ನಿಮ್ಮ ಹಳೆಯ ​ಫೋನ್ ಉತ್ತಮ ಬೆಲೆಗೆ ಮಾರಬೇಕಿದೆಯೇ? ಖರೀದಿಸಲು ಕಾದಿವೆ ಈ ವೆಬ್​ಸೈಟ್​ಗಳು!

|

Updated on: Mar 29, 2021 | 8:14 PM

ನಾವು ಊಹಿಲಾಗದಷ್ಟು ಬಗೆಯ ಬ್ರ್ಯಾಂಡ್​ಗಳು ನಮಗೆ ಲಭ್ಯವಿವೆ. ಇವುಗಳ ತಯಾರಕರು ತಮ್ಮ ಜನಪ್ರಿಯ ಮಾಡೆಲ್​ನ ವಿನ್ಯಾಸ ಮತ್ತು ಫಿಚರ್​​ಗಳನ್ನು ಪದೇಪದೆ ಪರಿಷ್ಕರಿಸಿ ಅವುಗಳನ್ನು ಕೊಳ್ಳುವಂಥ ಆಸೆಯನ್ನು ಗ್ರಾಹಕರಲ್ಲಿ ಹುಟ್ಟಿಸುತ್ತಾರೆ. ಹೊಸ ಮಾಡೆಲ್​ಗಳಿಗೆ ಮರುಳಾಗುವ ಗ್ರಾಹಕರು ಖರೀದಿಸುವ ನಿರ್ಧಾರ ತೆಗೆದುಕೊಂಡುಬಿಡುತ್ತಾರೆ.

ನಿಮ್ಮ ಹಳೆಯ ​ಫೋನ್ ಉತ್ತಮ ಬೆಲೆಗೆ ಮಾರಬೇಕಿದೆಯೇ? ಖರೀದಿಸಲು ಕಾದಿವೆ ಈ ವೆಬ್​ಸೈಟ್​ಗಳು!
ಹಳೆಯ ಮೊಬೈಲ್ ಫೋನ್​ಗಳು
Follow us on

ಇಂದಿನ ಮುಂದುವರೆದ ತಂತ್ರಜ್ಞಾನ ಯುಗದಲ್ಲಿ ಪ್ರತಿದಿನ ಒಂದಿಲ್ಲೊಂದು ಹೊಸ ಉತ್ಪನ್ನ ವಿಶೇಷವಾಗಿ ಗ್ಯಾಜೆಟ್​ಗಳು ಮಾರುಕಟ್ಟೆಗೆ ಬರುತ್ತವೆ. ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್‌ ಮೊದಲಾದ ಗ್ಯಾಜೆಟ್​ಗಳ ನೂರಾರು ಬ್ರ್ಯಾಂಡ್​ಗಳು ಮಾರುಕಟ್ಟೆಗೆ ಬರುತ್ತಿವೆ. ಇವುಗಳ ತಯಾರಕರು ಪ್ರತಿದಿನ ತಮ್ಮ ಹೊಸ ಅವಿಷ್ಕಾರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಅವರ ಉದ್ದೇಶ ಎದುರಾಳಿ ಬ್ರ್ಯಾಂಡ್​ಗಿಂತ ಹೆಚ್ಚು ಫೀಚರ್​ಗಳನ್ನು ತಮ್ಮ ಹೊಸ ಅವಿಷ್ಕಾರದಲ್ಲಿ ಒದಗಿಸುವ ಮೂಲಕ ಗ್ರಾಹಕರನ್ನು ಮೆಚ್ಚಿಸಿ ತಮ್ಮ ಉತ್ಪಾದನೆಗೆ ಬೇಡಿಕೆ ಸೃಷ್ಟಿಸುವುದಾಗಿರುತ್ತದೆ. ಸ್ಮಾರ್ಟ್​ಪೋನ್​ಗಳ ವಿಷಯವನ್ನೇ ತೆಗೆದುಕೊಳ್ಳಿ. ನಾವು ಊಹಿಲಾಗದಷ್ಟು ಬಗೆಯ ಬ್ರ್ಯಾಂಡ್​ಗಳು ನಮಗೆ ಲಭ್ಯವಿವೆ. ಇವುಗಳ ತಯಾರಕರು ತಮ್ಮ ಜನಪ್ರಿಯ ಮಾಡೆಲ್​ನ ವಿನ್ಯಾಸ ಮತ್ತು ಫಿಚರ್​​ಗಳನ್ನು ಪದೇಪದೆ ಪರಿಷ್ಕರಿಸಿ ಅವುಗಳನ್ನು ಕೊಳ್ಳುವಂಥ ಆಸೆಯನ್ನು ಗ್ರಾಹಕರಲ್ಲಿ ಹುಟ್ಟಿಸುತ್ತಾರೆ. ಹೊಸ ಮಾಡೆಲ್​ಗಳಿಗೆ ಮರುಳಾಗುವ ಗ್ರಾಹಕರು ಖರೀದಿಸುವ ನಿರ್ಧಾರ ತೆಗೆದುಕೊಂಡುಬಿಡುತ್ತಾರೆ.

