ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಈಗಾಗಲೇ ಅನೇಕ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸಿದೆ. ಇದರ ಮುಂದುವರೆದ ಭಾಗವಾಗಿ ವಾಟ್ಸ್ಆ್ಯಪ್ನಲ್ಲಿ ಮುಂದಿನ ವರ್ಷ ಅಂದರೆ 2022 ರಲ್ಲಿ ಸಾಲು ಸಾಲು ಹೊಸ ಅಪ್ಡೇಟ್ಗಳು (WhatsApp Update) ಬರಲು ತಯಾರಾಗಿದೆ. ಹೌದು, ಮುಂದೆ ಬರಲಿರುವ ಹೊಸ ಫೀಚರ್ಗಳನ್ನು ವಾಟ್ಸ್ಆ್ಯಪ್ ಬೇಟಾಇನ್ಫೋ(WABetaInfo) ವೆಬ್‌ಸೈಟ್ ಗುರುತಿಸಿದೆ. ಈ ಕೆಲವು ಫೀಚರ್ಸ್ ವಾಟ್ಸ್ಆ್ಯಪ್ ಬೀಟಾ ಪ್ರೋಗ್ರಾಂ ನಲ್ಲಿ ದಾಖಲಾಗಿರುವ ಬಳಕೆದಾರರಿಗೆ ಲಭ್ಯವಿದ್ದರೆ, ಇನ್ನು ಕೆಲವು ಪ್ರಗತಿಯಲ್ಲಿದೆ. ಈ ಪೈಕಿ ಸಂದೇಶ ಪ್ರತಿಕ್ರಿಯೆಗಳು, ಸಮುದಾಯಗಳು (message reactions, communities) ಆಯ್ಕೆಗಳು ಸೇರಿದಂತೆ ಇನ್ನು ಕೆಲವು ಅನುಕೂಲಕರ ಆಯ್ಕೆಗಳನ್ನು ಪರಿಚಯಿಸಲು ವಾಟ್ಸ್ಆ್ಯಪ್ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.
ಸಮುದಾಯಗಳು (Communities): ಈ ಆಯ್ಕೆಯು ಗುಂಪುಗಳೊಳಗೆ ಗುಂಪುಗಳನ್ನು ರಚಿಸುವ ಆಯ್ಕೆಯನ್ನು ಒದಗಿಸುತ್ತದೆ ಮತ್ತು ಡಿಸ್ಕಾರ್ಡ್ ಸಮುದಾಯದ ಅಡಿಯಲ್ಲಿ ಜೋಡಿಸಲಾದ ಬಹು ಚಾನೆಲ್‌ಗಳಂತೆಯೇ ಕಾರ್ಯ ನಿರ್ವಹಿಸುತ್ತದೆ. ಉಪ-ಗುಂಪುಗಳನ್ನು ಅಂತ್ಯದಿಂದ ಕೊನೆಯವರೆಗೆ ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ಸ್ಪಷ್ಟವಾಗಿ, ಆಂಡ್ರಾಯ್ಡ್ ಬೀಟಾ ಅಪ್‌ಡೇಟ್ v2.21.25.17 ಗಾಗಿ ವಾಟ್ಸ್ಆ್ಯಪ್ನಲ್ಲಿ ವಿವರಗಳನ್ನು ಹುಡುಕಲು ಔಟ್‌ಲೆಟ್ ನಿರ್ವಹಿಸುತ್ತಿದೆ ಎನ್ನಲಾಗಿದೆ.
