WhatsApp: ಇನ್ನುಂದೆ ಚಾಟ್​​ಲಿಸ್ಟ್​​ನಲ್ಲೇ ನೋಡಿ ಸ್ಟೇಟಸ್: ವಾಟ್ಸ್​ಆ್ಯಪ್​​ನಿಂದ ವಿನೂತನ ಪ್ರಯೋಗ

WhatsApp Status: ವಾಟ್ಸ್​ಆ್ಯಪ್ ಇದೀಗ ಮತ್ತೊಂದು ಅಚ್ಚರಿ ಫೀಚರ್ (Feature) ಅನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ. ಅದುವೇ ಚಾಟ್​​ಲಿಸ್ಟ್​​ನಲ್ಲೇ ಸ್ಟೇಟಸ್ ನೋಡಬಹುದಾದ ಆಯ್ಕೆ.

WhatsApp: ಇನ್ನುಂದೆ ಚಾಟ್​​ಲಿಸ್ಟ್​​ನಲ್ಲೇ ನೋಡಿ ಸ್ಟೇಟಸ್: ವಾಟ್ಸ್​ಆ್ಯಪ್​​ನಿಂದ ವಿನೂತನ ಪ್ರಯೋಗ
WhatsApp Status New Feature
Follow us
TV9 Web
| Updated By: Vinay Bhat

Updated on: May 03, 2022 | 12:55 PM

ಮೆಟಾ (Meta) ಮಾಲೀಕತ್ವದ ವಾಟ್ಸ್​ಆ್ಯಪ್​​ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್​​ಗಳನ್ನು ಪರಿಚಯಿಸುತ್ತಲೇ ಬಂದಿದೆ. ದಿನದಿಂದ ದಿನಕ್ಕೆ ವಾಟ್ಸ್​ಆ್ಯಪ್​​ (WhatsApp) ತನ್ನ ಫೀಚರ್ ಅಪ್ಡೇಟ್ ಮಾಡುತ್ತಲೇ ಇದ್ದು ಮತ್ತಷ್ಟು ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇತ್ತೀಚೆಗಷ್ಟೆ ವಾಟ್ಸ್​ಆ್ಯಪ್​​ ಕೆಲವೊಂದು ಹೊಸ ಫೀಚರ್​ಗಳನ್ನು ಬಿಡುಗಡೆ ಮಾಡುವುದರ ಬಗ್ಗೆ ಘೋಷಣೆ ಮಾಡಿತ್ತು. ಕ್ವಿಕ್‌ ರಿಯಾಕ್ಷನ್‌ ಫೀಚರ್ ಸೇರಿದಂತೆ ಸಾಲು ಸಾಲು ಅಪ್ಡೇಟ್​ಗಳು ವಾಟ್ಸ್​ಆ್ಯಪ್​ನಲ್ಲಿ ಬರಲು ತಯಾರಿರುವಾಗ ಇದೀಗ ಮತ್ತೊಂದು ಅಚ್ಚರಿ ಫೀಚರ್ (Feature) ಅನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ. ಅದುವೇ ಚಾಟ್​​ಲಿಸ್ಟ್​​ನಲ್ಲೇ ಸ್ಟೇಟಸ್ ನೋಡಬಹುದಾದ ಆಯ್ಕೆ. ಅಂದರೆ ನೀವು ಚಾಟ್ ಮಾಡುವಾಗ ಅವರ ಪ್ರೊಫೈಲ್ ಪಿಚ್ಚರ್ ಜೊತೆಗೆ ಸ್ಟೇಟಸ್ ಕೂಡ ಕಾಣಿಸುತ್ತದೆ. ಇದು ಇನ್​ಸ್ಟಾಗ್ರಾಮ್​​ನಲ್ಲಿ ನಿಮ್ಮ ಸ್ನೇಹಿತರು ಸ್ಟೋರಿ ಹಂಚಿಕೊಂಡಾಗ ಕಾಣಿಸುವ ರೀತಿ ಇರಲಿದೆ. ಸದ್ಯಕ್ಕೆ ಇದು ಪರೀಕ್ಷಾ ಹಂತದಲ್ಲಿದ್ದಯ ಕೆಲವು ತಿಂಗಳಲ್ಲಿ ಬಳಕೆದಾರರಿಗೆ ಈ ಆಯ್ಕೆ ಸಿಗಲಿದೆಯಂತೆ.

