ಫೇಸ್ಬುಕ್ (Facebook) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್ ಒಂದನ್ನು ನೀಡಲಾಗಿದೆ. ಇದರಲ್ಲಿ ನಿರೀಕ್ಷೆಗೂ ಮೀರಿದ ವಿಶೇಷ ಫೀಚರ್ (New WhatsApp Feature) ಸಿಗಲಿದೆ. ಈ ಹೊಸ ಅಪ್ಡೇಟ್ನಲ್ಲಿ ನೀವು ನಿಮ್ಮ ವಾಟ್ಸ್ಆ್ಯಪ್ ಖಾತೆಯನ್ನು ಒಂದೇ ಸಮಯದ ವೇಲೆ ಬೇರೆ ಬೇರೆ ಡಿವೈಸ್ಗಳಲ್ಲಿ ಬಳಸಬಹುದಾಗಿದೆ. ಈ ಹಿಂದೆ ವಾಟ್ಸ್ಆ್ಯಪ್ ಅನ್ನು ಒಂದು ಡಿವೈಸ್ನಲ್ಲಿ ಮಾತ್ರ ಬಳಸಬಹುದಾಗಿತ್ತು. ಎರಡು ಮೊಬೈಲ್ನಲ್ಲಿ ಒಂದೇ ವಾಟ್ಸ್ಆ್ಯಪ್ ಖಾತೆ ಹೊಂದಿರುವ ಆಯ್ಕೆ ಇರಲಿಲ್ಲ. ಅದಾಗ್ಯೂ ವಾಟ್ಸ್ಆ್ಯಪ್ ವೆಬ್ (WhatsApp Web) ಬಳಕೆ ಮಾಡಿದಾಗ ಏಕಕಾಲದಲ್ಲಿ ಕಂಪ್ಯೂಟರ್ನಲ್ಲಿ ಉಪಯೋಗಿಸಬಹುದಿತ್ತು. ಸದ್ಯ ಇದೀಗ ಹೊಸ ಅಪ್ಡೇಟ್ನಲ್ಲಿ ವಾಟ್ಸ್ಆ್ಯಪ್ ಹಲವು ಡಿವೈಸ್ಗಳಲ್ಲಿ (WhatsApp Multiple Device) ಬಳಕೆ ಮಾಡಬಹುದಾದ ಆಯ್ಕೆಯನ್ನು ಪರಿಚಯಿಸುತ್ತಿದೆ.
ವಾಟ್ಸ್ಆ್ಯಪ್ನ ಈ ಹೊಸ ಮಲ್ಟಿ ಡಿವೈಸ್ ಸಪೋರ್ಟ್ ಫೀಚರ್ ಪರೀಕ್ಷಾ ಹಂತದಲ್ಲಿದ್ದು ಸದ್ಯದಲ್ಲೇ ಬಳಕೆದಾರರಿಗೆ ಸಿಗಲಿದೆ. ಇದುವರೆಗೆ ಕಂಪನಿಯ ಈ ವೈಶಿಷ್ಟ್ಯವನ್ನು ಬೀಟಾ ಬಳಕೆದಾರರಿಗೆ ಮಾತ್ರ ನೀಡುತ್ತಿತ್ತು. ಈ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಏಕಕಾಲಕ್ಕೆ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ನಂತಹ ಒಂದಕ್ಕಿಂತ ಹೆಚ್ಚು ಫೋನ್ ಅಲ್ಲದ ಸಾಧನಗಳಲ್ಲಿ ತಮ್ಮ ವಾಟ್ಸ್ಆ್ಯಪ್ ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗಲಿದೆ.
