WhatsApp: ವಾಟ್ಸ್​ಆ್ಯಪ್​ನಲ್ಲಿ ನಿಮ್ಮ ಪತ್ನಿ ಅಥವಾ ಲವ್ವರ್ ಯಾರಿಗೆ ಮೆಸೇಜ್ ಮಾಡ್ತಿದ್ದಾರೆಂದು ತಿಳಿಯಬೇಕೆ?

WhatsApp Tricks: ನಿಮ್ಮ ಲವ್ವರ್, ಪತಿ ಅಥವಾ ಪತ್ನಿ ವಾಟ್ಸ್​ಆ್ಯಪ್​ನಲ್ಲಿ ಯಾರ ಜೊತೆ ಚಾಟಿಂಗ್ ಮಾಡ್ತಾ ಇದ್ದಾರೆ ಎಂದು ತಿಳಿಯಬೇಕೆ?. ಅಥವಾ ನಮ್ಮದಲ್ಲದ ಇತರರ ವಾಟ್ಸ್​ಆ್ಯಪ್​ ಖಾತೆಯಲ್ಲಿ ಏನಿದೆ?, ಅವರು ಯಾರ ಜೊತೆ ಹೆಚ್ಚು ಚಾಟ್ ಮಾಡುತ್ತಾರೆ ಎಂದು ತಿಳಿಯಬಹುದು. ಇದಕ್ಕೆ ಇಲ್ಲಿದೆ ನೋಡಿ ಟ್ರಿಕ್.

WhatsApp: ವಾಟ್ಸ್​ಆ್ಯಪ್​ನಲ್ಲಿ ನಿಮ್ಮ ಪತ್ನಿ ಅಥವಾ ಲವ್ವರ್ ಯಾರಿಗೆ ಮೆಸೇಜ್ ಮಾಡ್ತಿದ್ದಾರೆಂದು ತಿಳಿಯಬೇಕೆ?
WhatsApp Tips and Trickss
Follow us
TV9 Web
| Updated By: Vinay Bhat

Updated on: Mar 21, 2022 | 1:54 PM

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಇಂದು ವಿಶ್ವದಾದ್ಯಂತ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಎಷ್ಟರ ಮಟ್ಟಿಗೆ ಎಂದರೆ ಇಂದು 10 ವರ್ಷದವರಿಂದ ಹಿಡಿದು 90 ವರ್ಷದ ಮುದುಕ ಕೂಡ ವಾಟ್ಸ್​ಆ್ಯಪ್ ಅನ್ನು ಉಪಯೋಗಿಸುತ್ತಿದ್ದಾರೆ. ಬೆಳಿಗ್ಗೆ ಎದ್ದು ದೇವರ ಫೋಟೋ ನೋಡ್ತಾರೋ ಗೊತ್ತಿಲ್ಲ ಆದ್ರೆ ವಾಟ್ಸ್​ಆ್ಯಪ್ ಕಡೆ ತಪ್ಪದೆ ಕಣ್ಣು ಹಾಯಿಸುತ್ತಾರೆ. ಹೀಗೆ ವಾಟ್ಸ್​ಆ್ಯಪ್ ನಮ್ಮನ್ನು ತನ್ನತ್ತ ಆಕರ್ಷಿಸಿದೆ. ಬಳಕೆದಾರರಿಗೆ ಬೇಕಾಗುವಂತಹ ಅನೇಕ ಫೀಚರ್​ಗಳನ್ನು ಪರಿಚಿಯಿಸಿದೆ. ಇನ್ನೂ ಅನೇಕ ಸಾಲು ಸಾಲು ಫೀಚರ್​ಗಳು ಪರೀಕ್ಷಾ ಹಂತದಲ್ಲಿದೆ. ವಾಟ್ಸ್​ಆ್ಯಪ್​ನಲ್ಲಿ ನಮಗೆ ಬೇಕಾದ ಕೆಲವು ಹಿಡನ್ ಆಯ್ಕೆಗಳು ಇಲ್ಲ. ಉದಾಹರಣೆಗೆ ಡಿಲೀಟ್ ಆಗಿರುವಂತಹ ಮೆಸೇಜ್​ಗಳನ್ನು ನೋಡುವುದು ಅಥವಾ ನಮ್ಮ ಡಿಪಿ ಅನ್ನು ಯಾರು ನೋಡಿದ್ದಾರೆಂದು ತಿಳಿಯಲು ವಾಟ್ಸ್​ಆ್ಯಪ್​ನಲ್ಲಿ ನೇರವಾಗಿ ಸಾಧ್ಯವಿಲ್ಲ. ಆದರೆ, ಇದಕ್ಕೆಂದು ಇತರೆ ಥರ್ಡ್ ಪಾರ್ಟಿ ಆ್ಯಪ್​ಗಳಿವೆ (Third Party App). ಹಾಗೆಯೆ ನಮ್ಮದಲ್ಲದ ಇತರರ ವಾಟ್ಸ್​ಆ್ಯಪ್​ ಖಾತೆಯಲ್ಲಿ ಏನಿದೆ?, ಅವರು ಯಾರ ಜೊತೆ ಹೆಚ್ಚು ಚಾಟ್ ಮಾಡುತ್ತಾರೆ ಎಂದು ತಿಳಿಯಬಹುದೇ?.

