Samsung Galaxy: ಮಡಚಿದರೆ ಫೋನ್‌, ಬಿಡಿಸಿದರೆ ಸ್ಮಾರ್ಟ್​ಫೋನ್: ಇದು ಸ್ಯಾಮ್​ಸಂಗ್​ನ ಹೊಸ ಮೊಬೈಲ್

Samsung Galaxy Z Fold 3, Galaxy Z Flip 3: ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 ಸ್ಮಾರ್ಟ್‌ಫೋನ್ 6.7 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಈ ಫೋನಿನಲ್ಲಿ Qualcomm Snapdragon 888 ಪ್ರೊಸೆಸರ್ ಅಳವಡಿಸಲಾಗಿದೆ.

Samsung Galaxy: ಮಡಚಿದರೆ ಫೋನ್‌, ಬಿಡಿಸಿದರೆ ಸ್ಮಾರ್ಟ್​ಫೋನ್: ಇದು ಸ್ಯಾಮ್​ಸಂಗ್​ನ ಹೊಸ ಮೊಬೈಲ್
Samsung Galaxy
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 12, 2021 | 7:47 PM

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಸ್ಯಾಮ್​ಸಂಗ್​ನ (Samsung Galaxy) ಮಡಚುವ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ. ಗ್ಯಾಲಕ್ಸಿ Z ಫೋಲ್ಡ್ 3 (Samsung Galaxy Z Fold 3), ಗ್ಯಾಲಕ್ಸಿ Z ಫ್ಲಿಪ್ 3 (Galaxy Z Flip 3) ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸಲಾಗಿದ್ದು, ಇದರ ಜೊತೆಗೆ ಗ್ಯಾಲಕ್ಸಿ ವಾಚ್ 4 ಸರಣಿಯ ಸ್ಮಾರ್ಟ್ ವಾಚ್‌ಗಳು ಮತ್ತು ಗ್ಯಾಲಕ್ಸಿ ಬಡ್ಸ್ 2 ಅನ್ನು ಸಹ ಸ್ಯಾಮ್‌ಸಂಗ್ ಅನ್‌ಪ್ಯಾಕ್ಡ್ 2021 ಸಮಾರಂಭದಲ್ಲಿ ಅನಾವರಣಗೊಳಿಸಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 3 ವಿಶೇಷತೆಗಳು ಮತ್ತು ಬೆಲೆ: ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 3 ಫೋಲ್ಡಬಲ್ ಸ್ಮಾರ್ಟ್‌ಫೋನ್​ನಲ್ಲಿ 7.6 ಇಂಚಿನ ಪ್ರೈಮರಿ QXGA + ಡೈನಾಮಿಕ್ ಸ್ಕ್ರೀನ್ ನೀಡಲಾಗಿದೆ. ಈ ಫೋನಿನಲ್ಲಿ Qualcomm Snapdragon 888 ಪ್ರೊಸೆಸರ್ ಅಳವಡಿಸಲಾಗಿದೆ. ಇದರ ಸ್ಕ್ರೀನ್ ರೆಸಲ್ಯೂಶನ್ 2,208 x 1,768 ಪಿಕ್ಸೆಲ್‌ಗಳು. ಹಾಗೆಯೇ ಇದರಲ್ಲಿರುವ ಸೆಕೆಂಡರಿ ಸ್ಕ್ರೀನ್ 6.23 ಇಂಚುಗಳನ್ನು ಹೊಂದಿದೆ. ಇದು 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದರಲ್ಲಿ 12 mp ಎರಡು ಕ್ಯಾಮೆರಾ ಹಾಗೂ 10mpಯ ಕ್ಯಾಮೆರಾವನ್ನು ಹಿಂಬದಿಯಲ್ಲಿ ನೀಡಲಾಗಿದೆ. ಹಾಗೆಯೇ 4mp ಯ ಮತ್ತೊಂದು ಕ್ಯಾಮೆರಾ ಮುಂಭಾಗದಲ್ಲಿದೆ. ಇನ್ನು 4,400mAh ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದೆ. ಫ್ಯಾಂಟಮ್ ಗ್ರೀನ್, ಫ್ಯಾಂಟಮ್ ಸಿಲ್ವರ್ ಮತ್ತು ಫ್ಯಾಂಟಮ್ ಬ್ಲಾಕ್ ಬಣ್ಣಗಳಲ್ಲಿ ಈ ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆಲೆಯನ್ನು 1,799.99 ಡಾಲರ್. ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 1,33,000 ರೂ. ಇರಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 ವಿಶೇಷತೆಗಳು: ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 ಸ್ಮಾರ್ಟ್‌ಫೋನ್ 6.7 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಈ ಫೋನಿನಲ್ಲಿ Qualcomm Snapdragon 888 ಪ್ರೊಸೆಸರ್ ಅಳವಡಿಸಲಾಗಿದೆ. ಇದು 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಫೋಟೋಗ್ರಫಿಗಾಗಿ, ಈ ಫೋನ್ 12 ಮೆಗಾಪಿಕ್ಸೆಲ್​ನ ಎರಡು ಪ್ರೈಮರಿ ಕ್ಯಾಮೆರಾ ಹಾಗೂ ಸೆಲ್ಫಿಗಾಗಿ 10 ಮೆಗಾಪಿಕ್ಸೆಲ್​ನ ಒಂದು ಕ್ಯಾಮೆರಾ ಇದರಲ್ಲಿದೆ. ಇನ್ನು 3,300mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ನೀಡಲಾಗಿದೆ. ಇದರ ಆರಂಭಿಕ ಬೆಲೆ 999.99 ಡಾಲರ್. ಅಂದರೆ ಭಾರತದಲ್ಲಿ ಸುಮಾರು 74,200 ರೂ.ನಲ್ಲಿ ಖರೀದಿಗೆ ಲಭ್ಯವಿರಲಿದೆ.

ಇದನ್ನೂ ಓದಿ: ಇಂಟರ್‌ನೆಟ್‌ ಸೇವೆಗೆ ಟಾಟಾ ಸಜ್ಜು: ನೆಟ್​ವರ್ಕ್ ಇಲ್ಲದೆಯೂ ಸಿಗಲಿದೆ ಅಂತರ್ಜಾಲ ಸೇವೆ

ಇದನ್ನೂ ಓದಿ: Health Tips : ಇದು ನಿಮಗೆ ಗೊತ್ತೇ? ಬೆಳ್ಳುಳ್ಳಿ ಸಿಪ್ಪೆಯಿಂದ ಸಿಗುತ್ತೆ ಹಲವು ಪ್ರಯೋಜನಗಳು

ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್