AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp tips: ವಾಟ್ಸ್​ಆ್ಯಪ್​ನಲ್ಲಿ ಬಂದ ಮೆಸೇಜ್ ಅನ್ನು ಫಾರ್ವರ್ಡ್ ಮಾಡುವ ಹವ್ಯಾಸ ಇದೆಯೇ?: ಒಮ್ಮೆ ಈ ಸ್ಟೋರಿ ಓದಿ

WhatsApp forwards: ನೀವು ವಾಟ್ಸ್​ಆ್ಯಪ್​​ನಲ್ಲಿ ಯಾವುದೇ ಸಂದೇಶವನ್ನು ಹಲವು ಬಾರಿ ಫಾರ್ವರ್ಡ್ ಮಾಡಿದಾಗ, ಅದನ್ನು ಒಂದು ಸಮಯದಲ್ಲಿ ಒಂದು ಚಾಟ್‌ಗೆ ಮಾತ್ರ ಫಾರ್ವರ್ಡ್ ಮಾಡಬಹುದು.

WhatsApp tips: ವಾಟ್ಸ್​ಆ್ಯಪ್​ನಲ್ಲಿ ಬಂದ ಮೆಸೇಜ್ ಅನ್ನು ಫಾರ್ವರ್ಡ್ ಮಾಡುವ ಹವ್ಯಾಸ ಇದೆಯೇ?: ಒಮ್ಮೆ ಈ ಸ್ಟೋರಿ ಓದಿ
whatsapp forward message
TV9 Web
| Updated By: Vinay Bhat|

Updated on: Oct 23, 2021 | 2:45 PM

Share

ಸುಳ್ಳು ಮಾಹಿತಿ, ಫೇಕ್ ನ್ಯೂಸ್ (Fake News) ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಾಟ್ಸ್​ಆ್ಯಪ್ (WhatsApp) ಒಂದಲ್ಲ ಒಂದು ಹೊಸ ಫೀಚರ್​ಗಳನ್ನು ಪರಿಚಯಿಸುತ್ತಲೇ ಇದೆ. ಈಗಾಗಲೇ ಒಂದು ಸಂದೇಶವು ಹಲವಾರು ಬಾರಿ ಫಾರ್ವರ್ಡ್ (Forword Messages) ಆಗಿದ್ದರೆ ಈ ಕುರಿತು ಅದು ಬಳಕೆದಾರರಿಗೆ ಸೂಚನೆ ನೀಡುವ ಫೀಚರ್ ನೀಡಲಾಗಿದೆ. ವಾಟ್ಸ್​ಆ್ಯಪ್​​ನಲ್ಲಿ ನಿಮ್ಮ ಸ್ನೇಹಿತ ಅಥವಾ ಕುಟುಂಬದ ಸದಸ್ಯರು ಕಳುಹಿಸಿದ ಸಂದೇಶವನ್ನು ಬರೆದಿದ್ದಾರೆಯೇ ಅಥವಾ ಬೇರೆಯವರ ಸಂದೇಶವನ್ನು ಕಳುಹಿಸಿದ್ದಾರೆ ಅನ್ನೊದು ಫಾರ್ವರ್ಡ್‌ ಫಿಚರ್‌ ಮೂಲಕ ತಿಳಿಯಬಹುದಾಗಿದೆ. ಪ್ರಾರಂಭದಲ್ಲಿ ವಾಟ್ಸ್​ಆ್ಯಪ್​​ನಲ್ಲಿ ಒಂದೇ ಭಾರಿ ಎಷ್ಟು ಜನರಿಗೆ ಬೇಕಿದ್ದರೂ ಫಾರ್ವರ್ಡ್‌ ಮಾಡಬಹುದಾಗಿತ್ತು. ಆದರೆ ದಿನೇ ದಿನೇ ಹೆಚ್ಚಿದ ವದಂತಿಗಳು, ನಕಲಿ ಸುದ್ದಿಗಳು ಫಾರ್ವರ್ಡ್‌, ವೈರಲ್ ಸಂದೇಶಗಳು ಫಾರ್ವರ್ಡ್‌ ಆಗೋದು ಜಾಸ್ತಿ ಆಗಿದ್ದರಿಂದ ಫಾರ್ವರ್ಡ್‌ ಮಾಡುವ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.