ಅನೇಕರಿಗೆ ಈರೀತಿಯ ಕುತೂಹಲ ಇದ್ದೇ ಇರುತ್ತದೆ. ಅವರು ಯಾವಾಗ ನೋಡಿದರೂ ವಾಟ್ಸ್​ಆ್ಯಪ್​ ಆನ್​ಲೈನ್​ನಲ್ಲಿಯೇ ಇರುತ್ತಾರೆ. ಆದರೆ ಏನು ಮಾಡ್ತಾ ಇರುತ್ತಾರೆ?, ಅಷ್ಟು ಹೊತ್ತು ಯಾರ ಜೊತೆ ಚಾಟ್ ಮಾಡ್ತಾ ಇರುತ್ತಾರೆ? ಹೀಗೆ ಅನೇಕ ಅನುಮಾನ ಹುಟ್ಟಿಕೊಂಡಿರುತ್ತದೆ. ಅವರು ನಮ್ಮ ಆತ್ಮೀಯರಾಗಿದ್ದರೆ ಮತ್ತಷ್ಟು ಕುತೂಹಲ. ಆದರೆ, ಒಂದು ಟ್ರಿಕ್ ಮೂಲಕ ನಿಮ್ಮ ಆತ್ಮೀಯರು ವಾಟ್ಸ್​ಆ್ಯಪ್​ನಲ್ಲಿ ಯಾರ ಜೊತೆ ಹೆಚ್ಚು ಚಾಟಿಂಗ್ ಮಾಡ್ತಾ ಇದ್ದಾರೆ ಎಂದು ತಿಳಿಯಬಹುದು. ಅವರು ಆ ಚಾಟ್ ಅನ್ನು ಹೈಡ್ ಮಾಡಿದ್ದರೂ ಕೂಡ. ಇದಕ್ಕೆ ಯಾವುದೇ ಥರ್ಡ್ ಪಾರ್ಟಿ ಆ್ಯಪ್​ಗಳ ಅವಶ್ಯಕತೆಯಿಲ್ಲ. ಈ ಆಯ್ಕೆಯನ್ನು ನೀವು ವಾಟ್ಸ್​ಆ್ಯಪ್​ನಲ್ಲಿ ಪಡೆಯಬಹುದು.

ಹೌದು, ನಿಮ್ಮ ಆತ್ಮೀಯರು ವಾಟ್ಸ್​ಆ್ಯಪ್​ನಲ್ಲಿ ಹೆಚ್ಚು ಮೆಸೇಜ್ ಮಾಡಿರುವುದು ಯಾರಿಗೆ ಎಂದು ತಿಳಿಯಲು ಮೊದಲಿಗೆ ನೀವು ಅವರ ವಾಟ್ಸ್​ಆ್ಯಪ್​ ಅನ್ನು ತೆರೆಯಬೇಕು. ಅವರು ನಿಮ್ಮ ಆತ್ಮೀಯರಾದ ಕಾರಣ ಫೋನಿನ ಪಾಸ್ವರ್ಡ್ ಅಥವಾ ಪ್ಯಾಟರ್ನ್ ನಿಮಗೆ ತಿಳಿದೆ ಇರುತ್ತದೆ. ಹೀಗೆ ವಾಟ್ಸ್​ಆ್ಯಪ್ ತೆರೆದ ನಂತರ ಮೇಲೆ ತೋರಿಸಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿಂದ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನಿಮಗೆ ಹಲವು ಆಯ್ಕೆಗಳು ಕಾಣಿಸುತ್ತವೆ. ಅದೇ ಸಮಯದಲ್ಲಿ ನೀವು ಸ್ಟೋರೆಜ್ ಮತ್ತು ಡೇಟಾ ಎಂಬ ಆಯ್ಕೆಯನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಬೇಕು. ಇದನ್ನು ತೆರೆದ ನಂತರ ಮತ್ತಷ್ಟು ಆಯ್ಕೆಗಳು ಕಾಣಿಸುತ್ತವೆ, ಅಲ್ಲಿ ನೀವು ಮ್ಯಾನೇಜ್ ಸ್ಟೋರೇಜ್ ಅನ್ನು ಕ್ಲಿಕ್ ಮಾಡಬೇಕು. ಇದನ್ನು ಕ್ಲಿಕ್ ಮಾಡಿದಾಗ, ನೀವು ಸಂಪೂರ್ಣ ಪಟ್ಟಿಯನ್ನು ನೋಡುತ್ತೀರಿ. ಇಲ್ಲಿ ಅವರು ಯಾರ ಜೊತೆ ಹೆಚ್ಚು ಮಾತನಾಡಿದ್ದಾರೆ ಅಥವಾ ಯಾರ ಜೊತೆ ಹೆಚ್ಚು ಚಾಟ್ ಮಾಡಿದ್ದಾರೆ ಎಂಬುದು ತಿಳಿಯುತ್ತದೆ.

