Moto Edge X30: ರಿಲೀಸ್ ಆದ ಒಂದೇ ದಿನದಲ್ಲಿ ಸೋಲ್ಡ್ ಔಟ್: ಈ ಹೊಸ ಸ್ಮಾರ್ಟ್​ಫೋನ್​ನಲ್ಲಿ ಅಂಥದ್ದೇನಿದೆ ನೋಡಿ

ವಿಶೇಷ ಎಂದರೆ ಮೋಟೋ ಎಡ್ಜ್ ಎಕ್ಸ್​​30 ಬಿಡುಗಡೆ ಆದ ಒಂದೇ ದಿನದಲ್ಲಿ ಎಲ್ಲ ಪ್ರೀ ಆರ್ಡರ್ ಸೋಲ್ಡ್ ಔಟ್ ಆಗಿದೆ. ಡಿಸೆಂಬರ್ 15 ರಿಂದ ಈ ಸ್ಮಾರ್ಟ್​ಫೋನ್ ಚೀನಾದಲ್ಲಿ ಖರೀದಿಗೆ ಸಿಗಲಿದೆ. ಈ ಫೋನ್ 144Hz OLED ಡಿಸ್‌ಪ್ಲೇ ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದಿರುವುದು ಪ್ಲಸ್‌ ಪಾಯಿಂಟ್. ಜೊತೆಗೆ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.

Moto Edge X30: ರಿಲೀಸ್ ಆದ ಒಂದೇ ದಿನದಲ್ಲಿ ಸೋಲ್ಡ್ ಔಟ್: ಈ ಹೊಸ ಸ್ಮಾರ್ಟ್​ಫೋನ್​ನಲ್ಲಿ ಅಂಥದ್ದೇನಿದೆ ನೋಡಿ
Moto Edge X30
Follow us
TV9 Web
| Updated By: Vinay Bhat

Updated on: Dec 11, 2021 | 2:16 PM

ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಮೋಟೋರೊಲಾ (Motorola) ಕಂಪನಿ ಈಗೀಗ ಫೋನ್​ಗಳನ್ನು ಹೆಚ್ಚು ಉತ್ಪಾದಿಸುತ್ತಿದೆ. ಅದರಲ್ಲೂ ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು (Smartphone) ಪರಿಚಯಿಸಿ ಭದ್ರವಾಗಿ ನೆಲೆಯೂರಲು ಪ್ರಯತ್ನ ಪಡುತ್ತಿದೆ. ಈ ಪೈಕಿ ಶುಕ್ರವಾರ ಮೋಟೋರೊಲಾ ಕಂಪನಿ ಮೋಟೋ ಎಡ್ಜ್ ಎಕ್ಸ್​​30 (Moto Edge X30) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ವಿಶೇಷ ಎಂದರೆ ಈ ಫ್ಲ್ಯಾಗ್‌ಶಿಫ್ ಫೋನ್ ಬಿಡುಗಡೆ ಆದ ಒಂದೇ ದಿನದಲ್ಲಿ ಎಲ್ಲ ಪ್ರೀ ಆರ್ಡರ್ ಸೋಲ್ಡ್ ಔಟ್ ಆಗಿದೆ. ಡಿಸೆಂಬರ್ 15 ರಿಂದ ಈ ಸ್ಮಾರ್ಟ್​ಫೋನ್ ಚೀನಾದಲ್ಲಿ ಖರೀದಿಗೆ ಸಿಗಲಿದೆ. ಈ ಫೋನ್ 144Hz OLED ಡಿಸ್‌ಪ್ಲೇ ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದಿರುವುದು ಪ್ಲಸ್‌ ಪಾಯಿಂಟ್. ಜೊತೆಗೆ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.

ಏನು ವಿಶೇಷತೆ?:

ಮೋಟೋ ಎಡ್ಜ್ X30 ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.8 ಇಂಚಿನ ಫುಲ್ HD+ POLED ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 ಜೆನ್‌ 1 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 12 ಓಎಸ್‌ ಕಾರ್ಯನಿರ್ವಹಿಸುತ್ತದೆ. ಈ ಫೋನ್‌ ಮೂರು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 8GB RAM + 128GB, 8GB RAM + 128GB ಮತ್ತು 12GB + 256GB ಸಾಮರ್ಥ್ಯದಲ್ಲಿವೆ.

ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 60 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಈ ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, 68W ಟರ್ಬೋ ಪವರ್ ವೇಗದ ಚಾರ್ಜಿಂಗ್ ಬೆಂಬಲ ಒಳಗೊಂಡಿದೆ. ಉಳಿದಂತೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವು CNY 3,199 (ಸುಮಾರು ರೂ. 38,000) ಆಗಿದೆ. 8GB + 256GB ಮತ್ತು 12GB + 256GB ಮಾಡೆಲ್‌ಗಳು ಇದ್ದು, ಇವುಗಳ ಬೆಲೆ ಕ್ರಮವಾಗಿ CNY 3,399 (ಸುಮಾರು ರೂ. 40,400) ಮತ್ತು CNY 3,599 (ಸುಮಾರು ರೂ. 42,800) ಆಗಿವೆ.

Best Gaming Smartphone: ಗೇಮಿಂಗ್ ಪ್ರಿಯರೇ ಗಮನಿಸಿ: ಕೇವಲ 15000 ರೂ. ಒಳಗೆ ಸಿಗುತ್ತಿದೆ ಈ ಬೆಸ್ಟ್ ಗೇಮಿಂಗ್ ಸ್ಮಾರ್ಟ್​ಫೋನ್

(Moto Edge X30 pre-sales for the flagship smartphone Moto Edge X30 have now been closed)