Tech Tips: ಗೂಗಲ್ ಪೇನಲ್ಲಿ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?: ಶೇ. 99 ಜನರಿಗೆ ಗೊತ್ತಿಲ್ಲ ಈ ಟ್ರಿಕ್
ಗೂಗಲ್ ಪೇ ನಿಮ್ಮ ಎಲ್ಲಾ ವಹಿವಾಟುಗಳ ದಾಖಲೆಯನ್ನು ಸೇವ್ ಮಾಡಿಕೊಟ್ಟುಕೊಂಡಿರುತ್ತದೆ. ಆದರೆ, ಅನೇಕರಿಗೆ ಇದನ್ನು ಡಿಲೀಟ್ ಮಾಡುವುದು ಹೇಗೆ ಎಂಬುದು ತಿಳಿದಿರುವುದಿಲ್ಲ. ನೀವು ಗೂಗಲ್ ಪೇನಲ್ಲಿ ಹಿಸ್ಟರಿ ಡಿಲೀಟ್ ಮಾಡಲು ಬಯಸಿದರೆ ಅದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಗೂಗಲ್ ಪೇ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿದ್ದು, ಇದನ್ನು ನಾವು ದೈನಂದಿನ ಜೀವನದಲ್ಲಿ ಪಾವತಿಗಳನ್ನು ಮಾಡಲು ಬಳಸುತ್ತೇವೆ. ಈ ಅಪ್ಲಿಕೇಶನ್ ಮೂಲಕ, ನೀವು ಯುಪಿಐ ಸಹಾಯದಿಂದ ಸೆಕೆಂಡುಗಳಲ್ಲಿ ಆನ್‌ಲೈನ್ ಪಾವತಿಯನ್ನು ಮಾಡಬಹುದು. ನೀವು ಮೊಬೈಲ್ ರೀಚಾರ್ಜ್ ಮತ್ತು ವಿದ್ಯುತ್ ಬಿಲ್ ಪಾವತಿಸಲು ಕೂಡ ಇದನ್ನು ಬಳಸಬಹುದು. ಆದರೆ, ಗೂಗಲ್ ಪೇ ನಿಮ್ಮ ಎಲ್ಲಾ ವಹಿವಾಟುಗಳ ದಾಖಲೆಯನ್ನು ಸೇವ್ ಮಾಡಿಕೊಟ್ಟುಕೊಂಡಿರುತ್ತದೆ. ಆದರೆ, ಅನೇಕರಿಗೆ ಇದನ್ನು ಡಿಲೀಟ್ ಮಾಡುವುದು ಹೇಗೆ ಎಂಬುದು ತಿಳಿದಿರುವುದಿಲ್ಲ. ನೀವು ಗೂಗಲ್ ಪೇನಲ್ಲಿ ಹಿಸ್ಟರಿ ಡಿಲೀಟ್ ಮಾಡಲು ಬಯಸಿದರೆ ಅದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಗೂಗಲ್ ಪೇಯಿಂದ ವಹಿವಾಟು ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?:
ನಿಮ್ಮ ಫೋನ್‌ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ.
ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್‌ಗೆ ಹೋಗಿ ಮತ್ತು “ಸೆಟ್ಟಿಂಗ್ಸ್” ಮೇಲೆ ಕ್ಲಿಕ್ ಮಾಡಿ.
ಇಲ್ಲಿ ನೀವು “ಗೌಪ್ಯತೆ ಮತ್ತು ಭದ್ರತೆ” ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಇದರ ನಂತರ “ಡೇಟಾ ಮತ್ತು ವೈಯಕ್ತೀಕರಣ”- “Google ಖಾತೆ” ಆಯ್ಕೆಯನ್ನು ಕ್ಲಿಕ್ ಮಾಡಿ.
ಇಲ್ಲಿ ನೀವು ನಿಮ್ಮ ಎಲ್ಲಾ ಪಾವತಿಗಳ ದಾಖಲೆಯನ್ನು ನೋಡುತ್ತೀರಿ. ಯಾವುದೇ ಒಂದು ಪಾವತಿಯನ್ನು ಅಳಿಸಲು, ನೀವು ಅದರ ಪಕ್ಕದಲ್ಲಿರುವ ಕ್ರಾಸ್ ಬಟನ್ ಅನ್ನು ಕ್ಲಿಕ್ ಮಾಡಬಹುದು. ನೀವು ಎಲ್ಲಾ ಪಾವತಿಗಳನ್ನು ಒಂದೇ ಬಾರಿಗೆ ಅಳಿಸಲು ಬಯಸಿದರೆ, ಪಾವತಿ ಪಟ್ಟಿಯ ಮೇಲಿರುವ “ಡಿಲೀಟ್” ಆಯ್ಕೆಯನ್ನು ಕ್ಲಿಕ್ ಮಾಡಿ.
ಇಲ್ಲಿ ನೀವು ಎಷ್ಟು ಸಮಯದವರೆಗೆ ಪಾವತಿಗಳನ್ನು ಅಳಿಸಲು ಬಯಸುತ್ತೀರಿ ಎಂಬುದನ್ನು ಸಹ ಆಯ್ಕೆ ಮಾಡಬಹುದು.
ಇದರ ನಂತರ, ನೀವು ಆಯ್ಕೆಮಾಡಿದ ಪಾವತಿಗಳನ್ನು ನಿಮ್ಮ ಗೂಗಲ್ ಪೇ ವಹಿವಾಟು ಹಿಸ್ಟರಿಯಿಂದ ಅಳಿಸಲಾಗುತ್ತದೆ.
15 ಬಿಲಿಯನ್ ದಾಟಿದ ಯುಪಿಐ ವಹಿವಾಟು:
ಯುಪಿಐ ಸೆಪ್ಟೆಂಬರ್‌ನಲ್ಲಿ ನೂತನ ದಾಖಲೆ ಮಾಡಿದೆ. ಒಂದು ತಿಂಗಳಲ್ಲಿ ಜನರು 20.64 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾರೆ. UPI ವಹಿವಾಟುಗಳ ಸಂಖ್ಯೆ 15.04 ಶತಕೋಟಿ ದಾಟಿದೆ. ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಮೂಲಕ ವಹಿವಾಟಿನಲ್ಲಿ ಶೇ. 31ರಷ್ಟು ಹೆಚ್ಚಳವಾಗಿದೆ. ಯುಪಿಐ ಪಾವತಿಗಳ ಮೌಲ್ಯವು ವರ್ಷದಿಂದ ವರ್ಷಕ್ಕೆ ಶೇಕಡಾ 31 ರಷ್ಟು ಏರಿಕೆಯಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಯುಪಿಐನಲ್ಲಿ ದಿನಕ್ಕೆ 50.1 ಕೋಟಿ ವಹಿವಾಟುಗಳು ನಡೆದಿವೆ. ಆಗಸ್ಟ್‌ನಲ್ಲಿ ಈ ಪ್ರಮಾಣ 48.3 ಕೋಟಿ ಆಗಿತ್ತು. ಈ ಅವಧಿಯಲ್ಲಿ ಪ್ರತಿದಿನ ಸರಾಸರಿ 68,800 ಕೋಟಿ ರೂಪಾಯಿ ಮೌಲ್ಯದ ವಹಿವಾಟುಗಳು ಯುಪಿಐನಲ್ಲಿ ನಡೆದಿವೆ. ಆಗಸ್ಟ್‌ನಲ್ಲಿ ಈ ಅಂಕಿ-ಅಂಶ 66,475 ಕೋಟಿ ರೂ. ಆಗಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