ಇಂದು ವಾಟ್ಸ್ಆ್ಯಪ್ (WhatsApp) ಮೆಸೆಂಜರ್ ಬಳಕೆ ಮಾಡುವವರ ಸಂಖ್ಯೆ ಕೋಟಿ ದಾಟಿದೆ. ಇದು ಮನುಷ್ಯನ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಹಿರಿಯರಿಂದ ಹಿಡಿದು ಕಿರಿಯರವರೆಗೂ ಸಹ ವಾಟ್ಸ್ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಕಾಲ ಕಾಲಕ್ಕೆ ತಕ್ಕಂತೆ ಹೊಸತನಗಳನ್ನು ಅಳವಡಿಸಿಕೊಳ್ಳುತ್ತಾ ಜಾಗತಿಕ ಸಮುದಾಯವನ್ನು ತನ್ನ ತೆಕ್ಕೆಯಲ್ಲಿ ಭದ್ರವಾಗಿ ಹಿಡಿದಿಟ್ಟುಕೊಂಡಿರುವ ವಾಟ್ಸ್ಆ್ಯಪ್ನಲ್ಲಿ ಯಾರಾದರೂ ಅನಗತ್ಯ ಮೆಸೇಜುಗಳನ್ನು ಕಳುಹಿಸುತ್ತಿದ್ದರೆ, ಕಿರಿಕಿರಿ ಮಾಡುತ್ತಿದ್ದರೆ ಅವರ ಮೆಸೇಜು ನಮಗೆ ತಲುಪದಂತೆ ಬ್ಲಾಕ್ ಮಾಡಬಹುದು ಆಯ್ಕೆ ಕೂಡ ನೀಡಲಾಗಿದೆ. ಆದರೆ, ಇದರಲ್ಲಿ ಗೌಪ್ಯತೆಗೆ (Privacy) ಒತ್ತು ನೀಡುವ ವಾಟ್ಸ್ಆ್ಯಪ್ ಬ್ಲಾಕ್ ಮಾಡಿದ ಸೂಚನೆಯನ್ನು ನೀಡುವುದಿಲ್ಲ. ಹೀಗಾಗಿ ಯಾರಾದರೂ ಬ್ಲಾಕ್ ಮಾಡಿದ್ದಾರಾ ಎಂದು ತಿಳಿಯುವುದು ಅಷ್ಟು ಸುಲಭವಿಲ್ಲ. ಹೀಗಿದ್ದರೂ ಕೆಲವು ಟ್ರಿಕ್ಸ್ಗಳ ಮೂಲಕ ನಿಮ್ಮ ನಂಬರ್ ಅನ್ನು ಯಾರಾದರೂ ಬ್ಲಾಕ್ (Block) ಮಾಡಿದ್ದಾರೆಂದು ಸುಲಭವಾಗಿ ತಿಳಿಯಬಹುದಾಗಿದೆ.
ವಾಟ್ಸ್ಆ್ಯಪ್ ಚಾಟ್ ವಿಂಡೋದಲ್ಲಿ ನಮಗೆ ಬೇಕಾದವರ ಲಾಸ್ಟ್ ಸೀನ್ ಅಥವಾ ಆನ್ಲೈನ್ ಸ್ಟೇಟಸ್ ಪರಿಶೀಲಿಸುವುದರ ಮೂಲಕ ಅವರು ನಮ್ಮನ್ನು ಬ್ಲಾಕ್ ಮಾಡಿದ್ದನ್ನು ತಿಳಿಯಬಹುದು. ಆದರೆ, ಅವರು ತಮ್ಮ ಲಾಸ್ಟ್ ಸೀನ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ್ದರೆ ಈ ವಿಧಾನ ಕೆಲಸಕ್ಕೆ ಬರಲಾರದು. ಅಥವಾ ಒಂದೊಮ್ಮೆ ನಿಮ್ಮ ಗೆಳೆಯರೊಬ್ಬರು ನಿಮ್ಮನ್ನು ವಾಟ್ಸ್ಆ್ಯಪ್ನಲ್ಲಿ ಬ್ಲಾಕ್ ಮಾಡಿದ್ದರೆ ಅವರ ಪ್ರೊಫೈಲ್ ಫೋಟೋ ನಿಮಗೆ ಕಾಣಿಸುವುದು ನಿಂತು ಹೋಗುತ್ತದೆ.