ವಾಟ್ಸ್​ಆ್ಯಪ್​ನಲ್ಲಿ ಸ್ಟೋರೆಜ್‌ ಸ್ಪೇಸ್‌ ಫ್ರೀ ಮಾಡುವುದು ಹೇಗೆ?:

  • ವಾಟ್ಸ್​ಆ್ಯಪ್​​ ತೆರೆಯಿರಿ ಮತ್ತು ಬಲ ಮೂಲೆಯಲ್ಲಿರುವ ಮೂರು ಡಾಟ್ ಮೆನುವನ್ನು ಟ್ಯಾಪ್ ಮಾಡಿ.
  • ಸೆಟ್ಟಿಂಗ್ಸ್‌ ತೆರೆಯಿರಿ ಮತ್ತು ನಂತರ ಸ್ಟೋರೇಜ್‌ ಮತ್ತು ಡೇಟಾಗೆ ಸರಿಸಿ.
  • ನಂತರ ಮ್ಯಾನೇಜ್‌ ಸ್ಟೋರೇಜ್‌ ತೆರೆಯಿರಿ ಮತ್ತು ನಿಮ್ಮ ವಾಟ್ಸ್​ಆ್ಯಪ್​​ ಸ್ಟೋರೇಜ್‌ ಬಗ್ಗೆ ಸಂಪೂರ್ಣ ವಿವರಗಳನ್ನು ನೀವು ಕಾಣಬಹುದು.
  • ನೀವು ಡಿಲೀಟ್‌ ಮಾಡಲು ಬಯಸುವ ಮೀಡಿಯಾ ಫೈಲ್‌ಗಳನ್ನು ಆಯ್ಕೆ ಮಾಡಿ ಡಿಲೀಟ್‌ ಕೊಡಿ.
  • ಒಂದು ವೇಳೆ, ನೀವು ನಿರ್ದಿಷ್ಟ ಚಾಟ್‌ನಿಂದ ವಾಟ್ಸ್​ಆ್ಯಪ್​​ ಸ್ಟೋರೇಜ್‌ ಅನ್ನು ಮುಕ್ತಗೊಳಿಸಲು ಬಯಸಿದರೆ ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಸಂಪರ್ಕವನ್ನು ಆಯ್ಕೆ ಮಾಡಿ. ಇಲ್ಲಿಂದ, ನೀವು ಒಂದೇ ಟ್ಯಾಪ್‌ನಲ್ಲಿ ಎಲ್ಲವನ್ನು ಪರಿಶೀಲಿಸಬಹುದು ಹಾಗೇ ಡಿಲೀಟ್‌ ಕೂಡ ಮಾಡಬಹುದು.

Smartphone Tips: ಎಚ್ಚರ: ಹಳೆಯ ಸ್ಮಾರ್ಟ್​ಫೋನ್ ಮಾರುವ ಮುನ್ನ ತಪ್ಪದೆ ಈ ಕೆಲಸ ಮಾಡಿ

Twitter: ಟ್ವಿಟರ್​ನ ಸ್ಪೇಸಸ್ ಆಡಿಯೋ ರೂಮ್​​ನಲ್ಲಿ ಅಚ್ಚರಿಯ ಫೀಚರ್: ಬಳಕೆದಾರರು ಫುಲ್ ಖುಷ್

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್