ವಾಟ್ಸ್​ಆ್ಯಪ್​​ನಲ್ಲಿ ನೀವು ಒಂದು ಸಮಯದಲ್ಲಿ ಐದು ಚಾಟ್‌ಗಳಿಗೆ ಮಾತ್ರ ಸಂದೇಶವನ್ನು ಫಾರ್ವರ್ಡ್ ಮಾಡಬಹುದಾಗಿದೆ. ನೀವು ಬಹಳಷ್ಟು ಸ್ನೇಹಿತರಿಗೆ ಸಂದೇಶವನ್ನು ಫಾರ್ವರ್ಡ್‌ ಮಾಡಬೇಕೆನಿಸಿದರೆ ಮತ್ತೆ ಮತ್ತೆ ಫಾರ್ವರ್ಡ್‌ ಮಾಡಬೇಕಾಗುತ್ತದೆ. ಸಂದೇಶಗಳು ಮಾತ್ರವಲ್ಲದೆ ಫೋಟೋಗಳು, ವೀಡಿಯೊಗಳು, ಸ್ಥಳ ಮತ್ತು ಸಂಪರ್ಕಗಳನ್ನು ಸುಲಭವಾಗಿ ಫಾರ್ವರ್ಡ್ ಮಾಡಬಹುದು. ಮರು ಅಪ್‌ಲೋಡ್ ಮಾಡುವ ತೊಂದರೆಯಿಲ್ಲದೆ ಇವುಗಳನ್ನು ಎಲ್ಲಾ ಗುಂಪುಗಳಿಗೆ ಒಂದೇ ಬಾರಿಗೆ ಕಳುಹಿಸಬಹುದು.

ಇನ್ನು ನೀವು ವಾಟ್ಸ್​ಆ್ಯಪ್​​ನಲ್ಲಿ ಯಾವುದೇ ಸಂದೇಶವನ್ನು ಹಲವು ಬಾರಿ ಫಾರ್ವರ್ಡ್ ಮಾಡಿದಾಗ, ಅದನ್ನು ಒಂದು ಸಮಯದಲ್ಲಿ ಒಂದು ಚಾಟ್‌ಗೆ ಮಾತ್ರ ಫಾರ್ವರ್ಡ್ ಮಾಡಬಹುದು. ವಾಟ್ಸ್​ಆ್ಯಪ್​ ಎರಡು ಬಾಣದ ಐಕಾನ್ ಮತ್ತು “ಹಲವು ಬಾರಿ ಫಾರ್ವರ್ಡ್ ಮಾಡಲಾಗಿದೆ” ಲೇಬಲ್ ಅನ್ನು ಪ್ರದರ್ಶಿಸುತ್ತದೆ. ಇಂತಹ ಸಂದೇಶಗಳನ್ನು ಒಂದು ಸಮಯದಲ್ಲಿ ಒಂದು ಚಾಟ್‌ಗೆ ಮಾತ್ರ ಫಾರ್ವರ್ಡ್ ಮಾಡಬಹುದಾಗಿರುತ್ತದೆ.

ಇದಲ್ಲದೆ ವಾಟ್ಸ್​ಆ್ಯಪ್ ಮೂಲಕ ಕೇವಲ ಟೆಕ್ಸ್ಟ್‌ ಮಾತ್ರವಲ್ಲ, ಮೀಡಿಯಾ ಫೈಲ್‌, ಲೊಕೇಶನ್‌ ಮತ್ತು ಕಂಟ್ಯಾಕ್ಟ್‌ಗಳನ್ನು ಫಾರ್ವರ್ಡ್ ಮಾಡಬಹುದಾಗಿದೆ. ಆದ್ದರಿಂದ ನೀವು ಅವುಗಳನ್ನು ಮತ್ತೆ ಅಪ್‌ಲೋಡ್ ಮಾಡಬೇಕಾದ ಅನಿವಾರ್ಯತೆ ಇಲ್ಲ.

Amazon Great Indian Festival 2021: ಅಮೆಜಾನ್​ನಲ್ಲಿ ಅತ್ಯಂತ ವೇಗವಾಗಿ ಚಾರ್ಜ್​ ಆಗುವ ಈ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್

WhatsApp: ವಾಟ್ಸ್​ಆ್ಯಪ್ ವಾಯ್ಸ್ ಮೆಸೇಜ್​ನಲ್ಲಿ ಹೊಸ ಆಯ್ಕೆ: ಆ ಅಚ್ಚರಿಯ ಫೀಚರ್ ಏನು ಗೊತ್ತೇ?

(WhatsApp users must read this story about forward messages)

ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