ವಿಶ್ವದಲ್ಲಿ ಇಂದು ಅತಿ ಹೆಚ್ಚು ಜನರು ಉಪಯೋಗಿಸುತ್ತಿರುವ ನಂಬರ್ ಒನ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದೆ. ಈ ಆ್ಯಪ್ಗೆ ಕೇವಲ ಭಾರತದಲ್ಲೇ ಸುಮಾರು 550 ಮಿಲಿಯನ್ ಬಳಕೆದಾರರಿದ್ದಾರೆ. ಕ್ಷಣಾರ್ಧದಲ್ಲಿ ಸಂದೇಶಗಳ ಮೂಲಕ ಮಾತುಕತೆ ನಡೆಸಲು ಉಪಯೋಗಿಸುವ ವಾಟ್ಸ್ಆ್ಯಪ್ ಸಾಲು ಸಾಲು ಫೀಚರ್ಗಳನ್ನು ಕೂಡ ಪರಿಚಯಿಸುತ್ತದೆ. ಸಾಮಾನ್ಯವಾಗಿ ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾಡಬಹುದು ಆದರೆ, ಎಡಿಟ್ ಮಾಡುವಂತಹ ಆಯ್ಕೆ ಇಲ್ಲ. ಆದರೀಗ ಮೆಟಾ ಒಡೆತನದ ಈ ಆ್ಯಪ್ ”ಎಡಿಟ್ ಸೆಂಟ್ ಮೆಸೇಜ್” (Edit Sent Message) ಎಂಬ ನೂತನ ಅಪ್ಡೇಟ್ ಪರಿಚಯಿಸಿದೆ.
ಎಡಿಟ್ ಸೆಂಟ್ ಮೆಸೇಜ್ ಆಯ್ಕೆಯ ಮೂಲಕ ಕಳುಹಿಸದ ಮೆಸೇಜ್ ಅನ್ನು ಎಡಿಟ್ (Edit Message) ಮಾಡಬಹುದಾಗಿದೆ. ಈಗಾಗಲೇ ಈ ಆಯ್ಕೆ ಆಯ್ದ ಆಂಡ್ರಾಯ್ಡ್ ಬೇಟಾ ವರ್ಷನ್ ವಾಟ್ಸ್ಆ್ಯಪ್ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಇದರ ಮೂಲಕ ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ. ಆದರೆ, ಇದಕ್ಕೆ 15 ನಿಮಿಷಗಳ ಕಾಲವಕಾಶ ಮಾತ್ರ ಇರುತ್ತದೆ. ಪ್ರಸ್ತುತ, ವಾಟ್ಸ್ಆ್ಯಪ್ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾತ್ರ ಮಾಡಬಹುದು, ಆದರೆ ಎಡಿಟ್ ಮಾಡಲು ಸಾಧ್ಯವಿಲ್ಲ. ಈ ವೈಶಿಷ್ಟ್ಯವನ್ನು ಬಳಸಿ ಮೆಸೇಜ್ ಕಳುಹಿಸಿದ ನಂತರ ಅವುಗಳನ್ನು ಎಡಿಟ್ ಮಾಡಲು ಸಾಧ್ಯವಾಗಿಸುತ್ತದೆ.
Redmi K50i: ಕಳೆದ ವರ್ಷ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಈ ರೆಡ್ಮಿ ಸ್ಮಾರ್ಟ್ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ
ಇಲ್ಲಿ ಗಮನಿಸ ಬೇಕಾದ ಸಂಗತಿ ಎಂದರೆ, ವಾಟ್ಸ್ಆ್ಯಪ್ನಲ್ಲಿ ನೀವು ಮೆಸೇಜ್ ಅನ್ನು ಡಿಲೀಟ್ ಮಾಡಿದರೆ ಹೇಗೆ ಚಾಟ್ನಲ್ಲಿ ಮಾಹಿತಿ ನೀಡುತ್ತದೆಯೊ ಅದೇರೀತಿ ಎಡಿಟ್ ಮಾಡಿದರೆ ಕೂಡ ಕಳುಹಿಸಿದವರಿಗೆ ತಿಳಿಯುತ್ತದೆ. ಈ ಎಡಿಟ್ ಬಟನ್ ವೈಶಿಷ್ಟ್ಯದ ಮೇಲೆ ವಾಟ್ಸ್ಆ್ಯಪ್ ಐದು ವರ್ಷಗಳ ಹಿಂದೆಯೇ ಗಮನಹರಿಸಲು ಆರಂಭಿಸಿದ್ದರೂ ಟ್ವಿಟರ್ನಲ್ಲಿ ಈ ಕುರಿತು ವರದಿ ಬಂದ ಬೆನ್ನಿಗೆ ಅದನ್ನು ಕೈಬಿಟ್ಟಿತ್ತು.
ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ತಮಗೆ ಬೇಕಾದ ಚಾಟ್ ಅನ್ನು ಲಾಕ್ ಮಾಡಬಹುದು ಅಥವಾ ಹೈಡ್ (Hide) ಮಾಡಬಹುದು ಎಂದು ಹೇಳಿದೆ. ಈ ಆಯ್ಕೆ ಚಾಟ್ನ ಕಾಂಟೆಕ್ಟ್ ಅಥವಾ ಗ್ರೂಪ್ನ ಇನ್ಫೋದಲ್ಲಿ ಇರುತ್ತದೆ. ಇದನ್ನು ಆ್ಯಕ್ಟಿವ್ ಮಾಡಿದ ತಕ್ಷಣ ಆ ಚಾಟ್ ಹೈಡ್ ಆಗಿ ಹೊಸ ಸೆಕ್ಷನ್ಗೆ ಹೋಗುತ್ತದೆ. ಸದ್ಯಕ್ಕೆ ಈ ಫೀಚರ್ಸ್ ಅಭಿವೃದ್ಧಿ ಹಂತದಲ್ಲಿದೆ. ಆಂಡ್ರಾಯ್ಡ್ ಬೀಟಾ ಆವೃತ್ತಿಯ 2.23.8.2 ಅಪ್ಡೇಟ್ನಲ್ಲಿ ಪರೀಕ್ಷಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮೊದಲಿಗೆ ಆಂಡ್ರಾಯ್ಡ್ ಬಳಕೆದಾರರು ಈ ಫೀಚರ್ಸ್ ಅನ್ನು ಬಳಕೆ ಮಾಡಬಹುದು ಎಂದು ತಿಳಿದುಬಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