AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivo Y300 GT: ಬರೋಬ್ಬರಿ 7,620mAh ಬ್ಯಾಟರಿ: ವಿವೋದಿಂದ ಬೆರಗುಗೊಳಿಸುವ ಸ್ಮಾರ್ಟ್​ಫೋನ್ ಬಿಡುಗಡೆ

ವಿವೋ Y300 GT 6.78-ಇಂಚಿನ 1.5K (1,260x2,800 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಯನ್ನು 144Hz ರಿಫ್ರೆಶ್ ದರ, 360Hz ಟಚ್ ಸ್ಯಾಂಪ್ಲಿಂಗ್ ದರ, 5,500 nits ವರೆಗಿನ ಗರಿಷ್ಠ ಹೊಳಪು ಮತ್ತು HDR10+ ಬೆಂಬಲ, ಜೊತೆಗೆ SGS ಕಡಿಮೆ ನೀಲಿ ಬೆಳಕು ಮತ್ತು ಕಡಿಮೆ ಫ್ಲಿಕರ್ ಪ್ರಮಾಣೀಕರಣಗಳನ್ನು ಹೊಂದಿದೆ.

Vivo Y300 GT: ಬರೋಬ್ಬರಿ 7,620mAh ಬ್ಯಾಟರಿ: ವಿವೋದಿಂದ ಬೆರಗುಗೊಳಿಸುವ ಸ್ಮಾರ್ಟ್​ಫೋನ್ ಬಿಡುಗಡೆ
Vivo Y300 Gt
Vinay Bhat
|

Updated on: May 10, 2025 | 5:53 PM

Share

ಬೆಂಗಳೂರು (ಮೇ. 10): ಪ್ರಸಿದ್ಧ ವಿವೋ ಕಂಪನಿ ತನ್ನ ಹೊಸ ವಿವೋ ವೈ300 ಜಿಟಿ ಸ್ಮಾರ್ಟ್​ಫೋನ್ (Smartphone) ಅನ್ನು ಬಿಡುಗಡೆ ಮಾಡಿದೆ. ಈ ಹ್ಯಾಂಡ್‌ಸೆಟ್ ಮೀಡಿಯಾ ಟೆಕ್ ಡೈಮೆನ್ಸಿಟಿ 8400 SoC ಯೊಂದಿಗೆ 12GB ವರೆಗೆ RAM ಮತ್ತು 90W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರೋಬ್ಬರಿ 7,620mAh ಬ್ಯಾಟರಿಯನ್ನು ಹೊಂದಿದೆ. ಇದು 50-ಮೆಗಾಪಿಕ್ಸೆಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕ ಮತ್ತು 16-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿದೆ. ಮತ್ತೊಂದು ವಿಶೇಷತೆ ಎಂದರೆ ಇದು SGS ಕಡಿಮೆ ನೀಲಿ ಬೆಳಕು ಮತ್ತು ಕಡಿಮೆ ಫ್ಲಿಕರ್ ಪ್ರಮಾಣೀಕರಣಗಳೊಂದಿಗೆ 1.5K AMOLED ಡಿಸ್​ಪ್ಲೇ ಹೊಂದಿದೆ.

ವಿವೋ Y300 GT ಬೆಲೆ, ಲಭ್ಯತೆ:

ಚೀನಾದಲ್ಲಿ ವಿವೋ Y300 GT ಬೆಲೆ 8GB + 256GB ಆಯ್ಕೆಗೆ CNY 1,899 (ಸರಿಸುಮಾರು ರೂ. 22,400) ರಿಂದ ಪ್ರಾರಂಭವಾಗುತ್ತದೆ, ಆದರೆ 12GB + 256GB ಮತ್ತು 12GB + 512GB ಕಾನ್ಫಿಗರೇಶನ್‌ಗಳ ಬೆಲೆ ಕ್ರಮವಾಗಿ CNY 2,099 (ಸರಿಸುಮಾರು ರೂ. 24,400) ಮತ್ತು CNY 2,399 (ಸರಿಸುಮಾರು ರೂ. 28,400) ಆಗಿದೆ. ಈ ಫೋನ್ ದೇಶದಲ್ಲಿ ಅಧಿಕೃತ ಇ-ಸ್ಟೋರ್ ಮತ್ತು ಆಯ್ದ ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಮೂಲಕ ಖರೀದಿಸಲು ಲಭ್ಯವಿದೆ.

ವಿವೋ Y300 GT ಫೀಚರ್ಸ್:

ವಿವೋ Y300 GT 6.78-ಇಂಚಿನ 1.5K (1,260×2,800 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಯನ್ನು 144Hz ರಿಫ್ರೆಶ್ ದರ, 360Hz ಟಚ್ ಸ್ಯಾಂಪ್ಲಿಂಗ್ ದರ, 5,500 nits ವರೆಗಿನ ಗರಿಷ್ಠ ಹೊಳಪು ಮತ್ತು HDR10+ ಬೆಂಬಲ, ಜೊತೆಗೆ SGS ಕಡಿಮೆ ನೀಲಿ ಬೆಳಕು ಮತ್ತು ಕಡಿಮೆ ಫ್ಲಿಕರ್ ಪ್ರಮಾಣೀಕರಣಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 4nm ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 8400 SoC ನಿಂದ ಚಾಲಿತವಾಗಿದ್ದು, ಆಂಡ್ರಾಯ್ಡ್ 15-ಆಧಾರಿತ OriginOS 5 ನಲ್ಲಿ ರನ್ ಆಗುತ್ತದೆ.

