ವೊಡಾಫೋನ್-ಐಡಿಯಾ ಬಳಕೆದಾರರಿಗೆ ಗುಡ್ ನ್ಯೂಸ್: ಈ ರೀಚಾರ್ಜ್ ಪ್ಲಾನ್‌ನಲ್ಲಿ ಹೆಚ್ಚಿನ ಡೇಟಾ

|

Updated on: Jan 20, 2024 | 2:51 PM

Vodafone Idea Latest Data Plan: ವೊಡಾಫೋನ್-ಐಡಿಯಾ ರೂ. 181 ಬೆಲೆಯ ತನ್ನ ಯೋಜನೆಯೊಂದಿಗೆ ಹೆಚ್ಚಿನ ಡೇಟಾವನ್ನು ನೀಡುತ್ತದೆ. ಈ ಡೇಟಾ ಯೋಜನೆಯು ದಿನಕ್ಕೆ 0.5 GB ಡೇಟಾ ಜೊತೆಗೆ ದಿನಕ್ಕೆ ಹೆಚ್ಚುವರಿ 1 GB ಡೇಟಾವನ್ನು ಒದಗಿಸುತ್ತದೆ.

ವೊಡಾಫೋನ್-ಐಡಿಯಾ ಬಳಕೆದಾರರಿಗೆ ಗುಡ್ ನ್ಯೂಸ್: ಈ ರೀಚಾರ್ಜ್ ಪ್ಲಾನ್‌ನಲ್ಲಿ ಹೆಚ್ಚಿನ ಡೇಟಾ
Vodafone Idea
Follow us on

ಭಾರತದಲ್ಲಿ ಡಿಜಿಟಲ್ ಕ್ರಾಂತಿ ಮುಂದುವರೆದಿದೆ. ಅದರಲ್ಲೂ ಸ್ಮಾರ್ಟ್​ಫೋನ್​ಗಳ (Smartphone) ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಫೋನ್​ನಲ್ಲೂ ಡೇಟಾ ರೀಚಾರ್ಜ್ ಅನಿವಾರ್ಯವಾಗಿದೆ. ಮೊದಲು ಈ ಡೇಟಾ ಶುಲ್ಕಗಳು ದುಬಾರಿ ಆಗಿದ್ದವು. ಆದರೆ ಟೆಲಿಕಾಂ ಮಾರುಕಟ್ಟೆಗೆ ಜಿಯೋ ಪ್ರವೇಶದೊಂದಿಗೆ, ಸರಾಸರಿ ಗ್ರಾಹಕರಿಗೆ ಡೇಟಾ ಶುಲ್ಕಗಳು ಕೈಗೆಟುಕುವಂತಿವೆ. ಪ್ರಸ್ತುತ, ಡೇಟಾ ಬಳಕೆಯಲ್ಲಿ ಭಾರತವು ಪ್ರಪಂಚದ ಇತರ ದೇಶಗಳಿಗಿಂತ ಮುಂದಿದೆ. ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ವಲಯದಲ್ಲಿನ ತೀವ್ರ ಪೈಪೋಟಿಯಿಂದಾಗಿ ಎಲ್ಲ ಕಂಪನಿಗಳು ತಮ್ಮ ಯೋಜನೆಗಳ ಮೇಲೆ ಹೆಚ್ಚಿನ ಡೇಟಾ ಆಫರ್‌ಗಳನ್ನು ಘೋಷಿಸುತ್ತಿವೆ. ಇದೀಗ ಈ ಪಟ್ಟಿಗೆ ವೊಡಾಫೋನ್-ಐಡಿಯಾ ಕೂಡ ಸೇರಿದೆ.

ವೊಡಾಫೋನ್-ಐಡಿಯಾ ರೂ. 181 ಬೆಲೆಯ ತನ್ನ ಯೋಜನೆಯೊಂದಿಗೆ ಹೆಚ್ಚಿನ ಡೇಟಾವನ್ನು ನೀಡುತ್ತದೆ. ಈ ಡೇಟಾ ಯೋಜನೆಯು ದಿನಕ್ಕೆ 0.5 GB ಡೇಟಾ ಜೊತೆಗೆ ದಿನಕ್ಕೆ ಹೆಚ್ಚುವರಿ 1 GB ಡೇಟಾವನ್ನು ಒದಗಿಸುತ್ತದೆ. ಡೇಟಾ ಮಾತ್ರವಲ್ಲದೆ 30 ದಿನಗಳ ವ್ಯಾಲಿಡಿಟಿ ಕೂಡ. ಆದರೆ ಈ ಯೋಜನೆಯು ಯಾವುದೇ ಧ್ವನಿ ಕರೆ ಅಥವಾ SMS ಪ್ರಯೋಜನಗಳನ್ನು ಒದಗಿಸುವುದಿಲ್ಲ. ಈಗಾಗಲೇ ಸಕ್ರಿಯವಾಗಿರುವ ಇತರ ಡೇಟಾ ಪ್ಯಾಕ್‌ಗಳ ಜೊತೆಯಲ್ಲಿ ಈ ಯೋಜನೆಯನ್ನು ಬಳಸಬೇಕು.

