Kannada News Technology WhatsApp allows users to stay connected with their friends even without a phone Here is the Tricks
WhatsApp: ಸ್ಮಾರ್ಟ್ಫೋನ್ ಸ್ವಿಚ್ ಆಫ್ ಆಗಿದ್ದರೂ ವಾಟ್ಸ್ಆ್ಯಪ್ನಲ್ಲಿ ಚಾಟ್ ಮಾಡಬಹುದು: ಹೇಗೆ ಗೊತ್ತೇ?
WhatsApp Tips and Tricks: ನಿಮ್ಮ ವಾಟ್ಸ್ಆ್ಯಪ್ ಖಾತೆಯನ್ನು ಒಂದೇ ಸಮಯದ ವೇಳೆ ಬೇರೆ ಬೇರೆ ಡಿವೈಸ್ಗೆ ಲಿಂಕ್ ಮಾಡುವುದು. ಈ ಮೂಲಕ ವಾಟ್ಸ್ಆ್ಯಪ್ ಅನ್ನು ಹಲವು ಡಿವೈಸ್ಗಳಲ್ಲಿ (WhatsApp Multiple Device) ಬಳಕೆ ಮಾಡಬಹುದಾಗಿದೆ.
ಫೋನ್ ಇಲ್ಲದೆಯೇ ಸ್ನೇಹಿತರು, ಕುಟುಂಬದವರು ಅಥವಾ ಯಾರ ಜೊತೆ ಬೇಕಾದರು ಚಾಟ್ ಮಾಡಬಹುದಾದ ಆಯ್ಕೆಯನ್ನು ವಾಟ್ಸ್ಆ್ಯಪ್ ನೀಡಿದೆ. ಅರೇ ಫೋನ್ ಇಲ್ಲದೆ ಇದು ಹೇಗೆ ಅಂತೀರಾ?. ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಇತ್ತೀಚೆಗಷ್ಟೆ ನಿರೀಕ್ಷೆಗೂ ಮೀರಿದ ವಿಶೇಷ ಫೀಚರ್ (New WhatsApp Feature) ಒಂದನ್ನು ಪರಿಚಯಿಸಿತ್ತು. ಅದುವೆ ನಿಮ್ಮ ವಾಟ್ಸ್ಆ್ಯಪ್ ಖಾತೆಯನ್ನು ಒಂದೇ ಸಮಯದ ವೇಳೆ ಬೇರೆ ಬೇರೆ ಡಿವೈಸ್ಗೆ ಲಿಂಕ್ ಮಾಡುವುದು. ಈ ಮೂಲಕ ವಾಟ್ಸ್ಆ್ಯಪ್ ಅನ್ನು ಹಲವು ಡಿವೈಸ್ಗಳಲ್ಲಿ (WhatsApp Multiple Device) ಬಳಕೆ ಮಾಡಬಹುದಾಗಿದೆ. ಒಂದು ಬಾರಿ ನಿಮ್ಮ ಮೊಬೈಲ್ ಮೂಲಕ ಲಿಂಕ್ ಮಾಡಿದರೆ ನಂತರ ಆ ಮೊಬೈಲ್ ಲಿಂಕ್ ಮಾಡಿದ ಡಿವೈಸ್ ಹತ್ತಿರ ಇರಬೇಕೆಂದಿಲ್ಲ.
ಅಂದರೆ ಈ ಮಲ್ಟಿಡಿವೈಸ್ ಫೀಚರ್ ಬಳಸಿಕೊಂಡು ಬಳಕೆದಾರರು ಒಂದೇ ಸಮಯದಲ್ಲಿ ನಾಲ್ಕು ಸಾಧನಗಳು ಮತ್ತು ಒಂದು ಫೋನ್ ಅನ್ನು ಸಂಪರ್ಕಿಸಬಹುದು. ಒಂದೇ ವಾಟ್ಸ್ಆ್ಯಪ್ ಅನ್ನು ಇತರೆ ಮೂರು ಲ್ಯಾಪ್ಟರ್ ಅಥವಾ ಡೆಸ್ಕ್ಟಾಪ್ನಲ್ಲಿ ವಾಟ್ಸ್ಆ್ಯಪ್ ಬಳಸಬಹುದು. ಆದರೆ, ಫೋನ್ 14 ದಿನಗಳವರೆಗೆ ನಿಷ್ಕ್ರಿಯವಾಗಿದ್ದರೆ ಸಂಪರ್ಕಿತ ಸಾಧನಗಳು ಸಂಪರ್ಕ ಕಡಿತಗೊಳ್ಳುತ್ತವೆ.
