WhatsApp: ಯಾರ ಕಣ್ಣಿಗೂ ಕಾಣಿಸದಂತೆ ವಾಟ್ಸ್​ಆ್ಯಪ್ ಚಾಟ್ ಅನ್ನು ಶಾಶ್ವತವಾಗಿ ಹೈಡ್ ಮಾಡುವ ಟ್ರಿಕ್ ಗೊತ್ತೇ?

| Updated By: Vinay Bhat

Updated on: Mar 23, 2022 | 6:04 AM

WhatsApp Chat Tricks: ಕೆಲವೊಂದು ತೀರಾ ವೈಯಕ್ರಿವಾದ ವಿಷಯಗಳನ್ನು ಯಾರಿಗೂ ಕಾಣದಂರೆ ಹೈಡ್ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಈ ಆಯ್ಕೆಯನ್ನ ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ನೇರವಾಗಿ ನೀಡಲ್ಲ. ಹಾಗಂತ ಅದಕ್ಕಾಗಿ ಥರ್ಡ್ ಪಾರ್ಟಿ ಆ್ಯಪ್​ಗಳ ಅಗತ್ಯವಿಲ್ಲ. ನಿಮ್ಮ ವಾಟ್ಸ್​​ಆಪ್​​ನಲ್ಲಿಯೇ ಚಾಟ್ ಮರೆ ಮಾಡುವ ಫೀಚರ್ ಇದೆ.

WhatsApp: ಯಾರ ಕಣ್ಣಿಗೂ ಕಾಣಿಸದಂತೆ ವಾಟ್ಸ್​ಆ್ಯಪ್ ಚಾಟ್ ಅನ್ನು ಶಾಶ್ವತವಾಗಿ ಹೈಡ್ ಮಾಡುವ ಟ್ರಿಕ್ ಗೊತ್ತೇ?
WhatsApp
Follow us on

ಮೆಟಾ (Meta) ಒಡೆತನದ ವಾಟ್ಸ್​ಆ್ಯಪ್​​ ಅಪ್ಲೆಕೇಶನ್ ಅನ್ನು ಇಂದು ಅನೇಕರು ಬಳಕೆ ಮಾಡುತ್ತಿದ್ದು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಹಾಗೆಯೇ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೂ ಕೆಲವೊಂದು ಆಯ್ಕೆಗಳನ್ನು ನೀಡಿದೆ. ಆದರೆ, ಕೆಲವೊಂದು ತೀರಾ ವೈಯಕ್ರಿವಾದ ವಿಷಯಗಳನ್ನು ಯಾರಿಗೂ ಕಾಣದಂರೆ ಹೈಡ್ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಈ ಆಯ್ಕೆಯನ್ನ ವಾಟ್ಸ್​ಆ್ಯಪ್ (WhatsApp) ತನ್ನ ಬಳಕೆದಾರರಿಗೆ ನೇರವಾಗಿ ನೀಡಲ್ಲ. ಹಾಗಂತ ಅದಕ್ಕಾಗಿ ಥರ್ಡ್ ಪಾರ್ಟಿ ಆ್ಯಪ್​ಗಳ ಅಗತ್ಯವಿಲ್ಲ. ನಿಮ್ಮ ವಾಟ್ಸ್​​ಆಪ್​​ನಲ್ಲಿಯೇ ಚಾಟ್ ಮರೆ ಮಾಡುವ ಫೀಚರ್ ಇದೆ. ಅದೇ ಆರ್ಕೈವ್ಡ್ (Archived). ಈ ರೀತಿ ಆರ್ಕೈವ್ ಮಾಡಿದ ಚಾಟ್​​ಗಳು ಡಿಲೀಟ್ ಆಗುವುದಿಲ್ಲ. ಅವುಗಳು ನಿಮ್ಮ ಫೋನ್​ನಲ್ಲಿಯೇ ಇರುತ್ತವೆ. ಆದರೆ ಚಾಟ್ ಲಿಸ್ಟ್​​ನಲ್ಲಿ ಇವು ಕಾಣಿಸುವುದಿಲ್ಲ. ಈ ಆಯ್ಕೆಯ ನೆರವಿನಿಂದ ಬಳಕೆಅದರರು ಅನಗತ್ಯ ಚಾಟ್‌ಗಳನ್ನು ಹಾಗೂ ಸಂಭಾಷಣೆಗಳನ್ನು ಶಾಶ್ವತವಾಗಿ ಕೂಡ ಮರೆಮಾಡಬಹುದು.