ಇದನ್ನೂ ಓದಿ
Image
ಪಾಕಿಸ್ತಾನದಲ್ಲಿ ಇಂಟರ್ನೆಟ್ ಎಷ್ಟು ದುಬಾರಿ?: 1GB ಡೇಟಾದ ಬೆಲೆ ಎಷ್ಟು?
Image
ತಕ್ಷಣ ನಿಮ್ಮ ಫೋನ್‌ನಲ್ಲಿ ಎಮೆರ್ಜೆನ್ಸಿ ಅಲರ್ಟ್ ಮೋಡ್ ಸಕ್ರಿಯಗೊಳಿಸಿ
Image
ಪಾಕ್​ನಿಂದ ದೊಡ್ಡ ಪಿತೂರಿ: ನಿಮ್ಮ ​ಫೋನ್​ಗೆ ಈ ಫೈಲ್ ಬಂದರೆ ಎಚ್ಚರವಹಿಸಿ
Image
ನೆಟ್‌ವರ್ಕ್ ಭದ್ರತೆ ಬಿಗಿಗೊಳಿಸಲು ಏರ್ಟೆಲ್, ಜಿಯೋ, BSNL, VIಗೆ ಆದೇಶ

Pakistan Mobile Data: ಪಾಕಿಸ್ತಾನದಲ್ಲಿ ಇಂಟರ್ನೆಟ್ ಎಷ್ಟು ದುಬಾರಿ?: 1GB ಡೇಟಾದ ಬೆಲೆ ಎಷ್ಟು ಗೊತ್ತೇ?

ಕ್ಯಾಮೆರಾ ವಿಭಾಗದಲ್ಲಿ, ವಿವೋ Y300 GT 50-ಮೆಗಾಪಿಕ್ಸೆಲ್ 1/1.95-ಇಂಚಿನ ಸೋನಿ LYT-600 ಪ್ರಾಥಮಿಕ ಸಂವೇದಕದೊಂದಿಗೆ f/1.79 ಅಪರ್ಚರ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ ಬರುತ್ತದೆ, ಜೊತೆಗೆ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು ಹಿಂಭಾಗದಲ್ಲಿ LED ಫ್ಲ್ಯಾಷ್ ಘಟಕವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಫೋನ್ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು f/2.45 ಅಪರ್ಚರ್‌ನೊಂದಿಗೆ ಬರುತ್ತದೆ.

ವಿವೋ Y300 GT ಫೋನ್ 7,620mAh ಬ್ಯಾಟರಿಯನ್ನು ಹೊಂದಿದ್ದು, 90W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಇದು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP65 ರೇಟಿಂಗ್ ಅನ್ನು ನೀಡಲಾಗಿದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G VoLTE, Wi-Fi 6, ಬ್ಲೂಟೂತ್ 6.0, GPS ಮತ್ತು USB ಟೈಪ್-C 2.0 ಪೋರ್ಟ್ ಸೇರಿವೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ರಾಜಣ್ಣಗಿರುವ ಮಾಹಿತಿ ನಂಗಿರಲ್ಲ, ನಾನೊಬ್ಬ ಸಣ್ಣ ಕಾರ್ಯಕರ್ತ: ಸುರೇಶ್
ರಾಜಣ್ಣಗಿರುವ ಮಾಹಿತಿ ನಂಗಿರಲ್ಲ, ನಾನೊಬ್ಬ ಸಣ್ಣ ಕಾರ್ಯಕರ್ತ: ಸುರೇಶ್
37 ಎಸೆತಗಳಲ್ಲಿ ಶತಕ: ಟಿಮ್ ಡೇವಿಡ್ ಆರ್ಭಟದ ವಿಡಿಯೋ ಇಲ್ಲಿದೆ
37 ಎಸೆತಗಳಲ್ಲಿ ಶತಕ: ಟಿಮ್ ಡೇವಿಡ್ ಆರ್ಭಟದ ವಿಡಿಯೋ ಇಲ್ಲಿದೆ
ಶುಕ್ರವಾರ ರಾತ್ರಿ ಅಂಗಡಿ ಮುಚ್ಚುವ ವೇಳೆ ನುಗ್ಗಿದ ದರೋಡೆಕೋರರು
ಶುಕ್ರವಾರ ರಾತ್ರಿ ಅಂಗಡಿ ಮುಚ್ಚುವ ವೇಳೆ ನುಗ್ಗಿದ ದರೋಡೆಕೋರರು
ಧ್ಯಾನ ಮಾಡುವುದರಿಂದ ಮಾನಸಿಕ ಯಾತನೆ ಕಡಿಮೆಯಾಗುತ್ತದೆ: ಹಸೀನಾ
ಧ್ಯಾನ ಮಾಡುವುದರಿಂದ ಮಾನಸಿಕ ಯಾತನೆ ಕಡಿಮೆಯಾಗುತ್ತದೆ: ಹಸೀನಾ
‘ಡೆವಿಲ್’ ಸಿನಿಮಾ ಶೂಟ್​ ಮುಗಿಸಿ ಬೆಂಗಳೂರಿಗೆ ಮರಳಿದ ದರ್ಶನ್
‘ಡೆವಿಲ್’ ಸಿನಿಮಾ ಶೂಟ್​ ಮುಗಿಸಿ ಬೆಂಗಳೂರಿಗೆ ಮರಳಿದ ದರ್ಶನ್
VIDEO: ಟೀಮ್ ಇಂಡಿಯಾ ದೊಡ್ಡ ಎಡವಟ್ಟು: ಮೈದಾನದಲ್ಲೇ ಜಡೇಜಾ ಆಕ್ರೋಶ
VIDEO: ಟೀಮ್ ಇಂಡಿಯಾ ದೊಡ್ಡ ಎಡವಟ್ಟು: ಮೈದಾನದಲ್ಲೇ ಜಡೇಜಾ ಆಕ್ರೋಶ
ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