Tech Tips: ಇನ್​ಸ್ಟಾಗ್ರಾಮ್​ನಲ್ಲಿ ಬ್ಲೆಂಡ್ ವೈಶಿಷ್ಟ್ಯ ಎಂದರೇನು?: ಇದನ್ನು ಹೇಗೆ ಉಪಯೋಗಿಸುವುದು?

Instagram Blend Feature: ಬ್ಲೆಂಡ್ ಎಂಬುದು ನೀವು ಮತ್ತು ನಿಮ್ಮ ಸ್ನೇಹಿತರು ಒಟ್ಟಿಗೆ ಇನ್​ಸ್ಟಾಗ್ರಾಮ್ ರೀಲ್‌ಗಳನ್ನು ಆನಂದಿಸಬಹುದಾದ ಒಂದು ವೈಶಿಷ್ಟ್ಯವಾಗಿದೆ. ನೀವು ಬ್ಲೆಂಡ್‌ನಲ್ಲಿರುವ ಯಾರೊಂದಿಗಾದರೂ ಸಂಪರ್ಕ ಸಾಧಿಸಿದಾಗ, ನಿಮ್ಮ ಮತ್ತು ಆ ಸ್ನೇಹಿತನ ಆಸಕ್ತಿಗಳ ಆಧಾರದ ಮೇಲೆ ಇನ್ಸ್ಟಾಗ್ರಾಮ್ ರೀಲ್‌ಗಳನ್ನು ಸೂಚಿಸುತ್ತದೆ. ಇದರರ್ಥ ಎರಡರ ಆಸಕ್ತಿಯ ಮಿಶ್ರ ವಿಷಯವನ್ನು ಒಂದೇ ಫೀಡ್‌ನಲ್ಲಿ ತೋರಿಸಲಾಗುತ್ತದೆ.

Tech Tips: ಇನ್​ಸ್ಟಾಗ್ರಾಮ್​ನಲ್ಲಿ ಬ್ಲೆಂಡ್ ವೈಶಿಷ್ಟ್ಯ ಎಂದರೇನು?: ಇದನ್ನು ಹೇಗೆ ಉಪಯೋಗಿಸುವುದು?
Instagram Blend Feature

Updated on: Apr 21, 2025 | 11:13 AM

ಬೆಂಗಳೂರು (ಏ. 21): ಇನ್‌ಸ್ಟಾಗ್ರಾಮ್ (Instagram) ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ವೈಶಿಷ್ಟ್ಯಗಳನ್ನು ತರುತ್ತಲೇ ಇರುತ್ತದೆ. ಆದರೆ, ಇದು ಅನೇಕ ಬಳಕೆದಾರರಿಗೆ ರೀಚ್ ಆಗಿರುವುದಿಲ್ಲ. ಅದನ್ನು ಉಪಯೋಗಿಸುವುದು ಹೇಗೆ ಎಂಬುದು ಕೂಡ ತಿಳಿದಿರುವುದಿಲ್ಲ. ಈ ಸಾಲಿನಲ್ಲಿ ಇತ್ತೀಚೆಗೆ ಇನ್​ಸ್ಟಾಗ್ರಾಮ್ ಬಿಡುಗಡೆ ಮಾಡಿದ ಬ್ಲೆಂಡ್ ಎಂಬ ಹೊಸ ವೈಶಿಷ್ಟ್ಯ ಕೂಡ ಇದೆ. ಈ ವೈಶಿಷ್ಟ್ಯವು ರೀಲ್‌ಗಳನ್ನು ವೀಕ್ಷಿಸಲು ಮತ್ತು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವ ಬಳಕೆದಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಬ್ಲೆಂಡ್ ವೈಶಿಷ್ಟ್ಯವನ್ನು ನೀವು ಅರ್ಥ ಮಾಡಿಕೊಂಡರೆ, ಇನ್​ಸ್ಟಾಗ್ರಾಮ್ ಬಳಸುವುದು ಈಗ ಹೆಚ್ಚು ಖುಷಿ ಕೊಡುತ್ತದೆ ಮತ್ತು ಮೋಜಿನದಾಗುತ್ತದೆ.

ಬ್ಲೆಂಡ್ ವೈಶಿಷ್ಟ್ಯ ಎಂದರೇನು?