ಆರ್ಕೈವ್ಡ್ ಫೀಚರ್ ಮುಖಾಂತರ ನೀವು ನಿಮ್ಮ ಚಾಟ್ ಸ್ಕ್ರೀನ್ ಅನ್ನು ಹೈಡ್ ಮಾಡಬಹುದು ಮತ್ತು ಕೆಲವು ಸಮಯದ ನಂತರ ನಿಮಗೆ ಅಗತ್ಯವಿದ್ದಾಗ ಆ ಚಾಟಿನ ಮಾತುಕತೆಗಳನ್ನು ಅನ್​ಹೈಡ್ ಮಾಡಿ ನೋಡುವುದಕ್ಕೂ ಅವಕಾಶವಿರುತ್ತದೆ. ಕೇವಲ ನಿಮ್ಮ ವೈಯಕ್ತಿಕ ಚಾಟ್ ಮಾತ್ರವಲ್ಲದೆ ಗ್ರೂಪ್ ಚಾಟ್  ಎರಡನ್ನೂ ಕೂಡ ಆರ್ಕೈವ್ ಮಾಡುವುದಕ್ಕೆ ಈ ಫೀಚರ್ ನಲ್ಲಿ ಅವಕಾಶವಿರುತ್ತದೆ.

ವಾಟ್ಸ್​ಆ್ಯಪ್​​ನಲ್ಲಿ ಶಾಶ್ವತವಾಗಿ ಚಾಟ್‌ ಹೈಡ್‌ ಮಾಡುವುದು ಹೇಗೆ?:

  • ವಾಟ್ಸ್​ಆ್ಯಪ್​​ ತೆರೆಯಿರಿ, ನೀವು ಆರ್ಕೈವ್ ಮಾಡಲು ಬಯಸುವ ಚಾಟ್ ಅನ್ನು ಆಯ್ಕೆಮಾಡಿ.
  • ಮೇಲಿನ ಮೂರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಪಿನ್ ಮಾಡಿ, ಮ್ಯೂಟ್ ಮಾಡಿ ಮತ್ತು ಆರ್ಕೈವ್ ಮಾಡಿ. ಆರ್ಕೈವ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ಈ ಆರ್ಕೈವ್ ವಿಭಾಗವು ನಿಮ್ಮ ಚಾಟ್ ಫೀಡ್‌ನ ಮೇಲ್ಭಾಗದಲ್ಲಿ ಕಾಣಿಸುತ್ತದೆ. ನೀವು ವಿಭಾಗಕ್ಕೆ ಹೋಗಬಹುದು ಮತ್ತು ನಿಮ್ಮ ಖಾಸಗಿ ಚಾಟ್‌ಗಳನ್ನು ಯಾವುದೇ ಸಮಯದಲ್ಲಿ ವೀಕ್ಷಿಸಬಹುದು.
  • ಅನ್ ಆರ್ಕೈವ್ ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಬಳಕೆದಾರರು ಆ ಚಾಟ್ ಅನ್ನು ಅನ್ ಆರ್ಕೈವ್ ಮಾಡಬಹುದು.
  • ನೀವು ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಲು ಬಯಸಿದರೆ, ಚಾಟ್ಸ್ ಟ್ಯಾಬ್‌ಗೆ ಹೋಗಿ
  • ಇನ್ನಷ್ಟು ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ಸೆಟ್ಟಿಂಗ್‌ಗಳಿಗೆ ಹೋಗಿ. ಅಲ್ಲಿ ಚಾಟ್ಸ್ ಮೇಲೆ ಟ್ಯಾಪ್ ಮಾಡಿ
  • ಈಗ ಚಾಟ್ ಹಿಸ್ಟರಿಗೆ ಹೋಗಿ ಮತ್ತು ಎಲ್ಲಾ ಚಾಟ್‌ಗಳನ್ನು ಆರ್ಕೈವ್ ಮಾಡಿ.

