ಜನರು ಬಹುವಾಗಿ ಬಳಸುವ ಪ್ರಮುಖ ಅಪ್ಲಿಕೇಷನ್ಗಳಾದ ವಾಟ್ಸಾಪ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಸೋಷಿಯಲ್ ಮೀಡಿಯಾಗಳು ಸೋಮವಾರ ಸಂಜೆ (ಅಕ್ಟೋಬರ್ 4) ಕ್ರಾಶ್ ಆಗಿವೆ. ವಿಶ್ವದ ಬಹಳಷ್ಟು ಕಡೆಗಳಲ್ಲಿ ಈ ಸಮಸ್ಯೆ ಉಂಟಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಿಂದ ಸೋಷಿಯಲ್ ಮೀಡಿಯಾ ಬಳಸುವ ಅಸಂಖ್ಯ ಜನರು ಪರದಾಡುವಂತಾಗಿದೆ. ಹಲವರು ತಮಗಾದ ಅನುಭವಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಅಪ್ಲಿಕೇಷನ್ಗಳು ವೆಬ್ ಅಥವಾ ಸ್ಮಾರ್ಟ್ಫೋನ್ಗಳಲ್ಲಿ ಕೂಡ ಕೆಲಸ ಮಾಡುತ್ತಿಲ್ಲ. ಈ ಸಮಸ್ಯೆ ಆಂಡ್ರಾಯ್ಡ್ ಹಾಗೂ ಐಒಎಸ್ ಮತ್ತು ವೆಬ್ ಮೂರರಲ್ಲೂ (Android, iOS) ಆಗಿರುವ ಬಗ್ಗೆ ತಿಳಿದುಬಂದಿದೆ.
ಮಾಹಿತಿ ಹಂಚಿಕೊಳ್ಳಲು ಹಾಗೂ ಸಂವಹನಕ್ಕೆ ಬಹುತೇಕ ಜನರು ಈಗ ವಾಟ್ಸಾಪ್ ಅವಲಂಬಿಸಿರುತ್ತಾರೆ. ಮನರಂಜನೆಗೆ ಖ್ಯಾತ ಸೋಷಿಯಲ್ ಮೀಡಿಯಾಗಳಾದ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಬಳಸುತ್ತಾರೆ. ಇದ್ಯಾವುದೂ ಈಗ ಕೆಲಸ ಮಾಡುತ್ತಿಲ್ಲ. ಕಳಿಸಿರುವ ಸಂದೇಶ, ಹಂಚಿಕೊಂಡಿರುವ ಪೋಸ್ಟ್ಗಳು ಅರ್ಧಕ್ಕೆ ನಿಂತಂತಾಗಿದೆ. ಈ ವಿಚಾರವು ಈಗ ಟ್ವಿಟರ್ ಟ್ರೆಂಡಿಂಗ್ನಲ್ಲಿ ಕೂಡ ಸ್ಥಾನ ಪಡೆದುಕೊಂಡಿದೆ. ಮತ್ತೊಂದು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಜನರು ವಿಚಾರ ಹಂಚಿಕೊಳ್ಳುತ್ತಿದ್ದಾರೆ. ಹಲವಾರು ಟ್ರಾಲ್, ಮೀಮ್ಸ್ಗಳು ಕೂಡ ಕ್ರಿಯೇಟ್ ಆಗಿವೆ.
WhatsApp,Facebook,and Instagram down again,the world right now switching to twitter#WhatsApp #facebookdown #Instagram pic.twitter.com/SUZzhZTBEj
— Muhammad Kamran (@Muhammadkami02) October 4, 2021
Whatsapp, Facebook and Instagram are down now…
Twitter people are like..#facebookdown pic.twitter.com/imKrSKkQRy
— Ramesh Verma (@Ramesh__Kumar_) October 4, 2021
Whatsapp, Facebook and Instagram down cos they played the squid game ? pic.twitter.com/lmhl4AnDSL
— BK? (@__mrken) October 4, 2021
Lol time to remember Twitter ??? WhatsApp, Facebook and Instagram down momentarily ?? pic.twitter.com/PN9qoC0uyl
— Willis Raburu (@WillisRaburu) October 4, 2021
ಟ್ವಿಟರ್ ಟ್ರೆಂಡಿಂಗ್ನ ಟೆಕ್ನಾಲಜಿ ವಿಭಾಗದ 4 ಮತ್ತು 5ನೇ ಸ್ಥಾನದಲ್ಲಿ Facebook and Instagram ಮತ್ತು #facebookdown ಇದೆ. ಸುದ್ದಿ ಮಾಡುವ ವೇಳೆಗಾಗಲೇ ಈ ಬಗ್ಗೆ 88.1k ಮತ್ತು 69.5k ಟ್ವೀಟ್ಗಳಾಗಿವೆ. ಟ್ರೆಂಡಿಂಗ್ 9ರಲ್ಲಿ ಮಾರ್ಕ್ ಜುಕರ್ಬರ್ಗ್ ಹೆಸರಿದೆ. ಈ ಬಗ್ಗೆ 38.2k ಟ್ವೀಟ್ಗಳು ಆಗಿವೆ. #serverdown ಎಂಬ ಹ್ಯಾಷ್ ಟ್ಯಾಗ್ ಕೂಡ ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ.
ಇದನ್ನೂ ಓದಿ: How To: ಈಗ ವಾಟ್ಸಾಪ್ ಮೂಲಕ ಕೇವಲ 3 ಹಂತಗಳಲ್ಲಿ ಸುಲಭವಾಗಿ ಲಸಿಕೆ ಪ್ರಮಾಣಪತ್ರ ಪಡೆಯಿರಿ! ಇಲ್ಲಿದೆ ವಿವರ
ಇದನ್ನೂ ಓದಿ: Cyber Crime: ಸಾಮಾಜಿಕ ಜಾಲತಾಣದ ಮೂಲಕ ಮೋಸದ ಬಲೆ; ಎಚ್ಚರ ತಪ್ಪಿದರೆ ಅಪಾಯ ಖಚಿತ!
Published On - 9:37 pm, Mon, 4 October 21