2022 ರ ಹೊಸ ವರ್ಷದ ಆಗಮನಕ್ಕೆ ಇನ್ನೇನು ಕೆಲವು ದಿನಗಳಷ್ಟೆ ಬಾಕಿಯಿದೆ. ಹೀಗಿರುವಾಗ 2021ನೇ ವರ್ಷದ ಸ್ಮಾರ್ಟ್ಫೋನ್ ಜಗತ್ತನ್ನು ಮೆಲುಕಿ ಹಾಕಿ ನೋಡಿದಾಗ ಈ ವರ್ಷ ತಿಂಗಳಿಗೆ ಕಡಿಮೆ ಎಂದರೂ ಮೂರರಿಂದ ಐದು ಫೋನುಗಳು ಮಾರುಕಟ್ಟೆಗೆ ಆಗಮಿಸಿವೆ. ಬಜೆಟ್ ಫೋನಿನಿಂದ ಹಿಡಿದು ಹೈ ರೇಂಜ್ ಫೋನುವರೆಗೂ ಅನೇಕ ಸ್ಮಾರ್ಟ್ಫೋನ್ಗಳು ಮೋಡಿ ಮಾಡಿವೆ.
ಅಂತೆಯೆ ಈ ವರ್ಷ ಸ್ಯಾಮ್ಸಂಗ್ ಕಂಪನಿ ವಿವಿಧ ರೂಪದಲ್ಲಿ ಎಲ್ಲಾ ಬೆಲೆಗಳ ವಿಭಾಗಗಳನ್ನು ಪೂರೈಸುವ ವ್ಯಾಪಕ ಶ್ರೇಣಿಯ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿತ್ತು. ಹಾಗಾದ್ರೆ 2021 ರಲ್ಲಿ ಜನರು ಅತಿ ಹೆಚ್ಚು ಹುಡುಕಿದ ಸ್ಯಾಮ್ಸಂಗ್ ಕಂಪನಿಯ ಸ್ಮಾರ್ಟ್ಫೋನ್ ಯಾವುದು ಎಂಬುದನ್ನು ನೋಡೋಣ.
ಗೂಗಲ್ ಟ್ರೆಂಡ್ಗಳು ಹೆಚ್ಚು ಹುಡುಕಲ್ಪಟ್ಟ ಕೆಲವು ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳನ್ನು ಬಹಿರಂಗಪಡಿಸಿದೆ. ಇವುಗಳು ದಕ್ಷಿಣ ಕೊರಿಯಾದ ಬ್ರ್ಯಾಂಡ್ನ ಎಲ್ಲಾ ಜನಪ್ರಿಯ ಮಾದರಿಗಳನ್ನು ಒಳಗೊಂಡಿವೆ.
ಸ್ಯಾಮ್ಸಂಗ್ ಗ್ಯಾಲಕ್ಸಿ F62: ಈ ಸ್ಮಾರ್ಟ್ಫೋನ್ನ ಬೆಲೆ 20,499 ರೂ. ಇದು 6.7-ಇಂಚಿನ (2400 x 1080 ಪಿಕ್ಸೆಲ್ಗಳು) ಪೂರ್ಣ HD+ ಇನ್ಫಿನಿಟಿ-O ಸೂಪರ್ AMOLED ಪ್ಲಸ್ 20:9 ಡಿಸ್ಪ್ಲೇ ಹೊಂದಿದೆ. ಆಕ್ಟಾ-ಕೋರ್ Samsung Exynos 9 ಸರಣಿ 9825 7nm ಪ್ರೊಸೆಸರ್, ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್ಡಿ), 64MP + 12MP + 5MP + 5MP ಹಿಂಬದಿಯ ಕ್ಯಾಮೆರಾ, 32MP ಮುಂಭಾಗದ ಕ್ಯಾಮರಾ, ಡ್ಯುಯಲ್ 4G VoLTE, 7,000 mAh ಬ್ಯಾಟರಿ ಸಾಮರ್ಥ್ಯದಿಂದ ಕೂಡಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ M02s: ಇದರ ಬೆಲೆ: ರೂ. 8,999. 6.5-ಇಂಚಿನ (1560 × 720 ಪಿಕ್ಸೆಲ್ಗಳು) HD+ LCD ಇನ್ಫಿನಿಟಿ-ವಿ ಡಿಸ್ಪ್ಲೇ. 1.8GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 450 14nm ಮೊಬೈಲ್ ಪ್ಲಾಟ್ಫಾರ್ಮ್ ಜೊತೆಗೆ Adreno 506 GPU. 13MP + 2MP ಆಳ ಮತ್ತು 2MP ಹಿಂಬದಿಯ ಕ್ಯಾಮೆರಾ, 5MP ಮುಂಭಾಗದ ಕ್ಯಾಮೆರಾ. ಡ್ಯುಯಲ್ 4G VoLTE ಮತ್ತು 5,000mAh ಬ್ಯಾಟರಿ.
