WhatsApp: ಫೇಸ್​ಬುಕ್ ಹೆಸರು ಬದಲಾವಣೆಯಿಂದ ವಾಟ್ಸ್​ಆ್ಯಪ್​ನಲ್ಲಿ ಆಗುತ್ತಿದೆ ದೊಡ್ಡ ಬದಲಾವಣೆ: ಏನು ಗೊತ್ತೇ?

| Updated By: Vinay Bhat

Updated on: Nov 01, 2021 | 12:52 PM

WhatsApp by Meta: ಈ ಹಿಂದೆ ವಾಟ್ಸ್​ಆ್ಯಪ್ ಓಪನ್ ಮಾಡುವ ವೇಳೆ ‘From Facebook’ ಎಂದು ಬರುತ್ತಿತ್ತು. ಸದ್ಯ ಇದರಲ್ಲಿ ಬದಲಾವಣೆ ಕಂಡುಬಂದಿದೆ. ‘From Facebook’ ಬದಲಿಗೆ "WhatsApp by Meta" ಎಂದು ತೋರಿಸುತ್ತದೆ.

WhatsApp: ಫೇಸ್​ಬುಕ್ ಹೆಸರು ಬದಲಾವಣೆಯಿಂದ ವಾಟ್ಸ್​ಆ್ಯಪ್​ನಲ್ಲಿ ಆಗುತ್ತಿದೆ ದೊಡ್ಡ ಬದಲಾವಣೆ: ಏನು ಗೊತ್ತೇ?
WhatsApp by Meta
Follow us on

ಇತ್ತೀಚೆಗಷ್ಟೆ ಫೇಸ್‌ಬುಕ್‌ನ (Facebook) ಮಾತೃಸಂಸ್ಥೆಯ ಹೆಸರನ್ನು ‘ಮೆಟಾ’ (Meta) ಎಂದು ಬದಲಾಯಿಸಲಾಗಿದೆ ಎಂದು ಫೇಸ್‌ಬುಕ್‌ನ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು ಡೆವಲಪರ್‌ಗಳ ವಾರ್ಷಿಕ ಸಮ್ಮೇಳನದಲ್ಲಿ ಘೋಷಣೆ ಮಾಡಿದ್ದರು. ಈ ಮೂಲಕ ಜನ ಸಾಮಾನ್ಯರ ಮಧ್ಯೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ರೂಪಿಸುವ ಕಂಪನಿ ಹೊಸ ಹೆಜ್ಜೆ ಇಟ್ಟಿದೆ. ಇದರ ಬೆನ್ನಲ್ಲೆ ಮೆಟಾದ ಇತರೆ ಸೇವೆಗಳಾದ ಅಂದರೆ ಈ ಹಿಂದೆ ಫೇಸ್​ಬುಕ್ ಹೆಸರಿನ ಒಡೆತನದಲ್ಲಿದ್ದ ವಾಟ್ಸ್​ಆ್ಯಪ್ (WhatsApp)​ ಮತ್ತು ಇನ್​ಸ್ಟಾಗ್ರಾಮ್ (Instagram) ಈ ಮೆಟಾ ಎಂದರೆ ಏನು ಅರ್ಥ ಎಂಬುದನ್ನು ಹುಡುಕಲು ಶುರುಮಾಡಿದ್ದಾರೆ. ಯಾಕಂದ್ರೆ ಫೇಸ್​ಬುಕ್ ಮೆಟಾ ಆದ ಬಳಿಕ ಇದೇ ಮೊದಲ ಬಾರಿಗೆ ವಾಟ್ಸ್​ಆ್ಯಪ್​ನಲ್ಲಿ ಕೆಲವು ಬದಲಾವಣೆ ಕಂಡು ಬಂದಿದೆ.

ಹೌದು, ಈ ಹಿಂದೆ ವಾಟ್ಸ್​ಆ್ಯಪ್ ಓಪನ್ ಮಾಡುವ ವೇಳೆ ‘From Facebook’ ಎಂದು ಬರುತ್ತಿತ್ತು. ಸದ್ಯ ಇದರಲ್ಲಿ ಬದಲಾವಣೆ ಕಂಡುಬಂದಿದೆ. ಹೆಸರು ಬದಲಾವಣೆಯಿಂದ ಈಗ ವಾಟ್ಸ್​ಆ್ಯಪ್ ಮೆಟಾ ಒಡೆತನದ್ದಾಆಗಿದೆ. ಹೀಗಾಗಿ WhatsApp ಟ್ರ್ಯಾಕರ್ WABetaInfo ವರದಿಯಂತೆ, WhatsApp ನ ಬೀಟಾ ಆವೃತ್ತಿಯು ಅಪ್ಲಿಕೇಶನ್ ತೆರೆಯುವ ಮೊದಲು ಸ್ಪ್ಲಾಶ್ ಪರದೆಯಲ್ಲಿ ‘From Facebook’ ಬದಲಿಗೆ “WhatsApp by Meta” ಎಂದು ತೋರಿಸುತ್ತದೆ.

