ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಅಪ್ಲೆಕೇಶನ್ ಅನ್ನು ಇಂದು ಅನೇಕರು ಬಳಕೆ ಮಾಡುತ್ತಿದ್ದು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಜನರು ತಮ್ಮ ವೈಯಕ್ತಿಕ ವಿಚಾರಗಳನ್ನು ಕೂಡ ಇದರಲ್ಲಿ ಹಂಚಿಕೊಳ್ಳುತ್ತಾರೆ. ಆದರೆ, ಕೆಲವೊಂದು ತೀರಾ ವೈಯಕ್ರಿವಾದ ವಿಷಯಗಳನ್ನು ಯಾರಿಗೂ ಕಾಣದಂರೆ ಹೈಡ್ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಈ ಆಯ್ಕೆಯನ್ನ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ನೇರವಾಗಿ ನೀಡಲ್ಲ. ಬದಲಾಗಿ ಮತ್ತೊಂದು ವಿಧಾನದಿಂದ ತಮ್ಮ ಚಾಟ್ ಗಳನ್ನು ಹೈಡ್ ಮಾಡುವುದಕ್ಕೆ ಅವಕಾಶವಿದೆ. ಅದುವೇ ಆರ್ಕೈವ್ ಚಾಟ್ ಆಯ್ಕೆ.
ಈ ಫೀಚರ್ ಮುಖಾಂತರ ನೀವು ನಿಮ್ಮ ಚಾಟ್ ಸ್ಕ್ರೀನ್ ಅನ್ನು ಹೈಡ್ ಮಾಡಬಹುದು ಮತ್ತು ಕೆಲವು ಸಮಯದ ನಂತರ ನಿಮಗೆ ಅಗತ್ಯವಿದ್ದಾಗ ಆ ಚಾಟಿನ ಮಾತುಕತೆಗಳನ್ನು ಅನ್ಹೈಡ್ ಮಾಡಿ ನೋಡುವುದಕ್ಕೂ ಅವಕಾಶವಿರುತ್ತದೆ. ಕೇವಲ ನಿಮ್ಮ ವೈಯಕ್ತಿಕ ಚಾಟ್ ಮಾತ್ರವಲ್ಲದೆ ಗ್ರೂಪ್ ಚಾಟ್ ಎರಡನ್ನೂ ಕೂಡ ಆರ್ಕೈವ್ ಮಾಡುವುದಕ್ಕೆ ಈ ಫೀಚರ್ ನಲ್ಲಿ ಅವಕಾಶವಿರುತ್ತದೆ.
ಆರ್ಕೈವ್ ಚಾಟ್ ನಿಮ್ಮ ಚಾಟ್ ಅನ್ನು ಡಿಲೀಟ್ ಮಾಡುವುದಿಲ್ಲ ಅಥವಾ ಎಸ್ ಡಿ ಕಾರ್ಡ್ ನಲ್ಲಿ ಬ್ಯಾಕ್ ಅಪ್ ಕೂಡ ಮಾಡುವುದಿಲ್ಲ. ಹಾಗಾದ್ರೆ ಈ ಫೀಚರ್ ಅನ್ನು ಬಳಕೆ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ಆಂಡ್ರಾಯ್ಡ್ನಲ್ಲಿ ಆರ್ಕೈವ್ ಚಾಟ್ ಮಾಡುವುದು ಹೇಗೆ?
ವಾಟ್ಸ್ಆ್ಯಪ್ ಅನ್ನು ತೆರೆದು ಚಾಟ್ ಸ್ಕ್ರೀನಿನಲ್ಲಿ, ನೀವು ಹೈಡ್ ಮಾಡಬೇಕೆಂದು ಬಯಸುವ ಚಾಟ್ ಅನ್ನು ಟ್ಯಾಪ್ ಮಾಡಿ ಮತ್ತು ಹೋಲ್ಡ್ ಮಾಡಿ. ಮೇಲ್ಬಾಗದ ಬಾರ್ ನಲ್ಲಿ ಆರ್ಕೈವ್ ಐಕಾನ್ ಅನ್ನು ಸೆಲೆಕ್ಟ್ ಮಾಡಿ. ಇದೀಗ ಚಾಟ್ ಆರ್ಕೈವ್ ಆಗುತ್ತದೆ ಮತ್ತು ನೀವು ನಿಮ್ಮ ಚಾಟ್ ಸ್ಕ್ರೀನಿನಲ್ಲಿ ನೋಡುವುದಕ್ಕೆ ಸಾಧ್ಯವಿಲ್ಲ. ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ನೀವು ಚಾಟ್ ಸ್ಕ್ರೀನಿನ ಕೆಳಭಾಗದಲ್ಲಿ ಎಲ್ಲಾ ಆರ್ಕೈವ್ ಆಗಿರುವ ಚಾಟ್ ಗಳನ್ನು ಹುಡುಕಬಹುದು.
ಐಫೋನಿನಲ್ಲಿ ಆರ್ಕೈವ್ ಚಾಟ್ ಮಾಡುವುದು ಹೇಗೆ?
