WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ನಿರೀಕ್ಷೆಗೂ ಮೀರಿದ ಫೀಚರ್: ಚಾಟ್ ಲಿಸ್ಟ್​ನಲ್ಲಿ ಮಹತ್ವದ ಬದಲಾವಣೆ

|

Updated on: Jul 08, 2023 | 4:33 PM

WabetaInfo ನ ವರದಿಯ ಪ್ರಕಾರ, ಮೆಟಾ-ಮಾಲೀಕತ್ವದ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರಿಗೆ ಚಾಟ್ ಪಟ್ಟಿಯನ್ನು ಫಿಲ್ಟರ್ ಎಂಬ ಹೊಸ ವೈಶಿಷ್ಟ್ಯವನ್ನು ನೀಡಲು ಮುಂದಾಗಿದೆ.

WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ನಿರೀಕ್ಷೆಗೂ ಮೀರಿದ ಫೀಚರ್: ಚಾಟ್ ಲಿಸ್ಟ್​ನಲ್ಲಿ ಮಹತ್ವದ ಬದಲಾವಣೆ
WhatsApp
Follow us on

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಪ್ರತಿದಿನ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಮೊನ್ನೆಯಷ್ಟೆ ಭಾರತದಲ್ಲಿ ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿದಂತಹ 65 ಲಕ್ಷಕ್ಕೂ ಅಧಿಕ ಖಾತೆಯನ್ನು ನಿಷೇಧಿಸಿ ಸುದ್ದಿಯಾಗಿತ್ತು. ಇದರ ನಡುವೆ ಹೊಸ ಹೊಸ ಫೀಚರ್​ಗಳನ್ನು ಕೂಡ ಘೋಷಣೆ ಮಾಡುತ್ತಿದೆ. ವಾಟ್ಸ್​ಆ್ಯಪ್​ನಲ್ಲಿ ಸಾಲು ಸಾಲು ಅಪ್ಡೇಟ್​ಗಳು ಬರಲು ತಯಾರಾಗಿದೆ. ಹೀಗಿರುವಾಗ ಇಂದು ಮತ್ತೊಂದು ನೂತನ ಆಯ್ಕೆಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಸದ್ಯದಲ್ಲೇ ವಾಟ್ಸ್​ಆ್ಯಪ್​ನಲ್ಲಿ ಫಿಲ್ಟರ್ ಆಯ್ಕೆ (Filter Option) ಬರಲಿದ್ದು, ಇದು ಚಾಟ್ ಲಿಸ್ಟ್​ನಲ್ಲಿ ಮಹತ್ವದ ಬದಲಾವಣೆ ತರಲಿದೆ.

ವಾಟ್ಸ್​ಆ್ಯಪ್ ಅಪ್‌ಡೇಟ್‌ಗಳ ಟ್ರ್ಯಾಕರ್, WabetaInfo ನ ವರದಿಯ ಪ್ರಕಾರ, ಮೆಟಾ-ಮಾಲೀಕತ್ವದ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರಿಗೆ ಚಾಟ್ ಪಟ್ಟಿಯನ್ನು ಫಿಲ್ಟರ್ ಎಂಬ ಹೊಸ ವೈಶಿಷ್ಟ್ಯವನ್ನು ನೀಡಲು ಮುಂದಾಗಿದೆ. ಸದ್ಯ ಈ ಫೀಚರ್ ಅಭಿವೃದ್ದಿ ಹಂತದಲ್ಲಿದೆ ಎಂದು ಹೇಳಿದೆ. ವಾಟ್ಸ್​ಆ್ಯಪ್ ಬೀಟಾ 2.23.14.17 ಅಪ್ಡೇಟ್​ನಲ್ಲಿ ಇದು ಕಂಡುಬಂದಿದೆ. ಈ ಹೊಸ ಟೂಲ್ ಬಗ್ಗೆ ಸ್ಕ್ರೀನ್ ಶಾಟ್ ಕೂಡ ಹರಿದಾಡುತ್ತಿದೆ. ಈ ಆಯ್ಕೆಯ ಮೂಲಕ ಚಾಟ್ ಲಿಸ್ಟ್​ ಅನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