Voter ID Card: ನಿಮ್ಮ ವೋಟಾರ್ ಐಡಿ ಕಳೆದುಹೋಯಿತೇ?: ಮರಳಿ ಪಡೆಯುವುದು ಹೇಗೆ?

ಇದನ್ನೂ ಓದಿ
ಮೊಬೈಲ್​ಗೆ ಫ್ಯಾನ್ಸಿ ನಂಬರ್ ಸಿಮ್ ಬೇಕಾ?
ಐಫೋನ್ 16 ಕ್ಯಾಮೆರಾ ಬಗ್ಗೆ ಹೊರಬಿತ್ತು ಶಾಕಿಂಗ್ ನ್ಯೂಸ್: ಏನದು ನೋಡಿ
ಮೊಬೈಲ್ ಯಾವಾಗ ಬದಲಾಯಿಸಬೇಕು ಗೊತ್ತಾ?
ಮಾರುಕಟ್ಟೆಗೆ ಬಂತು ವಿವೋ G ಸರಣಿ ಚೊಚ್ಚಲ ಸ್ಮಾರ್ಟ್​ಫೋನ್

ವಿ ಇತ್ತೀಚೆಗೆ ಮಾಲ್ಡೀವ್ಸ್ ಅನ್ನು ತನ್ನ ಇಂಟರ್ನ್ಯಾಷನಲ್ ರೋಮಿಂಗ್ (IR) ಯೋಜನೆಯೊಂದಿಗೆ ಮೊಬೈಲ್ ಡೇಟಾ ಮತ್ತು ಧ್ವನಿ ಕರೆಗಳನ್ನು ನೀಡುವ ದೇಶಗಳ ಪಟ್ಟಿಗೆ ಸೇರಿಸಿದೆ. ಅದರಂತೆ, ವೊಡಾಫೋನ್-ಐಡಿಯಾ 100 ನಿಮಿಷಗಳ ಕರೆ (ಹೊರಹೋಗುವ, ಒಳಬರುವ ಕರೆ), 5 GB ಡೇಟಾ, 10 ಹೊರಹೋಗುವ SMS, ಉಚಿತ ಒಳಬರುವ SMS, 10 ದಿನಗಳ ಮಾನ್ಯತೆಯನ್ನು 2,999 ರೂ. ನೊಂದಿಗೆ ಹೊಸ ‘ಮಾಲ್ಡೀವ್ಸ್ ಪ್ಲಾನ್’ ಅನ್ನು ಪ್ರಾರಂಭಿಸಿದೆ.

ಇದರ ನಡುವೆ ವೊಡಾಫೋನ್ ಐಡಿಯಾ ದಕ್ಷಿಣ ಕರ್ನಾಟಕದ ಗ್ರಾಹಕರಿಗೆ ಸುಧಾರಿತ ನೆಟ್‌ವರ್ಕ್ ಅನುಭವವನ್ನು ನೀಡಲು ತನ್ನ ನೆಟ್‌ವರ್ಕ್ ಸಾಮರ್ಥ್ಯವನ್ನು ಹೆಚ್ಚಿಸಿದೆ. ಕರ್ನಾಟಕದಲ್ಲಿ ವಿ ನೆಟ್‌ವರ್ಕ್ ಅನ್ನು ಅಪ್‌ಗ್ರೇಡ್ ಮಾಡಲಾಗಿದೆ. ದಕ್ಷಿಣ ಕರ್ನಾಟಕದ 1000+ ಸೈಟ್‌ಗಳಲ್ಲಿ ವೊಡಾಫೋನ್ ಐಡಿಯಾ 5 MHz ನಿಂದ 10 MHz ಗೆ LTE 2100 MHz ಬ್ಯಾಂಡ್‌ನಲ್ಲಿ ಸ್ಪೆಕ್ಟ್ರಮ್ ಬ್ಯಾಂಡ್‌ವಿಡ್ತ್ ಅನ್ನು ಅಪ್‌ಗ್ರೇಡ್ ಮಾಡಿದೆ. ಇದರೊಂದಿಗೆ, Vi ಗ್ರಾಹಕರು ಹೆಚ್ಚಿನ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಅನುಭವಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