ಅದೇನೋ ಸರಿ, ಆದರೆ ಅವರ ಹಳೆಯ ಸ್ಮಾರ್ಟ್​ಫೋನ್ ಗತಿಯೇನು? ನಿಸ್ಸಂದೇಹವಾಗಿ ಅವರು ಅದನ್ನು ಉತ್ತಮ ಬೆಲೆಗೆ ಮಾರಲು ಇಚ್ಛಿಸುತ್ತಾರೆ, ಯಾಕೆಂದರೆ ಅವರು ತೆಗೆದುಕೊಳ್ಳಲು ಬಯಸಿರುವ ಹೊಸ ಫೋನಿನ ಬೆಲೆ ಜಾಸ್ತಿ! ಸ್ಮಾರ್ಟ್​ಪೋನ್ ಮತ್ತು ಅವುಗಳ ತಂತ್ರಜ್ಞಾನದ ಬಗ್ಗೆ ಹೆಚ್ಚು ಜ್ಞಾನವುಳ್ಳವರು ತಮ್ಮ ಹಳೆ ಫೋನ್​ಗಳನ್ನು ಉತ್ತಮ ಬೆಲೆಗೆ ಮಾರುತ್ತಾರೆ. ಆದರೆ ಉಳಿದವರ ಗತಿಯೇನು? ಅವರು ತೀರ ಕಡಿಮೆ ಬೆಲೆಗೆ ತಮ್ಮ ಹಳೆಯ ಫೋನ್ ಮಾರಿಬಿಡುವ ಅನಿವಾರ್ಯತೆ ಎದುರಿಸುತ್ತಾರೆ. ಅದರೆ ಅವರು ಇನ್ನು ಯೋಚಿಸಬೇಕಿಲ್ಲ ಮತ್ತು ಕಡಿಮೆ ಬೆಲೆಗೆ ಮಾರಿದೆನಲ್ಲ ಅಂತ ವ್ಯಥೆಪಡುವ ಹಾಗೆಯೂ ಇಲ್ಲ. ಯಾಕೆಂದರೆ. ಇಂಥವರಿಗೋಸ್ಕರವೇ ಕೆವು ವೆಬ್​ಸೈಟ್​ಗಳು ಲಭ್ಯವಿದ್ದು ಅವು ಒಳ್ಳೆ ಬೆಲೆಗೆ ಹಳೆಯ ಪೋನ್​ಗಳನ್ನು ಖರೀದಿಸುತ್ತವೆ. ಅಂಥ ವೆಬ್​ಸೈಟ್​ಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸೋಣ.

ಕ್ಯಾಶಿಫೈ
ಹಳೆಯ ಅಥವಾ ಬಳಸಿದ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಲು ಬಹಳ ಜನಪ್ರಿಯವಾದ ವೆಬ್‌ಸೈಟ್ https://www.cashify.in/ ಇದಾಗಿದೆ. ನಿಮ್ಮ ಹಳೆಯ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಲು ಈ ವೆಬ್​ಸೈಟ್​ನಲ್ಲಿ ಅವಕಾಶವಿದೆ. ಫೋನ್‌ಗಳು ಮಾತ್ರವಲ್ಲದೆ ಟಿವಿ, ಲ್ಯಾಪ್‌ಟಾಪ್‌, ಐಮ್ಯಾಕ್ಸ್ ಮತ್ತು ಗೇಮಿಂಗ್ ಕನ್ಸೋಲ್‌ಗಳನ್ನು ಸಹ ಇಲ್ಲಿ ಮಾರಾಟ ಮಾಡಬಹುದು.

