AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India Pakistan War: ಪಾಕಿಸ್ತಾನದಿಂದ ದೊಡ್ಡ ಪಿತೂರಿ: ನಿಮ್ಮ ಸ್ಮಾರ್ಟ್​ಫೋನ್​ಗೆ ಈ ಫೈಲ್ ಬಂದರೆ ಎಚ್ಚರವಹಿಸಿ

Dance of Hillary: 'ಡ್ಯಾನ್ಸ್ ಆಫ್ ದಿ ಹಿಲರಿ' ಒಂದು ಅಪಾಯಕಾರಿ ವೈರಸ್. ಇದು ವೈಯಕ್ತಿಕ ಮಾಹಿತಿಯನ್ನು ಕದಿಯಲು ಮಾತ್ರ ವಿನ್ಯಾಸಗೊಳಿಸಲಾಗಿಲ್ಲ, ಅದು ನಿಮ್ಮ ಸಾಧನಕ್ಕೂ ಹಾನಿ ಮಾಡಬಹುದು. ವಾಟ್ಸ್ಆ್ಯಪ್ನಲ್ಲಿ ಬರುವ ವಿಡಿಯೋ ಮತ್ತು ಡಾಕ್ಯುಮೆಂಟ್ ಫೈಲ್‌ಗಳನ್ನು ನೋಡಿದ ನಂತರ, ಇದು ವೈರಸ್ ಇರಬಹುದೆಂದು ಯಾರೂ ನಂಬುವುದಿಲ್ಲ. ಹೀಗಾಗಿ ಈ ವೈರಸ್ ಜನರನ್ನು ಮೋಸಗೊಳಿಸುತ್ತದೆ.

India Pakistan War: ಪಾಕಿಸ್ತಾನದಿಂದ ದೊಡ್ಡ ಪಿತೂರಿ: ನಿಮ್ಮ ಸ್ಮಾರ್ಟ್​ಫೋನ್​ಗೆ ಈ ಫೈಲ್ ಬಂದರೆ ಎಚ್ಚರವಹಿಸಿ
Dance Of Hillary
Vinay Bhat
|

Updated on: May 09, 2025 | 4:53 PM

Share

ಬೆಂಗಳೂರು (ಮೇ. 09): ಭಾರತ-ಪಾಕಿಸ್ತಾನ (India Pakistan) ಉದ್ವಿಗ್ನತೆಯ ನಡುವೆ ಸೈಬರ್ ದಾಳಿಯ ಪ್ರಯತ್ನಗಳು ಮುಂದುವರೆದಿವೆ. ವರದಿಗಳ ಪ್ರಕಾರ, ಪಾಕಿಸ್ತಾನವು ಭಾರತೀಯ ಸಂಸ್ಥೆಗಳ ಮೇಲೆ ಸೈಬರ್ ದಾಳಿ ನಡೆಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಏತನ್ಮಧ್ಯೆ, ‘ಡ್ಯಾನ್ಸ್ ಆಫ್ ದಿ ಹಿಲರಿ’ ಎಂಬ ವೈರಸ್ ಬಗ್ಗೆ ಚರ್ಚೆ ನಡೆಯುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ ಈ ವೈರಸ್ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ವಾಟ್ಸ್​ಆ್ಯಪ್, ಫೇಸ್‌ಬುಕ್ ಮತ್ತು ಟೆಲಿಗ್ರಾಮ್ ಅಪ್ಲಿಕೇಶನ್‌ಗಳ ಮೂಲಕ ಹರಡುತ್ತಿದೆ. ಡ್ಯಾನ್ಸ್ ಆಫ್ ದಿ ಹಿಲರೀಸ್ ವೈರಸ್‌ಗಳು ವಿಡಿಯೋಗಳು ಅಥವಾ ಡಾಕ್ಯುಮೆಂಟ್ ರೂಪದಲ್ಲಿ ಜನರ ಫೋನ್‌ಗಳನ್ನು ಪ್ರವೇಶಿಸಬಹುದು. ವಿಡಿಯೋ ಅಥವಾ ಡಾಕ್ಯುಮೆಂಟ್ ತೆರೆದ ತಕ್ಷಣ, ಅದು ಬಳಕೆದಾರರ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳನ್ನು ಕದಿಯುತ್ತದೆ ಎಂಬ ಆರೋಪಗಳಿವೆ.