ಸುಲಭ ವಿಧಾನ ಎಂದರೆ ವಾಟ್ಸ್ಆ್ಯಪ್ ಗ್ರೂಪ್ ಮಾಡಿ ಚೆಕ್ ಮಾಡುವುದು. ಇದಕ್ಕಾಗಿ ನೀವು ವಾಟ್ಸ್ಆ್ಯಪ್ನಲ್ಲಿ ಹೊಸ ಗ್ರೂಪ್ ವೊಂದನ್ನು ತೆರೆಯಬೇಕು. ನಂತರ ಹೊಸ ಹೆಸರು ನಮೂದಿಸಿದ ಮೇಲೆ ನೆಕ್ಸ್ಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಹೊಸ ಸದಸ್ಯರನ್ನು ಸೇರಿಸುವ ಅವಕಾಶ ಇರುತ್ತದೆ. ಇಲ್ಲಿ ನಿಮ್ಮನ್ನು ಬ್ಲಾಕ್ ಮಾಡದವರ ಹೆಸರನ್ನು ಕಂಡುಹಿಡಿದುಕೊಳ್ಳಬಹುದು. ಪ್ಲಸ್ ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ಅವರ ನಂಬರನ್ನು ಸಹ ಸೇರಿಸಿಕೊಳ್ಳಬಹುದು. ಹಾಗೆ ನೀವು ಆಯ್ಕೆ ಮಾಡಿದ ವ್ಯಕ್ತಿ ಗ್ರೂಪ್ ಸದಸ್ಯನಾಗುತ್ತಾನೆ. ನೀವು ತೆಗೆದುಕೊಂಡ ನಂಬರ್ ಮೇಲೆ ಮಾಡಿ ಕ್ರೀಯೆಟ್ ಅಂತ ಹೇಳಿದರೆ ಹೊಸ ಗ್ರೂಪ್ ಆರಂಭವಾಗುತ್ತದೆ. ಕ್ರೀಯೆಟ್ ಮಾಡಿದ ಗ್ರೂಪ್ಗೆ ನೀವು ತೆಗೆದುಕೊಂಡ ಸೇರದಿದ್ದರೆ ಅವರು ನಿಮ್ಮನ್ನು ಬ್ಲಾಕ್ ಲಿಸ್ಟ್ ನಲ್ಲಿ ಇಟ್ಟಿದ್ದಾರೆ ಎಂದು ಗೊತ್ತಾಗುತ್ತದೆ.
ನಿಮ್ಮನ್ನು ಬ್ಲಾಕ್ ಮಾಡಿದವರಿಗೆ ನೀವು ವಾಟ್ಸ್ಆ್ಯಪ್ ಕಾಲ್ ಮಾಡಲು ಪ್ರಯತ್ನಿಸಿದಾಗ ಕಾಲ್ ಕನೆಕ್ಟ್ ಆಗುವುದಿಲ್ಲ. ಕಾಲ್ ಕನೆಕ್ಟ್ ಆಗುತ್ತಿದೆ ಎಂದು ವಾಟ್ಸ್ಆ್ಯಪ್ ತೋರಿಸಿದರೂ ನಿಜವಾಗಿ ಹಾಗೆ ಆಗುತ್ತಿರುವುದಿಲ್ಲ. ಆದರೆ, ಆ ಕಡೆಯವರು ತಮ್ಮ ಇಂಟರ್ನೆಟ್ ಸಂಪರ್ಕ ಬಂದ್ ಮಾಡಿದ್ದರೂ ಹೀಗೇ ಆಗುತ್ತದೆ. ವಾಟ್ಸ್ಆ್ಯಪ್ನಲ್ಲಿ ನಾವು ಕಳುಹಿಸಿದ ಮೆಸೇಜ್ ಆ ಕಡೆಯವರಿಗೆ ತಲುಪಿದಾಗ ಎರಡು ಟಿಕ್ ಮಾರ್ಕ್ ಕಾಣಿಸುತ್ತವೆ. ಆದರೆ ಒಂದೊಮ್ಮೆ ಆ ಕಡೆಯವರು ನಿಮ್ಮನ್ನು ಬ್ಲಾಕ್ ಮಾಡಿದ್ದಲ್ಲಿ ಒಂದು ಟಿಕ್ ಮಾರ್ಕ್ ಮಾತ್ರ ಕಾಣಿಸುತ್ತದೆ.