ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ದಿನಕ್ಕೊಂದು ಹೊಸ ಹೊಸ ಅಪ್ಡೇಟ್ ಅನ್ನು ಘೋಷಣೆ ಮಾಡುತ್ತಿದೆ. ಆಂಡ್ರಾಯ್ಡ್, ಐಒಎಸ್ಗೆ ಮಾತ್ರವಲ್ಲದೆ ಈಗೀಗ ವೆಬ್ ಬಳಕೆದಾರರಿಗೆ, ಟ್ಯಾಬ್ಲೆಟ್ನವರಿಗೆ ಕೂಡ ವಿನೂತನ ಫೀಚರ್ಗಳನ್ನು ನೀಡುತ್ತಿದೆ. ಇತ್ತೀಚೆಗಷ್ಟೆ ತನ್ನ ಬಳಕೆದಾರರಿಗೆ 21 ಹೊಸ ಎಮೋಜಿಗಳನ್ನು ನೀಡಿ ಅಚ್ಚರಿಗೊಳಿಸಿತ್ತು. ಇದರ ನಡುವೆ ಸಾಲು ಸಾಲು ಆಯ್ಕೆಗಳು ಪರೀಕ್ಷೆ ಹಂತದಲ್ಲಿ ಇರುವಾಗಲೇ ಮತ್ತೊಂದು ಹೊಸ ಫೀಚರ್ ಬಗ್ಗೆ ವಾಟ್ಸ್ಆ್ಯಪ್ ಘೋಷಣೆ ಮಾಡಿದೆ. ಅದುವೇ ಗ್ರೂಪ್‌ನಲ್ಲಿ (WhatsApp Group) ಫೋನ್ ನಂಬರ್ ಬದಲಿಗೆ ಹೆಸರು ಕಾಣಿಸುವಂತಹ ಆಯ್ಕೆ.
ಅಂದರೆ ಬಳಕೆದಾರರು ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಯಾವುದೇ ಅಪರಿಚಿತ ಸಂಪರ್ಕದಿಂದ ಸಂದೇಶವನ್ನು ಸ್ವೀಕರಿಸಿದರೆ ಚಾಟ್ ಪಟ್ಟಿಯೊಳಗೆ ಬಳಕೆದಾರರ ಫೋನ್ ಸಂಖ್ಯೆ ಬದಲಿಗೆ ಹೆಸರುಗಳನ್ನು ತೋರಿಸುತ್ತದೆ. ಈ ಮೂಲಕ ನಂಬರ್ ಸೇವ್ ಮಾಡದೆ ಮೆಸೇಜ್ ಕಳುಹಿಸಿದವರು ಯಾರೆಂದು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ಈ ಫೀಚರ್ನ ಮತ್ತೊಂದು ಉಪಯೋಗ ಎಂದರೆ ದೊಡ್ಡ ಗ್ರೂಪ್ ಇದ್ದಾಗ ಅದರಲ್ಲಿ ಅನೇಕ ಸದಸ್ಯರು ಇರುತ್ತರೆ. ಆದರೆ, ಈ ಎಲ್ಲರ ಹೆಸರುಗಳನ್ನು ನೆನಪಿನಲ್ಲಿ ಇಡುವುದು ಅಥವಾ ಎಲ್ಲರ ಸಂಖ್ಯೆಗಳನ್ನು ಸೇವ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೀಗ ವಾಟ್ಸ್ಆ್ಯಪ್ ಪರಿಚಯಿಸಲಿರುವ ಈ ಹೊಸ ಫೀಚರ್ನಲ್ಲಿ ಸಂಖ್ಯೆಯ ಬದಲಿಗೆ ಹೆಸರನ್ನು ತೋರಿಸಲಾಗುವುದರಿಂದ ಯಾರು ಮೆಸೆಜ್ ಕಳುಹಿಸಿದ್ದಾರೆ ಎಂಬುದನ್ನು ಸುಲಭವಾಗಿ ಕಂಡುಹಿಡಿಯಬಹುದು.