ಸದ್ಯಕ್ಕೆ ಇದು ವಾಟ್ಸ್​ಆ್ಯಪ್​ ಅಪ್ಲಿಕೇಶನ್‌ನ ಬೀಟಾ ಆವೃತ್ತಿಯಲ್ಲಿ ಕಂಡುಬಂದಿದೆ ಎಂದು ವರದಿ ಹೇಳುತ್ತದೆ. ಅಪ್ಲಿಕೇಶನ್‌ನ ಸ್ಥಿರ ಆವೃತ್ತಿಯಲ್ಲಿ ಇದನ್ನು ಶೀಘ್ರದಲ್ಲೇ ಪರಿಚಯಿಸುವ ನಿರೀಕ್ಷೆಯಿದೆ. WABetaInfo ವರದಿಯು ಆ್ಯಪ್‌ನ ಸೆಟ್ಟಿಂಗ್‌ಗಳ ಪುಟದ ಅಡಿಟಿಪ್ಪಣಿಯಲ್ಲಿ ಗೋಚರಿಸುವ ಅಪ್ಲಿಕೇಶನ್‌ನಲ್ಲಿ WhatsApp by Facebook ಲೇಬಲ್ ಸಹ ಬೀಟಾ ಆವೃತ್ತಿಯಿಂದ ಕಾಣೆಯಾಗಿದೆ ಎಂದು ಹೇಳುತ್ತದೆ. ಪ್ರಸ್ತುತ, WhatsApp ಮಾತ್ರ ಹೊಸತನಕ್ಕೆ ಬದಲಾಯಿಸಿಕೊಂಡಿದೆ.

WABetaInfo ವರದಿಯು ಕೆಲವು iOS ಬೀಟಾ ಸ್ಪ್ಲಾಶ್ ಪರದೆಯು ಗೋಚರಿಸದ ಸಮಸ್ಯೆಯನ್ನು ಅನುಭವಿಸಬಹುದು ಎಂದು ಹೇಳಿದೆ. ಮುಂದಿನ ಬೀಟಾ ನಿರ್ಮಾಣದಲ್ಲಿ ಈ ಸಮಸ್ಯೆಯನ್ನು ಸರಿಪಡಿಸಬಹುದು ಎಂದು ವರದಿ ಹೇಳಿದೆ. ಈ ಬದಲಾವಣೆಯ ಮೂಲಕ ಮುಂಬರುವ ವಾರಗಳಲ್ಲಿ WhatsAppನಲ್ಲಿ ಮೆಟಾ ಎಂದು ಕಾಣಿಸಿಕೊಳ್ಳಲಿದೆ.

ಮೆಟಾ ಎಂದರೇನು?: ನೈಜ ಪ್ರಪಂಚದಿಂದ ತಪ್ಪಿಸಿಕೊಳ್ಳುವ ವರ್ಚ್ಯುವಲ್ ಪ್ರಪಂಚದ ಜನರನ್ನು ಉದ್ದೇಶಿಸಿ ಅಮೆರಿಕದ ಕಾದಂಬರಿಕಾರ ನೀಲ್ ಸ್ಟೆಫನ್ಸನ್ ಅವರು ಮೆಟಾವರ್ಸ್ ಎಂಬ ಪದವನ್ನು ಮೊದಲ ಬಾರಿಗೆ ಬಳಕೆ ಮಾಡಿದ್ದರು. ಕಂಪನಿಯನ್ನು ಮರುನಾಮಕರಣ ಮಾಡಿಕೊಳ್ಳುವ ಮೂಲಕ ಫೇಸ್‌ಬುಕ್ ಕಂಪನಿಯೂ ಬೇರೆ ಆ್ಯಪ್‌ಗಳ ರೀತಿ ಮಾತೃ ಸಂಸ್ಥೆಯೊಂದರ ಅಧೀನದಲ್ಲಿ ಕೆಲಸ ಮಾಡಲಿದೆ. ಈ ಮಾತೃ ಸಂಸ್ಥೆಯ ಅಧೀನದಲ್ಲಿ ಫೇಸ್‌ಬುಕ್, ಇನ್​ಸ್ಟಾಗ್ರಾಮ್, ವಾಟ್ಸ್​ಆ್ಯಪ್ ಸೇರಿದಂತೆ ಇತರ ಕಂಪನಿಗಳು ಕೆಲಸ ಮಾಡಲಿವೆ.

Mi 11 Ultra: ಶವೋಮಿಯಿಂದ ಶಾಕಿಂಗ್ ನ್ಯೂಸ್: ಭಾರತದಲ್ಲಿ ಈ ಸ್ಮಾರ್ಟ್​ಫೋನ್ ಸೇಲ್ ಬಂದ್ ಮಾಡಿದ ಕಂಪನಿ

Nokia XR20: ಮಿಲಿಟರಿ ಗ್ರೇಡ್ ಡಿಸೈನ್​ನ ನೋಕಿಯಾ XR20 ಸ್ಮಾರ್ಟ್​ಫೋನ್ ಭಾರದಲ್ಲಿ ಖರೀದಿಗೆ ಲಭ್ಯ: ಬೆಲೆ ಎಷ್ಟು?

(WhatsApp Beta version of WhatsApp shows WhatsApp by Meta instead of WhatsApp by Facebook)