ಫೇಸ್‌ಬುಕ್ (Facebook) ಒಡೆತನದ ವಾಟ್ಸ್ಆ್ಯಪ್ (WhatsApp) ವಿಶ್ವದಾದ್ಯಂತ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಪ್ರಮುಖವಾಗಿದೆ. ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಅನುಕೂಲವಾಗುವಂತೆ ಹೊಸ ಹೊಸ ಅಪ್ಡೇಟ್ಗಳನ್ನು ನೀಡುತ್ತ ಹಲವು ಫೀಚರ್ಗಳನ್ನು ಪರಿಚಯಿಸುತ್ತ ಬರುತ್ತಿದೆ. ಸಾಮಾನ್ಯ ಟೆಕ್ಸ್ಟ್ ಮೆಸೇಜ್ ಗಿಂತಲೂ (Text Message) ಹೆಚ್ಚು ಈಗ ವಾಟ್ಸ್ಆ್ಯಪ್ ಅನ್ನು ಬಳಕೆ ಮಾಡಲಾಗುತ್ತದೆ. ಮಲ್ಟಿಮೀಡಿಯಾ, ವಿಡಿಯೋ ಮತ್ತು ಆಡಿಯೋ, ಸ್ಟಿಕ್ಕರ್ಸ್ ಮತ್ತು ಡಾಕ್ಯುಮೆಂಟ್ ಗಳಾದ ವರ್ಡ್, ಪಿಡಿಎಫ್, ಮತ್ತು ಇತ್ಯಾದಿಗಳ ಹಂಚಿಕೆಗೂ ಕೂಡ ಇದು ನೆರವು ನೀಡುತ್ತದೆ. ಹಾಗೆಯೇ ಮುಖ್ಯ ಮೆಸೆಜ್‌ಗಳನ್ನು ಸೇವ್ ಮಾಡಿಕೊಳ್ಳಲು ಒಂದು ವಿಶೇಷ ಆಯ್ಕೆ ಕೂಡ ವಾಟ್ಸ್ಆ್ಯಪ್ನಲ್ಲಿ ಇದೆ. ಬಳಕೆದಾರರಿಗೆ ಬರುವ ಅನೇಕ ಮೆಸೆಜ್‌ಗಳಲ್ಲಿ ಕೆಲವೊಂದು ಅಗತ್ಯ ಮತ್ತು ಪ್ರಮುಖ ಎನಿಸಿರುತ್ತವೆ. ಬೇಕಾದಾಗ ಅವುಗಳು ಬೇಗ ಸಿಗಲು ವಾಟ್ಸ್ಆ್ಯಪ್ನಲ್ಲಿರುವ ಈ ಟ್ರಿಕ್ (WhatsApp Tricks) ಉಪಯೋಗಿಸಬಹುದು.
ಹೌದು, ವಾಟ್ಸ್ಆ್ಯಪ್ ಸ್ಟಾರ್ ಮೆಸೆಜ್ (Starred messages) ಆಯ್ಕೆಯನ್ನು ಹೊಂದಿದ್ದು, ಬಳಕೆದಾರರು ಪ್ರಮುಖ ಎನಿಸುವ ಮೆಸೆಜ್‌ಗಳನ್ನು ಸ್ಟಾರ್ ಮಾರ್ಕ್ ಮಾಡುವ ಮೂಲಕ ಅವುಗಳನ್ನು ಸೇವ್ ಮಾಡಬಹುದಾಗಿದೆ. ಅಲ್ಲದೇ ಯಾವಾಗಲಾದರೂ ಆ ಮೆಸೆಜ್ ಅಗತ್ಯ ಎಂದಾಗ ಮತ್ತೆ ಬೇಗನೇ ಅವುಗಳನ್ನು ತೆರೆಯಲು ಈ ಫೀಚರ್ ಉಪಯುಕ್ತ ಆಗಿದೆ.