ಗಮನಿಸಿ: ಆರ್ಕೈವ್ ಮಾಡಿದ ವೈಯಕ್ತಿಕ ಅಥವಾ ಗುಂಪು ಚಾಟ್‌ಗಳು ಆ ವ್ಯಕ್ತಿ ಅಥವಾ ಗುಂಪು ಚಾಟ್‌ನಿಂದ ಹೊಸ ಸಂದೇಶವನ್ನು ಸ್ವೀಕರಿಸಿದಾಗ ಆರ್ಕೈವ್ ಆಗಿರುತ್ತವೆ. ಆರ್ಕೈವ್ ಮಾಡಿದ ಚಾಟ್‌ಗಳಲ್ಲಿ ಮೆನ್ಶನ್ ಮಾಡಿದರೆ ಅಥವಾ ಉತ್ತರಿಸಿದರೆ ಮಾತ್ರ ನೋಟಿಫಿಕೇಶನ್ ಬರುತ್ತದೆ. ಇಲ್ಲದಿದ್ದರೆ ಬರುವುದಿಲ್ಲ.

ತಾತ್ಕಾಲಿಕವಾಗಿ ಚಾಟ್ ಮರೆ ಮಾಡುವುದು ಹೇಗೆ?:

ನಿಮ್ಮ ವಾಟ್ಸ್ ಆಪ್ ತೆರೆಯಿರಿ. ಯಾವ ವ್ಯಕ್ತಿಯ ಚಾಟ್​ನ್ನು ನೀವು ಮರೆ ಮಾಡಬೇಕೆಂದಿದ್ದೀರೋ ಆ ಚಾಟ್ ಮೇಲೆ ಒತ್ತಿ ಹಿಡಿಯಿರಿ. ಆ ಚಾಟ್ ಸೆಲೆಕ್ಟ್ ಆದ ಕೂಡಲೇ ಮೇಲ್ಭಾಗದಲ್ಲಿ ಆರ್ಕೈವ್ ಬಾಕ್ಸ್ (ಚಿಕ್ಕ ಬಾಣದ ಗುರುತು ಕೆಳಮುಖ ಮಾಡಿರುವ ಪುಟ್ಟ ಬಾಕ್ಸ್ ) ಕಾಣಿಸುತ್ತದೆ. ಅದನ್ನು ಕ್ಲಿಕ್ಕಿಸಿ. ಈಗ ನಿಮ್ಮ ಚಾಟ್ ಲಿಸ್ಟ್ ನಿಂದ ಆ ವ್ಯಕ್ತಿಯ ಚಾಟ್ ಮರೆಯಾಗುತ್ತದೆ. ವೈಯಕ್ತಿಕ ಖಾತೆ ಮಾತ್ರ ಅಲ್ಲ ಗ್ರೂಪ್ ಚಾಟ್ ಕೂಡಾ ಇದೇ ರೀತಿ ಬಚ್ಚಿಡಬಹುದು.

Oppo A96: 50MP ಕ್ಯಾಮೆರಾ, 5000mAh ಬ್ಯಾಟರಿ: ಬಜೆಟ್ ಬೆಲೆಗೆ ಒಪ್ಪೋ ಕಂಪನಿಯ ಎರಡು ಫೋನ್ ರಿಲೀಸ್

Best Smartphone: ಭರ್ಜರಿ ಸೇಲ್: 20,000 ರೂ. ಒಳಗಿನ ಈ ಹೊಸ 4 ಸ್ಮಾರ್ಟ್​​ಫೋನ್​ಗಳಿಗೆ ಎಲ್ಲಿಲ್ಲದ ಬೇಡಿಕೆ