ಒಂದೇ ದಿನ ಬರೋಬ್ಬರಿ ಮೂರು ಸ್ಮಾರ್ಟ್​ಫೋನ್ಸ್ ಬಿಡುಗಡೆ ಮಾಡಿದ ವಿವೋ: ಯಾವುವು?, ಬೆಲೆ ಎಷ್ಟು?

Vivo S18, Vivo S18, and Vivo S18e Launched: ಚೀನಾ ಮಾರುಕಟ್ಟೆಯಲ್ಲಿ ಸದ್ದಿಲ್ಲದೆ ವಿವೋ S18 ಸರಣಿಯ ಅಡಿಯಲ್ಲಿ ವಿವೋ S18, ವಿವೋ S18 ಪ್ರೊ ಮತ್ತು ವಿವೋ S18e ಎಂಬ ಮೂರು ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗಿವೆ. ಇವುಗಳು ವಿವೋ S17 ಸರಣಿಯ ಮುಂದಿನ ವರ್ಷನ್. ಈ ಬಾರಿ ಚಿಪ್‌ಸೆಟ್‌, ಕ್ಯಾಮೆರಾದಲ್ಲಿ ಸುಧಾರಣೆಗಳನ್ನು ಮಾಡಲಾಗಿದೆ.

ಒಂದೇ ದಿನ ಬರೋಬ್ಬರಿ ಮೂರು ಸ್ಮಾರ್ಟ್​ಫೋನ್ಸ್ ಬಿಡುಗಡೆ ಮಾಡಿದ ವಿವೋ: ಯಾವುವು?, ಬೆಲೆ ಎಷ್ಟು?
Vivo S18, S18 Pro and S18e
Follow us
|

Updated on:Dec 16, 2023 | 1:23 PM

ಪ್ರಸಿದ್ಧ ವಿವೋ ಕಂಪನಿ ಸದ್ದಿಲ್ಲದೆ ಒಂದೇ ದಿನ ತನ್ನ ವಿವೋ S18 ಸರಣಿಯ (Vivo S18 Series) ಅಡಿಯಲ್ಲಿ ಮೂರು ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದೆ. ಚೀನಾದಲ್ಲಿ ಅಧಿಕೃತವಾಗಿ ಲಾಂಚ್ ಆಗಿರುವ ಈ ಫೋನಿನಲ್ಲಿ ವಿವೋ S18, ವಿವೋ S18 ಪ್ರೊ ಮತ್ತು ವಿವೋ S18e ಎಂಬ ಮೂರು ಫೋನುಗಳಿವೆ. ಇವುಗಳು ವಿವೋ S17 ಸರಣಿಯ ಮುಂದಿನ ವರ್ಷನ್ ಆಗಿದೆ. ಹಿಂದಿನ ಸರಣಿಗೆ ಹೋಲಿಸಿದರೆ ಈ ಬಾರಿ ಚಿಪ್‌ಸೆಟ್‌ಗಳು, ಕ್ಯಾಮೆರಾಗಳು ಮತ್ತು ವಿನ್ಯಾಸದಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ವಿವೋ S18 ಸರಣಿಯನ್ನು ಜಾಗತಿಕವಾಗಿ ಮತ್ತು ಭಾರತದಲ್ಲಿ ವಿವೋ V30 ಮತ್ತು ವಿವೋ V30 ಪ್ರೊ ಎಂದು ಮರುಬ್ರಾಂಡ್ ಮಾಡುವ ನಿರೀಕ್ಷೆಯಿದೆ. ಈ ಫೋನಿನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿವೋ S18, S18 ಪ್ರೊ ಮತ್ತು S18e ಬೆಲೆ, ಲಭ್ಯತೆ:

  • ವಿವೋ S18 8GB+256GB ಸ್ಟೋರೇಜ್ ಆಯ್ಕೆಗೆ RMB 2299 (ಸುಮಾರು 27,300 ರೂ.), 12GB+256GB ವೇರಿಯೆಂಟ್​ಗೆ RMB 2599 (ರೂ. 30,400), 16GB + 512GB ಆಯ್ಕೆಗೆ RMB 2999 (ಸುಮಾರು 35,700 ರೂ.)
  • ವಿವೋ S18 ಪ್ರೊ 12GB+256GB- RMB 3199 (38,000 ರೂ.), 16GB+256GB – RMB 3499 (ಸುಮಾರು 41,600 ರೂ.) 16GB+512GB – RMB 3699 (ಸುಮಾರು 44,000 ರೂ.)
  • ವಿವೋ S18e ಫೋನಿನ 12GB+256GB – RMB 2099 (25,000 ರೂ. ಇರಬಹುದು) 12GB+512GB – RMB 2299 (ರೂ. 27,300)

ಹೊಸ ವಿವೋ S18 ಡಿಸೆಂಬರ್ 22 ರಿಂದ ಮಾರಾಟವಾಗಲಿದೆ. ವಿವೋ S18e ಮತ್ತು S18 ಪ್ರೊ ಜನವರಿ 13, 2024 ರಿಂದ ಲಭ್ಯವಿರುತ್ತದೆ.

ಕೊನೆಗೂ 8,499 ರೂ. ಗೆ ಭಾರತದಲ್ಲಿ ಬಿಡುಗಡೆ ಆಯಿತು ಪೋಕೋ C65 ಸ್ಮಾರ್ಟ್​ಫೋನ್

ಇದನ್ನೂ ಓದಿ
Image
ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್ ಬಳಕೆದಾರರಿಗೆ ಸರ್ಕಾರದಿಂದ ಅಲರ್ಟ್
Image
ಬೆಸ್ಟ್ ಬೆಜೆಟ್ ಫೋನ್ ರಿಯಲ್ ಮಿ C67 5G ಇಂದಿನಿಂದ ಖರೀದಿಗೆ ಲಭ್ಯ
Image
ಮೊಬೈಲ್ ಫೋನ್ ಉತ್ಪಾದನೆಯಲ್ಲಿ 22 ಪಟ್ಟು ಹೆಚ್ಚಳ: ಅಶ್ವಿನಿ ವೈಷ್ಣವ್​
Image
ಜಾಗತಿಕ ಮಾರುಕಟ್ಟೆಗೆ ವಿವೋ X100 ಸರಣಿ ಸ್ಮಾರ್ಟ್​ಫೋನ್ಸ್ ಎಂಟ್ರಿ

ವಿವೋ S18 ಮತ್ತು ವಿವೋ S18 ಪ್ರೊ ಫೀಚರ್ಸ್:

ಡಿಸ್ಪ್ಲೇ: 2800×1260 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.78-ಇಂಚಿನ FHD+ AMOLED ಡಿಸ್ ಪ್ಲೇ, HDR10+, 120Hz ರಿಫ್ರೆಶ್ ದರ ಹೊಂದಿದೆ.

ಪ್ರೊಸೆಸರ್: ವಿವೋ S18 ಪ್ರೊ ಮೀಡಿಯಾಟೆಕ್ ಡೈಮೆನ್ಸಿಟಿ 9200+ ಮೂಲಕ Immortalis-G715 GPU ಜೊತೆ ಜೋಡಿಸಲಾಗಿದೆ. ಸ್ಟ್ಯಾಂಡರ್ಡ್ ಮಾಡೆಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್ ಹೊಂದಿದೆ.

OS: OriginOS 4 ಜೊತೆಗೆ ಆಂಡ್ರಾಯ್ಡ್ 14 ಮೂಲಕ ರನ್ ಆಗುತ್ತದೆ.

