ಬಜೆಟ್ ಪ್ರಿಯರಿಗಾಗಿ ಬಂತು ಹೊಸ ಸ್ಮಾರ್ಟ್​ಫೋನ್: ವಿವೋ Y27s ಬಿಡುಗಡೆ, ಬೆಲೆ ಎಷ್ಟು?

Vivo Y27s was launched: ವಿವೋ Y27s ಫೋನ್ ಬಿಡುಗಡೆ ಆಗಿದೆ. ಸದ್ಯಕ್ಕೆ ಇದು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಇದು ವಿವೋ Y27 ಮತ್ತು ವಿವೋ Y27 5G ಸಾಲಿಗೆ ಸೇರುತ್ತದೆ. ಈ ಫೋನ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ದ್ವಿತೀಯ ಸಂವೇದಕವನ್ನು ಒಳಗೊಂಡಿದೆ.

ಬಜೆಟ್ ಪ್ರಿಯರಿಗಾಗಿ ಬಂತು ಹೊಸ ಸ್ಮಾರ್ಟ್​ಫೋನ್: ವಿವೋ Y27s ಬಿಡುಗಡೆ, ಬೆಲೆ ಎಷ್ಟು?
Vivo Y27s

Updated on: Nov 09, 2023 | 1:45 PM

ಪ್ರಸಿದ್ಧ ವಿವೋ ಕಂಪನಿ ಇದೀಗ ಒಂದರ ಹಿಂದ ಒಂದರಂತೆ ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಮೊನ್ನೆಯಷ್ಟೆ ಭಾರತದಲ್ಲಿ ವಿವೋ ವೈ200 ಫೋನ್ ಲಾಂಚ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ವಿವೋ Y27s (VIVO Y27s) ಫೋನ್ ಬಿಡುಗಡೆ ಆಗಿದೆ. ಸದ್ಯಕ್ಕೆ ಇದು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಇದು ವಿವೋ Y27 ಮತ್ತು ವಿವೋ Y27 5G ಸಾಲಿಗೆ ಸೇರುತ್ತದೆ. 4G-ಬೆಂಬಲ ಪಡೆದುಕೊಂಡಿರುವ ಫೋನ್ ಇದಾಗಿದ್ದು, ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿವೋ Y27s ಬೆಲೆ:

ವಿವೋ Y27s ಸ್ಮಾರ್ಟ್​ಫೋನ್ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 8GB + 128GB ರೂಪಾಂತರದ ಬೆಲೆ IDR 2,399,000 (ಸುಮಾರು ರೂ. 12,800). ಹಾಗೆಯೆ ಇದರ 8GB + 256GB ಸ್ಟೋರೇಜ್​ಗೆ IDR 2,799,000 (ಸುಮಾರು ರೂ. 14,900) ನಿಗದಿ ಮಾಡಲಾಗಿದೆ. ಈ ಹ್ಯಾಂಡ್ಸೆಟ್ ಅನ್ನು ಎರಡು ಬಣ್ಣ ಆಯ್ಕೆಗಳಲ್ಲಿ ನೀಡಲಾಗಿದೆ. ಇದು ಅಧಿಕೃತ ವಿವೋ ವೆಬ್‌ಸೈಟ್ ಮೂಲಕ ಇಂಡೋನೇಷ್ಯಾದಲ್ಲಿ ಮಾರಾಟಕ್ಕೆ ಲಭ್ಯವಿದೆ.

ವಿವೋ Y27s ಫೀಚರ್ಸ್:

ವಿವೋ Y27s ಸ್ಮಾರ್ಟ್​ಫೋನ್ 6.64-ಇಂಚಿನ ಪೂರ್ಣ-HD+ (2,388 x 1,080 ಪಿಕ್ಸೆಲ್‌ಗಳು) LCD ಪ್ಯಾನೆಲ್​ನ ಡೈನಾಮಿಕ್ ವಿನ್ಯಾಸದೊಂದಿಗೆ 2.5D ಗ್ಲಾಸ್ ಅನ್ನು ಹೊಂದಿದೆ. ಇದು 8GB LPDDR4X RAM ನೊಂದಿಗೆ ಜೋಡಿಸಲಾದ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ನಿಂದ ಚಾಲಿತವಾಗಿದೆ. ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ. ಇದು ಆಂಡ್ರಾಯ್ಡ್ 13-ಆಧಾರಿತ FuntouchOS 13 ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ
2,599 ರೂ. ಬೆಲೆಯ ಜಿಯೋ ಪ್ರೈಮಾ 4G ಫೋನ್ ಖರೀದಿಗೆ ಲಭ್ಯ
ಬಹುನಿರೀಕ್ಷಿತ ಐಕ್ಯೂ 12 ಪ್ರೊ, ಐಕ್ಯೂ 12 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ?
ಆ್ಯಪಲ್ ದೀಪಾವಳಿ ಮಾರಾಟ: ಅರ್ಧ ಬೆಲೆಗೆ ಸಿಗುತ್ತಿದೆ ಆ್ಯಪಲ್ ಪ್ರೊಡಕ್ಟ್
ರಶ್ಮಿಕಾ ನಕಲಿ ವಿಡಿಯೋ: ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನಿಯಮ ಪಾಲಿಸಲು ಸೂಚನೆ

ರಶ್ಮಿಕಾ ನಕಲಿ ವಿಡಿಯೋ ಪ್ರಕರಣ: ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನಿಯಮ ಪಾಲಿಸಲು ಕೇಂದ್ರ ಸೂಚನೆ

ಕ್ಯಾಮೆರಾ ವಿಚಾರಕ್ಕೆ ಬಂದರೆ, ವಿವೋ Y27s ಫೋನ್​ನ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಫೋನ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ದ್ವಿತೀಯ ಸಂವೇದಕವನ್ನು ಒಳಗೊಂಡಿದೆ. ಎಲ್ಇಡಿ ಫ್ಲ್ಯಾಷ್ ಕೂಡ ಅಳವಡಿಸಲಾಗಿದೆ. ಮುಂಭಾಗದ ಕ್ಯಾಮೆರಾ, ಡಿಸ್ಪ್ಲೇಯ ಮೇಲ್ಭಾಗದಲ್ಲಿ ಜೋಡಿಸಲಾಗಿದ್ದು, ಇದು 8-ಮೆಗಾಪಿಕ್ಸೆಲ್​ನಿಂದ ಕೂಡಿದೆ.

ಈ ಫೋನ್ ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಡ್ಯುಯಲ್ 4G ನ್ಯಾನೊ ಸಿಮ್‌ಗಳು, Wi-Fi, ಬ್ಲೂಟೂತ್ 5.0, GPS, NFC ಮತ್ತು OTG ಸಂಪರ್ಕವನ್ನು ಸಹ ಬೆಂಬಲಿಸುತ್ತದೆ. ಸುರಕ್ಷತೆಗಾಗಿ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