Meta Layoff: ಮೆಟಾದಿಂದ ಎರಡನೇ ಸುತ್ತಿನ ಉದ್ಯೋಗ ಕಡಿತ ಘೋಷಣೆ; ಕೆಲಸ ಕಳೆದುಕೊಳ್ಳಲಿದ್ದಾರೆ 10 ಸಾವಿರ ಮಂದಿ
ವಾಟ್ಸ್ಆ್ಯಪ್ನ ಈ ಫೀಚರ್ ಆಂಡ್ರಾಯ್ಡ್ ಬಳಕೆದಾರರಿಗೆ ಇತ್ತೀಚಿನ ವಾಟ್ಸಾಪ್ 2.23.5.12 ಅಪ್‌ಡೇಟ್‌ನಲ್ಲಿ ಮತ್ತು iOS ಬಳಕೆದಾರರಿಗೆ ಇತ್ತೀಚಿನ 23.5.0.73 ಅಪ್‌ಡೇಟ್‌ನಲ್ಲಿ ಲಭ್ಯವಾಗಲಿದ್ದು, ಪರೀಕ್ಷೆಯ ನಂತರ ಎಲ್ಲಾ ಬಳಕೆದಾರರಿಗೂ ಲಭ್ಯವಿರುತ್ತದೆ ಎಂದು ಮೆಟಾ ಹೇಳಿದೆ.
ಈ ಹೊಸ ಎಮೋಜಿಗಳನ್ನು ವಾಟ್ಸ್ಆ್ಯಪ್ ಕೀಬೋರ್ಡ್‌ನಿಂದ ನೇರವಾಗಿ ಸೆಂಡ್ ಮಾಡಬಹುದಾಗಿದೆ. ವಾಬೇಟಾಇನ್ಫೋ ಪ್ರಕಾರ ಯುನಿಕೋಡ್ 15.0 ನಿಂದ ಈ 21 ಎಮೋಜಿಗಳನ್ನು ಕಳುಹಿಸಲು ಬೇರೆ ಕೀಬೋರ್ಡ್ ಅನ್ನು ಡೌನ್‌ಲೋಡ್ ಮಾಡಬೇಕಾದ ಅಗತ್ಯವಿಲ್ಲ. ಸದ್ಯದ ಮಾಹಿತಿಯ ಪ್ರಕಾರ, ಕೆಲವು ಬಳಕೆದಾರರಿಗೆ ಈಗಾಗಲೇ ಅಧಿಕೃತ ವಾಟ್ಸ್ಆ್ಯಪ್ ಕೀಬೋರ್ಡ್ ಮೂಲಕ ಈ ಹೊಸ ಎಮೋಜಿಗಳನ್ನು ಉಪಯೋಗಿಸಬಹುದಾಗಿದೆ. ಇದರ ಮೂಲಕ ಬಳಕೆದಾರರು ಸಂದೇಶದ ಮೂಲಕ ವ್ಯಕ್ತಪಡಿಸಬಹುದಾದ ಭಾವನೆಗಳನ್ನು ಕೆಲವೇ ಎಮೋಜಿಗಳಲ್ಲಿ ತಿಳಿಸಬಹುದು. ನಿಮಗೂ ಆಯ್ಕೆ ಬೇಕು ಎಂದಾದಲ್ಲಿ ವಾಟ್ಸ್ಆ್ಯಪ್ ಖಾತೆಯಲ್ಲಿಯೂ ನೂತನ ಆವೃತ್ತಿಗೆ ಅಪ್ಡೇಟ್ ಮಾಡಬೇಕು.
ಎಕ್ಸ್ಪೇರಿಂಗ್ ಗ್ರೂಪ್ ಎಂಬ ಫೀಚರ್ ಮೇಲೆ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್ಗೆ ಮುಕ್ತಾಯದ ದಿನಾಂಕ ಎಂಬುದನ್ನು ನಿಗದಿ ಮಾಡಿರಲಾಗುತ್ತದೆ. ಆ ಸಮಯ ಬಂದ ನಂತರ ವಾಟ್ಸ್ಆ್ಯಪ್ ನಿಮಗೆ ಆ ಗ್ರೂಪ್ನಿಂದ ಹಿಂದೆ ಸರಿಯಲು ಮತ್ತು ಅಡ್ಮಿನ್ಗೆ ಗ್ರೂಪ್ ಡಿಲೀಟ್ ಮಾಡಲು ಅಲರ್ಟ್ ಮಾಡುತ್ತಾ ಇರುತ್ತದೆ. ಈ ಆಯ್ಕೆ ವಾಟ್ಸ್ಆ್ಯಪ್ ಗ್ರೂಪ್ ಇನ್ಫೋ ದಲ್ಲಿ ಇರುತ್ತದೆ. ಅಂತೆಯೆ ಈ ಮುಕ್ತಾಯದ ದಿನಾಂಕವನ್ನು ಬದಲಾವಣೆ ಮಾಡುವ ಅವಕಾಶ ಕೂಡ ಇರುತ್ತದಂತೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್ನಿಂದ ನೀವು ಹಿಂದೆ ಸರಿದು ಮೆಮೋರಿಯನ್ನು ಉಳಿತಾಯ ಮಾಡಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Thu, 16 March 23