ಇದರ ಜೊತೆಗೆ ಕ್ವಿಕ್‌ ರಿಯಾಕ್ಷನ್‌ ಫೀಚರ್ ಕೂಡ ಬರಲಿದೆ ಎಂದು ವಾಟ್ಸ್​ಆ್ಯಪ್ ಹೇಳಿದೆ. ಇದು ವಾಟ್ಸ್​ಆ್ಯಪ್​​ ಸ್ಟೇಟಸ್‌ ಅಪ್ಡೇಟ್‌ ಅನ್ನು ವೀಕ್ಷಿಸುವಾಗ ಬಳಕೆದಾರರಿಗೆ ಎಮೋಜಿಯನ್ನು ಕಳುಹಿಸಲು ಅನುಮತಿಸುತ್ತದೆ. ಅಂದರೆ ಇನ್‌ಸ್ಟಾಗ್ರಾಮ್​ನಲ್ಲಿ ಇರುವ ರೀತಿಯಲ್ಲೇ ವಾಟ್ಸ್​ಆ್ಯಪ್​ನಲ್ಲೂ ರಿಯಾಕ್ಷನ್ ಫೀಚರ್ ಕಾಣಿಸಲಿದೆ. ಈ ಕ್ವಿಕ್ ರಿಯಾಕ್ಷನ್‌ ಆಯ್ಕೆಯು ಎಂಟು ಎಮೋಜಿ ಐಕಾನ್‌ಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಲಾಗಿದೆ. ಇದು ಬಳಕೆದಾರರಿಗೆ ವೈಯಕ್ತಿಕ ಎಮೋಜಿಯನ್ನು ಸಂದೇಶವಾಗಿ ಕಳುಹಿಸದೆಯೇ ಸ್ಟೇಟಸ್‌ ಅಪ್ಡೇಟ್‌ ಕಡೆಗೆ ಭಾವನೆಗಳನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ.

ಇನ್ನು ವಾಟ್ಸ್‌ಆ್ಯಪ್‌ ತನ್ನ ಮುಂದಿನ ಅಪ್ಡೇಟ್​ನಲ್ಲಿ ಗ್ರೂಪ್ ಕರೆಗೆ 32 ಸದಸ್ಯರನ್ನು ಸೇರಿಸುವ ಆಕರ್ಷಕ ಫೀಚರ್ ಅನ್ನು ಸೇರ್ಪಡೆ ಮಾಡುವುದಾಗಿ ಘೋಷಿಸಿದೆ. ಈಗಿರುವ ವಾಟ್ಸ್​ಆ್ಯಪ್​ನಲ್ಲಿ ಒಂದು ಸಮಯದಲ್ಲಿ ಎಂಟು ಸದಸ್ಯರಿಗೆ ಮಾತ್ರ ವಾಯಿಸ್ ಕರೆಯಲ್ಲಿ ಭಾಗವಹಿಸುವ ಅವಕಾಶವಿದೆ. ಆದರೆ ಗ್ರೂಪ್‌ ವಾಯಿಸ್‌ ಕರೆಗೆ 32 ಭಾಗವಹಿಸುವವರನ್ನು ಸೇರಿಸಲು ವಾಟ್ಸ್​ಆ್ಯಪ್ ಫೀಚರ್‌ ಅನ್ನು ಹೊರತರಲು ಪ್ರಾರಂಭಿಸಿದೆ ಎಂದು Wabetainfo ಹಂಚಿಕೊಂಡಿದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ. ಸದ್ಯಕ್ಕೆ ಆಂಡ್ರಾಯ್ಡ್ ಬಳಕೆದಾರರು ವಾಟ್ಸ್​ಆ್ಯಪ್ v22.8.79 ವರ್ಷನ್ ಬಳಸುತ್ತಿದ್ದಾರೆ. ಇದರ ಮುಂದುವರೆದ ಅಪ್ಡೇಟ್ ಆಗಿ v22.8.80 ಬರಲಿದ್ದು, ಇದರಲ್ಲಿ ಗ್ರೂಪ್ ಕರೆಗೆ 32 ಸದಸ್ಯರನ್ನು ಸೇರಿಸುವ ಆಯ್ಕೆ ಇರಲಿದೆಯಂತೆ.

