ವಾಟ್ಸಾಪ್​​-ಟೆಲಿಗ್ರಾಂ-ಸಿಗ್ನಲ್​: ಯಾವ ಆ್ಯಪ್​ ಹೆಚ್ಚು ಸೇಫ್​? ಇಲ್ಲಿದೆ ವಿವರ

ನಿಮಗೆ ಹೊಸ ನೀತಿ ಒಪ್ಪಿಕೊಳ್ಳಲು ಫೆಬ್ರವರಿ 8ರವರೆಗೆ ಕಾಲಾವಕಾಶ ಇದೆ. ಫೆಬ್ರುವರಿ 8ರ ಒಳಗೆ ನೀವು ನೂತನ ನೀತಿ ಒಪ್ಪಬೇಕು. ಇಲ್ಲ ಎಂದಾದರೆ ಬಳಕೆದಾರರು ವಾಟ್ಸಾಪ್ ಬಳಸಲು ಸಾಧ್ಯವಾಗುವುದಿಲ್ಲ. ಹಾಗಾದರೆ, ವಾಟ್ಸಾಪ್​ ಯಾವ ಮಾಹಿತಿ ಕದಿಯಲಿದೆ? ಯಾವ ಆ್ಯಪ್​ ಬಳಕೆ ಹೆಚ್ಚು ಸುರಕ್ಷಿತ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ವಾಟ್ಸಾಪ್​​-ಟೆಲಿಗ್ರಾಂ-ಸಿಗ್ನಲ್​: ಯಾವ ಆ್ಯಪ್​ ಹೆಚ್ಚು ಸೇಫ್​? ಇಲ್ಲಿದೆ ವಿವರ
ವಾಟ್ಸಾಪ್​-ಟೆಲಿಗ್ರಾಂ-ಸಿಗ್ನಲ್
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Jan 11, 2021 | 2:49 PM

ಬಳಕೆದಾರರ ಮಾಹಿತಿಯನ್ನು ಫೇಸ್​ಬುಕ್​ ಜೊತೆ ಹಂಚಿಕೊಳ್ಳುವ ವಾಟ್ಸಾಪ್ ನಿರ್ಧಾರದ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಈ ಬೆನ್ನಲ್ಲೇ ಸಾಕಷ್ಟು ಬಳಕೆದಾರರು ವಾಟ್ಸಾಪ್​ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ, ಸಾಕಷ್ಟು ಮಂದಿ ಸಿಗ್ನಲ್​ ಆ್ಯಪ್​ನತ್ತ ಮುಖ ಮಾಡುತ್ತಿದ್ದಾರೆ. ಹಾಗಾದರೆ, ಯಾವ ಆ್ಯಪ್​ ಉತ್ತಮ ಎನ್ನುವುದಕ್ಕೆ ಇಲ್ಲಿದೆ ಉತ್ತರ.

ವಾಟ್ಸಾಪ್​ ಬಳಕೆದಾರರಿಗೆ ಮಂಗಳವಾರ (ಜನವರಿ 05) ನೋಟಿಫಿಕೇಷನ್​ ಬಂದಿತ್ತು. ಈ ನೋಟಿಫಿಕೇಷ್​​ನಲ್ಲಿ ಬದಲಾದ ಪಾಲಿಸಿ ಬಗ್ಗೆ ವಿವರಿಸಲಾಗಿತ್ತು. ಹೊಸ ನಿಯಮಗಳನ್ನು ಒಪ್ಪಿ (Accept) ಅಥವಾ ನಂತರ ಒಪ್ಪಿ (Accept later) ಎನ್ನುವ ಆಯ್ಕೆ ನೀಡಲಾಗಿತ್ತು. ನಿಮಗೆ ಹೊಸ ನೀತಿ ಒಪ್ಪಿಕೊಳ್ಳಲು ಫೆಬ್ರವರಿ 8ರವರೆಗೆ ಕಾಲಾವಕಾಶ ಇದೆ. ಫೆಬ್ರುವರಿ 8ರ ಒಳಗೆ ನೀವು ನೂತನ ನೀತಿ ಒಪ್ಪಬೇಕು. ಇಲ್ಲ ಎಂದಾದರೆ ಬಳಕೆದಾರರು ವಾಟ್ಸಾಪ್ ಬಳಸಲು ಸಾಧ್ಯವಾಗುವುದಿಲ್ಲ. ಹಾಗಾದರೆ, ವಾಟ್ಸಾಪ್​ ಯಾವ ಮಾಹಿತಿ ಕದಿಯಲಿದೆ? ಯಾವ ಆ್ಯಪ್​ ಬಳಕೆ ಹೆಚ್ಚು ಸುರಕ್ಷಿತ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ವಾಟ್ಸಾಪ್: ವಾಟ್ಸಾಪ್​ ಹೊಸ ನಿಯಮದ ಪ್ರಕಾರ ನಿಮ್ಮ ಮೊಬೈಲ್ ಅಥವಾ ಟ್ಯಾಬ್​ನ ಐಡಿಯನ್ನು ವಾಟ್ಸಾಪ್​ ಫೇಸ್​ಬುಕ್​ಗೆ ನೀಡುವ ಅವಕಾಶ ಇರಲಿದೆ. ಇನ್ನು, ನಿಮ್ಮ ಮೊಬೈಲ್​ ಬಳಕೆ ಮಾಡಿಕೊಂಡುನೀವು ಸಾಕಷ್ಟು ವಸ್ತುಗಳನ್ನು ಖರೀದಿ ಮಾಡಿರುತ್ತೀರಿ. ಇದರ ಮಾಹಿತಿಯನ್ನು ವಾಟ್ಸಾಪ್​ ಪಡೆದುಕೊಳ್ಳಲಿದೆ. ಇನ್ನು, ನಿಮ್ಮ ಲೊಕೇಷನ್​, ದೂರವಾಣಿ ಸಂಖ್ಯೆ, ವಾಣಿಜ್ಯ ವ್ಯವಹಾರ, ಇಮೇಲ್​ ಅಡ್ರೆಸ್​ ಹಾಗೂ ನಿಮ್ಮಲಿರುವ ಕಾಂಟ್ಯಾಕ್ಟ್​ ಮಾಹಿತಿಯನ್ನು ವಾಟ್ಸಾಪ್​ ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಜತೆ ಹಂಚಿಕೊಳ್ಳಬಹುದು.

