Vodafone Idea: ವೊಡಾಫೋನ್ ಐಡಿಯಾ ಗ್ರಾಹಕರಿಗೆ ಬಿಗ್ ಶಾಕ್: ಓಟಿಟಿ ಯೋಜನೆ ಬಂದ್

| Updated By: Vinay Bhat

Updated on: Dec 24, 2021 | 2:40 PM

Vodafone-Idea Disney+ Hotstar Plan: ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಓಟಿಟಿ ಪ್ರಯೋಜನಗಳನ್ನು ಒದಗಿಸುತ್ತಿದ್ದ ವೊಡಾಫೋನ್ ಐಡಿಯಾ ವಿ ಟೆಲಿಕಾಂನ 601 ರೂ. ಮತ್ತು 701 ರೂ. ಪ್ರಿಪೇಯ್ಡ್‌ ಯೋಜನೆಗಳು ಸದ್ದಿಲ್ಲದೇ ಸ್ಥಗಿತಗೊಂಡಿದೆ.

Vodafone Idea: ವೊಡಾಫೋನ್ ಐಡಿಯಾ ಗ್ರಾಹಕರಿಗೆ ಬಿಗ್ ಶಾಕ್: ಓಟಿಟಿ ಯೋಜನೆ ಬಂದ್
Vodafone Idea
Follow us on

ಭಾರತದ ಮೂರನೇ-ಅತಿದೊಡ್ಡ ಖಾಸಗಿ ಟೆಲಿಕಾಂ ಕಂಪನಿ ವೊಡಾಫೋನ್- ಐಡಿಯಾ (Vodafone Idea) ತನ್ನ ಗ್ರಾಹಕರಿಗೆ ವಿಭಿನ್ನ ಆಫರ್​ಗಳುಳ್ಳ ಪ್ರಿಪೇಯ್ಡ್ ಪ್ಲಾನ್​ಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗಷ್ಟೆ ಬೆಲೆ ಏರಿಕೆ ಮಾಡಿ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದ್ದ ವಿ (Vi) ಟೆಲಿಕಾಂ ಕಂಪನಿ ಬಳಿಕ ಆಫರ್​ಗಳ ಮೇಲೆ ಆಫರ್​​ಗಳನ್ನು ಪರಿಚಯಿಸಿತ್ತು. ಆದರೀಗ ತನ್ನ ಬಳಕೆದಾರರಿಗೆ ವಿ ಮತ್ತೊಂದು ಶಾಕ್ ನೀಡಿದೆ. ವೊಡಾಫೋನ್ ಐಡಿಯಾ ಡಿಸ್ನಿ+ ಹಾಟ್‌ಸ್ಟಾರ್‌ನ (Disney+ Hotstar) ಪ್ರಯೋಜನಗಳೊಂದಿಗೆ ಉತ್ತಮ ದರ್ಜೆಯ ಪ್ರಿಪೇಯ್ಡ್ ಯೋಜನೆಯನ್ನು (Prepaid Plans) ನೀಡುವ ಆಪರೇಟರ್ ಆಗಿದೆ. ಆದರೆ ಅಚ್ಚರಿ ವಿಚಾರವೆಂದರೆ ವಿ ಟೆಲಿಕಾಂ ಕಂಪನಿ ಇದೀಗ ತನ್ನ ಎರಡು ಪ್ರಿಪೇಯ್ಡ್ ಯೋಜನೆಗಳಿಂದ ಡಿಸ್ನಿ+ ಹಾಟ್‌ಸ್ಟಾರ್‌ ಪ್ರಯೋಜನವನ್ನು ತೆಗೆದು ಹಾಕಿದೆ.

ಹೌದು, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಓಟಿಟಿ ಪ್ರಯೋಜನಗಳನ್ನು ಒದಗಿಸುತ್ತಿದ್ದ ವಿ ಟೆಲಿಕಾಂನ 601 ರೂ. ಮತ್ತು 701 ರೂ. ಪ್ರಿಪೇಯ್ಡ್‌ ಯೋಜನೆಗಳು ಸದ್ದಿಲ್ಲದೇ ಸ್ಥಗಿತಗೊಂಡಿದೆ. 601 ರೂ. ಯೋಜನೆ ಮತ್ತು 701 ರೂ. ಈ ಎರಡು ಯೋಜನೆಗಳು ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್‌ಗೆ ಚಂದಾದಾರಿಕೆ ಪ್ರಯೋಜನ ಹೊಂದಿದ್ದವು.

ಈಗ ವೊಡಾಫೋನ್ ಐಡಿಯಾ ಡಿಸ್ನಿ+ ಹಾಟ್‌ಸ್ಟಾರ್‌ನೊಂದಿಗೆ ಕೇವಲ ಎರಡು ಯೋಜನೆಗಳನ್ನು ಹೊಂದಿದೆ. ಡಿಸ್ನಿ+ ಹಾಟ್‌ಸ್ಟಾರ್ ಪ್ರಯೋಜನ ಪಡೆಯಲು 501 ರೂ. ಮತ್ತು 901 ರೂ. ಪ್ಲಾನ್‌ಗಳಲ್ಲಿ ಮಾತ್ರ ಲಭ್ಯವಿದೆ. ಆದರೆ ಇದು ಕಂಪನಿಯ ಕಡೆಯಿಂದ ತಾರ್ಕಿಕ ಕ್ರಮವಾಗಿ ಕಂಡುಬರುತ್ತದೆ ಮತ್ತು ಅದಕ್ಕಾಗಿಯೇ ಈ ಯೋಜನೆಗಳು ಶೀಘ್ರದಲ್ಲೇ ಹೆಚ್ಚಿನ ಬೆಲೆಯೊಂದಿಗೆ ಮಾರುಕಟ್ಟೆಯಲ್ಲಿ ಮರಳಬಹುದು ಎಂದು ಅಂದಾಜಿಸಲಾಗಿದೆ.

ಉಳಿದಂತೆ ವಿ ಟೆಲಿಕಾಂನ ಇತರೆ 249 ರೂ. ಪ್ರಿಪೇಯ್ಡ್‌ ಯೋಜನೆ ಪ್ರಯೋಜನೆ ಆಕರ್ಷಕ ಕೊಡುಗೆಗಳನ್ನು ನೀಡುತ್ತದೆ. ಈ ಪ್ಲಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರಿಪೇಯ್ಡ್‌ ಪ್ಲಾನ್ ಒಟ್ಟು 21 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

299 ರೂ. ಯೋಜನೆ ಕೂಡ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರಿಪೇಯ್ಡ್‌ ಪ್ಲಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Tecno Camon 18: 48MP ಸೆಲ್ಫೀ ಕ್ಯಾಮೆರಾ, 5000mAh ಬ್ಯಾಟರಿ: ಭಾರತದಲ್ಲಿ ಧೂಳೆಬ್ಬಿಸುತ್ತಿದೆ ಬಜೆಟ್ ಬೆಲೆಯ ಈ ಫೋನ್

(Vi Vodafone-Idea removed some of the popular prepaid plans that offered free Disney Plus Hotstar subscription)