WhatsApp: ವಾಟ್ಸ್​ಆ್ಯಪ್​ನಿಂದ ಬಹುಬೇಡಿಕೆಯ ಫೀಚರ್: ಸ್ಟೇಟಸ್​ನಲ್ಲಿ ವಿಶೇಷ ಆಯ್ಕೆಯ ಹೊಸ ಅಪ್ಡೇಟ್

WhatsApp New 'Undo' Feature: ವಾಬೇಟಾಇನ್ಫೋ ವರದಿಯ ಪ್ರಕಾರ, ವಾಟ್ಸ್​ಆ್ಯಪ್​​​ ಅಂಡೂ ರೀಡೂ ಬಟನ್‌ ಪರಿಚಯಿಸುವುದಕ್ಕೆ ಮುಂದಾಗಿದೆ. ಇದಲ್ಲದೆ ವಾಟ್ಸ್​ಆ್ಯಪ್​​​ ಸ್ಟೇಟಸ್‌ ಅಪ್ಡೇಟ್‌ ಮಾಡುವಾಗ ಇಮೇಜ್‌ ರದ್ದುಗೊಳಿಸುವ ಬಟನ್‌ ಪರಿಚಯಿಸುವುದಕ್ಕೆ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ.

WhatsApp: ವಾಟ್ಸ್​ಆ್ಯಪ್​ನಿಂದ ಬಹುಬೇಡಿಕೆಯ ಫೀಚರ್: ಸ್ಟೇಟಸ್​ನಲ್ಲಿ ವಿಶೇಷ ಆಯ್ಕೆಯ ಹೊಸ ಅಪ್ಡೇಟ್
WhatsApp
Follow us
TV9 Web
| Updated By: Vinay Bhat

Updated on: Oct 25, 2021 | 2:34 PM

ಫೇಸ್​ಬುಕ್ (Facebook) ಮಾಲೀಕತ್ವದ ವಾಟ್ಸ್​ಆ್ಯಪ್​​​ (WhatsApp) ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಶೇರ್‌ ಮಾಡಲಾದ ಇಮೇಜ್‌ಗಳನ್ನು ಎಡಿಟ್‌ ಇಲ್ಲವೇ ರದ್ದುಗೊಳಿಸುವುದಕ್ಕೆ ಅವಕಾಶ ನೀಡುವುದಕ್ಕೆ ಮುಂದಾಗಿದೆ. ಹೌದು, ವಾಟ್ಸ್​ಆ್ಯಪ್​​​ನಲ್ಲಿ ಹಂಚಿಕೊಳ್ಳುತ್ತಿರುವ ಚಿತ್ರಗಳನ್ನು ಎಡಿಟ್ ಮಾಡಲು ಅನ್​ಡೂ ಮತ್ತು ರಿಡೋ ಬಟನ್​ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ (WhatsApp’s New ‘Undo’ Feature) ಎಂದು ತಿಳಿದುಬಂದಿದೆ. ಕಂಪನಿಯು ಮುಂದಿನ ದಿನಗಳಲ್ಲಿ ಈ ಫೀಚರ್ಸ್ ಅನ್ನು ಎಲ್ಲಾ ಬಳಕೆದಾರರಿಗೆ ಸಿಗುವಂತೆ  ಮಾಡಲಿದೆ.