ಟೆಲಿಗ್ರಾಂ ಮೆಸೆಂಜರ್​ ಆ್ಯಪ್​ ಆಗಿ ಮಾರುಕಟ್ಟೆಗೆ ಬಂದಿದ್ದ ಟೆಲಿಗ್ರಾಂ ಇತ್ತೀಚೆಗೆ ವಾಣಿಜ್ಯ ಹಾಗೂ ಪೈರಸಿ ಸಿನಿಮಾ ಡೌನ್​ಲೋಡ್​ ಮಾಡಿಕೊಳ್ಳಲು ಹೆಚ್ಚು ಬಳಕೆ ಆಗುತ್ತಿದೆ. ಹೀಗಾಗಿ, ಇದರ ಬಳಕೆಗೆ ಸಾಕಷ್ಟು ವಿರೋಧ ಕೂಡ ಇದೆ. ಆದರೆ, ವಾಟ್ಸಾಪ್​ಗೆ ಹೋಲಿಕೆ ಮಾಡಿದರೆ ಇದು ಹೆಚ್ಚು ಸುರಕ್ಷಿತ. ಏಕೆಂದರೆ ಟೆಲಿಗ್ರಾಂ ಕೇವಲ ನಿಮ್ಮ ಸಂಪರ್ಕ ಮಾಹಿತಿ, ಯೂಸರ್​ ಐಡಿ ಹಾಗೂ ಕಾಂಟ್ಯಾಕ್ಟ್ ಮಾಹಿತಿಯನ್ನು ಮಾತ್ರ ಸಂಗ್ರಹಿಸುತ್ತದೆ.

ಸಿಗ್ನಲ್​  ​ ಸಿಗ್ನಲ್​ ಆ್ಯಪ್​ನಲ್ಲಿ ನಿಮ್ಮ ಮೊಬೈಲ್​ ಸಂಖ್ಯೆ ಬಿಟ್ಟು ಮತ್ತಾವುದೇ ಮಾಹಿತಿಯೂ ಸಂಗ್ರಹವಾಗಿರುವುದಿಲ್ಲ. ಈ ಕಾರಣಕ್ಕೆ ಸಿಗ್ನಲ್​ ಹೆಚ್ಚು ಜನಪ್ರಿಯವಾಗುತ್ತಿದೆ. ಸಿಗ್ನಲ್​ ಆ್ಯಪ್​ ಕೋಡ್​ ಓಪನ್​ ಸೋರ್ಸ್​​. ಅಂದರೆ, ಯಾರ ಬೇಕಾದರೂ ಈ ಆ್ಯಪ್​ನಲ್ಲಿ ಏನಾಗುತ್ತಿದೆ ಎನ್ನುವುದನ್ನು ಪತ್ತೆ ಹಚ್ಚಬಹುದಾಗಿದೆ. ಆದರೆ, ವಾಟ್ಸಾಪ್​ನಲ್ಲಿ ಇದು ಸಾಧ್ಯವಿಲ್ಲ.

WhatsApp ಬದಲಿಗೆ ಜನರು Signal ಆ್ಯಪ್​ ಬಳಸ್ತಿರೋದೆಕೆ?: ಇಲ್ಲಿದೆ ವಿವರ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