Vivo V25 Pro: ವಿವೋ V25 ಪ್ರೊ ಸ್ಮಾರ್ಟ್​ಫೋನ್ ಸೇಲ್ ಆರಂಭ: ಹೇಗಿದೆ?, ಖರೀದಿಸಬಹುದೇ?

| Updated By: Vinay Bhat

Updated on: Aug 26, 2022 | 6:45 AM

ವಿವೋ ವಿ25 ಪ್ರೊ (Vivo V25 Pro) ಸ್ಮಾರ್ಟ್‌ಫೋನ್‌ ಇದೀಗ ಖರೀದಿಗೆ ಸಿಗುತ್ತಿದೆ. ಫ್ಲಿಪ್‌ಕಾರ್ಟ್ (Flipkart) ಮೂಲಕ ವಿವೋ V25 ಪ್ರೊ ಮೊದಲ ಸೇಲ್ ಕಾಣುತ್ತಿದೆ. ಹಾಗಾದ್ರೆ ಈ ಫೋನ್ ಹೇಗಿದೆ?, ಖರೀದಿಸಬಹುದೇ? ಎಂಬುದನ್ನು ನೋಡೋಣ.

Vivo V25 Pro: ವಿವೋ V25 ಪ್ರೊ ಸ್ಮಾರ್ಟ್​ಫೋನ್ ಸೇಲ್ ಆರಂಭ: ಹೇಗಿದೆ?, ಖರೀದಿಸಬಹುದೇ?
Vivo V25 Pro
Follow us on

ಭಾರತದಲ್ಲಿ ತಿಂಗಳಿಗೆ ಕನಿಷ್ಠ ಎಂದರೂ ಐದರಿಂದ ಏಳು ಸ್ಮಾರ್ಟ್​​ಫೋನ್​ಗಳು (Smartphone) ಬಿಡುಗಡೆ ಆಗುತ್ತವೆ. ಇದರಲ್ಲಿ ಕೆಲವಷ್ಟೆ ಸದ್ದು ಮಾಡಿದರೆ ಇನ್ನೂ ಕೆಲವು ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ. ಈ ತಿಂಗಳು ಕೂಡ ಭಾರತಕ್ಕೆ ಅನೇಕ ಫೋನ್​ಗಳು ಲಗ್ಗೆಯಿಟ್ಟಿವೆ. ಈ ಪೈಕಿ ವಿವೋ V25 ಸರಣಿಯ ಹೊಸ ವಿವೋ ವಿ25 ಪ್ರೊ (Vivo V25 Pro) ಸ್ಮಾರ್ಟ್‌ಫೋನ್‌ ಕೂಡ ಒಂದು. ಇದೀಗ ಈ ಸ್ಮಾರ್ಟ್​ಫೋನ್ ಖರೀದಿಗೆ ಸಿಗುತ್ತಿದೆ. ಆಕರ್ಷಕ ಫೀಚರ್​ಗಳಿಂದ ಕೂಡಿರುವ ಈ ಫೋನ್​ ಮೀಡಿಯಾಟೆಕ್‌ ಡೈಮೆನ್ಸಿಟಿ 1300 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ (Flipkart) ಮೂಲಕ ವಿವೋ V25 ಪ್ರೊ ಮೊದಲ ಸೇಲ್ ಕಾಣುತ್ತಿದೆ. ಹಾಗಾದ್ರೆ ಈ ಫೋನ್ ಹೇಗಿದೆ?, ಖರೀದಿಸಬಹುದೇ? ಎಂಬುದನ್ನು ನೋಡೋಣ.

ವಿವೋ V25ಪ್ರೊ ಸ್ಮಾರ್ಟ್‌ಫೋನ್‌ 6.56-ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು 2,376*1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಫನ್‌ಟಚ್‌ OS 12 ಬೆಂಬಲವನ್ನು ಪಡೆದುಕೊಂಡಿದೆ.

ಈ ಸ್ಮಾರ್ಟ್‌ಫೋನ್​ನಲ್ಲಿ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್–ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಮುಂಭಾಗ ಕೂಡ ಆಕರ್ಷಕವಾದ 32-ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದು ಐ ಆಟೋಫೋಕಸ್ ಮತ್ತು f/2.45 ಲೆನ್ಸ್‌ ಅನ್ನು ಒಳಗೊಂಡಿರುವುದು ವಿಶೇಷ.