WaBetaInfo ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳ ಪ್ರಕಾರ ವಾಟ್ಸ್ಆ್ಯಪ್ ಶೀಘ್ರದಲ್ಲೇ ಫೇಸ್ಬುಕ್ನಲ್ಲಿರುವಂತೆಯೆ ಮೆಸೇಜ್ ರಿಯಾಕ್ಷನ್ ಫೀಚರ್ಸ್ ಅನ್ನು ಪರಿಚಯಿಸಲಿದೆ. ಈಗಾಗಲೇ ಇದರ ಪರೀಕ್ಷಾ ಹಂತಕೂಡ ಮುಕ್ತಾಯಗೊಂಡಿದ್ದು, ಮುಂದಿನ ಅಪ್ಡೇಟ್ನಲ್ಲಿ ಬಳಕೆದಾರರಿಗೆ ಸಿಗುವ ಅಂದಾಜಿದೆ. ಈಗಾಗಲೇ ಇನ್ಸ್ಟಾಗ್ರಾಮ್, ಫೇಸ್ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್ನಲ್ಲಿ ಇರುವಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಮೆಸೇಜ್ ರಿಯಾಕ್ಷನ್ ಫೀಚರ್ಸ್‌ಗಳನ್ನು ನೀಡುತ್ತಿವೆ. ಇದೇ ಕಾರಣಕ್ಕೆ ವಾಟ್ಸ್ಆ್ಯಪ್ ಕೂಡ ಸದ್ಯದಲ್ಲೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೆಸೇಜ್ ರಿಯಾಕ್ಷನ್ ಸೇರಿಸಲು ಸಿದ್ಧತೆ ನಡೆಸಿದೆ.
ಕಳೆದ ವರ್ಷ ವಾಟ್ಸ್ಆ್ಯಪ್ ಕಣ್ಮರೆಯಾಗುವ ಸಂದೇಶಗಳ ವೈಶಿಷ್ಟ್ಯವನ್ನು ಪರಿಚಯಿಸಿತು. ನಿರ್ದಿಷ್ಟ ಅವಧಿಯ ನಂತರ ಕಣ್ಮರೆಯಾಗುವ ಸಂದೇಶಗಳನ್ನು ಕಳುಹಿಸಲು ವೈಶಿಷ್ಟ್ಯವು ಬಳಕೆದಾರರಿಗೆ ಅನುಮತಿಸುತ್ತದೆ. ಬೀಟಾ ಅಪ್‌ಡೇಟ್‌ನೊಂದಿಗೆ, ಕಂಪನಿಯು ವೈಶಿಷ್ಟ್ಯಕ್ಕಾಗಿ 90 ದಿನಗಳು ಮತ್ತು 24 ಗಂಟೆಗಳ ಆಯ್ಕೆಗಳನ್ನು ಸೇರಿಸಿದೆ. ಇಲ್ಲಿಯವರೆಗೆ, ಕಣ್ಮರೆಯಾಗುವ ಸಂದೇಶಗಳನ್ನು 7 ದಿನಗಳ ನಂತರ ಸ್ವಯಂಚಾಲಿತವಾಗಿ ತೆಗೆದುಹಾಕಲಾಗುತ್ತದೆ.
ವಾಟ್ಸ್ಆ್ಯಪ್ನ ನಿರೀಕ್ಷಿತ ಫೀಚರ್ಸ್‌ಗಳಲ್ಲಿ ಇದು ಸಹ ಒಂದಾಗಿದೆ. ಈ ಆಯ್ಕೆಯಲ್ಲಿ ಆಯ್ದ ಬಳಕೆದಾರರಿಗೆ ಲಾಸ್ಟ್ ಸೀನ್ ಅನ್ನು ಮರೆಮಾಡುವ ಆಯ್ಕೆ ಇರಲಿದೆ ಎನ್ನಲಾಗಿದೆ. ಬಳಕೆದಾರರಿಗೆ ಈ ಹೊಸ ಆಯ್ಕೆಯು ಹೆಚ್ಚು ಉಪಯುಕ್ತ ಎನಿಸಲಿದೆ. ಪ್ರಸ್ತುತ, ಈ ಆಯ್ಕೆಯು ಬೀಟಾ ಪರೀಕ್ಷಾ ಹಂತದಲ್ಲಿದೆ. ಇನ್ನು ಸದ್ಯ ವಾಟ್ಸಾಪ್ ಕೇವಲ ಮೂರು ಆಯ್ಕೆಗಳನ್ನು ಒದಗಿಸುತ್ತದೆ ಅವು ಕ್ರಮವಾಗಿ ಪ್ರತಿಯೊಬ್ಬರೂ, ನನ್ನ ಸಂಪರ್ಕಗಳು ಮತ್ತು ಯಾರೂ ಇಲ್ಲ ಆಗಿವೆ. ನಾಲ್ಕನೇ ಆಯ್ಕೆ ಆಗಿ ಈ ಫೀಚರ್ಸ್ ಸೇರಲಿದೆ ಎನ್ನಲಾಗಿದೆ.