ಈ ಫೀಚರ್ ಅನ್ನು ಬಳಸಬೇಕಾದರೆ ನಿಮ್ಮ ಮೊಬೈಲ್‌ನಲ್ಲಿ ವಾಟ್ಸ್ಆ್ಯಪ್ ಮೇಲೆ ಕ್ಲಿಕ್ ಮಾಡಿ ಮತ್ತು ಮೂರು–ಡಾಟ್ ಮೆನು ಮೇಲೆ ಟ್ಯಾಪ್ ಮಾಡಿ.
ಲಿಂಕ್ ಮಾಡಲಾದ ಸಾಧನಗಳನ್ನು ಆಯ್ಕೆಮಾಡಿ. ಐಒಎಸ್ ಬಳಕೆದಾರರಿಗೆ, ಸೆಟ್ಟಿಂಗ್‌ಗಳ ಐಕಾನ್ ಟ್ಯಾಪ್ ಮಾಡುವ ಮೂಲಕ ವಾಟ್ಸ್ಆ್ಯಪ್ ಆಯ್ಕೆಮಾಡಿ ಲಿಂಕ್ಡ್ ಸಾಧನಗಳನ್ನು ಕ್ಲಿಕ್ ಮಾಡಿ, ಆಯ್ಕೆಮಾಡಿ.
ಇದನ್ನೂ ಓದಿ
WhatsApp: ವಾಟ್ಸ್ಆ್ಯಪ್ನಲ್ಲಿದೆ ನಿಮಗೆ ತಿಳಿದಿಲ್ಲದ ಕ್ವಿಕ್ ರಿಪ್ಲೇ ಆಯ್ಕೆ: ಇದನ್ನು ಬಳಸುವುದು ಹೇಗೆ?
World Wide Web Day: ಇಂದು ವರ್ಲ್ಡ್ ವೈಡ್ ವೆಬ್ ಡೇ: ಇದರ ಇತಿಹಾಸವೇನು?
Reliance Jio: ನೆಟ್ಫ್ಲಿಕ್ಸ್ ಫ್ರೀ ಆಗಿ ನೋಡಬೇಕಾ?: ರಿಲಯನ್ಸ್ ಜಿಯೋದ ಈ ಯೋಜನೆ ಹಾಕಿಸಿಕೊಳ್ಳಿ
WhatsApp: ಇನ್ಮುಂದೆ ವಾಟ್ಸ್ಆ್ಯಪ್ನಲ್ಲಿ ಏನೇ ಅಪ್ಡೇಟ್ ಬಂದರೆ ನಿಮಗೆ ತಿಳಿಯುತ್ತೆ: ಬರುತ್ತಿದೆ ಹೊಸ ಫೀಚರ್
ಬಯೋಮೆಟ್ರಿಕ್ ದೃಢೀಕರಣದೊಂದಿಗೆ ನಿಮ್ಮ ಫೋನ್ ಅನ್ನು ಅನ್ಲಾಕ್ ಮಾಡಿ ಅಥವಾ ಪಿನ್ ನಮೂದಿಸಿ.
web.whatsapp.com ಅಥವಾ WhatsApp ಅನ್ನು ಡೆಸ್ಕ್‌ಟಾಪ್ PC ಅಥವಾ ಲ್ಯಾಪ್‌ಟಾಪ್‌ನಲ್ಲಿ ತೆರೆಯಿರಿ.
ಸೆಲ್ಫೋನ್ ಮೂಲಕ ಪರದೆಯ ಮೇಲೆ ಪ್ರದರ್ಶಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಿ. ಈಗ ಲಿಂಕ್ ಆಗುತ್ತಿದೆ. ಈ ಮೂಲಕ ಉಪಯೋಗಿಸಬಹುದು. ಇಲ್ಲಿ ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ಆಫ್ ಇದ್ದರೂ, ಮೊಬೈಲ್ ಸ್ವಿಚ್ ಆಫ್ ಆಗಿದ್ದರೂ ಉಪಯೋಗಿಸಬಹುದಾಗಿದೆ.
ಅನ್ಲಿಂಕ್ ಮಾಡಲು ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಅನ್ನು ತೆರೆದು ಮೂರು–ಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡಿ. ಲಿಂಕ್ ಮಾಡಲಾದ ಸಾಧನಗಳನ್ನು ಆಯ್ಕೆಮಾಡಿ. ಈಗ ನೀವು ಲಿಂಕ್ ಆದ ಡಿವೈಸ್ಗಳ ಪಟ್ಟಿಯನ್ನು ಕಾಣುತ್ತೀರಿ. ಯಾವ ಡಿವೈಸ್ ಅನ್ನು ಅನ್ಲಿಂಕ್ ಮಾಡಬೇಕು ಅದರ ಮೇಲೆ ಕ್ಲಿಕ್ ಮಾಡಿ ನಂತರ ಲಾಗೌಟ್ ಆಯ್ಕೆಯನ್ನು ಒತ್ತಿರಿ.