ಸ್ಯಾಮ್ಸಂಗ್ ಗ್ಯಾಲಕ್ಸಿ F12: ಬೆಲೆ: ರೂ. 10,999. 6.5-ಇಂಚಿನ (720×1600 ಪಿಕ್ಸೆಲ್ಗಳು) HD+ ಇನ್ಫಿನಿಟಿ-V ಡಿಸ್ಪ್ಲೇ, 90Hz ರಿಫ್ರೆಶ್ ರೇಟ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ. Exynos 850 Octa-Core (2GHz Quad + 2GHz Quad) 8nm ಪ್ರೊಸೆಸರ್ ಜೊತೆಗೆ Mali-G52. 48MP + 5MP + 2MP + 2MP ಹಿಂಬದಿಯ ಕ್ಯಾಮೆರಾ. 8MP ಮುಂಭಾಗದ ಕ್ಯಾಮೆರಾ. 6,000mAh (ವಿಶಿಷ್ಟ) ಬ್ಯಾಟರಿ.
ಸ್ಯಾಮ್ಸಂಗ್ ಗ್ಯಾಲಕ್ಸಿ A12: ಬೆಲೆ: ರೂ. 12,999. 6.5 ಇಂಚಿನ HD+ ಡಿಸ್ಪ್ಲೇ. 2.3GHz ಆಕ್ಟಾ-ಕೋರ್ ಹೆಲಿಯೊ P35 ಪ್ರೊಸೆಸರ್. 3/4/6GB RAM ಜೊತೆಗೆ 32/64/128GB ROM. 48MP + 5MP + 2MP + 2MP ಕ್ವಾಡ್ ರಿಯರ್ ಕ್ಯಾಮೆರಾಗಳು. 8MP ಮುಂಭಾಗದ ಕ್ಯಾಮೆರಾ. 5,000mAh ಬ್ಯಾಟರಿ.
ಸ್ಯಾಮ್ಸಂಗ್ ಗ್ಯಾಲಕ್ಸಿ M42: ಬೆಲೆ: ರೂ. 21,999. 6.6-ಇಂಚಿನ HD+ ಇನ್ಫಿನಿಟಿ-U ಸೂಪರ್ AMOLED ಡಿಸ್ಪ್ಲೇ. ಆಕ್ಟಾ ಕೋರ್ ಜೊತೆಗೆ ಸ್ನಾಪ್ಡ್ರಾಗನ್ 750G 8nm ಮೊಬೈಲ್ ಪ್ಲಾಟ್ಫಾರ್ಮ್ ಜೊತೆಗೆ Adreno 619 GPU.4 8MP + 8MP + 5MP + 5MP ಹಿಂದಿನ ಕ್ಯಾಮೆರಾ. 20MP ಮುಂಭಾಗದ ಕ್ಯಾಮೆರಾ. 5,000 mAh ಬ್ಯಾಟರಿ.
Published On - 12:30 pm, Fri, 24 December 21