ಮಾಲ್‌ವೇರ್ ಫೋನ್‌ಗೆ ಹಾನಿ ಮಾಡಬಹುದು:

ಟೈಮ್ಸ್ ನೌ ವರದಿಯ ಪ್ರಕಾರ, ‘ಡ್ಯಾನ್ಸ್ ಆಫ್ ದಿ ಹಿಲರಿ’ ಒಂದು ಅಪಾಯಕಾರಿ ವೈರಸ್. ಇದು ವೈಯಕ್ತಿಕ ಮಾಹಿತಿಯನ್ನು ಕದಿಯಲು ಮಾತ್ರ ವಿನ್ಯಾಸಗೊಳಿಸಲಾಗಿಲ್ಲ, ಅದು ನಿಮ್ಮ ಸಾಧನಕ್ಕೂ ಹಾನಿ ಮಾಡಬಹುದು. ವಾಟ್ಸ್​ಆ್ಯಪ್​ನಲ್ಲಿ ಬರುವ ವಿಡಿಯೋ ಮತ್ತು ಡಾಕ್ಯುಮೆಂಟ್ ಫೈಲ್‌ಗಳನ್ನು ನೋಡಿದ ನಂತರ, ಇದು ವೈರಸ್ ಇರಬಹುದೆಂದು ಯಾರೂ ನಂಬುವುದಿಲ್ಲ. ಹೀಗಾಗಿ ಈ ವೈರಸ್ ಜನರನ್ನು ಮೋಸಗೊಳಿಸುತ್ತದೆ.

ವೈರಸ್ ಫೋನ್‌ನ ಬ್ಯಾಕ್​ಗ್ರೌಂಡ್​ನಲ್ಲಿ ಇನ್​ಸ್ಟಾಲ್ ಆಗುತ್ತದೆ:

ವರದಿಯ ಪ್ರಕಾರ, ಬಳಕೆದಾರರು ವಿಡಿಯೋ ಅಥವಾ ಡಾಕ್ಯುಮೆಂಟ್ ಅನ್ನು ತೆರೆದರೆ, ವೈರಸ್ ಫೋನ್‌ನ ಬ್ಯಾಕ್​ಗ್ರೌಂಡ್​ನಲ್ಲಿ ಇನ್​ಸ್ಟಾಲ್ ಆಗಿ ರನ್ ಆಗುತ್ತದೆ. ಇದು ಹ್ಯಾಕರ್‌ಗಳಿಗೆ ನಿಮ್ಮ ಫೋನ್ ಮೇಲೆ ನಿಯಂತ್ರಣವನ್ನು ನೀಡಬಹುದು. ಇದು ಕೂಡ ಕಳವಳಕಾರಿ ವಿಷಯ ಏಕೆಂದರೆ ನಿಮಗೆ ತಿಳಿಯದೆ ಮಾಲ್‌ವೇರ್ ಫೋನ್‌ಗೆ ಪ್ರವೇಶಿಸುತ್ತದೆ.

ಇದನ್ನೂ ಓದಿ
Image
ನೆಟ್‌ವರ್ಕ್ ಭದ್ರತೆ ಬಿಗಿಗೊಳಿಸಲು ಏರ್ಟೆಲ್, ಜಿಯೋ, BSNL, VIಗೆ ಆದೇಶ
Image
IND-PAK War: ಇಂಟರ್ನೆಟ್ ಸ್ಥಗಿತಗೊಂಡರೂ ವಾಟ್ಸ್ಆ್ಯಪ್ ಉಪಯೋಗಿಸಬಹುದು
Image
ಬಿಡುಗಡೆಯಾಗಿದೆ ಬರೋಬ್ಬರಿ 6000mAh ಬ್ಯಾಟರಿಯ ಹೊಸ ಬಜೆಟ್ ಸ್ಮಾರ್ಟ್​ಫೋನ್
Image
ಬಹುಬೇಡಿಕೆಯ ವೈಶಿಷ್ಟ್ಯ: ವಾಟ್ಸ್ಆ್ಯಪ್ ವೆಬ್ ಬಳಸುವವರಿಗೆ ಬಂಪರ್ ಸುದ್ದಿ

