Whatsapp: ವಾಟ್ಸ್​ಆ್ಯಪ್​ನಲ್ಲಿ ಶಾಕಿಂಗ್ ಫೀಚರ್: ಮೆಸೇಜ್ ಡಿಲೀಟ್ ಮಾಡುವಾಗ ಸಿಗುತ್ತೆ ಹೊಸ ಆಯ್ಕೆ

| Updated By: Vinay Bhat

Updated on: Jul 03, 2022 | 12:40 PM

Whatsapp delete message time limit: ವಾಟ್ಸ್​ಆ್ಯಪ್​ನಲ್ಲಿ ಬಹುತೇಕ ಎಲ್ಲ ಬಳಕೆದಾರರು ಉಪಯೋಗಿಸುತ್ತಿರುವ ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್​​ನಲ್ಲಿ ಹೊಸ ಆಯ್ಕೆ ಸದ್ಯದಲ್ಲೇ ಸಿಗಲಿದೆ. ಅದೇನೆಂದರೆ ವಾಟ್ಸ್​ಆ್ಯಪ್​ ಡಿಲಿಟ್‌ ಫಾರ್‌ ಎವರಿಒನ್‌ ಫೀಚರ್​ನ ಲಿಮಿಟ್‌ ಅನ್ನು ಹೆಚ್ಚಿಸಲಾಗಿದೆ.

Whatsapp: ವಾಟ್ಸ್​ಆ್ಯಪ್​ನಲ್ಲಿ ಶಾಕಿಂಗ್ ಫೀಚರ್: ಮೆಸೇಜ್ ಡಿಲೀಟ್ ಮಾಡುವಾಗ ಸಿಗುತ್ತೆ ಹೊಸ ಆಯ್ಕೆ
WhatsApp
Follow us on

ಮೆಟಾ (Meta) ಮಾಲೀಕತ್ವದ ವಾಟ್ಸ್​ಆ್ಯಪ್​​ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್​​ಗಳನ್ನು ಪರಿಚಯಿಸುತ್ತಲೇ ಬಂದಿದೆ. ದಿನದಿಂದ ದಿನಕ್ಕೆ ವಾಟ್ಸ್​ಆ್ಯಪ್​​ (WhatsApp) ತನ್ನ ಫೀಚರ್ ಅಪ್ಡೇಟ್ ಮಾಡುತ್ತಲೇ ಇದ್ದು ಮತ್ತಷ್ಟು ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ ವಾಟ್ಸ್​ಆ್ಯಪ್​ ಮತ್ತೊಂದು ಅತ್ಯಗತ್ಯ ಫೀಚರ್ಸ್‌ನಲ್ಲಿ ಹೊಸ ಬದಲಾವಣೆಗೆ ಮುಂದಾಗಿದೆ. ಬಹುತೇಕ ಎಲ್ಲ ಬಳಕೆದಾರರು ಉಪಯೋಗಿಸುತ್ತಿರುವ ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್​​ನಲ್ಲಿ ಹೊಸ ಆಯ್ಕೆ ಸದ್ಯದಲ್ಲೇ ಸಿಗಲಿದೆ. ಅದೇನೆಂದರೆ ವಾಟ್ಸ್​ಆ್ಯಪ್​ ಡಿಲಿಟ್‌ ಫಾರ್‌ ಎವರಿಒನ್‌ ಫೀಚರ್​ನ ಲಿಮಿಟ್‌ ಅನ್ನು ಹೆಚ್ಚಿಸಲಾಗಿದೆ. ಅಂದರೆ ಮಾಡಿದ ಮೆಸೇಜ್ (Message) ಅನ್ನು ಯಾರಿಗೂ ಕಾಣದಂತೆ ಡಿಲೀಟ್ ಮಾಡಲು ಹೆಚ್ಚಿನ ಕಾಲವಕಾಶ ನೀಡಲಾಗಿದೆ.