ಇದಾದ ನಂತರ ಹೊಸ ಉತ್ತಮ UI ನೊಂದಿಗೆ ಕಳುಹಿಸುವ ಮೊದಲು ಧ್ವನಿ ಸಂದೇಶಗಳನ್ನು ಕೇಳುವ ಸಾಧ್ಯತೆ. ಬಳಕೆದಾರರು ರೆಕಾರ್ಡ್ ಮಾಡಿದ ಧ್ವನಿ ಸಂದೇಶಗಳನ್ನು ಕಳುಹಿಸುವ ಮೊದಲು ಕೇಳಬಹುದು. ಕೊನೇಯದಾಗಿ ಕಾಂಟ್ಯಾಕ್ಟ್ ಕಾರ್ಡ್ (ಯಾರಾದರೂ ಅದರ ಮೇಲೆ ಟ್ಯಾಪ್ ಮಾಡಿದಾಗ ನಿಮ್ಮ ಹೆಸರು ಕಾಣಿಸಿಕೊಳ್ಳುವ ರೀತಿ) ಕೂಡ ಹೊಸ ವಿನ್ಯಾಸವನ್ನು ಪಡೆಯುತ್ತಿದೆ. ಕಾಣಿಸಿಕೊಂಡಿರುವ ಸ್ಕ್ರೀನ್‌ಶಾಟ್‌ಗಳು ವಾಟ್ಸ್ಆ್ಯಪ್ ಸಂಪರ್ಕದ ಹೆಸರಿನ ಪಕ್ಕದಲ್ಲಿರುವ ಮಾಹಿತಿ ಬಟನ್ ಅನ್ನು ಸರಿಸಿದೆ ಮತ್ತು ಪ್ರೊಫೈಲ್ ಚಿತ್ರವು ಇನ್ನು ಮುಂದೆ ಚೌಕವಾಗಿರುವುದಿಲ್ಲ ಎಂದು ತೋರಿಸುತ್ತದೆ.
ವಾಟ್ಸ್ಆ್ಯಪ್ ಬಳಕೆದಾರರು ಈ ಆಯ್ಕೆಯಲ್ಲಿ ಆಡಿಯೊ ಮೆಸೆಜ್‌ಗಳ ಪ್ಲೇಬ್ಯಾಕ್ ನಿಯಂತ್ರಣ ಮಾಡಬಹುದು ಎಂದು ವರದಿಯಾಗಿದೆ. ವಾಟ್ಸಾಪ್‌ಗೆ ಬರುವ ಆಡಿಯೊ ಸಂದೇಶಗಳನ್ನು ವೇಗವಾಗಿ ಕೇಳುವ ಆಯ್ಕೆ ಇರಲಿದ್ದು, 1.5X ಮತ್ತು 2X ಪ್ಲೇಬ್ಯಾಕ್ ವೇಗಗಳ ನಡುವೆ ಆಯ್ಕೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಪ್ಲೇಬ್ಯಾಕ್ ವೇಗವನ್ನು ನಿಧಾನಗೊಳಿಸುವ ಆಯ್ಕೆಯನ್ನು ಮುಂದೆ ಸೇರಿಸಬಹುದು.
Moto Edge X30: ರಿಲೀಸ್ ಆದ ಒಂದೇ ದಿನದಲ್ಲಿ ಸೋಲ್ಡ್ ಔಟ್: ಈ ಹೊಸ ಸ್ಮಾರ್ಟ್ಫೋನ್ನಲ್ಲಿ ಅಂಥದ್ದೇನಿದೆ ನೋಡಿ
(WhatsApp few features that the rumour mill is talking about and are expected to release in 2022)