ಕರ್ಮ ರಿಸೈಕ್ಲಿಂಗ್
ಇತ್ತೀಚಿನ ದಿನಗಳಲ್ಲಿ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲು ಕರ್ಮ ರಿಸೈಕ್ಲಿಂಗ್ http://www.karmarecycling.in/contact-us.php  ಅತ್ಯುತ್ತಮ ಆಯ್ಕೆಯಾಗಿದೆ. ಇದುವರೆಗೆ ಅನೇಕ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಖರೀದಿಸಿದ ದಾಖಲೆಯನ್ನು ಈ ವೆಬ್​ಸೈಟ್​ ಹೊಂದಿದೆ. ಅತ್ಯಂತ ದುಬಾರಿ ಗ್ಯಾಜೆಟ್‌ಗಳನ್ನು ಸಹ ನಿಮಿಷಗಳಲ್ಲಿ ಮಾರಾಟ ಮಾಡಬಹುದು.

ಯಂತ್ರ
www.yaantra.com ವೆಬ್​ಸೈಟ್​ನಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಕ್ಷಣಾರ್ಧದಲ್ಲಿ ಮಾರಾಟ ಮಾಡಬಹುದು. ಇತರ ವೆಬ್‌ಸೈಟ್‌ಗಳಿಗೆ ಹೋಲಿಸಿದರೆ ಉತ್ತಮ ಬೆಲೆಯನ್ನು ಈ ವೆಬ್​ಸೈಟ್ ನೀವು ಬಳಸುವ ಗ್ಯಾಜೆಟ್‌ಗಳಿಗೆ ನೀಡುತ್ತದೆ.

ಇನ್‌ಸ್ಟಾಕ್ಯಾಶ್
ಗ್ಯಾಜೆಟ್‌ಗಳನ್ನು ಮಾರಾಟ ಮಾಡಲು ಇನ್‌ಸ್ಟಾಕ್ಯಾಶ್ ಪಾತ್ ಮತ್ತೊಂದು ಉತ್ತಮ ಆಯ್ಕೆಯಾಗಿದೆ. ಇಲ್ಲಿ ನೀವು ಸ್ಮಾರ್ಟ್‌ಫೋನ್ ಮಾರಲು ಬಯಸಿದರೆ ಮೊದಲು https://getinstacash.in/ ಗೆ ಲಾಗ್​ಇನ್ ಆಗಿ ನಿಮ್ಮ ವಿವರಗಳನ್ನು ನಮೂದಿಸಬೇಕು. ನಂತರ ಕಂಪನಿಯ ನೌಕರರು ಮನೆಗೆ ಬಂದು ನಿಮ್ಮಿಂದ ಗ್ಯಾಜೆಟ್‌ಗಳನ್ನು ಸಂಗ್ರಹಿಸುತ್ತಾರೆ. ಅದರಲ್ಲಿ ನಿಮ್ಮ ಹೆಸರನ್ನು ನಮೂದಿಸಿದ ತಕ್ಷಣವೇ ನೀವು ಇನ್‌ಸ್ಟಾ ನಗದು ಹಣ ಪಡೆಯುವಿರಿ.

ಇದನ್ನೂ ಓದಿ: ನಿಮ್ಮ ಮೊಬೈಲನ್ನು ಸದಾ ಎಚ್ಚರದಿಂದಿಡಲು ಈ ಪವರ್​ ಬ್ಯಾಂಕ್​ಗಳು ಉತ್ತಮ ಆಯ್ಕೆ

ಇದನ್ನೂ ಓದಿ: Reliance Jio Phone Offer: ಮತ್ತೊಂದು ಕ್ರಾಂತಿಗೆ ಸಿದ್ಧವಾಯ್ತು ಜಿಯೋ, ಕೇವಲ ರೂ. 1,999ಕ್ಕೆ ಎರಡು ವರ್ಷಗಳ ತನಕ ಅನಿಯಮಿತ ಸೌಲಭ್ಯ

Published On - 8:09 pm, Mon, 29 March 21