ಪ್ರಸ್ತುತ ವಾಟ್ಸ್​ಆ್ಯಪ್​​ ಬಳಕೆದಾರರು ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್​​ನಲ್ಲಿ ತಾವು ಸೆಂಡ್‌ ಮಾಡಿದ ಸಂದೇಶವನ್ನು ಹಂಚಿಕೊಂಡ ಸಮಯದಿಂದ ಒಂದು ಗಂಟೆ ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳ ಅವಧಿಯಲ್ಲಿ ಡಿಲೀಟ್‌ ಮಾಡಬಹುದು. ಇದೀಗ ಇದರ ಟೈಂ ಲಿಮಿಟ್‌ ಅನ್ನು ಹೆಚ್ಚಿಸಲಾಗಿದೆ. ಮೆಟಾ ಕಂಪನಿ ಇದೀಗ ಈ ಸಮಯವನ್ನು ಬರೋಬ್ಬರಿ ಎರಡು ದಿನಗಳಿಗೆ ವಿಸ್ತರಿಸಲು ಮುಂದಾಗಿದೆ. ಇದರಿಂದ ನೀವು ಸಂದೇಶವನ್ನು ಕಳುಹಿಸಿದ ಎರಡು ದಿನಗಳ ನಂತರ ಡಿಲೀಟ್‌ ಫಾರ್‌ ಎವರಿಒನ್‌ ಬಳಸಿ ಡಿಲೀಟ್‌ ಮಾಡಬಹುದಾಗಿದೆ.

ಸ್ಯಾಮ್​ಸಂಗ್​ನ ಬೆಸ್ಟ್​ ಸ್ಮಾರ್ಟ್​​ಫೋನ್ ಗ್ಯಾಲಕ್ಸಿ A53 ಬೆಲೆಯಲ್ಲಿ ಭರ್ಜರಿ ಇಳಿಕೆ

ಇದನ್ನೂ ಓದಿ
Oppo Reno 8: ಭಾರತಕ್ಕೆ ಕಾಲಿಡುತ್ತಿದೆ ಕ್ಯಾಮೆರಾದಿಂದಲೇ ವಿದೇಶದಲ್ಲಿ ಧೂಳೆಬ್ಬಿಸಿದ ಒಪ್ಪೋ ರೆನೋ 8
WhatsApp Ban: ವಾಟ್ಸ್​ಆ್ಯಪ್​ನಿಂದ ಶಾಕಿಂಗ್ ಸುದ್ದಿ: 19 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆ ಬ್ಯಾನ್
Best Smartphones: ಭಾರತದಲ್ಲಿ ಕೇವಲ 6,000 ರೂ. ಒಳಗೆ ಲಭ್ಯವಿರುವ ಬೆಸ್ಟ್​ ಸ್ಮಾರ್ಟ್​​ಫೋನ್​ಗಳು ಇಲ್ಲಿದೆ ನೋಡಿ
OnePlus Nord: ಭಾರತದಲ್ಲಿ ಬಿಡುಗಡೆಯಾಯ್ತು OnePlus Nord 2T 5G, ಬಿಡುಗಡೆಯ ವಿಶೇಷ ಕೊಡುಗೆಗಳು ಇಲ್ಲಿವೆ ನೋಡಿ

ಸದ್ಯಕ್ಕೆ ಈ ಹೊಸ ಫೀಚರ್ ವಾಟ್ಸ್​ಆ್ಯಪ್​ ಬೀಟಾದ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿರುವ ಆಯ್ದ ಬಳಕೆದಾರರಿಗೆ ಲಭ್ಯವಿದೆ ಎನ್ನಲಾಗಿದೆ. ಅದರಂತೆ ಈ ಫೀಚರ್ಸ್‌ ಒಂದು ಗಂಟೆ, ಎಂಟು ನಿಮಿಷಗಳು ಮತ್ತು 16 ಸೆಕೆಂಡುಗಳಿಂದ ಎರಡು ದಿನಗಳು ಮತ್ತು 12 ಗಂಟೆಗಳವರೆಗೆ ಹೆಚ್ಚಿಸಲು ಪ್ಲಾನ್‌ ಮಾಡಿದೆ. ಆದಷ್ಟು ಬೇಗ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಈ ಆಯ್ಕೆ ಸಿಗಲಿದೆಯಂತೆ.

