WhatsApp Web: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ವಿಭಿನ್ನವಾದ ಸ್ಕ್ರೀನ್‌ ಲಾಕ್‌ ಫೀಚರ್: ವೆಬ್ ಬಳಕೆದಾರರು ಫುಲ್ ಖುಷ್

WhatsApp New Features: ವಾಟ್ಸ್​ಆ್ಯಪ್ ಮಾಹಿತಿ ಹಂಚಿಕೊಂಡಿದ್ದು, ಡೆಸ್ಕ್​ಟಾಪ್‌ನಲ್ಲಿ ವಾಟ್ಸ್‌ಆ್ಯಪ್‌ ಬಳಸುವವರಿಗೆ ಸದ್ಯದಲ್ಲೇ ಸ್ಕ್ರೀನ್‌ ಲಾಕ್‌ ಎಂಬ ಹೊಸ ಆಯ್ಕೆ ನೀಡುವುದಾಗಿ ಘೋಷಿಸಿದೆ.

WhatsApp Web: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ವಿಭಿನ್ನವಾದ ಸ್ಕ್ರೀನ್‌ ಲಾಕ್‌ ಫೀಚರ್: ವೆಬ್ ಬಳಕೆದಾರರು ಫುಲ್ ಖುಷ್
WhatsApp Web
Follow us
TV9 Web
| Updated By: Vinay Bhat

Updated on:Nov 21, 2022 | 2:42 PM

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ 2022 ರಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ. ಅತಿ ಹೆಚ್ಚು ನೂತನ ಫೀಚರ್​ಗಳನ್ನು (New Features) ಈ ವರ್ಷದಲ್ಲಿ ಬಿಡುಗಡೆ ಮಾಡಿದೆ. ಇದಕ್ಕಾಗಿಯೇ ಇಂದು ವಿಶ್ವದಲ್ಲಿ ವಾಟ್ಸ್​​ಆ್ಯಪ್ (WhatsApp) ಬಳಕೆದಾರರ ಸಂಖ್ಯೆ 2 ಬಿಲಿಯನ್​ಗೂ ಅಧಿಕವಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಇನ್ನಷ್ಟು ಅನೇಕ ಅಪ್ಡೇಟ್​ಗಳು ವಾಟ್ಸ್​ಆ್ಯಪ್​ನಲ್ಲಿ ಬರಲಿಕ್ಕಿದ್ದು ಪರೀಕ್ಷಾ ಹಂತದಲ್ಲಿದೆ.

ಹೆಚ್ಚಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ನೂತನ ಆಯ್ಕೆಗಳನ್ನು ಪರಿಚಯಿಸುತ್ತಿದ್ದ ವಾಟ್ಸ್​ಆ್ಯಪ್ ಇದೀಗ ತನ್ನ ವೆಬ್ ಬಳಕೆದಾರರಿಗೆ ಉಪಯುಕ್ತವಾದ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಈ ಕುರಿತು ವಾಟ್ಸ್​ಆ್ಯಪ್ ಮಾಹಿತಿ ಹಂಚಿಕೊಂಡಿದ್ದು, ಡೆಸ್ಕ್​ಟಾಪ್‌ನಲ್ಲಿ ವಾಟ್ಸ್‌ಆ್ಯಪ್‌ ಬಳಸುವವರಿಗೆ ಸದ್ಯದಲ್ಲೇ ಸ್ಕ್ರೀನ್‌ ಲಾಕ್‌ ಎಂಬ ಹೊಸ ಆಯ್ಕೆ ನೀಡುವುದಾಗಿ ಘೋಷಿಸಿದೆ.