ಬ್ಲೆಂಡ್ ಎಂಬುದು ನೀವು ಮತ್ತು ನಿಮ್ಮ ಸ್ನೇಹಿತರು ಒಟ್ಟಿಗೆ ಇನ್​ಸ್ಟಾಗ್ರಾಮ್ ರೀಲ್‌ಗಳನ್ನು ಆನಂದಿಸಬಹುದಾದ ಒಂದು ವೈಶಿಷ್ಟ್ಯವಾಗಿದೆ. ನೀವು ಬ್ಲೆಂಡ್‌ನಲ್ಲಿರುವ ಯಾರೊಂದಿಗಾದರೂ ಸಂಪರ್ಕ ಸಾಧಿಸಿದಾಗ, ನಿಮ್ಮ ಮತ್ತು ಆ ಸ್ನೇಹಿತನ ಆಸಕ್ತಿಗಳ ಆಧಾರದ ಮೇಲೆ ಇನ್​ಸ್ಟಾಗ್ರಾಮ್ ರೀಲ್‌ಗಳನ್ನು ಸೂಚಿಸುತ್ತದೆ. ಇದರರ್ಥ ಎರಡರ ಆಸಕ್ತಿಯ ಮಿಶ್ರ ವಿಷಯವನ್ನು ಒಂದೇ ಫೀಡ್‌ನಲ್ಲಿ ತೋರಿಸಲಾಗುತ್ತದೆ.

Loading...

ಉದಾಹರಣೆ: ನೀವು ತಮಾಷೆಯ ವಿಡಿಯೋಗಳನ್ನು ಇಷ್ಟಪಟ್ಟರೆ ಮತ್ತು ನಿಮ್ಮ ಸ್ನೇಹಿತ ಡ್ಯಾನ್ಸ್ ರೀಲ್‌ಗಳನ್ನು ನೋಡಲು ಇಷ್ಟಪಡುತ್ತಿದ್ದರೆ, ಬ್ಲೆಂಡ್ ಫೀಡ್‌ನಲ್ಲಿ ನೀವು ಎರಡರ ಸಂಯೋಜನೆಯ ರೀಲ್‌ಗಳನ್ನು ಕಾಣಬಹುದು.

ಬ್ಲೆಂಡ್ ಹೇಗೆ ಕೆಲಸ ಮಾಡುತ್ತದೆ?:

ಇದರಲ್ಲಿ, ನೀವು ಸ್ನೇಹಿತರಿಗೆ ಬ್ಲೆಂಡ್ ಆಹ್ವಾನವನ್ನು ಕಳುಹಿಸುತ್ತೀರಿ. ಇದಾದ ನಂತರ, ಅವರು ಆಹ್ವಾನವನ್ನು ಸ್ವೀಕರಿಸಿದಾಗ, ಅವರಿಬ್ಬರಿಗೂ ವಿಶೇಷ ರೀಲ್ಸ್ ಫೀಡ್ ಅನ್ನು ರಚಿಸಲಾಗುತ್ತದೆ. ಇದರಲ್ಲಿ, ಎರಡರ ಆಯ್ಕೆಯ ಪ್ರಕಾರ ವಿಡಿಯೋಗಳನ್ನು ಡಿಸ್​ಪ್ಲೇ ಮಾಡಲಾಗುತ್ತದೆ. ನೀವು ಚಾಟ್ ಮೂಲಕ ಬ್ಲೆಂಡ್ ಫೀಡ್ ಅನ್ನು ಪ್ರವೇಶಿಸಬಹುದು.

Smartphone Insurance: ನೀವು ಮೊಬೈಲ್ ವಿಮೆಯನ್ನು ತೆಗೆದುಕೊಳ್ಳುತ್ತಿದ್ದರೆ ಜಾಗರೂಕರಾಗಿರಿ: ಈ ಸುದ್ದಿ ಓದದೆ ಯಾವುದೇ ಹೆಜ್ಜೆ ಇಡಬೇಡಿ

ಬಳಕೆದಾರರಿಗೆ ಏನು ಪ್ರಯೋಜನವಾಗುತ್ತದೆ?:

ಸ್ನೇಹಿತರೊಂದಿಗೆ ರೀಲ್‌ಗಳನ್ನು ಹಂಚಿಕೊಳ್ಳುವ ಮತ್ತು ನೋಡುವ ಹೊಸ ಅನುಭವವನ್ನು ನೀವು ಪಡೆಯುತ್ತೀರಿ. ನಿಮ್ಮಿಬ್ಬರ ಸ್ನೇಹಿತರ ಇಷ್ಟಗಳನ್ನು ಆಧರಿಸಿದ ವಿಡಿಯೋಗಳನ್ನು ನೀವು ನೋಡುತ್ತೀರಿ. ಬ್ಲೆಂಡ್ ವೈಶಿಷ್ಟ್ಯವು ಇನ್​ಸ್ಟಾಗ್ರಾಮ್ ಅನುಭವವನ್ನು ಹೆಚ್ಚು ವಿಶೇಷ ಮತ್ತು ವೈಯಕ್ತಿಕಗೊಳಿಸುತ್ತದೆ. ನೀವಿಬ್ಬರೂ ಒಂದೇ ರೀತಿಯ ಅಥವಾ ತಮಾಷೆಯ ರೀಲ್‌ಗಳನ್ನು ನೋಡಿದಾಗ, ಚಾಟ್‌ನಲ್ಲಿ ಸಂಭಾಷಣೆ ಮತ್ತು ಮೋಜಿನ ಅವಕಾಶ ಹೆಚ್ಚಾಗುತ್ತದೆ.

ವಾಟ್ಸ್ಆ್ಯಪ್ ಸ್ಟೇಟಸ್​ನಲ್ಲಿ ಇನ್​ಸ್ಟಾ ರೀಲ್ಸ್:

ಈ ಹಿಂದೆ, ಇನ್‌ಸ್ಟಾ ರೀಲ್‌ಗಳು ವಾಟ್ಸ್​ಆ್ಯಪ್ ಸ್ಟೇಟಸ್‌ನಲ್ಲಿ ಲಿಂಕ್‌ಗಳಾಗಿ ಕಾಣಿಸಿಕೊಳ್ಳುತ್ತಿದ್ದವು, ಆದರೆ ಈಗ ಅವುಗಳ ವಿಡಿಯೋ ಕೂಡ ಕಾಣಿಸಿಕೊಳ್ಳುತ್ತದೆ. ಜೊತೆಗೆ ಆಡಿಯೋ ಕೂಡ ಕಣ್ಮರೆಯಾಗುವುದಿಲ್ಲ. ಈ ಮೂಲಕ ಮೆಟಾ ಅನೇಕ ಬಳಕೆದಾರರ ಸಮಸ್ಯೆಯನ್ನು ಬಗೆಹರಿಸಿದೆ. ಈಗ ಬಳಕೆದಾರರು ವಾಟ್ಸ್​ಆ್ಯಪ್ ಸ್ಟೇಟಸ್​ನಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಸುಲಭವಾಗಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ್ಗೆ ತಮ್ಮದೇ ಆದ ರೀಲ್‌ಗಳನ್ನು ರಚಿಸುವ ಜನರಿಗೆ ಈ ವೈಶಿಷ್ಟ್ಯವು ತುಂಬಾ ಉಪಯುಕ್ತವಾಗಿರುತ್ತದೆ. ಈ ರೀತಿಯಾಗಿ, ಅವರು ತಮ್ಮ ರೀಲ್‌ಗಳನ್ನು ಗರಿಷ್ಠ ಮಟ್ಟದಲ್ಲಿ ತಲುಪಲು ವಾಟ್ಸ್​ಆ್ಯಪ್​ ಸ್ಟೇಟಸ್‌ನಲ್ಲಿ ರೀಲ್‌ಗಳನ್ನು ಹಂಚಿಕೊಳ್ಳಬಹುದು. ಇಲ್ಲಿಯವರೆಗೆ ರೀಲ್‌ಗಳನ್ನು ನೇರವಾಗಿ ವಾಟ್ಸ್​ಆ್ಯಪ್​ ಸ್ಟೇಟಸ್‌ಗೆ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಹೊಸ ವೈಶಿಷ್ಟ್ಯದ ನಂತರ, ಈಗ ಅವರು ತಮ್ಮ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ವಾಟ್ಸ್​ಆ್ಯಪ್​ ಸ್ಟೇಟಸ್‌ಗೆ ಸುಲಭವಾಗಿ ಆಡಿಯೋ ಜೊತೆಗೆನೇ ಹಾಕಲು ಸಾಧ್ಯವಾಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Loading...
Unable to load recommendations.
Follow Us