ವಿವೋ S18 ಪ್ರೊ ಕ್ಯಾಮೆರಾಗಳು: 50MP ಸೋನಿ IMX920 ಸೆನ್ಸಾರ್ ಜೊತೆಗೆ f/1.88 ದ್ಯುತಿರಂಧ್ರ, OIS ಮತ್ತು LED ಫ್ಲ್ಯಾಷ್, 50MP ಸ್ಯಾಮ್​ಸಂಗ್ JN1 ಅಲ್ಟ್ರಾ-ವೈಡ್ ಸೆನ್ಸಾರ್ ಜೊತೆಗೆ f/2.0 ಅಪರ್ಚರ್ ಮತ್ತು 12MP 2x ಟೆಲಿಫೋಟೋ ಪೋರ್ಟ್ರೇಟ್ ಕ್ಯಾಮೆರಾ.

ವಿವೋ S18 ಕ್ಯಾಮೆರಾಗಳು: f/1.88 ದ್ಯುತಿರಂಧ್ರದೊಂದಿಗೆ 50MP ಓಮ್ನಿವಿಷನ್ OV50E ಸಂವೇದಕ, OIS, LED ಫ್ಲ್ಯಾಷ್ ಮತ್ತು 8MP ಅಲ್ಟ್ರಾ-ವೈಡ್ OV08D10 ಸಂವೇದಕ.

ಮುಂಭಾಗದ ಕ್ಯಾಮೆರಾ: 50MP ಮುಂಭಾಗದ ಕ್ಯಾಮೆರಾ ಡ್ಯುಯಲ್ ಸಾಫ್ಟ್ LED ಫ್ಲ್ಯಾಷ್ ಹೊಂದಿದೆ.

ಇತರೆ: ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಸ್ಟೀರಿಯೋ ಸ್ಪೀಕರ್‌ಗಳು, ಹೈ-ರೆಸ್ ಆಡಿಯೋ ಮತ್ತು IP54 ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧ ಇದೆ. 5G SA/NSA, ಡ್ಯುಯಲ್ 4G VoLTE, Wi-Fi 6, ಬ್ಲೂಟೂತ್, GPS, USB ಟೈಪ್-C, ಮತ್ತು NFC.

ಬ್ಯಾಟರಿ: 80W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ.

ವಿವೋ S18e ಫೀಚರ್ಸ್:

ಡಿಸ್‌ಪ್ಲೇ: 6.67-ಇಂಚಿನ FHD+ AMOLED ಡಿಸ್‌ಪ್ಲೇ ಜೊತೆಗೆ 20:9 ಆಕಾರ ಅನುಪಾತ, HDR10+ ಮತ್ತು 120Hz ರಿಫ್ರೆಶ್ ರೇಟ್.

ಪ್ರೊಸೆಸರ್: ಮೀಡಿಯಾಟೆಕ್ ಡೈಮನ್ಸಿಟಿ 7200 4nm ಪ್ರೊಸೆಸರ್ ಜೊತೆಗೆ Mali-G610 MC4 GPU

OS: OriginOS 4 ಜೊತೆಗೆ ಆಂಡ್ರಾಯ್ಡ್ 14 ಮೂಲಕ ರನ್ ಆಗುತ್ತದೆ

ಕ್ಯಾಮೆರಾಗಳು: f/1.79 ಅಪರ್ಚರ್ ಮತ್ತು OIS ಮತ್ತು 2MP ಡೆಪ್ತ್ ಸೆನ್ಸರ್ ಜೊತೆಗೆ 50MP ಸೋನಿ LYT-600 ಪ್ರಾಥಮಿಕ ಸಂವೇದಕ. ಸೆಲ್ಫಿಗಳಿಗಾಗಿ 16MP ಮುಂಭಾಗದ ಕ್ಯಾಮೆರಾ ಇದೆ.

ಇತರೆ: ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, ಸ್ಟೀರಿಯೋ ಸ್ಪೀಕರ್‌ಗಳು, ಹೈ-ರೆಸ್ ಆಡಿಯೋ, ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್.

ಬ್ಯಾಟರಿ: 80W ವೇಗದ ಚಾರ್ಜಿಂಗ್‌ನೊಂದಿಗೆ 4600mAh ಬ್ಯಾಟರಿ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:22 pm, Sat, 16 December 23

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