ಇನ್ನೂ ಭಾರತದಲ್ಲಿ ವಾಟ್ಸ್ಆ್ಯಪ್ ಪಾವತಿ (ವಾಟ್ಸ್ಆ್ಯಪ್ ಪೇಮೆಂಟ್) ವೈಶಿಷ್ಟ್ಯವನ್ನು ಬಳಸುವ ಬಳಕೆದಾರರಿಗೆ ಕ್ಯಾಶ್‌ಬ್ಯಾಕ್ (Whatsapp Cashback) ಆಫರ್ ನೀಡಲು ಸಂಸ್ಥೆ ಮುಂದಾಗಿದೆ. Wabetainfo ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ, ಬಳಕೆದಾರರಿಗೆ ವಾಟ್ಸ್ಆ್ಯಪ್ ಪೇಮೆಂಟ್ ಮಾಡಿದ ತಕ್ಷಣ ಕ್ಯಶ್ಬ್ಯಾಕ್ ಆಫರ್ ಎಂಬ ಹೊಸ ವೈಶಿಷ್ಟ್ಯವನ್ನು ತರಲು ವಾಟ್ಸ್ಆ್ಯಪ್ ಡೆವಲಪರ್‌ಗಳು ಹೊಸ ಕೆಲಸ ಮಾಡುತ್ತಿದ್ದಾರೆ. ಈ ಹೊಸ ಕ್ಯಾಶ್‌ಬ್ಯಾಕ್ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದೆ.
ಭಾರತದಲ್ಲಿ ವಾಟ್ಸ್ಆ್ಯಪ್ ಪೇಮೆಂಟ್ ಬಳಕೆದಾರರನ್ನು ಮೇಲೆತರಲು ಮತ್ತು ಗೂಗಲ್ ಪೇ, ಫೋನ್ ಪೇ ಯಂತಹ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸಲು ವಾಟ್ಸ್ಆ್ಯಪ್ ಬಹುಮಾನದ ರಿಯಾಯಿತಿಗಳನ್ನು ಪರಿಚಯಿಸುತ್ತಿದೆ. ಕ್ರಿಯಾತ್ಮಕತೆಯು ಇನ್ನೂ ಅಭಿವೃದ್ಧಿಯಲ್ಲಿದೆ ಮತ್ತು ಅದನ್ನು ಯಾರಿಂದಲೂ ಬಳಸಲಾಗುವುದಿಲ್ಲ. ಇದು ಆ್ಯಪ್‌ನ ಭವಿಷ್ಯದ ಆವೃತ್ತಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಹೇಳಿದೆ.
ಈ ಸೇವೆಯು ಭಾರತದಲ್ಲಿ ವಾಟ್ಸ್ಆ್ಯಪ್ ಅನ್ನು ಬಳಸುತ್ತಿರುವ ಗ್ರಾಹಕರಿಗೆ ಮಾತ್ರ ಸೀಮಿತವಾಗಿರುತ್ತದೆ. 10 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಪಾವತಿಯು ಕ್ಯಾಶ್‌ಬ್ಯಾಕ್ ವೋಚರ್‌ಗಳಾಗಿ ಸಿಗಲಿದೆ ಎಂದು ಹೇಳಲಾಗಿದೆ. ಪಾವತಿ ಮಾಡುವ ಬಳಕೆದಾರರು ಅದನ್ನು 48 ಗಂಟೆಗಳಲ್ಲಿ ಸ್ವೀಕರಿಸುತ್ತಾರೆ ಎಂದು ವರದಿ ಹೇಳುತ್ತದೆ. ಆದಾಗ್ಯೂ, ಈ ವೈಶಿಷ್ಟ್ಯದ ಅಧಿಕೃತ ಬಿಡುಗಡೆಯ ನಂತರ, ಕ್ಯಾಶ್‌ಬ್ಯಾಕ್ ಮೊತ್ತ ಮತ್ತು ಕ್ಯಾಶ್‌ಬ್ಯಾಕ್‌ಗಳ ಸಂಖ್ಯೆಯು ಬದಲಾಗುವ ಸಾಧ್ಯತೆಯಿದೆ.
ಏರ್ಟೆಲ್ –ಜಿಯೋಗೆ ಶುರುವಾಗಿದೆ ನಡುಕ: ಬೆಜೋಸ್, ಎಲಾನ್ ಮಸ್ಕ್ರಿಂದ ಭಾರತದಲ್ಲಿ ಸ್ಯಾಟ್ ಲೈಟ್ ಇಂಟರ್ನೆಟ್ ಸಂಪರ್ಕ
(WhatsApp is going to bring a new multi-device support feature for its users)