WhatsApp Data Backup: ವಾಟ್ಸ್​ಆ್ಯಪ್​ನಿಂದ ಶಾಕಿಂಗ್ ನಿರ್ಧಾರ: ಇನ್ನುಂದೆ ಹಣ ಪಾವತಿಸಬೇಕು

|

Updated on: Dec 13, 2023 | 1:09 PM

WhatsApp Latest News: ವಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಕಂಪನಿಯು 2024 ರಿಂದ ಗೂಗಲ್ ಡ್ರೈವ್‌ನಲ್ಲಿ ಉಚಿತ ಅನಿಯಮಿತ ಬ್ಯಾಕಪ್‌ಗಳನ್ನು ನೀಡುವುದಿಲ್ಲ ಎಂದು ಹೇಳಿದೆ. ನೀವು 15GB ಸಂಗ್ರಹದ ಮಿತಿಯನ್ನು ಮೀರಿದ ಬಳಿಕ ಇನ್ನಷ್ಟು ಸ್ಟೋರೇಜ್ ಹೆಚ್ಚಿಸಬೇಕಾದರೆ ಹಣ ಕೊಡಬೇಕು.

WhatsApp Data Backup: ವಾಟ್ಸ್​ಆ್ಯಪ್​ನಿಂದ ಶಾಕಿಂಗ್ ನಿರ್ಧಾರ: ಇನ್ನುಂದೆ ಹಣ ಪಾವತಿಸಬೇಕು
WhatsApp
Follow us on

ಮೆಟಾ ಮಾಲೀಕತ್ವದ ನಂಬರ್ ಒನ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಇಂದು ಬಳಕೆದಾರರಿಗೆ ಅಗತ್ಯ ಫೀಚರ್​ಗಳನ್ನು ಪರಿಚಯಿಸಿ ಮೆಚ್ಚಿನ ಆ್ಯಪ್ ಆಗಿ ಬಿಟ್ಟಿದೆ. ಕೋಟಿಗಟ್ಟಲೆ ಜನರು ಇದನ್ನು ಉಪಯೋಗಿಸುತ್ತಿದ್ದಾರೆ. ಹೀಗಿರುವಾಗ ವಾಟ್ಸ್​ಆ್ಯಪ್​ ಇದೀಗ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಪ್ರಸ್ತುತ, ಆಂಡ್ರಾಯ್ಡ್ ವಾಟ್ಸ್​ಆ್ಯಪ್​ ಬಳಕೆದಾರರು ತಮ್ಮ ಚಾಟ್ ಬ್ಯಾಕಪ್ ಡೇಟಾವನ್ನು ಗೂಗಲ್ ಡ್ರೈವ್‌ನಲ್ಲಿ ಸೇವ್ ಮಾಡಿಕೊಟ್ಟುಕೊಳ್ಳುತ್ತಿದ್ದಾರೆ. ಈ ಸೇವೆಗಳು ಪ್ರಸ್ತುತ ಉಚಿತವಾಗಿದೆ. ಆದರೆ, ಕಂಪನಿಯು ಇನ್ನು ಮುಂದೆ 2024 ರಿಂದ ಗೂಗಲ್ ಡ್ರೈವ್‌ನಲ್ಲಿ ಉಚಿತ ಅನಿಯಮಿತ ಬ್ಯಾಕಪ್‌ಗಳನ್ನು ನೀಡುವುದಿಲ್ಲ ಎಂದು ಹೇಳಿದೆ.

ಇನ್ನು ಮುಂದೆ ವಾಟ್ಸ್​ಆ್ಯಪ್​ ಬ್ಯಾಕ್‌ಅಪ್‌ಗಳು ಸೀಮಿತ ಸಂಗ್ರಹಣೆ ಕೋಟಾವನ್ನು ಮಾತ್ರ ಪಡೆಯುತ್ತವೆ. ಗೂಗಲ್ ಡ್ರೈವ್‌ನಲ್ಲಿ ಒದಗಿಸಲಾದ 15GB ಸಂಗ್ರಹದ ಮಿತಿಯನ್ನು ಮಾತ್ರ ಉಚಿತವಾಗಿ ನೀಡಲಾಗುತ್ತದೆ. ಇನ್ನಷ್ಟು ಸ್ಟೋರೇಜ್ ಹೆಚ್ಚಿಸಬೇಕಾದರೆ ಹಣ ಕೊಡಬೇಕು. ಚಾಟ್ ಬ್ಯಾಕ್‌ಅಪ್‌ಗಳಿಗಾಗಿ ಗೂಗಲ್ ಡ್ರೈವ್‌ನಲ್ಲಿ ಜಾಗವನ್ನು ನಿಗದಿಪಡಿಸುವ ನಿಯಮವು 2024 ರ ಆರಂಭದಿಂದ ಜಾರಿಗೆ ಬರಲಿದೆ.