ಈ ಆಯ್ಕೆಗಾಗಿ ವಾಟ್ಸ್ಆ್ಯಪ್ನಲ್ಲಿ ನೀವು ಸಂದೇಶಗಳನ್ನು ಅಥವಾ ಸಂದೇಶಗಳನ್ನು ಹೊಂದಿರುವ ಸಂಭಾಷಣೆಯನ್ನು ತೆರೆಯಬೇಕು. ಈಗ ಆ ಮೆಸೇಜ್ ಮೇಲೆ ದೀರ್ಘವಾಗಿ ಒತ್ತುವ ಮೂಲಕ ನಿಮಗೆ ಬೇಕಾದ ಸಂದೇಶವನ್ನು ಆಯ್ಕೆ ಮಾಡಿ. ನೀವು ಈ ರೀತಿ ಅನೇಕ ಸಂದೇಶಗಳನ್ನು ಆಯ್ಕೆ ಮಾಡಬಹುದು. ಒಮ್ಮೆ ನೀವು ಸಂದೇಶ ಅಥವಾ ಸಂದೇಶಗಳನ್ನು ಆಯ್ಕೆ ಮಾಡಿದರೆ, ಚಾಟ್ ವಿಂಡೋದ ಮೇಲಿನ ಟ್ಯಾಬ್‌ನಲ್ಲಿ ನೀವು ಸ್ಟಾರ್ ಐಕಾನ್ ಅನ್ನು ಕಾಣುತ್ತೀರಿ. ಹೀಗೆ ಪ್ರಮುಖ ಎನಿಸುವ ಮೆಸೆಜ್‌ಗಳನ್ನು ಸ್ಟಾರ್ ಮಾರ್ಕ್ ಮಾಡುವ ಮೂಲಕ ಅವುಗಳನ್ನು ಸೇವ್ ಮಾಡಬಹುದಾಗಿದೆ.
ಇನ್ನೂ ವಾಟ್ಸ್ಆ್ಯಪ್ನಲ್ಲಿ ನೀವು ಸ್ಟಾರ್ ಮಾರ್ಕ್ ಮಾಡಿದ ಮೆಸೆಜ್ ಮತ್ತೆ ವೀಕ್ಷಿಸಲು ಪರದೆಯ ಮೇಲಿನ ಬಲ ಭಾಗ ದಲ್ಲಿರುವ ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡಿ. ಡ್ರಾಪ್-ಡೌನ್ ಮೆನುವಿನಲ್ಲಿ ನೀವು “ಸ್ಟಾರ್ ಮಾರ್ಕ್ ಮಾಡಿದ ಮೆಸೆಜ್‌ಗಳು” ಆಯ್ಕೆಯನ್ನು ನೋಡುತ್ತೀರಿ. ಇದನ್ನು ಟ್ಯಾಪ್ ಮಾಡುವುದರಿಂದ ಸಂಪರ್ಕಗಳು ಮತ್ತು ಸಂಭಾಷಣೆಗಳಲ್ಲಿ ನಿಮ್ಮ ಸ್ಟಾರ್ ಹಾಕಿದ ಎಲ್ಲಾ ಸಂದೇಶಗಳನ್ನು ತೋರಿಸುತ್ತದೆ.
ಈಗ ಸಂಭಾಷಣೆಯನ್ನು ತೆರೆಯುವ ಮೂಲಕ, ಸಂಪರ್ಕದ ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಅವರ ಪ್ರೊಫೈಲ್ ಅಡಿಯಲ್ಲಿರುವ “ಸ್ಟಾರ್ ಹಾಕಿದ ಮೆಸೆಜ್” ಆಯ್ಕೆಗೆ ಸ್ಕ್ರೋಲ್ ಮಾಡುವ ಮೂಲಕ ನಿರ್ದಿಷ್ಟ ಚಾಟ್‌ನಿಂದ ನೀವು ನಕ್ಷತ್ರ ಹಾಕಿದ ಸಂದೇಶಗಳನ್ನು ಸಹ ನೋಡಬಹುದಾಗಿದೆ.
(WhatsApp Tricks You know WhatsApp offers a feature of pin chat on top of the main chat list)