ವಾಬೇಟಾಇನ್ಫೋ ವರದಿಯ ಪ್ರಕಾರ, ವಾಟ್ಸ್​ಆ್ಯಪ್​​​ ಅಂಡೂ ರೀಡೂ ಬಟನ್‌ ಪರಿಚಯಿಸುವುದಕ್ಕೆ ಮುಂದಾಗಿದೆ. ಇದಲ್ಲದೆ ವಾಟ್ಸ್​ಆ್ಯಪ್​​​ ಸ್ಟೇಟಸ್‌ ಅಪ್ಡೇಟ್‌ ಮಾಡುವಾಗ ಇಮೇಜ್‌ ರದ್ದುಗೊಳಿಸುವ ಬಟನ್‌ ಪರಿಚಯಿಸುವುದಕ್ಕೆ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಇಲ್ಲಿ ನೀವು ಹಂಚಿಕೊಂಡ ಸ್ಟೇಟಸ್‌ ಅನ್ನು ಮತ್ತೆ ಪಡೆಯುವುದಕ್ಕೆ ಅವಕಾಶ ನೀಡಲಿದೆ. ಜೊತೆಗೆ ಆಕಸ್ಮಿಕವಾಗಿ ಪೋಸ್ಟ್ ಮಾಡಿರುವ ಸ್ಟೇಟಸ್ ಅಪ್‌ಡೇಟ್ ಅನ್ನು ತ್ವರಿತವಾಗಿ ಡಿಲೀಟ್ ಮಾಡಲು ಸಹಾಯ ಮಾಡುವ ಫೀಚರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ವಾಟ್ಸ್​ಆ್ಯಪ್​​ ಈಗಾಗಲೇ ತಮ್ಮ ಸ್ಟೇಟಸ್ ಅಪ್ಡೇಟ್​ಗಳನ್ನು ಅಳಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಿದೆ. ಆದಾಗ್ಯೂ, ಹೊಸ ರದ್ದುಗೊಳಿಸುವ ಬಟನ್ ಈ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಬಳಕೆದಾರರು ರದ್ದುಗೊಳಿಸುವ ಗುಂಡಿಯನ್ನು ವೇಗವಾಗಿ ಪ್ರವೇಶಿಸುವಂತೆ ಮಾಡುತ್ತದೆ. Android ಆವೃತ್ತಿ 2.21.22.6 ಗಾಗಿ WhatsApp ಬೀಟಾದ ಭಾಗವಾಗಿ WhatsApp ಸ್ಟೇಟಸ್ ರದ್ದುಗೊಳಿಸುವ ಬಟನ್ ಲಭ್ಯವಿದೆ. ಆದಾಗ್ಯೂ, ನಿರ್ದಿಷ್ಟ ಬೀಟಾ ಪರೀಕ್ಷಕರು Android ಆವೃತ್ತಿ 2.21.22.5 ಗಾಗಿ WhatsApp ಬೀಟಾದಲ್ಲಿ ಈ ವೈಶಿಷ್ಟ್ಯಕ್ಕೆ ಪ್ರವೇಶವನ್ನು ಪಡೆಯಬಹುದು.

ಇನ್ನು ವಾಟ್ಸ್​ಆ್ಯಪ್​​ ಶೀಘ್ರದಲ್ಲೇ ಪರಿಚಯಿಸಲಿರುವ ಫೀಚರ್ಸ್‌ಗಳಲ್ಲಿ ನ್ಯೂ ನೋಟ್ಸ್‌ ಫೀಚರ್‌ ಕೂಡ ಒಂದಾಗಿದೆ. ಇದಕ್ಕಾಗಿ “ಜಾಗತಿಕ ವಾಯ್ಸ್‌ ಮೆಸೇಜ್‌ ಪ್ಲೇಯರ್” ನಲ್ಲಿ ಕೆಲಸ ಮಾಡುತ್ತಿದೆ. ಇದು ಬಳಕೆದಾರರಿಗೆ ಚಾಟ್ ಬಿಟ್ಟ ನಂತರವೂ ವಾಯ್ಸ್‌ ಮೆಸೇಜ್‌ಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಬಳಕೆದಾರರು ವಾಯ್ಸ್‌ ಮೆಸೇಜ್‌ ಅನ್ನು ಪ್ಲೇ ಮಾಡಿದ ನಂತರ, ಆ ಚಾಟ್ ಅನ್ನು ತೊರೆದ ನಂತರವೂ ಮೇನ್‌ ಅಪ್ಲಿಕೇಶನ್‌ನ ಮೇಲ್ಭಾಗಕ್ಕೆ ವಾಯ್ಸ್‌ ಮೆಸೇಜ್‌ಗಳನ್ನು ಪಿನ್ ಮಾಡುತ್ತದೆ. ಅಲ್ಲದೆ ನೀವು ವಾಯ್ಸ್‌ ಮೆಸೇಜ್‌ ಅನ್ನು ಕೇಳುವಾಗಲೂ ಇತರ ಕಂಟ್ಯಾಕ್ಟ್‌ಗಳಿಗೆ ಮೆಸೇಜ್‌ ಕಳುಹಿಸಬಹುದು.