ವಾಟ್ಸ್ಆಪ್ ಅನ್ನು ತೆರೆಯಿರಿ ಮತ್ತು ಚಾಟ್ ಸ್ಕ್ರೀನಿನಲ್ಲಿ ನೀವು ಆರ್ಕೈವ್ ಮಾಡಬೇಕು ಎಂದಿರುವ ಚಾಟಿನಲ್ಲಿ ಬಲದಿಂದ ಎಡಕ್ಕೆ ನಿಮ್ಮ ಬೆರಳನ್ನು ಸ್ಲೈಡ್ ಮಾಡಿ. ಆರ್ಕೈವ್ ಅನ್ನು ಟ್ಯಾಪ್ ಮಾಡಿ. ಐಫೋನಿನಲ್ಲಿ ಆರ್ಕೈವ್ ಚಾಟ್ ಅನ್ನು ನೋಡುವುದಕ್ಕೆ ಮೇಲ್ಬಾಗವನ್ನು ಸ್ಕ್ರೋಲ್ ಮಾಡಿ ಮತ್ತು ನಂತರ ಕೆಳಭಾಗಕ್ಕೆ ಪುಲ್ ಮಾಡಿ.
ಆರ್ಕೈವ್ ಆಗಿರುವ ಚಾಟ್ ಅನ್ನು ಅನ್ ಆರ್ಕೈವ್ ಮಾಡುವುದು ಹೇಗೆ?
ಆಂಡ್ರಾಯ್ಡ್ ನಲ್ಲಿ ಚಾಟ್ ಅನ್ನು ಅನ್ ಆರ್ಕೈವ್ ಮಾಡಲು ಚಾಟ್ ಸ್ಕ್ರೀನ್ ನ್ನು ಸ್ಕ್ರೋಲ್ ಡೌನ್ ಮಾಡಿ. ಆರ್ಕೈವ್ಡ್ ಚಾಟ್ಸ್ ಅನ್ನು ಟ್ಯಾಪ್ ಮಾಡಿ. ನೀವು ಅನ್ ಆರ್ಕೈವ್ ಮಾಡಬೇಕು ಎಂದುಕೊಂಡಿರುವ ಚಾಟ್ ಅನ್ನು ಟ್ಯಾಪ್ ಮಾಡಿ ಮತ್ತು ಹೋಲ್ಡ್ ಮಾಡಿ. ಟಾಪ್ ಬಾರ್ ನಲ್ಲಿ ಅನ್ ಆರ್ಕೈವ್ ನ್ನು ಸೆಲೆಕ್ಟ್ ಮಾಡಿದರೆ ಆಯಿತು.
ಇನ್ನೂ ಶಾಶ್ವತವಾಗಿ ವಾಟ್ಸ್ಆ್ಯಪ್ ಚಾಟ್ ಅನ್ನು ಹೈಡ್ ಮಾಡಲು ಕೀಪ್ ಚಾಟ್ಸ್ ಆರ್ಕೈವ್ ಎಂಬ ಆಯ್ಕೆ ನೀಡಲಾಗಿದೆ. ಇದಕ್ಕಾಗಿ ನೀವು ವಾಟ್ಸ್ಆ್ಯಪ್ನಲ್ಲಿರುವ ಸೆಟ್ಟಿಂಗ್ಸ್ಗೆ ಹೋಗಿ ಚಾಟ್ಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ಇಲ್ಲಿ ಆರ್ಕೈವ್ ಚಾಟ್ಸ್ ನಂತರ ಕೀಪ್ ಚಾಟ್ಸ್ ಆರ್ಕೈವ್ ಎಂಬುದನ್ನು ಸೆಲೆಕ್ಟ್ ಮಾಡಿದರೆ ಆಯಿತು. ಹೀಗೆ ಮಾಡಿದರೆ ನೀವು ಆಯ್ಕೆ ಮಾಡಿದ ಚಾಟ್ ಶಾಶ್ವತವಾಗಿ ಹೈಡ್ ಆಗಿರುತ್ತದೆ. ಬೇಡ ಎಂದಾದರೆ ಡಿಸೇಬಲ್ ಆಯ್ಕೆ ಸೆಲೆಕ್ಟ್ ಮಾಡಿ.
Moto G60S: 6000mAh ಬ್ಯಾಟರಿ, 50W ಟರ್ಬೋ ಚಾರ್ಜ್: ಮೋಟೋದಿಂದ ಜಿ60ಎಸ್ ಫೋನ್ ಬಿಡುಗಡೆ: ಬೆಲೆ?
Samsung Galaxy: ಮಡಚಿದರೆ ಫೋನ್, ಬಿಡಿಸಿದರೆ ಸ್ಮಾರ್ಟ್ಫೋನ್: ಇದು ಸ್ಯಾಮ್ಸಂಗ್ನ ಹೊಸ ಮೊಬೈಲ್
(WhatsApp: How to permanently hide chats on WhatsApp Here is the tricks)