Operation Sindoor: ನೆಟ್‌ವರ್ಕ್ ಭದ್ರತೆಯನ್ನು ಬಿಗಿಗೊಳಿಸಲು ಏರ್‌ಟೆಲ್, ಜಿಯೋ, ಬಿಎಸ್‌ಎನ್‌ಎಲ್, ವಿಐಗೆ ಸರ್ಕಾರ ಆದೇಶ

ನಿಮ್ಮ ಫೋನ್ ಅನ್ನು ವೈರಸ್‌ನಿಂದ ರಕ್ಷಿಸುವುದು ಹೇಗೆ?:

  • ಅಜ್ಞಾತ ಮೂಲದಿಂದ ಬಂದ ಯಾವುದೇ ಫೈಲ್ ಅನ್ನು ತೆರೆಯಬೇಡಿ.
  • ಅನೇಕ ಜನರ ವಾಟ್ಸ್​ಆ್ಯಪ್​ನಲ್ಲಿ ಮೀಡಿಯಾ ಫೈಲ್‌ಗಳು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುತ್ತವೆ, ಆ ವೈಶಿಷ್ಟ್ಯವನ್ನು ಆಫ್ ಮಾಡಿ.
  • ನಿಮಗೆ ಗೊತ್ತಿಲ್ಲದ ಯಾವುದೇ ವಾಟ್ಸ್​ಆ್ಯಪ್ ಅಥವಾ ಫೇಸ್‌ಬುಕ್ ಖಾತೆಯ ಮೇಲೆ ಕ್ಲಿಕ್ ಮಾಡಬೇಡಿ.
  • ನಿಮ್ಮ ಸಾಧನದ ಪಾಸ್‌ವರ್ಡ್ ಅನ್ನು ಯಾವಾಗಲೂ ಬಲಿಷ್ಠವಾಗಿಡಿ. ಅದರಲ್ಲಿ ಸ್ಪೆಷಲ್ ಕ್ಯಾರೆಕ್ಟರ್ ಅನ್ನು ಹಾಕಿ, ಟು ಸ್ಟೆಪ್ ವೆರಿಫಿಕೇಷನ್ ಅನ್ನು ಆನ್ ಮಾಡಿ.

exe ಮಾಧ್ಯಮ ಫೈಲ್‌ಗಳೊಂದಿಗೆ ಜಾಗರೂಕರಾಗಿರಿ:

ಮಾಧ್ಯಮ ವರದಿಗಳ ಪ್ರಕಾರ, “tasksche.exe” ಎಂಬ ಫೈಲ್ ನಿಮ್ಮ ಫೋನ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ಗೆ ಬರುತ್ತದೆ. ಅದನ್ನು ತೆರೆಯಬೇಡಿ. exe ನೊಂದಿಗೆ ಕೊನೆಗೊಳ್ಳುವ ಯಾವುದೇ ಫೈಲ್ ಅನುಮಾನಾಸ್ಪದವಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಫೈಲ್‌ನಲ್ಲಿ ಅಡಗಿರುವ ಮಾಲ್‌ವೇರ್ ಮಾಹಿತಿಯನ್ನು ಕದಿಯುವುದಲ್ಲದೆ, ಫೋನನ್ನು ಕ್ರ್ಯಾಶ್ ಮಾಡಬಹುದು. ಹ್ಯಾಕರ್‌ಗಳು ಸಹ ಇದನ್ನು ನಿಯಂತ್ರಿಸಬಹುದು.

ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ:

ನೀವು ಆಕಸ್ಮಿಕವಾಗಿ ಅಪರಿಚಿತ ಫೈಲ್ ಅನ್ನು ಕ್ಲಿಕ್ ಮಾಡಿದರೆ ಮತ್ತು ಗೊತ್ತಿಲ್ಲದೆ ನಿಮಗೆ ನಷ್ಟವಾದರೆ, ತಕ್ಷಣ 1930 (ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ) ಗೆ ಕರೆ ಮಾಡಿ ಮತ್ತು ನಿಮಗೆ ಸಂಭವಿಸಿದ ಘಟನೆಯ ಬಗ್ಗೆ ವಿವರಗಳನ್ನು ನೀಡುವ ದೂರು ದಾಖಲಿಸಿ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್