ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ (facebook) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಅನೇಕ ಫೀಚರ್ಗಳನ್ನು ಬಿಡುಗಡೆ ಮಾಡುವುದರಲ್ಲಿದೆ. ಸಾಲು ಸಾಲು ಅಪ್ಡೇಟ್ಗಳನ್ನು ನೀಡಲು ವಾಟ್ಸ್ಆ್ಯಪ್ ತುದಿಗಾಲಿನಲ್ಲಿ ನಿಂತಿದೆ. ಇತ್ತೀಚೆಗೆಷ್ಟೆ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಚಾಟ್ ಬಾಕ್ಸ್‌ನಲ್ಲಿ ಡೌನ್‌ಲೋಡ್ ಮಾಡದೆ ಸ್ಟಿಕ್ಕರ್‌ಗಳನ್ನು ಫಾರ್ವರ್ಡ್ ಮಾಡಬಹುದಾದ ಆಯ್ಕೆಯ ಬಗ್ಗೆ ಮಾಹಿತಿ ನೀಡಿತ್ತು. ಇದೀಗ ಹೊಸದಾಗಿ ಮತ್ತೊಂದು ಅಪ್ಡೇಟ್ ನೀಡಿದ್ದು ಸ್ಟೇಟಸ್ನಲ್ಲಿ ಅಂಡೂ (WhatsApp undo status updates) ಆಯ್ಕೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ಇದು ಬೇಟಾ ಬಳಕೆದಾರರಿಗೆ ಲಭ್ಯವಾಗುತ್ತಿದೆ.
ವಾಟ್ಸ್ಆ್ಯಪ್ನಲ್ಲಿ ನೀವು ಸ್ಟೇಟಸ್ ಹಾಕಿದ ಸಂದರ್ಭ ಈ ಅಂಡೂ ಆಯ್ಕೆ ಕಾಣಸಿಗಲಿದೆ. ಈ ಮೂಲಕ ನೀವು ಯಾವುದಾದರು ಫೋಟೋ ಅಥವಾ ವಿಡಿಯೋವನ್ನು ಸ್ಟೇಟಸ್ಗೆ ತಪ್ಪಿ ಹಾಕಿದರೆ ತಕ್ಷಣ ಅಂಡೂ ಬಟ್ ಒತ್ತಿದರೆ ಆಗಲೇ ಅದು ಡಿಲೀಟ್ ಆಗಲಿದೆ. ಈಗಿರುವ ಆಯ್ಕೆಯ ಪ್ರಕ್ರಿಯೆ ತುಸು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಕಿರುವ ಸ್ಟೇಟಸ್ನ ಬಲ ಬದಿಯಲ್ಲಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ನಂತರ ಡಿಲೀಟ್ ಮಾಡಬೇಕು. ಆದರೆ, ಅಂಡೂ ಆಯ್ಕೆಯಲ್ಲಿ ಈರೀತಿ ಮಾಡುವ ಅವಶ್ಯತೆಯಿಲ್ಲ. ಸ್ಟೇಟಸ್ ಅಪ್ಲೋಡ್ ಮಾಡುವ ಜೊತೆಯಲ್ಲೇ ಈ ಹೊಸ ಫೀಚರ್ ಕೂಡ ಕಾಣಸಿಗುತ್ತದೆ.
ಸದ್ಯಕ್ಕೆ ಈ ಹೊಸ ಆಯ್ಕೆ ವಾಟ್ಸ್ಆ್ಯಪ್ ಆಂಡ್ರಾಯ್ಡ್ನ ಬೇಟಾ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದೆ. ಕೆಲವೇ ದಿನಗಳಲ್ಲಿ ಐಒಎಸ್ ಮತ್ತು ಆಂಡ್ರಾಯ್ಡ್ ಎಲ್ಲ ಬಳಕೆದಾರರಿಗೆ ಇದು ಸಿಗಲಿದೆಯಂತೆ.