ಬರುತ್ತಿದೆ ಎಡಿಟ್ ಆಯ್ಕೆ:

ಇದರ ಜೊತೆಗೆ ಎಡಿಟ್ ಮಾಡುವ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಲು ವಾಟ್ಸ್​ಆ್ಯಪ್​ ಮುಂದಾಗಿದ್ದು, ನೂತನ ಆಯ್ಕೆಯನ್ನು ಪರಿಶೀಲಿಸುತ್ತಿದೆ. ಇದರ ಪ್ರಕಾರ ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ. ಬೀಟಾ ಆವೃತ್ತಿಯಲ್ಲಿ ಎಡಿಟ್ ಬಟನನ್ನು ಪರೀಕ್ಷಿಸುತ್ತಿದೆ. ಪ್ರಸ್ತುತ, ವಾಟ್ಸ್​ಆ್ಯಪ್​​ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಮೆಸೇಜ ಅನ್ನು ಡಿಲೀಟ್ ಮಾತ್ರ ಮಾಡಬಹುದು, ಆದರೆ ಎಡಿಟ್‌ ಮಾಡಲು ಸಾಧ್ಯವಿಲ್ಲ. ಸದ್ಯ ಮುಂಬರುವ ವೈಶಿಷ್ಟ್ಯವನ್ನು ಬಳಸಿ ಮೆಸೇಜ್ ಕಳುಹಿಸಿದ ನಂತರ ಅವುಗಳನ್ನು ಎಡಿಟ್‌ ಮಾಡಲು ಸಾಧ್ಯವಾಗಿಸುತ್ತದೆ. ಎಲ್ಲಾ ವಾಟ್ಸ್​ಆ್ಯಪ್​​ ಸಂಬಂಧಿತ ಬೆಳವಣಿಗೆಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ Wabetainfo ಈ ವೈಶಿಷ್ಟ್ಯವನ್ನು ಗುರುತಿಸಿದೆ.

ಡಿಪಿ, ಲಾಸ್ಟ್​ ಸೀನ್ ಕೆಲವರಿಗೆ ಮಾತ್ರ ಕಾಣುವಂತೆ ಮಾಡಿ:

ವಾಟ್ಸ್​ಆ್ಯಪ್​ನಲ್ಲಿ ಈಗ ನೀವು ನಿಮ್ಮ ಪ್ರೊಫೈಲ್ ಫೋಟೋವನ್ನು, ಲಾಸ್ಟ್​​ ಸೀನ್ ಮತ್ತು ಎಬೌಟ್ ಆಯ್ಕೆಯನ್ನು ಯಾರಿಗೆ ಬೇಕು ಅವರಿಗೆ ಮಾತ್ರ ಕಾಣುವಂತೆ ಮಾಡಬಹುದು. ಈ ಅಪ್ಡೇಟ್​ನಲ್ಲಿ ‘ಮೈ ಕಾಂಟ್ಯಾಕ್ಸ್ಟ್​​ ಎಕ್ಸೆಪ್ಟ್’ ಎಂಬ ಹೊಸ ಆಯ್ಕೆ ನೀಡಲಾಗಿದೆ. ಈ ಮೂಲಕ ನಿಮಗೆ ಅಗತ್ಯವಿರುವವರಿಗೆ ಮಾತ್ರ ನಿಮ್ಮ ಡಿಪಿ, ಲಾಸ್ಟ್​​ ಸೀನ್ ಮತ್ತು ಎಬೌಟ್ ಆಯ್ಕೆಯನ್ನು ನೋಡುವಂತೆ ಮಾಡಬಹುದು. ಸೆಟ್ಟಿಂಗ್​​ಗ ಹೋಗಿ ಎಕೌಂಟ್-ಪ್ರೈವಸಿ ಮೂಲಕ ಈ ಆಯ್ಕೆಯನ್ನು ನೀವು ಗಮನಿಸಬಹುದು. ಈ ಹೊಸ ಆಯ್ಕೆಯನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ಉಪಯೋಗಿಸಬಹುದು.

iQOO Neo 6: ಒನ್​ಪ್ಲಸ್ ಬಿಡುಗಡೆ ಮಾಡಿದ ಫೋನ್​ಗೆ ಬೆಚ್ಚಿಬಿದ್ದ ಐಕ್ಯೂ: ಈ ಫೋನ್​ ಬೆಲೆ ದಿಢೀರ್ ಇಳಿಕೆ

Published On - 12:40 pm, Sun, 3 July 22