ಇದನ್ನೂ ಓದಿ
JIO: ಜಿಯೋ ಧಮಾಕ ಆಫರ್: ಈ ಪ್ಲಾನ್ ಹಾಕಿಸಿಕೊಂಡರೆ ಒಂದು ವರ್ಷದ ವರೆಗೆ ಟೆನ್ಶನ್ ಬೇಡ
WhatsApp: ರೈಲ್ವೆ ಪ್ರಯಾಣಿಕೆರಿಗೆ ವಾಟ್ಸ್​ಆ್ಯಪ್​ನಿಂದ ಬಂಪರ್ ಫೀಚರ್: ಏನದು ನೋಡಿ
Flipkart Electronics Sale: ಫ್ಲಿಪ್​ಕಾರ್ಟ್​ನಲ್ಲಿ ಎಲೆಕ್ಟ್ರಾನಿಕ್ ಸೇಲ್: ಈ ಪ್ರೊಡಕ್ಟ್​ಗಳಿಗೆ ಇಷ್ಟೊಂದು ಡಿಸ್ಕೌಂಟ್ ಇನ್ಮುಂದೆ ಸಿಗಲ್ಲ
Windows: ವಿಂಡೋಸ್ ಬಳಕೆದಾರರಿಗೆ ಸರ್ಕಾರದಿಂದ ಎಚ್ಚರಿಕೆ ಸಂದೇಶ

66W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವ 4,830mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಅತ್ಯಂತ ವೇಗವಾಗಿ ಮೊಬೈಲ್ ಅನ್ನು ಚಾರ್ಜ್ ಮಾಡುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್–ಬ್ಯಾಂಡ್ Wi-Fi, ಬ್ಲೂಟೂತ್ v5.2, GPS ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ.

ವಿವೋ V25 ಪ್ರೊ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 8GB RAM + 128GB ಸ್ಟೋರೇಜ್​ಗೆ 35,999ರೂ. ನಿಗದಿ ಮಾಡಲಾಗಿದೆ. 12GB RAM + 256GB ಸ್ಟೋರೇಜ್‌ ಸಾಮರ್ಥ್ಯಕ್ಕೆ 39,999ರೂ. ಇದೆ. ಫ್ಲಿಪ್‌ಕಾರ್ಟ್, ವಿವೊ ಆನ್‌ಲೈನ್ ಸ್ಟೋರ್ ಮತ್ತು ಇತರ ರೀಟೈಲ್ ಚಾನೆಲ್‌ಗಳ ಮೂಲಕ ಖರೀದಿಸಬಹುದು.

ಖರೀದಿಸಬಹುದೇ?:

ಈ ಸ್ಮಾರ್ಟ್​ಫೋನ್​ನಲ್ಲಿ ಸಿನಿಮಾವನ್ನು ಉತ್ತಮವಾಗಿ ವೀಕ್ಷಿಸಬಹುದು, ಗೇಮಿಂಗ್​ಗೆ ಕೂಡ ಹೇಳಿ ಮಾಡಿಸಿದ್ದಾಗಿದೆ. ಕ್ಯಾಮೆರಾ ಬೆಲೆಗೆ ತಕ್ಕಂತೆ ಇದೆಯಷ್ಟೆ. ಆದರೆ, 35,999 ರೂಪಾಯಿಗೆ ಇದಕ್ಕಿಂತ ಉತ್ತಮವಾದ ಪ್ರೊಸೆಸರ್ ಹೊಂದಿರುವ ಕೆಲವು ಫೋನ್​ಗಳಿವೆ. ಇದರ ಲುಕ್ ಮಾತ್ರ ಪ್ರೀಮಿಯಂ ಆಗಿದ್ದು ಕೈಯಲ್ಲಿ ಹಿಡಿದುಕೊಂಡರೆ ಉತ್ತಮ ಗ್ರಿಪ್ ಸಿಗುತ್ತದೆ. ಈ ಫೋನ್ ಜೊತೆಗೆ 66W ಚಾರ್ಜರ್ ನೀಡಿದ್ದರೂ ದೊಡ್ಡ ಮಟ್ಟದ ಬ್ಯಾಟರಿ ಸೌಲಭ್ಯ ನೀಡಿಲ್ಲ. ನೀವು ಹೆಚ್ಚು ಸಮಯ ಮೊಬೈಲ್​ನಲ್ಲೇ ಸಮಯ ಕಳೆಯುವವರಾಗಿದ್ದರೆ ನಿಮಗಿದು ಇಷ್ಟವಾಗಲಿಕ್ಕಿಲ್ಲ.