ಇದು 37 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದರ 8GB/128GB ಸ್ಟೋರೇಜ್ ರೂಪಾಂತರದ ಬೆಲೆ 21,999 ರೂ. ಆಗಿದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