Moto G52: ಇಂದಿನಿಂದ ಮಾರಾಟವಾಗುತ್ತಿದೆ ಬಜೆಟ್ ಬೆಲೆಯ ಈ ಬೊಂಬಾಟ್ ಫೋನ್: ಆಫರ್ ಮಿಸ್ ಮಾಡ್ಬೇಡಿ

ಇದರ ಜೊತೆಗೆ ಶೀಘ್ರದಲ್ಲೇ ತಮ್ಮ ನಿರ್ದಿಷ್ಟ ಸಂಪರ್ಕದಿಂದ ಲಾಸ್ಟ್ ಸೀನ್ ಅನ್ನು ಮರೆಮಾಡಲು ಸಾಧ್ಯವಾಗುವಂತಹ ವೈಶಿಷ್ಟ್ಯತೆಯೊಂದನ್ನು ಪರಿಚಯಿಸಲು ಮುಂದಾಗಿದೆ. ಅಂದರೆ ಇದು ನಿರ್ದಿಷ್ಟ ಸಂಪರ್ಕಗಳಿಂದ ಲಾಸ್ಟ್‌ ಸೀನ್‌ ಸ್ಟೇಟಸ್‌ ಹೈಡ್‌ ಮಾಡಲು ಅನುಮತಿಸಲಿದೆ. ಈ ಅತ್ಯುತ್ತಮ ಫೀಚರ್ಸ ಅನ್ನು ಈಗ ಇತ್ತೀಚಿನ iOS ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ. ಸದ್ಯಕ್ಕೆ ವಾಟ್ಸ್​ಆ್ಯಪ್​ ನಿಮ್ಮ ಸಂಪರ್ಕಗಳಿಂದ ಲಾಸ್ಟ್ ಸೀನ್ ಅನ್ನು ಹೈಡ್‌ ಮಾಡಲು ಕೇವಲ ಮೂರು ಆಯ್ಕೆಗಳನ್ನು ಮಾತ್ರ ನೀಡುತ್ತಿದೆ. ಇದರಲ್ಲಿ ಮೊದಲನೆಯ ಆಯ್ಕೆ ಎವೆರಿಒನ್‌-  Everyone ಆಗಿದೆ. ಇದರರ್ಥ ನಿಮ್ಮ ಲಾಸ್ಟ್‌ ಸೀನ್‌ ಅನ್ನು ಎಲ್ಲರೂ ಕೂಡ ನೋಡಬಹುದು. ಎರಡನೆಯದು ಮೈ ಕಾಂಟೆಕ್ಟ್ಸ್‌, ಇದನ್ನು ನೀವು ಆಯ್ಕೆ ಮಾಡಿದರೆ ನಿಮ್ಮ ಫೋನ್‌ ಬುಕ್‌ನಲ್ಲಿ ಲಭ್ಯವಿರುವ ಕಾಂಟೆಕ್ಟ್‌ಗಳು ಮಾತ್ರ ನಿಮ್ಮ ಲಾಸ್ಟ್‌ ಸೀನ್‌ ನೋಡುವುದಕ್ಕೆ ಸಾಧ್ಯವಾಗಲಿದೆ. ಇನ್ನು ಮೂರನೇಯ ಆಯ್ಕೆ ನೋಬಡಿ, ಇದು ವಾಟ್ಸಾಪ್‌ನಲ್ಲಿ ನಿಮ್ಮ ಲಾಸ್ಟ್‌ ಸೀನ್‌ ಯಾರಿಗೂ ಕಾಣದಂತೆ ಮಾಡಲು ಉಪಯೋಗಿಸಬಹುದಾಗಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