120W ಫಾಸ್ಟ್ ಚಾರ್ಜರ್, ಸೋನಿ ಕ್ಯಾಮೆರಾ: ವಿವೋ X100 ಸರಣಿ ಬಿಡುಗಡೆಗೆ ದಿನಾಂಕ ಫಿಕ್ಸ್

ಇದನ್ನೂ ಓದಿ
ಸ್ನಾಪ್‌ಡ್ರಾಗನ್ 8 Gen 3, 50MP: ಭಾರತಕ್ಕೆ ಬಂತು ಅತ್ಯಂತ ಬಲಿಷ್ಠ ಸ್ಮಾರ್ಟ
ಟ್ರೆಂಡ್​ ಆಗುತ್ತಿದೆ ಎಲೆಕ್ಟ್ರಿಕ್ ಜಾಕೆಟ್​​ಗಳು​​; ಬೆಲೆ ಎಷ್ಟು ಗೊತ್ತಾ?
ರೆಡ್ಮಿ 13C ಸ್ಮಾರ್ಟ್​ಫೋನ್ ಮಾರಾಟ ಭಾರತದಲ್ಲಿ ಆರಂಭ
ಭಾರತದಲ್ಲಿಂದು ಬಹುನಿರೀಕ್ಷಿತ ಐಕ್ಯೂ 12 5G ​ಫೋನ್ ಬಿಡುಗಡೆ: ಬೆಲೆ?

ಆಂಡ್ರಾಯ್ಡ್ ಬೀಟಾ ಆವೃತ್ತಿ 2.23.26.7 ರಲ್ಲಿ ಇದರ ಬಗ್ಗೆ ಮಾಹಿತಿ ನೀಡಲಾಗಿದೆ. ಗೂಗಲ್ ಡ್ರೈವ್‌ನಲ್ಲಿನ ವಾಟ್ಸ್​ಆ್ಯಪ್​ ಬ್ಯಾಕಪ್‌ಗಳು ಇನ್ನು ಮುಂದೆ ಅನಿಯಮಿತ ಸಂಗ್ರಹಣೆಯನ್ನು ಉಚಿತವಾಗಿ ನೀಡುವುದಿಲ್ಲ ಎಂದು ಹೇಳಿದೆ. ಹೆಚ್ಚುವರಿ ಸಂಗ್ರಹಣೆಗಾಗಿ ನೀವು ಪಾವತಿಸಬೇಕಾಗುತ್ತದೆ. ಬಳಕೆದಾರರು ಎಷ್ಟು ಸ್ಟೋರೇಜ್ ಬಳಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಬಯಸಿದರೆ, ನೀವು ವಾಟ್ಸ್​ಆ್ಯಪ್​ ಸೆಟ್ಟಿಂಗ್‌ಗಳಲ್ಲಿ ಸ್ಟೋರೇಜ್ ಆಯ್ಕೆಯನ್ನು ಪರಿಶೀಲಿಸಬಹುದು.

ಚಾಟ್ ಬ್ಯಾಕಪ್ ಸಂಗ್ರಹಣೆಗೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬುದರ ಕುರಿತು ವಾಟ್ಸ್​ಆ್ಯಪ್​ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಿದೆಯಂತೆ.

ಪಿನ್ ಚಾಟ್ ವೈಶಿಷ್ಟ್ಯ

ಮೆಟಾ ವಾಟ್ಸ್​ಆ್ಯಪ್​ಗಾಗಿ ಹೊಸ ಪಿನ್ ಮೆಸೇಜ್ ವೈಶಿಷ್ಟ್ಯವನ್ನು ಘೋಷಿಸಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಚಾಟ್‌ನ ಮೇಲ್ಭಾಗದಲ್ಲಿ ಒಂದು ಸಂದೇಶವನ್ನು ಪಿನ್ ಮಾಡಲು ಅನುಮತಿಸುತ್ತದೆ. ಆಂಡ್ರಾಯ್ಡ್, ಐಒಎಸ್ ಮತ್ತು ಪಿಸಿ ಬಳಕೆದಾರರಿಗಾಗಿ ಇದು ರೋಲ್‌ಔಟ್ ಆಗಿದೆ. ವಾಟ್ಸ್​ಆ್ಯಪ್​ ಪ್ರಕಾರ, ಪಿನ್ ಮಾಡಿದ ಸಂದೇಶಗಳು ಗ್ರೂಪ್ ಮತ್ತು ವೈಯಕ್ತಿಕ ಚಾಟ್‌ಗಳಲ್ಲಿ ಪ್ರಮುಖ ಸಂದೇಶಗಳನ್ನು ಹೈಲೈಟ್ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ. ಪ್ರಮುಖ ಮೆಸೇಜ್​ಗಳನ್ನು ತ್ವರಿತವಾಗಿ ಹುಡುಕಲು ಹಾಗೂ ಬಳಕೆದಾರರ ಸಮಯವನ್ನು ಉಳಿಸಲು ಈ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಲಾಗಿದೆ. ಚಾಟ್ ಪಿನ್ ವಿಂಡೋದಲ್ಲಿ ಎಷ್ಟು ಸಮಯದವರೆಗೆ ಸಂದೇಶಗಳನ್ನು ಪಿನ್ ಮಾಡಬಹುದು ಎಂಬುದಕ್ಕೆ ಸಮಯದ ಚೌಕಟ್ಟನ್ನು ಇರಿಸಲಾಗಿದೆ. ಪಿನ್ ಮಾಡಿದ ಸಂದೇಶಗಳನ್ನು 24 ಗಂಟೆಗಳು, 7 ದಿನಗಳು (ಡೀಫಾಲ್ಟ್) ಅಥವಾ 30 ದಿನಗಳವರೆಗೆ ಇಡಬಹುದು. ಪಿನ್ ಮಾಡುವ ಸಮಯದಲ್ಲಿ ನಿಮಗೆ ಅವಧಿಯನ್ನು ಆಯ್ಕೆ ಮಾಡಲು ಬ್ಯಾನರ್ ಕಾಣಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