ಇದರ ಜೊತೆಗೆ ವಾಟ್ಸ್​ಆ್ಯಪ್ ಮತ್ತೊಂದು ಅಪ್ಡೇಟ್ ನೀಡಲು ಮುಂದಾಗಿದೆ. ಅದುವೇ ವಾಯ್ಸ್ ಟ್ರಾನ್ಸ್​​ಕ್ರಿಪ್ಶನ್ ಫೀಚರ್. ವಾಬೇಟಾ ಇನ್ಫೋ ವರದಿ ಪ್ರಕಾರ, ವಾಟ್ಸ್ಆ್ಯಪ್ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಟ್ರಾನ್ಸ್​ಕ್ರಿಪ್ಶನ್ ಎಂಬ ಫೀಚರ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಹೊಸ ವೈಶಿಷ್ಟ್ಯವು ಹೊಸತನದಿಂದ ಕೂಡಿದೆ ಎಂದಿದೆ.

ವಾಟ್ಸ್ಆ್ಯಪ್ ಪರಿಚಯಿಸಲಿರುವ ಹೊಸ ವಾಯ್ಸ್ ಟ್ರಾನ್ಸ್​ಕ್ರಿಪ್ಶನ್ ಫೀಚರ್​ನಲ್ಲಿ ಬಳಕೆದಾರರಿಗೆ ಧ್ವನಿ ಸಂದೇಶದ ವಿಷಯವನ್ನು ಓದಬಲ್ಲ ರೂಪದಲ್ಲಿ ನೀಡುತ್ತದೆ. ಅಂದರೆ ಇದು ಇದು ಪಠ್ಯ ರೂಪದಲ್ಲಿ ಸಿಗಲಿದೆ. ಈ ಫೀಚರ್ ಅನ್ನು ಆಯ್ಕೆಯ ಆಧಾರ ಮೇಲೆ ನೀಡಲಾಗುತ್ತದೆ. ಅಂದರೆ ಈ ಫೀಚರ್ ಟ್ರಾನ್ಸ್​ಕ್ರಿಪ್ಶನ್ ಮಾಡಲು ಅನುಮತಿಸಿದಾಗ ಮಾತ್ರ ಸೇವೆ ಸಿಗಲಿದೆ. ವಾಟ್ಸ್ಆ್ಯಪ್ ಕ್ಯಾಮೆರಾ, ಮೈಕ್ರೋಫೋನ್​ಗೆ ಅನುಮತಿ ನೀಡಿದಂತೆ ಇದಕ್ಕೂ ಅನುಮತಿ ಕೇಳುತ್ತದೆ.

Smart TV: ದೀಪಾವಳಿಗೆ ಸ್ಮಾರ್ಟ್​ ಟಿವಿ ಮೇಲಿದೆ ಅಚ್ಚರಿಯ ಡಿಸ್ಕೌಂಟ್: ಖರೀದಿಸುವ ಮುನ್ನ ಹೀಗೆ ಮಾಡಲು ಮರೆಯದಿರಿ

WhatsApp tips: ವಾಟ್ಸ್​ಆ್ಯಪ್​ನಲ್ಲಿ ಬಂದ ಮೆಸೇಜ್ ಅನ್ನು ಫಾರ್ವರ್ಡ್ ಮಾಡುವ ಹವ್ಯಾಸ ಇದೆಯೇ?: ಒಮ್ಮೆ ಈ ಸ್ಟೋರಿ ಓದಿ

(WhatsApp is bring the undo feature to every smartphone very soon)