ಇತ್ತೀಚೆಗಷ್ಟೆ ವಾಟ್ಸ್ಆ್ಯಪ್ನ PC ಮತ್ತು Mac ಬಳಕೆದಾರರಿಗೆ ಸ್ಟಿಕ್ಕರ್ ತಯಾರಕ ಸಾಧನದ ಆಗಮನವನ್ನು ಪ್ರಕಟಿಸಿತ್ತು. ವಾಟ್ಸ್ಆ್ಯಪ್ ವೆಬ್ ಬಳಕೆದಾರರು ತಮ್ಮದೇ ಆದ ಕಸ್ಟಮ್ ಸ್ಟಿಕ್ಕರ್‌ಗಳನ್ನು ರಚಿಸಲು ಹೊಸ ಫೀಚರ್ ಒಂದನ್ನು ಪರಿಚಯಿಸಿ, ಮ್ಯಾಕ್ ಮತ್ತು ಪಿಸಿ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಲಭ್ಯವಾಗುವಂತೆ ಮಾಡಿದೆ. ಡೆಸ್ಕ್‌ಟಾಪ್ ಬಳಕೆದಾರರಿಗಾಗಿ ಮುಂಬರುವ ವಾರದಲ್ಲಿ ಈ ಫೀಚರ್ ಲಭ್ಯವಾಗಬಹುದು ಎಂದು ವರದಿಗಳು ತಿಳಿಸಿವೆ. ಈ ಮೂಲಕ ವಾಟ್ಸ್ಆ್ಯಪ್ ಬಳಕೆದಾರರು ಕಸ್ಟಮ್ ಸ್ಟಿಕ್ಕರ್‌ಗಳನ್ನು ಪರಿಚಯಿಸಲು ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಬಳಸಬೇಕಾದ ಅಗತ್ಯತೆಗೆ ಕೊನೆಹಾಡಲಾಗಿದೆ.
ಇನ್ನು ವಾಟ್ಸ್ಆ್ಯಪ್ ಶೀಘ್ರದಲ್ಲೇ ಫೇಸ್ಬುಕ್ನಲ್ಲಿರುವಂತೆಯೆ ಮೆಸೇಜ್ ರಿಯಾಕ್ಷನ್ ಫೀಚರ್ಸ್ ಅನ್ನು ಪರಿಚಯಿಸಲಿದೆ. ಈಗಾಗಲೇ ಇದರ ಪರೀಕ್ಷಾ ಹಂತಕೂಡ ಮುಕ್ತಾಯಗೊಂಡಿದ್ದು, ಮುಂದಿನ ಅಪ್ಡೇಟ್ನಲ್ಲಿ ಬಳಕೆದಾರರಿಗೆ ಸಿಗುವ ಅಂದಾಜಿದೆ. ಈಗಾಗಲೇ ಇನ್ಸ್ಟಾಗ್ರಾಮ್, ಫೇಸ್ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್ನಲ್ಲಿ ಇರುವಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಮೆಸೇಜ್ ರಿಯಾಕ್ಷನ್ ಫೀಚರ್ಸ್‌ಗಳನ್ನು ನೀಡುತ್ತಿವೆ. ಇದೇ ಕಾರಣಕ್ಕೆ ವಾಟ್ಸ್ಆ್ಯಪ್ ಕೂಡ ಸದ್ಯದಲ್ಲೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೆಸೇಜ್ ರಿಯಾಕ್ಷನ್ ಸೇರಿಸಲು ಸಿದ್ಧತೆ ನಡೆಸಿದೆ.
WhatsApp: ವಾಟ್ಸ್ಆ್ಯಪ್ನಿಂದ ಮತ್ತೆ 2 ಮಿಲಿಯನ್ ಭಾರತೀಯರ ಖಾತೆ ಬ್ಯಾನ್: ತಪ್ಪಿಯೂ ಹೀಗೆ ಮಾಡದಿರಿ
(WhatsApp was spotted testing the undo status updates for the beta users)