ಪ್ರಸಿದ್ಧ ವಿವೋ ಕಂಪನಿಯ ಸ್ಮಾರ್ಟ್ಫೋನ್ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಇದೆ. ಹೀಗಾಗಿ ಪ್ರತಿ ತಿಂಗಳು ಒಂದಲ್ಲ ಒಂದು ಫೋನನ್ನು ದೇಶದಲ್ಲಿ ಅನಾವರಣ ಮಾಡುತ್ತಿರುತ್ತದೆ. ಇದರ ಜೊತೆಗೆ ತನ್ನ ಹಳೆಯ ಮೊಬೈಲ್ಗಳಿಗೆ ಆಕರ್ಷಕ ಆಫರ್, ಡಿಸ್ಕೌಂಟ್ಗಳನ್ನು ಸಹ ನೀಡುತ್ತಿರುತ್ತದೆ. ಇದೀಗ ವಿವೋ ತನ್ನ ಎರಡು ಸ್ಮಾರ್ಟ್ಫೋನ್ಗಳ ಬೆಲೆಯಲ್ಲಿ ದಿಢೀರ್ ಇಳಿಕೆ ಮಾಡಿದೆ. ವಿವೋ Y36 (Vivo Y36) ಸ್ಮಾರ್ಟ್ಫೋನ್ ಬೆಲೆಯಲ್ಲಿ 1,000 ರೂ. ಮತ್ತು ವಿವೋ Y02t ಬೆಲೆಯಲ್ಲಿ 500 ರೂ. ಇಳಿಕೆ ಮಾಡಿದೆ. ವಿವೋ Y36 ಅನ್ನು ಖರೀದಿಸುವಾಗ 1,000 ರೂ. ವರೆಗಿನ ಕ್ಯಾಶ್ಬ್ಯಾಕ್ ಸೇರಿದಂತೆ ಬ್ಯಾಂಕ್ ಕೊಡುಗೆಗಳನ್ನು ಕೂಡ ಘೋಷಿಸಿದೆ. ವಿವೋ ಎರಡು ತಿಂಗಳ ಹಿಂದೆ ಭಾರತದಲ್ಲಿ ಎರಡು ಫೋನ್ಗಳನ್ನು ಬಿಡುಗಡೆ ಮಾಡಿತ್ತು.
ಭಾರತದಲ್ಲಿ ವಿವೋ Y36 ಸ್ಮಾರ್ಟ್ಫೋನ್ನ 8GB + 128GB ಸ್ಟೋರೇಜ್ ರೂಪಾಂತರಕ್ಕೆ 16,999 ರೂ. ಇತ್ತು. ಇದೀಗ 1,000 ರೂ. ಬೆಲೆ ಇಳಿಕೆಯ ನಂತರ 15,999 ರೂ. ಗೆ ಖರೀದಿಸಬಹುದು. ಜೊತೆಗೆ ಐಸಿಐಸಿಐ, ಎಸ್ಬಿಐ ಕಾರ್ಡ್, ಐಡಿಎಫ್ಸಿ ಫಸ್ಟ್, ಫೆಡರಲ್ ಬ್ಯಾಂಕ್, ಯೆಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಇಂಡಸ್ಇಂಡ್ ಬ್ಯಾಂಕ್ ಸೇರಿದಂತೆ ಆಯ್ದ ಬ್ಯಾಂಕ್ಗಳಿಂದ ನೀವು 1,000 ರೂ. ವರೆಗೆ ಕ್ಯಾಶ್ಬ್ಯಾಕ್ ಆಫರ್ ಪಡೆಯಬಹುದು.
ಸ್ಯಾಮ್ಸಂಗ್ನಿಂದ ಬರುತ್ತಿದೆ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಹೊಸ ಸ್ಮಾರ್ಟ್ಫೋನ್: ಯಾವುದು?
ಇನ್ನು ವಿವೋ Y02t ಸ್ಮಾರ್ಟ್ಫೋನ್ 4GB + 64GB ಒಂದೇ ರೂಪಾಂತರದಲ್ಲಿ 9,999 ರೂ. ಗೆ ಅನಾವರಣಗೊಂಡಿತ್ತು. ಈ ಫೋನ್ ಈಗ 9,499 ರೂ. ಗೆ ಸೇಲ್ ಆಗುತ್ತದೆ. ಆದರೆ, ಈ ಮೊಬೈಲ್ ಮೇಲೆ ಯಾವುದೇ ಬ್ಯಾಂಕ್ ಆಫರ್ ಘೋಷಣೆ ಮಾಡಿಲ್ಲ. ವಿವೋ Y36, Yo2t ಸ್ಮಾರ್ಟ್ಫೋನ್ಗಳು ಈಗ ಫ್ಲಿಪ್ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಚಿಲ್ಲರೆ ಅಂಗಡಿಗಳಿಂದ ಖರೀದಿಸಲು ಲಭ್ಯವಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