Xiaomi Anniversary Sale: ಶಓಮಿ ರೆಡ್ಮಿ ಡಿಸ್ಕೌಂಟ್ ಸೇಲ್ ಭರ್ಜರಿ ಆಫರ್

ಇದನ್ನೂ ಓದಿ
Jio Bharat 4G: ಕೇವಲ 999 ರೂ. ವಿನ ಜಿಯೋ ಭಾರತ್ 4ಜಿ ಫೋನ್ ಇದೀಗ ಭಾರತದಲ್ಲಿ ಖರೀದಿಗೆ ಲಭ್ಯ
Smartphone Tips: ನಿಮ್ಮ ಸ್ಮಾರ್ಟ್​ಫೋನನ್ನು ಕನಿಷ್ಠ ತಿಂಗಳಿಗೆ ಒಮ್ಮೆಯಾದ್ರೂ ಹೀಗೆ ಮಾಡದಿದ್ದಲ್ಲಿ ಹಾಳಾಗುವುದು ಖಚಿತ
Tech Tips: ಶುರುವಾಗಿದೆ ಮಳೆಗಾಲ: 100 ರೂ. ಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್​ಫೋನನ್ನು ವಾಟರ್​ಪ್ರೂಫ್ ಮಾಡುವುದು ಹೇಗೆ?
Boult Striker Plus: ಬಜೆಟ್ ದರಕ್ಕೆ ಸ್ಟೈಲಿಶ್ ಲುಕ್ ನೀಡುವ ಬೋಲ್ಟ್ ಸ್ಮಾರ್ಟ್​ವಾಚ್

ಮಾಹಿತಿಯ ಪ್ರಕಾರ, ಫಿಲ್ಟರ್​ನಲ್ಲಿ ಮೂರು ಆಯ್ಕೆಗಳು ಇರಲಿದೆ. ಅನ್​ರೀಡ್ ಮೆಸೇಜೆಸ್, ವೈಯಕ್ತಿಕ ಸಂಭಾಷಣೆಗಳು ಮತ್ತು ವ್ಯವಹಾರ ಸಂಭಾಷಣೆಗಳು ಹೀಗೆ ಮೂರು ಆಯ್ಕೆಗಳು ಇರಲಿದೆ. ವಾಟ್ಸ್​ಆ್ಯಪ್​ ಮೇಲ್ಬಾಗದ ಬಲ ಮೂಲೆಯಲ್ಲಿ ಈ ಫಿಲ್ಟನ್ ಬಟನ್ ಇರಲಿದೆ ಎಂದು ಹೇಳಲಾಗಿದೆ. ಈ ವೈಶಿಷ್ಟ್ಯದ ಮೂಲಕ ಬಳಕೆದಾರರು ಸೆಕೆಂಡುಗಳಲ್ಲಿ ಪ್ರಮುಖ ಚಾಟ್‌ಗಳನ್ನು ಪ್ರವೇಶಿಸಬಹುದು. ಆದರೆ, ಗ್ರೂಪ್ ಚಾಟ್​ಗಳಿಗೆ ಇದು ಅನ್ವಯ ಆಗುವುದಿಲ್ಲ. ಇದಕ್ಕಾಗಿ ಯಾವುದೇ ಆಯ್ಕೆ ಕಂಡುಬಂದಿಲ್ಲ.

ಭಾರತದ 65 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಖಾತೆ ಬ್ಯಾನ್:

ವಾಟ್ಸ್​ಆ್ಯಪ್ ಮೇ ತಿಂಗಳಲ್ಲಿ ಬರೋಬ್ಬರಿ 65 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ ಎಂದು ಕಳೆದ ವಾರ ಮೆಟಾ ಹೇಳಿಕೆ ಬಿಡುಗಡೆ ಮಾಡಿದೆ. 2021 ಬಳಕೆದಾರರ ಸುರಕ್ಷತ ಕಾಯಿದೆ 4(1)(D) ಅಡಿಯಲ್ಲಿ ವಾಟ್ಸ್​ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮೇ 01-31ರ ಅವಧಿಯಲ್ಲಿ ಅನೇಕ ದೂರುಗಳನ್ನು ಸ್ವೀಕರಿಸಲಾಗಿದ್ದು, ಇದರ ಪ್ರಕಾರ ವಾಟ್ಸ್​ಆ್ಯಪ್​ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ 6,508,000 ವಾಟ್ಸ್​ಆ್ಯಪ್​ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ. ಈ ಹಿಂದೆ ಏಪ್ರಿಲ್ ತಿಂಗಳಲ್ಲಿ ಕೂಡ ಭಾರತದಲ್ಲಿ 74 ಲಕ್ಷಕ್ಕೂ ಅಧಿಕತ ಖಾತೆಗಳನ್ನು ನಿಷೇಧಿಸಲಾಗಿತ್ತು. ಬ್ಯಾನ್‌ ಆಗಿರುವ ಖಾತೆಗಳು ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿರುವುದು ಕಂಡುಬಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