WhatsApp Web: ವಾಟ್ಸ್​ಆ್ಯಪ್​ನಿಂದ ವೆಬ್ ಬಳಕೆದಾರರಿಗೆ ಬಂತು ವಿಶೇಷ ಫೀಚರ್: ಕೂಡಲೇ ಅಪ್ಡೇಟ್ ಮಾಡಿ

|

Updated on: Mar 23, 2023 | 2:33 PM

WhatsApp Web New Features: ಹೆಚ್ಚಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ನೂತನ ಅಪ್ಡೇಟ್​ಗಳನ್ನು ನೀಡುತ್ತಿದ್ದ ಕಂಪನಿ ಈಗ ವೆಬ್ ಬಳಕೆದಾರರಿಗೂ ವಿಶೇಷವಾದ ಪೀಚರ್​ಗಳನ್ನು ಪರಿಚಯಿಸುವಲ್ಲಿ ಕೆಲಸ ಮಾಡುತ್ತಿದೆ.

WhatsApp Web: ವಾಟ್ಸ್​ಆ್ಯಪ್​ನಿಂದ ವೆಬ್ ಬಳಕೆದಾರರಿಗೆ ಬಂತು ವಿಶೇಷ ಫೀಚರ್: ಕೂಡಲೇ ಅಪ್ಡೇಟ್ ಮಾಡಿ
WhatsApp Web
Follow us on

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಕಳೆದ ವರ್ಷದಂತೆ ಈ ವರ್ಷ ಕೂಡ ಒಂದರ ಹಿಂದೆ ಒಂದರಂತೆ ಆಕರ್ಷಕ ಫೀಚರ್​ಗಳನ್ನು ಪರಿಚಯಿಸುತ್ತಲೇ ಇದೆ. ಹೀಗಾಗಿಯೇ ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ವಾಟ್ಸ್​ಆ್ಯಪ್ (WhatsApp) ಅನ್ನು ಇಂದು ಕೇವಲ ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಹೆಚ್ಚಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ನೂತನ ಅಪ್ಡೇಟ್​ಗಳನ್ನು ನೀಡುತ್ತಿದ್ದ ಕಂಪನಿ ಈಗ ವೆಬ್ ಬಳಕೆದಾರರಿಗೂ ವಿಶೇಷವಾದ ಪೀಚರ್​ಗಳನ್ನು ಪರಿಚಯಿಸುವಲ್ಲಿ ಕೆಲಸ ಮಾಡುತ್ತಿದೆ. ಇದರ ನಡುವೆ ವಾಟ್ಸ್​ಆ್ಯಪ್ ವೆಬ್ (WhatsApp Web) ಉಪಯೋಗಿಸುತ್ತಿರುವ ವಿಂಡೀಸ್ ಬಳಕೆದಾರರಿಗೆ ಹೊಸ ಆಯ್ಕೆಯೊಂದನ್ನು ನೀಡಿದೆ.

ಇದೀಗ ವಿಂಡೋಸ್​ ಬಳಕೆದಾರರಿಗೆ ಹೊಸ ವಾಟ್ಸ್​ಆ್ಯಪ್ ಅನ್ನು ಪರಿಚಯಿಸಿದ್ದು ಇದು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಐಒಎಸ್, ಆಂಡ್ರಾಯ್ಡ್ ಮಾದದರಿಯಲ್ಲಿ ಕೆಲಸ ಮಾಡುತ್ತದಂತೆ. ಇದರ ಜೊತೆಗೆ ಗ್ರೂಪ್ ವಿಡಿಯೋ ಕರೆ ಮತ್ತು ಆಡಿಯೋ ಕರೆ ಆಯ್ಕೆಯನ್ನು ನೀಡಲಾಗಿದೆ. ಎಂಟು ಜನರೊಂದಿಗೆ ಒಮ್ಮೆಲೆ ವಿಡಿಯೋ ಕಾಲ್​ನಲ್ಲಿ ಮಾತನಾಡುವ ಅವಕಾಶ ಕಲ್ಪಿಸಲಾಗಿದೆ. ಅಂತೆಯೆ 32 ಜನರು ಆಡಿಯೋ ಕಾಲ್​ನಲ್ಲಿ ಕನೆಕ್ಟ್ ಆಗಬಹುದಂತೆ. ಸದ್ಯಕ್ಕೆ ಈ ಆಯ್ಕೆಯನ್ನು ವಿಂಡೀಸ್ ಬಳಕೆದಾರರಿಗೆ ಮಾತ್ರ ನೀಡಲಾಗಿದ್ದು, ಮ್ಯಾಕ್ ಡೆಸ್ಕ್ ಟಾಪ್​ನವರಿಗಾಗಿ ಪರೀಕ್ಷಾ ಹಂತದಲ್ಲಿದೆ.

Moto G32: ಮೋಟೋ ಫೋನ್​ಗಳಿಗೆ ಭರ್ಜರಿ ಬೇಡಿಕೆ: ಹಳೆಯ ಮೊಬೈಲ್ ಹೊಸ ಸ್ಟೋರೇಜ್​ನಲ್ಲಿ ಬಿಡುಗಡೆ

ಇದನ್ನೂ ಓದಿ
108MP ಕ್ಯಾಮೆರಾ, 6000mAh ಬ್ಯಾಟರಿ: ಸ್ಯಾಮ್​ಸಂಗ್​ನಿಂದ ಹುಬ್ಬೇರಿಸುವ ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?
Pinduoduo: ಈ ಶಾಪಿಂಗ್ ಆ್ಯಪ್ ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ: ಗೂಗಲ್​ನಿಂದ ಎಚ್ಚರಿಕೆಯ ಸಂದೇಶ
Google Down: ಭಾರತದಲ್ಲಿ ಗೂಗಲ್ ಸರ್ವರ್ ಡೌನ್: ಸರ್ಚ್ ಮಾಡಲು ಬಳಕೆದಾರರ ಪರದಾಟ
WhatsApp New Feature: ಗ್ರೂಪ್ ಅಡ್ಮಿನ್​​ಗಳಿಗೆ ಸಹಕಾರಿಯಾಗುವ 2 ಹೊಸ ಫೀಚರ್ ಪರಿಚಯಿಸಲಿದೆ ವಾಟ್ಸ್ಆ್ಯಪ್; ಏನಿದರ ವಿಶೇಷತೆ?