ವಾಟ್ಸ್​ಆ್ಯಪ್ ಹಿಂದಿನಿಂದಲೂ ಬಳಕೆದಾರರ ಪ್ರೈವಸಿ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತದೆ. ಇದೀಗ ಭದ್ರತೆಯನ್ನು ಮತ್ತಷ್ಟು ಗಟ್ಟಿ ಮಾಡುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ವಾಟ್ಸ್‌ಆ್ಯಪ್‌ ವೆಬ್​ನಲ್ಲಿ ಬರುವ ಸ್ಕ್ರೀನ್‌ ಲಾಕ್‌ ಎಂಬ ಹೊಸ ಫೀಚರ್​ನಲ್ಲಿ ವಾಟ್ಸ್​ಆ್ಯಪ್ ಓಪನ್‌ ಮಾಡಿದ ಪ್ರತಿ ಬಾರಿ ಬಳಕೆದಾರರು ಪಾಸ್‌ವರ್ಡ್‌ ಹಾಕಬೇಕಾಗುತ್ತದೆ. ಬಳಕೆದಾರರು ತಮ್ಮ ಡೆಸ್ಕ್​​ಟಾಪ್‌ನಲ್ಲಿ ವಾಟ್ಸ್‌ಆ್ಯಪ್‌ ಬಳಸದೇ ಇದ್ದಾಗ ಬೇರೆಯವರು ಅನಧಿಕೃತವಾಗಿ ಬಳಸದಂತೆ ಇದು ರಕ್ಷಣೆ ನೀಡಲಿದೆ ಎಂದು ಕಂಪನಿ ತಿಳಿಸಿದೆ. ಹಾಗಂತ ಇದು ಕಡ್ಡಾಯವಲ್ಲ. ಬಳಕೆದಾರರು ಈ ಸ್ಕ್ರೀನ್‌ ಲಾಕ್‌ ಫೀಚರ್‌ ಅನ್ನು ಬೇಕಾದಾಗ ಮಾತ್ರ ಉಪಯೋಗಿಸಬಹುದು.

ಇದನ್ನೂ ಓದಿ
Image
Oppo A17K: ಬಜೆಟ್ ಬೆಲೆಯ ಒಪ್ಪೋ A17K ಸ್ಮಾರ್ಟ್‌ಫೋನ್‌ ದರದಲ್ಲಿ ಭರ್ಜರಿ ಇಳಿಕೆ: ಇಂದೇ ಖರೀದಿಸಿ
Image
iPhone 15 Series: ಐಫೋನ್ 15 ಸರಣಿಯ ಫೀಚರ್ಸ್ ಬಗ್ಗೆ ಅಚ್ಚರಿ ಮಾಹಿತಿ ಬಹಿರಂಗ
Image
Tech Tips: ನೀವು ಉಪಯೋಗಿಸುತ್ತಿರುವ ಸ್ಮಾರ್ಟ್​ಫೋನ್ ನಕಲಿ ಆಗಿರಬಹುದು: ಹೇಗೆ ಕಂಡುಹಿಡಿಯುವುದು?, ಇಲ್ಲಿದೆ ಟ್ರಿಕ್
Image
FIFA World Cup 2022: ಇಂದಿನಿಂದ ಫಿಫಾ ವಿಶ್ವಕಪ್ ಫೀವರ್ ಶುರು: ಗೂಗಲ್ ಡೂಡಲ್​ನಿಂದ ವಿಶೇಷ ಸಂಭ್ರಮಾಚರಣೆ

ಮಿಸ್ಡ್ ಕಾಲ್ ಅಲರ್ಟ್‌ ಫೀಚರ್:

ವಾಟ್ಸ್​ಆ್ಯಪ್ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮಿಸ್ಡ್ ಕಾಲ್ ಅಲರ್ಟ್‌’ ಎಂಬ ಹೊಸ ಫೀಚರ್ಸ್‌ ಬಿಡುಗಡೆ ಮಾಡುವ ಕುರಿತು ಮಾಹಿತಿ ಹಂಚಿಕೊಂಡಿದೆ. ಈ ಆಯ್ಕೆಯ ಮೂಲಕ ನಿಮ್ಮ ಸ್ಮಾರ್ಟ್​ಫೋನ್‌ ಎಲ್ಲಾದರು ‘ಡೋಂಟ್ ಡಿಸ್ಟರ್ಬ್‌ ಮೋಡ್‌’ನಲ್ಲಿ ಇರಿಸಿದ್ದಾಗ ಯಾರಾದರು ನಿಮ್ಮ ವಾಟ್ಸ್​ಆ್ಯಪ್​ಗೆ ಕರೆ ಮಾಡಿದರೆ ಇದು ಸಹಾಯ ಮಾಡಲಿದೆ. ಅಂದರೆ ನೀವು ಯಾವುದೇ ಕರೆಯನ್ನು ಮಿಸ್‌ ಮಾಡಿಕೊಂಡಿದ್ದರೆ ಅದರ ಮಾಹಿತಿ ಲಭ್ಯವಾಗಲಿದೆ. ವಾಟ್ಸ್​ಆ್ಯಪ್​ ಇದೀಗ ಈ ಫೀಚರ್ಸ್‌ ಹೊರತರಲು ಬಹುತೇಕ ಸಿದ್ಧವಾಗಿದೆ. ಹಾಗೆಯೇ ಇತ್ತೀಚಿನ ಬೀಟಾ ಆವೃತ್ತಿ 2.22.24.7 ಯಲ್ಲಿ ಈ ಫೀಚರ್ಸ್‌ ಲಭ್ಯವಾಗಲಿದೆ. ಜೊತೆಗೆ ಕೆಲವು ಬೀಟಾ ವಾಟ್ಸ್​ಆ್ಯಪ್ ಬಳಕೆದಾರರಿಗೆ ಈ ಫೀಚರ್ಸ್‌ ಅನ್ನು ಈಗಾಗಲೇ ಪರಿಚಯಿಸಲಾಗಿದೆ ಎಂದು ತಿಳಿದುಬಂದಿದೆ.

ಕಂಪ್ಯಾನಿಯನ್‌ ಮೋಡ್‌ ಆಯ್ಕೆ:

ವಾಟ್ಸ್​ಆ್ಯಪ್​ನ ಈ ಹೊಸ ಕಂಪ್ಯಾನಿಯನ್ ಮೋಡ್ ಎಂಬ ಫೀಚರ್ಸ್‌ ಮೂಲಕ ಬಳಕೆದಾರರು ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ಡಿವೈಸ್‌ಗಳಲ್ಲಿ ವಾಟ್ಸ್​ಆ್ಯಪ್​​ ಬಳಸಬಹುದು. ಅಂದರೆ ನಿಮ್ಮ ವಾಟ್ಸ್​ಆ್ಯಪ್​​ ಆಕೌಂಟ್ ಅನ್ನು ಎರಡು ಮೊಬೈಲ್‌ಗಳಲ್ಲಿ ಬಳಸಬಹುದು. ಇದು ಬಾರ್‌ಕೋಡ್‌ ಸ್ಕ್ಯಾನ್‌ ಮೂಲಕ ಕಾರ್ಯನಿರ್ವಹಿಸಲಿದೆ. ಒಂದೇ ಸಮಯದಲ್ಲಿ ನಾಲ್ಕು ಡಿವೈಸ್‌ಗಳಲ್ಲಿ ಅಕೌಂಟ್‌ ಲಿಂಕ್‌ ಮಾಡಿದರೆ ಲಿಂಕ್ ಮಾಡಲಾದ ಎಲ್ಲಾ ಫೋನ್‌ಗಳಲ್ಲಿಯೂ ಚಾಟ್‌ಗಳು ಮತ್ತು ಡೇಟಾವನ್ನು ಬಳಕೆದಾರ ಸ್ವೀಕರಿಸುತ್ತಾನೆ. ಕಂಪ್ಯಾನಿಯನ್ ಮೋಡ್ ಅನ್ನು ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ v2.22.23.18 ಬೀಟಾ ಆವೃತ್ತಿಯಲ್ಲಿ ಪರೀಕ್ಷಿಸಲಾಗುತ್ತಿದೆ.

Published On - 2:42 pm, Mon, 21 November 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್