Vi ‘RedX Family Plan’: ಒಂದೇ ರಿಚಾರ್ಜ್​ನಲ್ಲಿ ಐವರಿಗೆ ಅನಿಯಮಿತ ಇಂಟರ್​ನೆಟ್ ಡೇಟಾ

Vi ‘RedX Family Plan’: ಒಂದೇ ರಿಚಾರ್ಜ್​ನಲ್ಲಿ ಐವರಿಗೆ ಅನಿಯಮಿತ ಇಂಟರ್​ನೆಟ್ ಡೇಟಾ
Vi ‘RedX Family Plan’

Vi ‘RedX Family Plan’: ವೊಡಾಫೋನ್ ಐಡಿಯಾದ ರೆಡ್‌ಎಕ್ಸ್ ಫ್ಯಾಮಿಲಿ ಯೋಜನೆಯಲ್ಲಿ ಗ್ರಾಹಕರು ಅನಿಯಮಿತ 4ಜಿ ಡೇಟಾವನ್ನು ಪಡೆಯಲಿದ್ದಾರೆ.

TV9kannada Web Team

| Edited By: Zahir PY

Aug 11, 2021 | 9:18 PM

ವೊಡಾಫೋನ್ ಐಡಿಯಾ (Vodafone-Idea) ತನ್ನ ಗ್ರಾಹಕರಿಗೆ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಇದೀಗ ಕಂಪನಿಯು ತನ್ನ ಪ್ರಮುಖ ಪೋಸ್ಟ್​ ಪೇಯ್ಡ್ ಯೋಜನೆ RedX ಮತ್ತು RedX ಫ್ಯಾಮಿಲಿ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ಅನಿಯಮಿತ ಡೇಟಾ ಕೊಡುಗೆಯನ್ನು ಪಡೆಯಬಹುದು. ಅಷ್ಟೇ ಅಲ್ಲದೆ ರೆಡ್​ಎಕ್ಸ್ ಆಫರ್​ನಲ್ಲಿ ಒಂದೇ ಬಿಲ್ ನಲ್ಲಿ ಹಲವರು ಇಂಟರ್​ನೆಟ್ ಡೇಟಾವನ್ನು ಬಳಸಬಹುದು. ಇದರಲ್ಲಿ ಎರಡು ಪ್ಲ್ಯಾನ್​ಗಳನ್ನು ಪರಿಚಯಿಸಲಾಗಿದೆ.

1699 ರೂ. ಯೋಜನೆಯಲ್ಲಿ ಮೂರು ಸದಸ್ಯರು ಮಾತ್ರ ಡೇಟಾ ಬಳಸಬಹುದು. ಹಾಗೆಯೇ ರೂ. 2299 ರ ಯೋಜನೆಗೆ ಐದು ಜನರನ್ನು ಸೇರಿಸಬಹುದು. ವರ್ಕ್​ ಫ್ರಮ್ ಹೋಮ್ ಬಳಕೆದಾರರಿಗೆ ಹೆಚ್ಚಿನ ಅನುಕೂಲವಾಗುವಂತೆ ವೊಡಾಫೋನ್-ಐಡಿಯಾ ಈ ಎರಡು ಪೋಸ್ಟ್ ಪೇಯ್ಡ್​ ಯೋಜನೆಗಳನ್ನು ಆರಂಭಿಸಿದೆ.

ವೊಡಾಫೋನ್ ಐಡಿಯಾದ ರೆಡ್‌ಎಕ್ಸ್ ಫ್ಯಾಮಿಲಿ ಯೋಜನೆಯಲ್ಲಿ ಗ್ರಾಹಕರು ಅನಿಯಮಿತ 4ಜಿ ಡೇಟಾವನ್ನು ಪಡೆಯಲಿದ್ದಾರೆ. ಅಂದರೆ ಅನ್​ಲಿಮಿಡೆಟ್ ಡೇಟಾ ಇದರಲ್ಲಿ ದೊರೆಯಲಿದೆ. ಇದರ ಹೊರತಾಗಿ, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಮತ್ತು ವಿ ಮೂವೀಸ್ ಮತ್ತು ಟಿವಿಗೆ ವಿಐಪಿ ಲಾಗಿನ್ ಅವಕಾಶ ಇರಲಿದೆ.

ಇನ್ನು 2999 ರೂ. ಪ್ಲ್ಯಾನ್​ನಲ್ಲಿ ಏಳು ದಿನಗಳ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕೇಜ್ ಕೂಡ ಲಭ್ಯವಿರುತ್ತದೆ. ಅಲ್ಲದೆ, ವಿಶೇಷ ISD ದರಗಳ ಪ್ರಯೋಜನವು ಅಮೆರಿಕ, ಯುಕೆ ಮತ್ತು ಮಧ್ಯಪ್ರಾಚ್ಯ ಸೇರಿದಂತೆ 14 ದೇಶಗಳಿಗೆ ಅನ್ವಯವಾಗಲಿದೆ.

ವೊಡಾಫೋನ್ ಐಡಿಯಾ ಲಿಮಿಟೆಡ್ ಇತ್ತೀಚೆಗೆ ಕಡಿಮೆ ಬೆಲೆಯ ಹೊಸ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಎಲ್ಲಾ ಯೋಜನೆಗಳು ಕಾರ್ಪೊರೇಟ್ ಗ್ರಾಹಕರಿಗಾಗಿ ಪರಿಚಯಿಸಲಾಗಿದೆ. ಹೊಸ ಯೋಜನೆಗಳು ರೂ 299 ರಿಂದ ಆರಂಭವಾಗುತ್ತವೆ. ಈ ಯೋಜನೆಗಳಲ್ಲಿ ಡೇಟಾ ಬಳಕೆಗೆ ದೈನಂದಿನ ಮಿತಿಯಿಲ್ಲ.

ರೂ. 299 ಯೋಜನೆ – ಈ ಯೋಜನೆಯಲ್ಲಿ 30GB ಡೇಟಾ ಲಭ್ಯವಿದೆ. ರೂ. 349 ಪ್ಲಾನ್ – ಈ ಪ್ಲ್ಯಾನ್​ನಲ್ಲಿ 40 ಜಿಬಿ ಡೇಟಾ ಲಭ್ಯವಿದೆ. ರೂ. 399 ಪ್ಲಾನ್ – ಈ ಯೋಜನೆಯಲ್ಲಿ 60GB ಡೇಟಾ ಲಭ್ಯವಿದೆ. ರೂ. 499 ಯೋಜನೆ – ಈ ಯೋಜನೆಯಲ್ಲಿ 100GB ಡೇಟಾವನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: India vs England 2nd Test: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ: ಪ್ಲೇಯಿಂಗ್ 11 ಹೀಗಿರಲಿದೆ

ಇದನ್ನೂ ಓದಿ: India vs England: 2ನೇ ಟೆಸ್ಟ್ ವೇಳೆ ಮಳೆಯಾಗಲಿದೆಯಾ? ಇಲ್ಲಿದೆ 5 ದಿನಗಳ ಸಂಪೂರ್ಣ ಹವಾಮಾನ ವರದಿ

ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ

Follow us on

Related Stories

Most Read Stories

Click on your DTH Provider to Add TV9 Kannada