ಐಒಎಸ್​ನಲ್ಲಿ ಹೊಸ ಫೀಚರ್:

ವಾಟ್ಸ್​ಆ್ಯಪ್ ತನ್ನ ಐಫೋನ್ ಬಳಕೆದಾರರಿಗೆ ವಾಯ್ಸ್ ಸ್ಟೇಟಸ್ ಫೀಚರ್ ಅನ್ನು ವಾಟ್ಸ್​ಆ್ಯಪ್ ಪರಿಚಯಿಸಿದ್ದು, ಇದರ ಮೂಲಕ​ ಸ್ಟೇಟಸ್​ನಲ್ಲಿ ವಾಯ್ಸ್ ಮೆಸೇಜ್ (Voice Message) ಅನ್ನು ಹಂಚಿಕೊಳ್ಳಬಹುದು. ವಾಯ್ಸ್ ಸ್ಟೇಟಸ್ ಫೀಚರ್ ಆಂಡ್ರಾಯ್ಡ್ ಬಳಕೆದಾರರಿಗೆ ಕಳೆದ ತಿಂಗಳು ಫೆಬ್ರವರಿಯಲ್ಲೇ ನೀಡಲಾಗಿತ್ತು. ಇದು ಅತ್ಯಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ಐಫೋನ್‌ ಬಳಕೆದಾರರಿಗೆ ಸಹ ಈ ಸೌಲಭ್ಯವನ್ನು ಕಲ್ಪಿಸಿದೆ. ಈವರೆಗೆ ಸ್ಟೇಟಸ್​ನಲ್ಲಿ ವಿಡಿಯೋ, ಫೋಟೋ, ಲಿಂಕ್​ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದಿತ್ತು. ಇದೀಗ ವಾಯ್ಸ್ ಸ್ಟೇಟಸ್ ಎಂಬ ಹೊಸ ಫೀಚರ್ ಮೂಲಕ ಬಳಕೆದಾರರು ಸ್ಟೇಟಸ್​ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್​ಗಳನ್ನು ಶೇರ್ ಮಾಡಬಹುದಾಗಿದೆ.

ವಾಯ್ಸ್ ಸ್ಟೇಟಸ್ ಬಳಕೆದಾರರಿಗೆ 30 ಸೆಕೆಂಡ್​ಗಳ ಕಾಲ ಇರಲಿದೆ. ಇದಕ್ಕಾಗಿ ಬರಹಗಳನ್ನು ಹಂಚಿಕೊಳ್ಳಬಹುದಾದ ಜಾಗದಲ್ಲಿ ಮೈಕ್ರೊ ಫೋನ್ ಆಯ್ಕೆಯನ್ನು ಕೂಡ ನೀಡಲಾಗಿದೆ. ಇಲ್ಲಿ ಮೈಕ್ರೊ ಫೋನ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾಯ್ಸ್ ಸ್ಟೇಟಸ್ ಶೇರ್ ಮಾಡಬಹುದು. ಇದು ಎಂಡ್-ಟು-ಎಂಡ್ ಎನ್​ಕ್ರಿಪ್ಟೆಡ್ ಆಗಿದೆ.

ವಾಟ್ಸ್​ಆ್ಯಪ್​ನಲ್ಲಿ ಇನ್ನಷ್ಟು ಅನೇಕ ಅಪ್ಡೇಟ್​ಗಳು ಬರಲಿಕ್ಕಿದೆ. ಇದರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ಎಕ್ಸ್​ಪೇರಿಂಗ್ ಗ್ರೂಪ್ ಫೀಚರ್ ಕೂಡ ಒಂದು. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್​ಗೆ ಮುಕ್ತಾಯದ ದಿನಾಂಕ ಎಂಬುದನ್ನು ನಿಗದಿ ಮಾಡಿರಲಾಗುತ್ತದೆ. ಆ ಸಮಯ ಬಂದ ನಂತರ ವಾಟ್ಸ್​ಆ್ಯಪ್ ನಿಮಗೆ ಆ ಗ್ರೂಪ್​ನಿಂದ ಹಿಂದೆ ಸರಿಯಲು ಮತ್ತು ಅಡ್ಮಿನ್​ಗೆ ಗ್ರೂಪ್ ಡಿಲೀಟ್ ಮಾಡಲು ಅಲರ್ಟ್ ಮಾಡುತ್ತಾ ಇರುತ್ತದೆ. ಈ ಆಯ್ಕೆ ವಾಟ್ಸ್​ಆ್ಯಪ್ ಗ್ರೂಪ್ ಇನ್​ಫೋ ದಲ್ಲಿ ಇರುತ್ತದೆ. ಅಂತೆಯೆ ಈ ಮುಕ್ತಾಯದ ದಿನಾಂಕವನ್ನು ಬದಲಾವಣೆ ಮಾಡುವ ಅವಕಾಶ ಕೂಡ ಇರುತ್ತದಂತೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್​ನಿಂದ ನೀವು ಹಿಂದೆ ಸರಿದು ಮೆಮೋರಿಯನ್ನು ಉಳಿತಾಯ ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